ಪಾಟ್ನಾ ಉಪಸಮರ | 40 ವರ್ಷದ ಬಿಜೆಪಿ ಕೋಟೆ ಭೇದಿಸಲು ಪ್ರಶಾಂತ್ ಕಿಶೋರ್ ಸಜ್ಜು!

Date:

ಪಾಟಲಿಪುತ್ರ (ಪಾಟ್ನಾ)ದ ಮಣ್ಣಿನಲ್ಲಿ ರಾಜಕೀಯದ ಹೊಸ ಜಟಾಪಟಿಗೆ ವೇದಿಕೆ ಸಜ್ಜಾಗಿದೆ. ನಾಲ್ಕು ದಶಕಗಳ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಕಮಲ ಪಡೆ ಹರಸಾಹಸ ಪಡುತ್ತಿದ್ದರೆ, ತನ್ನ ಅಸ್ತಿತ್ವದ ಅಗ್ನಿಪರೀಕ್ಷೆಯಲ್ಲಿದ್ದ ಪ್ರಶಾಂತ್ ಕಿಶೋರ್ ಅವರ ‘ಜನ್ ಸುರಾಜ್’ ಪಾರ್ಟಿಯು ಈ ಕ್ಷೇತ್ರವನ್ನು ‘ಪರ್ಯಾಯ ರಾಜಕಾರಣ’ದ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಲು ಸಜ್ಜಾಗಿದೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಪಿಕೆ ಸಿದ್ಧಪಡಿಸಿರುವ ತಂತ್ರಗಾರಿಕೆ, ಬಿಜೆಪಿಯ ಪ್ರತಿಷ್ಠಿತ ಕೋಟೆಯನ್ನು ಭೇದಿಸುತ್ತಾ? ಅಥವಾ ಪಾಟ್ನಾದ ಮತದಾರರು ಸಾಂಪ್ರದಾಯಿಕ ಶಕ್ತಿಗಳಿಗೇ ಮಣೆ ಹಾಕುತ್ತಾರಾ? ಎಂಬುದರ ಸುತ್ತ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

- Advertisement -

ಇದೇ ಜುಲೈ 30ರಂದು ನಡೆಯಲಿರುವ ಪಾಟ್ನಾದ ಬಾಂಕಿಪುರ ಉಪಚುನಾವಣೆಯು, ಕಳೆದ 4 ದಶಕಗಳಿಂದ ಬಿಜೆಪಿಯ ಹಿಡಿತದಲ್ಲಿರುವ ಈ ನಗರ ಕ್ಷೇತ್ರವನ್ನು ಪ್ರಶಾಂತ್ ಕಿಶೋರ್ ಅವರ ‘ಜನ್ ಸುರಾಜ್’ ಪಾರ್ಟಿ ಹೇಗೆ ಎದುರಿಸಲಿದೆ ಎಂಬ ಕುತೂಹಲ ಹುಟ್ಟುಹಾಕಿದೆ. 1995 ರಿಂದ ನಿರಂತರವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿ ನಾಯಕ ನಿತಿನ್ ನಬಿನ್ ಕುಟುಂಬದ ವರ್ಚಸ್ಸು ಮತ್ತು ಆ ಭದ್ರಕೋಟೆಯನ್ನು ಭೇದಿಸಲು ಜನ್ ಸುರಾಜ್ ಪಾರ್ಟಿ ನಡೆಸುತ್ತಿರುವ ತಯಾರಿಗಳು, ಬಿಹಾರದ ಸಾಂಪ್ರದಾಯಿಕ ರಾಜಕೀಯ ಧ್ರುವೀಕರಣಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಬಿಜೆಪಿಯ ಅಪ್ರತಿಮ ಭದ್ರಕೋಟೆ ಬಾಂಕಿಪುರವು ಬಿಹಾರದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವು ಸಂಪೂರ್ಣವಾಗಿ ನಗರ ಕೇಂದ್ರಿತವಾಗಿದ್ದು, ಇಲ್ಲಿನ ಮತದಾರರು ವಿದ್ಯಾವಂತರು, ಮಧ್ಯಮ ವರ್ಗದವರು ಮತ್ತು ವ್ಯಾಪಾರಿ ಸಮುದಾಯದವರು. ದಶಕಗಳಿಂದ ಈ ಕ್ಷೇತ್ರವನ್ನು ನಬಿನ್ ಕುಟುಂಬ ಆಳುತ್ತಾ ಬಂದಿದೆ. ನಬಿನ್ ಅವರ ತಂದೆ ದಿ.ಕಿಶೋರ್ ಪ್ರಸಾದ್ ಸಿನ್ಹಾ ಅವರು 1995 ರಿಂದ 2006 ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ನಿತಿನ್ ನಬಿನ್ ಆಯ್ಕೆಯಾಗಿದ್ದರು. ಈಗ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿದೆ. ನಿತಿನ್‌ ಈಗ BJPಯ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇಲ್ಲಿನ ಕಾಯಸ್ಥ ಸಮುದಾಯವು ರಾಜಕೀಯವಾಗಿ ನಿರ್ಣಾಯಕವಾಗಿದ್ದು, ಬಿಜೆಪಿಯ ಬಲವಾದ ವೋಟ್ ಬ್ಯಾಂಕ್ ಆಗಿದೆ. ಈ ಕ್ಷೇತ್ರವನ್ನು ಕಳೆದುಕೊಳ್ಳುವುದು ಬಿಜೆಪಿಗೆ ಒಂದು ಸ್ಥಾನದ ನಷ್ಟ ಮಾತ್ರವಲ್ಲ, ತನ್ನ ದಶಕಗಳ ರಾಜಕೀಯ ವರ್ಚಸ್ಸಿಗೆ ಧಕ್ಕೆಯುಂಟಾಗುವ ವಿಷಯ.

