ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ ಸಂವಾದದ ಪಾತ್ರಗಳಿಂದ ಸಾಹಿತ್ಯ ರಚಿಸಿದ ಆನ್‌ ಕಾರ್ಸನ್‌

Date:

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ ಬಳಸುವಲ್ಲಿ ನಿಷ್ಣಾತರು.

ಈ ವರ್ಷ 2026ರ ಸಾಹಿತ್ಯದ ನೊಬೆಲ್‌ ಪುರಸ್ಕಾರವನ್ನು ಕೆನಡಾದ ಆನ್‌ ಕಾರ್ಸನ್‌ (Anne Carson) ಅವರಿಗೆ ನೀಡಲಾಗಿದೆ. ಇದು ಈ ವರ್ಷದಲ್ಲಿ ಹೆಣ್ಣು ಮಗಳೊಬ್ಬಳಿಗೆ ಕೊಡಲಾದ ಮೊದಲ ನೊಬೆಲ್‌ ಆಗಿದೆ. ನೊಬೆಲ್‌ ಸಮಿತಿಯು “ಶಾಸ್ತ್ರೀಯ ಪರಂಪರೆಯೊಂದಿಗೆ ಲವಲವಿಕೆಯ ಸಂವಾದ ನಡೆಸುತ್ತಾ ಸಮಕಾಲೀನ ಸಾಹಿತ್ಯಕ್ಕಾಗಿ ಹೊಸ ಪ್ರಕಾರಗಳನ್ನು ಸೃಷ್ಟಿಸಿರುವ ಆಕೆಯ ಧೈರ್ಯಶಾಲಿ ಹಾಗೂ ಸೃಜನಶೀಲ ಸಾಹಿತ್ಯಕ ಕೊಡುಗೆಗಾಗಿ” ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ.

- Advertisement -

ಪ್ರಶಸ್ತಿಯ ಆರಂಭಿಕ ವರ್ಷ 1901ರಿಂದ ಈವರೆಗಿನ 126 ವರ್ಷಗಳಲ್ಲಿ ಒಟ್ಟು 123 ನೊಬೆಲ್ ಪ್ರಶಸ್ತಿ ವಿಜೇತರಿಗೆ ಸಾಹಿತ್ಯಕ್ಕಾಗಿನ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಅದರಲ್ಲಿ ಕೇವಲ 19 ಜನ ಮಹಿಳೆಯರಾಗಿದ್ದಾರೆ. ಅದರಲ್ಲಿ ಈ ಶತಮಾನದ 26 ವರ್ಷಗಳಲ್ಲೇ 10 ಜನರಿಗೆ ನೀಡಿದ್ದು, ಕಳೆದ ಇಡೀ ನೂರು ವರ್ಷದಲ್ಲಿ ಕೇವಲ 9 ಜನ ಮಹಿಳೆಯರಿಗೆ ಸಾಹಿತ್ಯದ ನೊಬೆಲ್‌ ನೀಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನು ಓದಿದ್ದೀರಾ?: ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ ರಹಸ್ಯಕ್ಕೆ ಪರಿಹಾರ

