ಪುಸ್ತಕ ವಿಮರ್ಶೆ | ಅಂತಃಕರಣ ಕಲಕುವ ‘ಕರಾವಳಿಯ ರಕ್ತ ಕಣ್ಣೀರು’

Date:

ಮಾರಿಕೊಂಡ ಮಾಧ್ಯಮಗಳ ನಡುವೆ, ಯಾವುದೇ ಒಂದು ಧರ್ಮದ ಪರ ನಿಲ್ಲದೆ, ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ದಾಖಲಿಸಿ, ಪತ್ರಿಕಾ ಧರ್ಮವನ್ನು ಗೌರವಿಸಿದ್ದಾರೆ ಲೇಖಕ ಇರ್ಷಾದ್.

ವರ್ಗ ವ್ಯವಸ್ಥೆಯೊಳಗೆ ಸಂಪತ್ತಿದ್ದಲ್ಲಿ ಶೋಷಣೆ, ಹಿಂಸೆಯಿರುತ್ತದೆ. ಹಾಗೆಯೇ ಸೌಹಾರ್ದ ಸಂಪತ್ತು ತುಂಬಿದ್ದ ಕರಾವಳಿಯಲ್ಲಿ ಮತೀಯವಾದ ಎಂಬ ರಾಕ್ಷಸನನ್ನು ಹುಟ್ಟಿಸಿ, ಬೆಳೆಸಲು ನಮ್ಮ ನಾಡಿನ ವ್ಯವಸ್ಥೆ ನಡೆಸಿದ ಪ್ರಯತ್ನ, ಬಲಿತೆಗೆದುಕೊಂಡ ಸಾಕ್ಷಿಗಳನ್ನು, ನೊಂದವರ, ಕೊಂದವರ ಎಲ್ಲರೆದುರು ತೆರೆದಿಟ್ಟಿದೆ ಲೇಖಕ, ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿಯವರ ಕರಾವಳಿಯ ರಕ್ತ ಕಣ್ಣೀರು.

- Advertisement -

ಕಳೆದ ಒಂದು ದಶಕದಲ್ಲಿ ಮನುಜ ಮತದ ಮೇಲೆ ಕೋಮುದ್ವೇಷದ ಸವಾರಿ ಮಾಡಿದ ಹತ್ತಾರು ಕೃತ್ಯಗಳು ಈ ಪುಸ್ತಕದಲ್ಲಿ ಆಧಾರವಾಗಿದೆ. ಸೌಹಾರ್ದತೆ, ಕಾರುಣ್ಯ ತುಂಬಿದ್ದ ದಕ್ಷಿಣಕನ್ನಡದಲ್ಲಿ ಹಿಂದೂ ಮತ್ತು ಮುಸಲ್ಮಾನ ಮತೀಯವಾದಿಗಳು ಆ ನೆಲದ ಚಿತ್ರಣವನ್ನು ಬದಲಿಸಲು ಬಲಿತೆಗೆದುಕೊಂಡಿದ್ದು ತಮ್ಮವರನ್ನೇ. ಕೋಮುದ್ವೇಷ ತನ್ನ ರಕ್ತದಾಹ ತೀರಿಸಿಕೊಳ್ಳಲು ಬಡವರ ಮಕ್ಕಳು, ಅಮಾಯಕರನ್ನು ಶಸ್ತ್ರವಾಗಿ ಬಳಸಿಕೊಂಡು ಅವರ ಬದುಕುಗಳನ್ನು ಬಲಿಪಡೆದು ಕುಟುಂಬಗಳನ್ನು ಅನಾಥ ಮಾಡಿದೆ. ಆ ರಾಕ್ಷಸನನ್ನು ಹುಟ್ಟು ಹಾಕಿ, ಸಲಹುತ್ತಿರುವ ಕಾಣದ ಕೈಗಳು ಯಾವುವು ಎಂಬುದನ್ನು ಈ ಲೇಖನಗಳು ಹುಡುಕಾಟಕ್ಕೆ ಹಚ್ಚುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇದನ್ನು ಓದಿದ್ದೀರಾ? ತುಳುನಾಡಿನ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ “ಕರಾವಳಿಯ ರಕ್ತ ಕಣ್ಣೀರು”