WhatsApp Image 2026 07 04 at 6.03.59 PM
ಪ್ರಶಾಂತ್‌ ಕಿಶೋರ್

ಒಂದು ದಶಕದ ಕಾಲ ಭಾರತದ ಪ್ರಮುಖ ರಾಜಕೀಯ ಪಕ್ಷಗಳಿಗೆ ಗೆಲುವಿನ ತಂತ್ರಗಾರಿಕೆ ರೂಪಿಸುತ್ತಿದ್ದ ಪ್ರಶಾಂತ್ ಕಿಶೋರ್, ಈಗ ಸ್ವತಃ ಅಖಾಡಕ್ಕಿಳಿದಿದ್ದಾರೆ. ಆದರೆ, ಅವರ ‘ಜನ್ ಸುರಾಜ್’ ಪಾರ್ಟಿಯ ಆರಂಭಿಕ ಹಾದಿ ಅಷ್ಟು ಸುಗಮವಾಗಿಲ್ಲ. 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 236 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈ ಪೈಕಿ ಒಂದು ಸ್ಥಾನವನ್ನೂ ಗೆಲ್ಲಲು ಗೆಲ್ಲಲಾಗಲಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಜನ್ ಸುರಾಜ್ ಅಭ್ಯರ್ಥಿಗಳು ‘ನೋಟಾ’ (NOTA) ಗಿಂತ ಕಡಿಮೆ ಮತಗಳನ್ನು ಪಡೆದಿದ್ದರು. ಆಗ ಪಿಕೆ ಅವರ ರಾಜಕೀಯ ತಂತ್ರಗಾರಿಕೆ ಮತ್ತು ವಾಸ್ತವಿಕ ರಾಜಕಾರಣದ ನಡುವಿನ ಅಂತರ ಸಾಕಷ್ಟಿದೆ ಎಂದು ಟೀಕಿಸಲಾಗಿತ್ತು. ಹೀಗಾಗಿ, ಸದ್ಯಕ್ಕಿರುವ ಬಾಂಕಿಪುರ ಉಪಚುನಾವಣೆ ಅವರ ಪಾಲಿಗೆ ತಮ್ಮ ‘ಪರ್ಯಾಯ ರಾಜಕಾರಣ’ದ ಪರಿಕಲ್ಪನೆಯನ್ನು ಸಾಬೀತುಪಡಿಸಲು ಇರುವ ಅಂತಿಮ ಅವಕಾಶದಂತೆ ಕಾಣುತ್ತಿದೆ. ಈ ಬಾರಿ ಪ್ರಶಾಂತ್ ಕಿಶೋರ್ ಅವರೇ ಸ್ವತಃ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಪ್ರಶಾಂತ್ ಕಿಶೋರ್ ಈ ಉಪಚುನಾವಣೆಯನ್ನು ಸಾಮ್ರಾಟ್ ಚೌಧರಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿಯ ವಿರುದ್ಧದ ‘ರೆಫರೆಂಡಂ’ ಎಂದು ಕರೆದಿದ್ದಾರೆ. ನೀಟ್ (NEET) ಪರೀಕ್ಷೆಯ ಅಕ್ರಮಗಳು, ನಿರುದ್ಯೋಗ, ರಾಜ್ಯದಿಂದ ಬೃಹತ್ ಸಂಖ್ಯೆಯಲ್ಲಿ ಯುವಕರ ವಲಸೆ ಮತ್ತು ಶಿಕ್ಷಣ-ಆರೋಗ್ಯ ವಲಯದ ದಯನೀಯ ಸ್ಥಿತಿಯನ್ನು