ಈ ಬಾರಿಯ ಪ್ರಶಸ್ತಿ ವಿಜೇತೆಯು ಮೂಲತಃ ಓರ್ವ ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕೆನಡಾದ ಟೊರಾಂಟೊನಲ್ಲಿ 1950ರಲ್ಲಿ ಜನಿಸಿದ ಇವರು ಒಬ್ಬ ಪ್ರಾಧ್ಯಾಪಕಿಯೂ ಆಗಿದ್ದರು. ಟೊರಾಂಟೊ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ ಮಾಸ್ಟರ್‌ ಪದವಿ ಹಾಗೂ ಪಿಎಚ್.ಡಿಯನ್ನು ಪಡೆದಿದ್ದಾರೆ. ಆಕೆಯ ಪಿಎಚ್.ಡಿ ಮಹಾ ಪ್ರಬಂಧದ ಶೀರ್ಷಿಕೆಯು ಅವರ ವ್ಯಕ್ತಿತ್ವವನ್ನು ಪರಿಚಯಿಸಲು ಬಹಳ ವಿಶೇಷವಾಗಿದೆ ಎಂದು ನನಗೆ ಅನ್ನಿಸಿದೆ. ಕವಿಯಾಗಿ, ದಾರ್ಶನಿಕತೆ ಮತ್ತು ಶಾಸ್ತ್ರೀಯ ಸಾಹಿತ್ಯದ ಮಾದರಿಯನ್ನು ಸೃಜಿಸುವ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಿದೆ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ ಬಳಸುವಲ್ಲಿ ನಿಷ್ಣಾತರು. ಇವರ ಪಿಎಚ್‌.ಡಿ ಪ್ರಬಂಧದ ಶೀರ್ಷಿಕೆಯು “I hate and I love, therefore I am” ಎಂಬುದಾಗಿದ್ದು, ಫ್ರೆಂಚ್‌ ದಾರ್ಶನಿಕ ರೆನೆ ಡೆಕಾರ್ಟೆಯ “I think, therefore I am”ನಲ್ಲಿ ತನ್ನ ಇರುವಿಕೆಯನ್ನು ದಾರ್ಶನಿಕವಾಗಿ ತಿಳಿಸಿದಂತೆ, ಕಾರ್ಸನ್‌ ತಮ್ಮ ಇರುವನ್ನು ಹೇಳಿದ್ದಾರೇನೋ ಅನ್ನಿಸಿದೆ. ಅವರ ಈ ಮಹಾಪ್ರಬಂಧವು ‘Eros the Bittersweet: An Essay’ (1986) ಎಂಬ ಕೃತಿಯಾಗಿ ಪ್ರಕಟವಾಗುವುರೊಂದಿಗೆ ಅವರ ಸಾಹಿತ್ಯಕ ಪ್ರವೇಶವಾಯಿತು. ಈ ಕೃತಿಯು ಶಾಸ್ತ್ರೀಯ ಗ್ರೀಕ್ ಸಾಹಿತ್ಯದ ಮಾದರಿಯಲ್ಲಿ ತಮ್ಮ ಬರವಣಿಗೆಯನ್ನು ರೂಪಿಸಿಕೊಳ್ಳುವ ಕಾರ್ಸನ್ ಅವರ ಶೈಲಿಯನ್ನು ಸ್ಥಾಪಿಸಿತು. ಪ್ರೀತಿ, ದ್ವೇಷ ಮೊದಲಾದವನ್ನು ಒಳಗೊಂಡ ಸಂಘರ್ಷಗಳ ಮಾದರಿಗಳು ಶಾಸ್ತ್ರೀಯ ಸಾಹಿತ್ಯದ ಪ್ರತಿಬಿಂಬಗಳಂತೆ ರೂಪುಗೊಂಡ ಅವರ ಸಾಹಿತ್ಯಕ ಬರಹಗಳು ಸಾಬೀತು ಪಡಿಸುತ್ತವೆ.

