ನೀಟ್ ಹಗರಣ | ಬ್ಯೂಟಿಷಿಯನ್, ಶಿಕ್ಷಕಿ, ಪ್ರಾಂಶುಪಾಲೆ – ಮೂವರು ‘ಮನಿಷಾ’ಗಳು ಪ್ರಮುಖ ಆರೋಪಿಗಳು

Date:

ದೇಶಾದ್ಯಂತ ವೈದ್ಯಕೀಯ ಪ್ರವೇಶ ಪರೀಕ್ಷೆಯ ರದ್ದತಿಗೆ ಕಾರಣವಾದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ, ಹಲವರನ್ನು ಬಂಧಿಸಿದೆ. ಹೆಚ್ಚಿನ ಬಂಧನಗಳು ಮಹಾರಾಷ್ಟ್ರದಲ್ಲಿ ನಡೆದಿವೆ. ಬಂಧಿತರಲ್ಲಿ ‘ಮನಿಷಾ’ ಎಂಬ ಒಂದೇ ಹೆಸರನ್ನು ಹೊಂದಿರುವ ಮೂವರು ಮಹಿಳೆಯರಿದ್ದಾರೆ. ನೀಟ್ ಹಗರಣದಲ್ಲಿ ಈ ಮೂವರ ಪಾತ್ರ ಪ್ರಮುಖವಾಗಿದೆ ಎಂದು ಆರೋಪಿಸಲಾಗಿದೆ.

- Advertisement -

ಈ ಮೂವರಲ್ಲಿ ಮೊದಲನೆಯವರು, 46 ವರ್ಷದ ಬ್ಯೂಟಿಷಿಯನ್ ಮನಿಷಾ ವಾಗ್ಮರೆ. ಇವರನ್ನು ಮೇ 14 ರಂದು ಬಂಧಿಸಲಾಯಿತು. ಈಕೆ ವಿದ್ಯಾರ್ಥಿಗಳನ್ನು ಮತ್ತೊಬ್ಬ ಆರೋಪಿ ಮನಿಷಾ ಮಾಂಧರೆ ಜೊತೆ ಸಂಪರ್ಕಿಸುತ್ತಿದ್ದರು ಎಂದು ಸಿಬಿಐ ತಿಳಿಸಿದೆ. ಈ ಮನಿಷಾ ಮಾಂಧರೆ ಅವರು ಪುಣೆಯ ಮಾಡರ್ನ್ ಜೂನಿಯರ್ ಕಾಲೇಜ್ ಆಫ್ ಸೈನ್ಸ್, ಆರ್ಟ್ಸ್ ಅಂಡ್ ಕಾಮರ್ಸ್‌ನಲ್ಲಿ ಹಿರಿಯ ಜೀವಶಾಸ್ತ್ರ (ಬಯಾಲಜಿ) ಶಿಕ್ಷಕಿಯಾಗಿದ್ದರು. ಈಕೆಯನ್ನು ನೀಟ್ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ವಿಷಯ ತಜ್ಞೆ ಎಂದು ಹೆಸರಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಮನಿಷಾ ವಾಗ್ಮರೆ ಮತ್ತು ಮನಿಷಾ ಮಾಂಧರೆ – ಇಬ್ಬರೂ ಪುಣೆಯ ಒಂದೇ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಮನಿಷಾ ವಾಗ್ಮರೆ ಅವರು ಮತ್ತೊಬ್ಬ ಆರೋಪಿ ಧನಂಜಯ್ ಲೋಖಂಡೆ ಎಂಬಾತನಿಗೆ ಪ್ರಶ್ನೆ ಪತ್ರಿಕೆಯನ್ನು ಪೂರೈಸಿದ್ದರು ಎಂಬ ಆರೋಪವಿದೆ.

ಪ್ರಕರಣದಲ್ಲಿ ಬಂಧಿತರಾಗಿರುವ ಮೂರನೇ ‘ಮನಿಷಾ’ ಎಂದರೆ ಪುಣೆಯ ಬುಧವಾರ್ ಪೇಟೆಯಲ್ಲಿರುವ ಶೇಠ್ ಹೀರಾಲಾಲ್ ಸರಾಫ್ ಶಾಲೆಯ ಪ್ರಾಂಶುಪಾಲೆ ಮನಿಷಾ ಹವಾಲ್ದಾರ್. 1992ರಲ್ಲಿ ಭೌತಶಾಸ್ತ್ರ  ಶಿಕ್ಷಕಿಯಾಗಿ ಶಾಲೆಗೆ ಸೇರಿದ ಇವರನ್ನು ಎನ್‌ಟಿಎ ಸಂಸ್ಥೆಯು ಮನಿಷಾ ಹವಾಲ್ದಾರ್ ಅವರನ್ನು ವಿಷಯ ತಜ್ಞೆಯಾಗಿ ನೇಮಿಸಿತ್ತು ಮತ್ತು ಈಕೆಗೆ ನೀಟ್ ಭೌತಶಾಸ್ತ್ರದ ಪ್ರಶ್ನೆ ಪತ್ರಿಕೆಗಳನ್ನು ನೋಡುವ ಅವಕಾಶವಿತ್ತು. ಇನ್ನೆರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಿವೃತ್ತರಾಗಬೇಕಿತ್ತು. ಸಿಬಿಐ ಇವರನ್ನು ಮೇ 22 ರಂದು ಬಂಧಿಸಿತು. ಈಕೆ ಭೌತಶಾಸ್ತ್ರ ಪತ್ರಿಕೆಯ ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ಮೇ 3 ರಂದು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಎನ್‌ಟಿಎ ಸಂಸ್ಥೆಯು ಮೇ 12 ರಂದು ರದ್ದುಗೊಳಿಸಿತು. ಪರೀಕ್ಷೆಗೆ ಮುಂಚಿತವಾಗಿ ಹರಿದಾಡುತ್ತಿದ್ದ ‘ಗೆಸ್ ಪೇಪರ್ಸ್’ ಮತ್ತು ಅಸಲಿ ಪ್ರಶ್ನೆ ಪತ್ರಿಕೆಯ ನಡುವೆ ಸಾಮ್ಯತೆ ಇರುವುದನ್ನು ಸಂಸ್ಥೆಯು ಖಚಿತಪಡಿಸಿತ್ತು. ಈ ರದ್ದತಿಯು ದೇಶಾದ್ಯಂತ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮವೆಲ್ಲಾ ವ್ಯರ್ಥವಾಯಿತು ಎಂದು ಅಳಲು ತೋಡಿಕೊಂಡಿದ್ದರು. ತದನಂತರ ಇದರ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ಇದುವರೆಗೆ 10 ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಹೆಚ್ಚಿನವರು ಮಹಾರಾಷ್ಟ್ರದವರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...