ಅವರು ಪ್ರಮುಖ ಚುನಾವಣಾ ವಿಷಯಗಳನ್ನಾಗಿ ಮಾಡಿಕೊಂಡಿದ್ದಾರೆ. ಸಾಮ್ರಾಟ್ ಚೌಧರಿ ಅವರ ಆಡಳಿತವನ್ನು ಅಸ್ಥಿರ ಮತ್ತು ದಕ್ಷತೆಯಿಲ್ಲದ ಆಡಳಿತ ಎಂದು ಟೀಕಿಸುತ್ತಿರುವ ಕಿಶೋರ್, ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಬಾಂಕಿಪುರದಂತಹ ವಿದ್ಯಾವಂತ ನಗರ ಮತದಾರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಮತದಾರರ ಆಕ್ರೋಶವನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಸಮೀಕರಣ ಮತ್ತು ಪಕ್ಷದ ನಿಷ್ಠೆಯ ನಡುವೆ ತೀವ್ರ ಕಸರತ್ತು ನಡೆಸುತ್ತಿದೆ. ನೀಲ್ ರತನ್ ಘೋಷ್, ಅಜಯ್ ಅಲೋಕ್, ಆಶಿಶ್ ಸಿನ್ಹಾ ಮತ್ತು ರೀತು ಜೈಸ್ವಾಲ್ ಅವರಂತಹ ಹೆಸರುಗಳು ಚರ್ಚೆಯಲ್ಲಿವೆ. ನೀಲ್ ರತನ್ ಘೋಷ್ ಅವರು ನಿತಿನ್ ನಬಿನ್ ಅವರ ಆಪ್ತ ವಲಯದವರಾಗಿರುವುದರಿಂದ ಮತ್ತು ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ, ಅಜಯ್ ಅಲೋಕ್ ಅವರ ತೀಕ್ಷ್ಣ ಭಾಷಣದ ಶೈಲಿ ಹಾಗೂ ಟಿವಿ ಚರ್ಚೆಗಳಲ್ಲಿನ ಪ್ರಭಾವವು ಅವರನ್ನು ಪ್ರಬಲ ಅಭ್ಯರ್ಥಿಯನ್ನಾಗಿಸಿದೆ. ಮಾಜಿ ಶಾಸಕ ಅರುಣ್ ಸಿನ್ಹಾ ಅವರ ಪುತ್ರ ಆಶಿಶ್ ಸಿನ್ಹಾ ಅವರಿಗೆ ಅವಕಾಶ ನೀಡುವ ಮೂಲಕ ಅನುಕಂಪದ ಮತಗಳನ್ನು ಸೆಳೆಯುವ ಸಾಧ್ಯತೆಯನ್ನೂ ಪಕ್ಷ ಪರಿಗಣಿಸಿದೆ. ಮಹಿಳಾ ಮತ್ತು ವೈಶ್ಯ ಮತದಾರರನ್ನು ಸೆಳೆಯಲು ರೀತು ಜೈಸ್ವಾಲ್ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ. ಬಿಜೆಪಿ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಉಳಿಸಿಕೊಳ್ಳಲು ಯಾವ್ಯಾವ ಬಾಣಗಳನ್ನು ಬಿಡಲು ಸಾಧ್ಯವೋ ಆ ಎಲ್ಲಾ ಬಾಣಗಳನ್ನು ಹೂಡಲು ಸಿದ್ಧವಾಗಿದೆ.