Anne Carson೧

ಕಾರ್ಸನ್‌ ಅವರು ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ್ದಾರೆ. ಶಾಸ್ತ್ರೀಯ ಅಧ್ಯಯನದ (ಕ್ಲಾಸಿಕ್ಸ್) ಪ್ರಾಧ್ಯಾಪಕಿಯಾಗಿರುವ ಅವರು ಪ್ರಾಚೀನ ಗ್ರೀಸ್‌ ಪುರಾಣಗಳ ಮಾದರಿಗಳನ್ನು ಸಮಕಾಲೀನ ಪರಿಕಲ್ಪನೆಗಳಲ್ಲಿ ಕಥನಗಳಾಗಿ ಹೆಣೆದು ತಮ್ಮ ಸಾಹಿತ್ಯವನ್ನು ರಚಿಸಿದ್ದಾರೆ. ಅವರ ‘ಆಟೋಬಯಾಗ್ರಫಿ ಆಫ್ ರೆಡ್’ (1998) ಕೃತಿಯು ಆಧುನಿಕ ಜಗತ್ತಿನ ಹಿನ್ನೆಲೆಯಲ್ಲಿ ರಚಿತವಾದ, ಗೆರಿಯನ್ ಮತ್ತು ಹೆರಾಕ್ಲೆಸ್ ಎಂಬ ಗ್ರೀಕ್ ಪುರಾಣದ ಪಾತ್ರಗಳಿಂದ ಪ್ರೇರಿತವಾದ ಒಂದು ಪದ್ಯರೂಪದ ಕಾದಂಬರಿಯಾಗಿದೆ. ಇದು ಆನ್‌ ಕಾರ್ಸನ್‌ ಅವರ ಸಾಹಿತ್ಯದ ಓದಿಗೆ ಬಹಳ ಒಳ್ಳೆಯ ಪ್ರವೇಶ ಕೊಡುತ್ತದೆ ಎಂಬ ಅಭಿಪ್ರಾಯವಿದೆ. ಈ ಪದ್ಯ ರೂಪದ ಕಾದಂಬರಿಯು 1998ರಲ್ಲೇ ಪ್ರಕಟವಾಗಿದೆ. ಅವರ ಹಲವಾರು ಬರಹಗಳು ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ವಿಷಯಗಳನ್ನು ಆಧುನಿಕತೆಯೊಂದಿಗೆ ಬೆರೆಸುತ್ತವೆ, ಅವರ ಕೃತಿಗಳು ಕವನ, ಪ್ರಬಂಧ ಮತ್ತು ಕಥನದ ಗಡಿಗಳನ್ನು ಮೀರುತ್ತವೆ. ಕಥನಗಳನ್ನು ಒಳಗೊಂಡ ದೀರ್ಘ ಕವಿತೆಗಳು, ಕವಿತೆಗಳು ನೀಳ್ಗತೆಗಳಂತೆ ಹಲವು ಭಾಗಗಳಲ್ಲಿ ನಿರೂಪಿಸುವ ಹೊಸ ಮಾದರಿ, ಹೀಗೆ ಹೊಸ ಮಾದರಿಗಳನ್ನು ಕಟ್ಟುವಲ್ಲಿ ಯಶಸ್ವಿ ಬರಹಗಾರರಾಗಿದ್ದಾರೆ.

The Beauty of the Husband (2001) ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದು. ಇದರ ಉಪಶೀರ್ಷಿಕೆ “A Fictional Essay in 29 Tangos”. ಅಂದರೆ ಇದು 29 ಸಣ್ಣ ವಿಭಾಗಗಳಲ್ಲಿರುವ, ಕಥೆ ಹೇಳುವ ದೀರ್ಘ ಕವನ. ಪ್ರತಿ ವಿಭಾಗಕ್ಕೂ “ಟ್ಯಾಂಗೋ” ಎಂದು ಹೆಸರಿಸಿದ್ದಾರೆ. ಟ್ಯಾಂಗೊ ಒಂದು ನೃತ್ಯ ಪ್ರಕಾರ, ಅದರಂತೆಯೇ ಸಂಬಂಧಗಳ ಆಕರ್ಷಣೆ, ಹಿಂಜರಿಕೆ ಮತ್ತು ಹಿಡಿತ ಒಟ್ಟಿಗೆ ಸಾಗುವಂತಹ ಮಾದರಿ.

ಇದನ್ನು ಓದಿದ್ದೀರಾ?: ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ ಅತ್ಯಂತ ಮಹತ್ವಾಕಾಂಕ್ಷೆಯ ಸಾಧ್ಯತೆಗೆ ಸಂದ ಪುರಸ್ಕಾರ

ಅಲ್ಲದೆ ಟ್ಯಾಂಗೋ ಒಂದು ಸಾಹಿತ್ಯಕ ಮಾದರಿಯಾಗಿ ಹಳೆಯ ನೆನಪುಗಳು, ವಿಧ್ವಂಸಕತೆ, ವಿಷಣ್ಣತೆ ಮತ್ತು ರಚನಾತ್ಮಕ ಸ್ಫೂರ್ತಿಯ ಪ್ರಬಲ ಸಂಕೇತವೂ ಹೌದು. The Beauty of the Husband ಒಂದು ದಾಂಪತ್ಯದ ಕಥಾನಕ. ಕಥಾನಾಯಕಿಯು ಹದಿಹರೆಯದಲ್ಲಿ ಭೇಟಿಯಾದ ಗಂಡನನ್ನು ವಿಚ್ಛೇದನದವರೆಗೂ ತನ್ನ ಮತ್ತು ಅವನ ನಡುವಿನ ಸಂಬಂಧವನ್ನು ಹಿಂತಿರುಗಿ ನೋಡುವ ನಿರೂಪವಾಗಿದೆ. ಸಂಬಂಧಗಳ ನಡುವೆ ಸೌಂದರ್ಯ ಮತ್ತು ದ್ರೋಹ ಹೇಗೆ ಒಂದಕ್ಕೊಂದು ಹೆಣೆದುಕೊಂಡಿವೆ ಎಂಬುದೇ ಇದರ ಕಥನದ ಕೇಂದ್ರ ಪ್ರಶ್ನೆಯಾಗಿದೆ. ಇದು ಕಾರ್ಸನ್‌ ಬರೆಹಗಳಲ್ಲಿ ಭಾವನಾತ್ಮಕವಾಗಿ ಕಠಿಣವಾದ ಓದು, ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. ಏಕೆಂದರೆ ನಿರೂಪಕಿಯು ಗಂಡನನ್ನು ದೂಷಿಸುವುದರ ಜೊತೆಗೆ ಜೀವನ ಸಂಬಂಧದ ಸೋಲಿನಲ್ಲಿ ತನ್ನ ಪಾಲನ್ನೂ ಪ್ರಶ್ನಿಸಿಕೊಳ್ಳುತ್ತಾಳೆ. ದಿ ಬ್ಯೂಟಿ ಆಫ್ ದಿ ಹಸ್ಬೆಂಡ್ ಕೃತಿಯು ಅಂತ್ಯಗೊಂಡ ವಿವಾಹದ ಕಾಮಪ್ರಚೋದಕ, ನೋವಿನ ಮತ್ತು ಹೃದಯವಿದ್ರಾವಕ ದೃಶ್ಯಗಳನ್ನು ವಿವರಿಸುವ ನಿರೂಪಣಾ ಪದ್ಯಗಳ ಕಥಾನಕ.

ಈವರೆವಿಗೆ ಅವರು ಕವಿತೆ, ಪ್ರಬಂಧ ಮತ್ತು ಅನುವಾದಗಳ ಸುಮಾರು 20 ಕೃತಿಗಳನ್ನು ಪ್ರಕಟಿಸಿದ್ದಾರೆ. ಕಾರ್ಸನ್ 1996ರಲ್ಲಿ ‘ಲಾನನ್ ಲಿಟರರಿ ಅವಾರ್ಡ್’, 1998ರಲ್ಲಿ ‘ಗುಗೆನ್‌ಹೈಮ್ ಫೆಲೋಶಿಪ್’ ಮತ್ತು 2000ದಲ್ಲಿ ‘ಮ್ಯಾಕ್‌ಆರ್ಥರ್ ಫೆಲೋಶಿಪ್’ ಅನ್ನು ಪಡೆದಿದ್ದಾರೆ. ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ‘ಆರ್ಟಿಸ್ಟ್-ಇನ್-ರೆಸಿಡೆನ್ಸ್’ (ನಿವಾಸಿ ಕಲಾವಿದೆ) ಆಗಿದ್ದು, ತಮ್ಮ ಪತಿ ರಾಬರ್ಟ್ ಕ್ಯೂರಿ ಅವರೊಂದಿಗೆ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

TS Channesh
ಡಾ. ಟಿ.ಎಸ್. ಚನ್ನೇಶ್
+ posts

ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಟಿ.ಎಸ್. ಚನ್ನೇಶ್
ಡಾ. ಟಿ.ಎಸ್. ಚನ್ನೇಶ್
ಲೇಖಕರು ಕೃಷಿ ವಿಜ್ಞಾನಿ. ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರು. ಆಸಕ್ತಿಯನ್ನು ಅಷ್ಟಕ್ಕೆ ಸೀಮಿತಗೊಳಿಸದೆ ವಿಜ್ಞಾನ ಮತ್ತು ಸಮಾಜದ ಸಮೀಕರಣದ ಚರ್ಚೆಗಳನ್ನು ರೂಪಿಸುವಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಸಾರ್ವಜನಿಕರಿಗೆ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯನ್ನು ನೀಡಲು "ಸೆಂಟರ್ ಫಾರ್ ಪಬ್ಲಿಕ್ ಅಂಡರ್ಸ್ಟಾಂಡಿಂಗ್ ಆಫ್ ಸೈನ್ಸ್" - CPUS ಎಂಬ ವಿನೂತನವಾದ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಸಂಶೋಧನೆ, ಪುಸ್ತಕ ಪ್ರಕಟಣೆ, ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ವಿಜ್ಞಾನದ ಸರಿಯಾದ ತಿಳಿವಳಿಕೆ ನೀಡಲು ಕಾರ್ಯಾಗಾರಗಳು, ಸಸ್ಯಗಳು ಮತ್ತು ನೊಬೆಲ್ ಪುರಸ್ಕಾರ ಪಡೆದ ವಿಜ್ಞಾನಿಗಳ ಬಗ್ಗೆ ಮಾಹಿತಿಯುಳ್ಳ ವೀಡಿಯೋಗಳನ್ನು ಮಾಡುತ್ತಿರುವುದು ಅವರ ವಿಶಿಷ್ಟ ಆಸಕ್ತಿಗಳನ್ನು ಪ್ರತಿಫಲಿಸುವಂತಿವೆ. 'ಸಸ್ಯಯಾನ', 'ಅನುರಣನ', 'ಪ್ರತಿಫಲನ', 'ನೊಬೆಲ್ 2017', 'ಮಣ್ಣು ಮತ್ತು ಮಾನವ', 'ಕೃಷಿ ಮತ್ತು ಪೇಟೆಂಟ್', 'ಬೆಳಕಿನ ಬೆನ್ನು ಹತ್ತಿ', 'ಉಳುವವರ ಪರ ವಕಾಲತ್ತು', 'ಅನ್ನದ ಬಟ್ಟಲು' ಮುಂತಾದ ಮೂಲ ಕೃತಿಗಳು ಅಲ್ಲದೆ 'ಆಲ್ಬರ್ಟ್ ಐನ್ಸ್ಟೈನ್' ಮತ್ತು 'ಅಲೆಕ್ಸಾಂಡರ್ ಗ್ರಹಾಂ ಬೆಲ್' ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ಟೋಬರ್ 10ರ ಜಂತರ್ ಮಂತರ್ ಪ್ರತಿಭಟನೆ: ಸಿಜೆಪಿ ಧರಣಿಯಲ್ಲಿ ಮಮತಾ ಬ್ಯಾನರ್ಜಿ ಭಾಗಿ ಸಾಧ್ಯತೆ

ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...

ಸುಪ್ರೀಂ ಕೋರ್ಟ್‌ನ ಕ್ಷಮಿಸುವ ಗುಣದಿಂದ ದೇಶದಲ್ಲಿ ಅಪರಾಧ ಕೃತ್ಯ ಹೆಚ್ಚಳ: ಜಸ್ಟಿಸ್ ದೀಪಾಂಕರ್ ದತ್ತಾ

ಸುಪ್ರೀಂ ಕೋರ್ಟ್‌ನ ಕ್ಷಮಿಸುವ ಮತ್ತು ದಯೆ ತೋರುವ ಪ್ರವೃತ್ತಿಯಿಂದಾಗಿಯೇ ಇಂದು ದೇಶದಲ್ಲಿ...