ಮಹಿಳೆ, ರಾಣಿ ಅಬ್ಬಕ್ಕ ಜತೆಯಾಗಿ ನಿಂತು ಪೋರ್ಚುಗೀಸ್ ಸೈನ್ಯಕ್ಕೆ ಒಗ್ಗಟ್ಟಿನ ಪಾಠ ಕಲಿಸಿದ ಇಲ್ಲಿನ ಹಿಂದೂ ಮುಸಲ್ಮಾನರು ತಮ್ಮವರದ್ದೇ ಕೋಮುದ್ವೇಷದ ಎದುರು ಕಂಗಾಲಾಗಿದ್ದಾರೆ. ಎಲ್ಲರ ಅಂಗಳದಲ್ಲಿ ಯಾರಿಗೂ ಅಂಜದೆ ಬೆಳಗುತ್ತಿದ್ದ ದೀಪಗಳು ಮತೀಯವಾದಿಗಳ ದ್ವೇಷ ದಳ್ಳುರಿಗೆ ನಲುಗಿರುವುದಕ್ಕೆ ಹಲವು ಸನ್ನಿವೇಷಗಳು ಇಲ್ಲಿ ಕಣ್ಣಿಗೆ ರಾಚುತ್ತವೆ.

ಕರಾವಳಿ ತಾಯಂದಿರ ರಕ್ತಕಣ್ಣೀರಿಗೆ, ಕುಟುಂಬದವರಿಗಾದ ಮಾಸದ ಗಾಯಗಳಿಗೆ ಕಾರಣ ಮತೀಯವಾದಿಗಳು ಮಾತ್ರವಲ್ಲ. ಮತೀಯವಾದಿಗಳಿಗೆ ಕಡಿವಾಣ ಹಾಕುವ ಬದಲು, ತನ್ನವರು, ತನ್ನ ನೆರೆಹೊರೆಯವರು, ತನ್ನಂತೆಯೇ ಇರುವವರು, ಕಡೆಗೆ ತನ್ನನ್ನೂ ತಾನು ಹತ್ಯೆ ಮಾಡಿಕೊಳ್ಳುವ ಕ್ರೌರ್ಯ ಮೆರೆಯಲು, ಸ್ವತಂತ್ರವಾಗಿ ಬಿಟ್ಟ ಪೊಲೀಸ್‌ ಇಲಾಖೆ. ಘಟನೆಗಳು ಹೆಚ್ಚುತ್ತಿದ್ದರೂ ಆ ನೆಲದಲ್ಲಿ ಶಾಂತಿ ನೆಲೆಸಲು ಕ್ರಮಕೈಗೊಳ್ಳುವುದನ್ನು ಬಿಟ್ಟು, ಧರ್ಮ ರಾಜಕಾರಣ ನಡೆಸಿದ ಸರ್ಕಾರಗಳು.

irshda
ಪುಸ್ತಕದ ಲೇಖಕ, ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿ

ತನ್ನ ಕಣ್ಣ ಮುಂದೆಯೇ ಸಂವಿಧಾನ ವಿರೋಧಿ ಕೋಮು ಕೃತ್ಯಗಳು ನಡೆದಿದ್ದರೂ, ಹಿಂದೂ ಮುಸ್ಲಿಂ ಮತೀಯವಾದಿಗಳನ್ನು ಮೆರೆಯಲು ಬಿಟ್ಟು ಬಲಿಪಶುಗಳಿಗೆ ನ್ಯಾಯ ನಿರಾಕರಣೆ ಮಾಡಿದ ಈ ನೆಲದ ನ್ಯಾಯಾಲಯಗಳು. ಮಾತ್ರವಲ್ಲ ತನ್ನ ಅಸ್ತಿತ್ವವನ್ನೇ ಮಾರಿಕೊಂಡಿರುವ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿದು ಒಬ್ಬ ವ್ಯಕ್ತಿ, ಒಂದು ಪ್ರದೇಶದಲ್ಲಿ ಪರಿಹರಿಸಿಕೊಳ್ಳಬಹುದಾದ ಸಮಸ್ಯೆಯನ್ನು ರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಿ, ಹಬ್ಬಿಸಿ, ದೇಶದ ಹಲವೆಡೆ ಹಿಂದೂ ಮುಸಲ್ಮಾನರನ್ನು ಒಡೆದು ಹಾಕಲು ಮಾಡಿದ ಸಮಾಜಘಾತುಕ ಕೆಲಸ.