image 94 2
ನಿತಿನ್‌ ನಬಿನ್

ಬಿಹಾರದ ರಾಜಕಾರಣವು ದಶಕಗಳಿಂದ ಜಾತಿ ಆಧಾರಿತ ಮೈತ್ರಿಗಳ ಮೇಲೆ ನಿಂತಿರುವುದು ಗೊತ್ತೇ ಇದೆ. ಯಾದವ, ಕುರ್ಮಿ, ಭೂಮಿಹಾರ್, ರಜಪೂತ ಮತ್ತು ಕಾಯಸ್ಥರಂತಹ ಸಮುದಾಯಗಳ ಓಲೈಕೆಯೇ ಇಲ್ಲಿನ ಚುನಾವಣಾ ಫಲಿತಾಂಶವನ್ನು ನಿರ್ಧರಿಸುತ್ತದೆ. ಪ್ರಶಾಂತ್ ಕಿಶೋರ್ ಅವರು ಜಾತಿ ರಹಿತ ‘ಮೆರಿಟೊಕ್ರಸಿ’ ಬಗ್ಗೆ ಮಾತನಾಡುತ್ತಿದ್ದರೂ, ಬಿಹಾರದ ಮತದಾರರ ಮನಸ್ಥಿತಿಯು ಈ ಸಿದ್ಧಾಂತಕ್ಕೆ ಎಷ್ಟು ಒಗ್ಗಿಕೊಳ್ಳುತ್ತದೆ ಎಂಬುದೇ ಈಗ ದೊಡ್ಡ ಪ್ರಶ್ನೆ. ಯುವಕರು ಮತ್ತು ಮೊದಲ ಬಾರಿಯ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದರೂ, ಹಿರಿಯ ತಲೆಮಾರಿನ ಮತದಾರರು ಇಂದಿಗೂ ಜಾತಿ ಸಮೀಕರಣಗಳನ್ನೇ ನಂಬಿದ್ದಾರೆ. ಹೀಗಾಗಿ, ಜನ್ ಸುರಾಜ್ ಪಾರ್ಟಿಗೆ ಬಾಂಕಿಪುರದಲ್ಲಿ ಗೆಲ್ಲಬೇಕೆಂದರೆ, ಕೇವಲ ಸಿದ್ಧಾಂತವಲ್ಲದೆ, ತಳಮಟ್ಟದ ಸಂಘಟನೆ ಮತ್ತು ಸಾಮಾಜಿಕ ಸಮೀಕರಣಗಳನ್ನು ದಾಟುವ ಸಾಮರ್ಥ್ಯದ ಅಗತ್ಯವಿದೆ.

ಇದನ್ನೂ ಓದಿ: ʼಮರʼಮೇಧ | ದಿನಕ್ಕೆ 10 ಕೋಟಿ ಲೀಟರ್‌ ಆಮ್ಲಜನಕ ನೀಡುವ 4.48 ಲಕ್ಷ ಮರಗಳ ಮಾರಣಹೋಮ!

ತೇಜ್ ಪ್ರತಾಪ್ ಯಾದವ್ ಅವರ ‘ಜನ್‌ಶಕ್ತಿ ಜನತಾ ದಳ’ ಮೀನಾ ಮಾನವಿಯನ್ನು ಕಣಕ್ಕಿಳಿಸಿರುವುದು ಈ ಚುನಾವಣೆಗೆ ಹೊಸ ಟ್ವಿಸ್ಟ್ ನೀಡಿದೆ. ವಿರೋಧ ಪಕ್ಷಗಳ ಮತಗಳು ಹಂಚಿ ಹೋದರೆ, ಅದು ಪರೋಕ್ಷವಾಗಿ ಬಿಜೆಪಿಯ ಗೆಲುವಿಗೆ ಹಾದಿ ಸುಗಮಗೊಳಿಸುತ್ತದೆ. ಪ್ರಶಾಂತ್ ಕಿಶೋರ್ ಅವರು ಪ್ರಬಲವಾಗಿ ಹೋರಾಡಿದರೂ, ಸಣ್ಣಪುಟ್ಟ ಪಕ್ಷಗಳ ಈ ಅಭ್ಯರ್ಥಿಗಳ ಕಾರಣದಿಂದ ಮತಗಳು ಚದುರಿದರೆ, ಅದು ಜನ್ ಸುರಾಜ್‌ನ ಮತಗಳಿಕೆಯ ಮೇಲೆ ಪರಿಣಾಮ ಬೀರಲಿದೆ. ಮತದಾರರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿರುವ ಈ ಸಣ್ಣ ಪಕ್ಷಗಳ ನಡುವೆ, ಕಿಶೋರ್ ಅವರು ತಮ್ಮ ಸಂಘಟನಾ ಬಲವನ್ನು ಹೇಗೆ ಪ್ರದರ್ಶಿಸುತ್ತಾರೆ ಎಂಬುದು ಗಮನಾರ್ಹ.

ನಾಳೆ (ಜುಲೈ 5) ಜನ್ ಸುರಾಜ್‌ ಪಾರ್ಟಿ ಅಧಿಕೃತವಾಗಿ ತನ್ನ ಅಭ್ಯರ್ಥಿಯನ್ನು ಘೋಷಿಸಲಿದೆ. ಪ್ರಶಾಂತ್‌ ಕಿಶೋರ್‌ ಅವರು, ಈ ಮಹಾತ್ವಾಕಾಂಕ್ಷೆಯ ಅಗ್ನಿಪರೀಕ್ಷೆಯಲ್ಲಿ ಗೆದ್ದರೆ, ಅದು ಬಿಹಾರದಲ್ಲಿ ಮೂರನೇ ಶಕ್ತಿಯ ಉದಯಕ್ಕೆ ಮತ್ತು ಪರ್ಯಾಯ ರಾಜಕಾರಣದ ಆರಂಭಕ್ಕೆ ಸಾಕ್ಷಿಯಾಗಲಿದೆ. ಸೋತರೆ, ಅದು ರಾಜಕೀಯ ತಂತ್ರಗಾರನೊಬ್ಬ ಜನನಾಯಕನಾಗಿ ಬದಲಾಗಲು ನಡೆಸುವ ಪ್ರಯೋಗಗಳ ಮಿತಿಗಳನ್ನು ತೋರಿಸಿಕೊಡಲಿದೆ. ಆ.3 ರಂದು ಹೊರಬೀಳುವ ಫಲಿತಾಂಶವು ಬಿಹಾರದ ಮತದಾರರು ಬದಲಾವಣೆಯನ್ನು ಆಶಿಸುತ್ತಿದ್ದಾರೋ ಅಥವಾ ಪಾರಂಪರಿಕ ರಾಜಕಾರಣವನ್ನೇ ಮುಂದುವರಿಸಲು ಬಯಸುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿದೆ.

ಜುಲೈ 30ರಂದು ನಡೆಯಲಿರುವ ಮತದಾನವು ಬಿಹಾರದ ಭವಿಷ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ! ಇಲ್ಲಿನ ಪ್ರತಿಯೊಂದು ಮತವೂ ಬಿಹಾರದ ಭವಿಷ್ಯದ ಆಡಳಿತ ಮಾದರಿಯನ್ನು ನಿರ್ಧರಿಸುವ ಶಕ್ತಿ ಹೊಂದಿದೆ. ಪ್ರಶಾಂತ್ ಕಿಶೋರ್ ಸೃಷ್ಟಿಸಿರುವ ಈ ರಾಜಕೀಯ ತಂತ್ರವು ಬಿಜೆಪಿಯಂತಹ ದೈತ್ಯ ಪಕ್ಷವನ್ನು ಎದುರಿಸಲು ಹೇಗೆ ಸಜ್ಜಾಗಿದೆ ಎಂಬುದನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ. ಈ ಅಗ್ನಿಪರೀಕ್ಷೆಯಲ್ಲಿ ಗೆದ್ದವನೇ ನಿಜವಾದ ಬಿಹಾರದ ಭವಿಷ್ಯದ ರೂವಾರಿ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...