634560128 26432635343010391 8745084081492728823 n

ಅದಕ್ಕೆ ಸ್ಪಷ್ಟ ಉದಾಹರಣೆ ಅಮಾಯಕ ಪ್ರವೀಣ್‌ ನೆಟ್ಟಾರು ಹತ್ಯೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ರಾಜ್ಯದ ಜನರ ಪ್ರತಿನಿಧಿ ಎಂಬುದಕ್ಕೆ ಎಳ್ಳು ನೀರು ಬಿಟ್ಟು, ಪ್ರವೀಣ್‌ ಅವರ ಮನೆಗೆ ಮಾತ್ರ ಭೇಟಿ ನೀಡುತ್ತಾರೆ. ಈ ಕೊಲೆಯನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು, ಒಂದು ಧರ್ಮದ ಜನರನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಅಂದಿನ ಬಿಜೆಪಿ ಶಾಸಕರು, ನಾಯಕರು ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಎತ್ತಿ ಕಟ್ಟಿ, ಕೋಮು ಸೌಹಾರ್ದತೆ ಕದಡಲು ಸಕಲ ಪ್ರಯತ್ನಗಳನ್ನೂ ಮಾಡಿದ್ದಾರೆ. ಇದೇ ನೆಲದ ಸಚಿವೆಯೊಬ್ಬರು, ತನ್ನವರ ದುರ್ಬರ ಹತ್ಯೆಗಳಿಂದ ದಿಕ್ಕುಗೆಟ್ಟ ಹತ್ತಾರು ತಾಯಂದಿರ, ಹೆಣ್ಣು ಮಕ್ಕಳೆದುರು ಮತೀಯ ವಿಷಕಾರಿ, ಹೆಣ್ಣು ಎಂಬ ಶೋಭೆಗೆ ಕಳಂಕ ತಂದಿದ್ದರು. ಪರಿಣಾಮ ಕರಾವಳಿಯಲ್ಲಿ ನಡೆದ ಕೃತ್ಯದ ಕುರಿತು ಬೇರೆ ಜಿಲ್ಲೆಗಳಲ್ಲಿಯೂ ಹಿಂದೂ ಮುಸಲ್ಮಾನರು ಪರಸ್ಪರ ಬುಸುಗುಟ್ಟುವ, ದುರುಗುಟ್ಟುವ, ಅನುಮಾನಿಸುವ ವಿಷಮ ಸ್ಥಿತಿ ಎದುರಿಸಬೇಕಾಯಿತು. ಪ್ರವೀಣ್‌ ಕೊಲೆಯ ಘಟನೆಯನ್ನು ಓದುವಾಗ ಇವೆಲ್ಲಾ ಕಣ್ಣ ಮುಂದೆ ಹಾದುಹೋಗುತ್ತದೆ.

ಸಣ್ಣ, ಸ್ಥಳೀಯ ಘಟನೆಗಳಿಗೂ ಕೋಮು ಬಣ್ಣ ಬಳಿದ ದುಷ್ಟ ಶಕ್ತಿಗಳ ನಡುವೆಯೂ, ತನ್ನ ಕುಟುಂಬದ ದೀಪ ಆರಿಸಿದವರ ಕೇಡು ಬಯಸದ ‘ಮನುಷ್ಯ’ರು ಇನ್ನೂ ಇದ್ದಾರೆ. ಅಂತಃಕರಣ ಕಲಕುವ ಕರುಣೆ, ಸಹಾನುಭೂತಿ, ಪ್ರೀತಿ ಈ ನೆಲದ ಮೂಲಗುಣ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಮಾರಿಕೊಂಡ ಮಾಧ್ಯಮಗಳ ನಡುವೆ, ಯಾವುದೇ ಒಂದು ಧರ್ಮದ ಪರ ನಿಲ್ಲದೆ, ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ದಾಖಲಿಸಿ, ಪತ್ರಿಕಾ ಧರ್ಮವನ್ನು ಗೌರವಿಸಿದ್ದಾರೆ ಲೇಖಕ ಇರ್ಷಾದ್.

Sabeena Mysore
ಸಬೀನಾ ಎ, ಮೈಸೂರು
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

‘ಗೋಧ್ರಾ’ದಿಂದ ‘SIR’ ವರೆಗೆ: ಮೋದಿ ಆಡಳಿತದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ಕಮರಿದ ಕನಸುಗಳು!

​ಅಧಿಕಾರದ ಉತ್ತುಂಗದ ಸಂಭ್ರಮದ ನಡುವೆ, ಜನಸಾಮಾನ್ಯರ ಕಮರಿದ ಕನಸುಗಳ ಕಥೆಯೊಂದು ಮರೆಯಾಗುತ್ತಿದೆ....

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ ಹೋದ ಬೆಳಗಾವಿ ರೈತರು

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ...