SIR | ಚು. ಆಯೋಗದ ಕೃತ್ಯ ಬಟಾಬಯಲು; ತಪ್ಪುಗಳ ಮೇಲೆ ತಪ್ಪು; ಸ್ಪಷ್ಟೀಕರಣದಲ್ಲೂ ಎಡವಟ್ಟು!

Date:

ಮತದಾರನ ಹೆಸರಿನ ಒಂದು ಅಕ್ಷರ ತಪ್ಪಿದರೆ ಮತದಾರರಿಗೆ ನೋಟಿಸ್; ಚುನಾವಣಾ ಆಯೋಗವೇ ತನ್ನ ಪಟ್ಟಿಯಲ್ಲಿ ಹೆಸರು, ಗಂಡನ ಹೆಸರು, ಮನೆ ನಂಬರ್‌ಅನ್ನು ತಪ್ಪಾಗಿ ಸೇರಿಸಿದರೆ ಯಾರಿಗೆ ನೋಟಿಸ್?

- Advertisement -

ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ನಕಲಿ ಹೆಸರುಗಳು ಇದ್ದರೆ ತೆಗೆದುಹಾಕುತ್ತೇವೆ. ಅರ್ಹರನ್ನು ಸೇರಿಸುತ್ತೇವೆಂದು ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭಿಸಿತು. ಆದರೆ, ಇದು ಅರ್ಹರನ್ನು ಸೇರಿಸುವ ಪ್ರಕ್ರಿಯೆಯಲ್ಲ, ಅರ್ಹರನ್ನೂ ಹೊರದೂಡುವ ಷಡ್ಯಂತ್ರ ಎಂಬ ಆರೋಪವನ್ನು ನಾಗರಿಕ ಸಂಘಟನೆಗಳು ಆರಂಭದಿಂದಲೂ ಮಾಡುತ್ತಲೇ ಬಂದಿವೆ. ಆದರೂ, ಎಸ್‌ಐಆರ್‌ ಪ್ರಕ್ರಿಯೆ ನಡೆಸಿದೆ. ಆದರೆ, ಮತಪಟ್ಟಿಯನ್ನು ಶುದ್ಧೀಕರಿಸುತ್ತೇವೆಂದು ಹೇಳಿದ ಚುನಾವಣಾ ಆಯೋಗದ ದತ್ತಾಂಶಗಳೇ ಪಕ್ವವಾಗಿಲ್ಲ ಎಂಬುದು ಈಗ ಬಟಾಬಯಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಮತದಾರರ ಹೆಸರಿನಲ್ಲಿರುವ ಸಣ್ಣ spelling ವ್ಯತ್ಯಾಸಕ್ಕೆ ದಾಖಲೆ ಕೇಳಿ ನೋಟಿಸ್ ಕೊಡುವ ಅಧಿಕಾರಿಗಳು, ತಾವು ಪ್ರಕಟಿಸಿದ ಕನ್ನಡ ಮತ್ತು ಇಂಗ್ಲಿಷ್ ಕರಡು ಪಟ್ಟಿಗಳಲ್ಲೇ ಒಬ್ಬ ವ್ಯಕ್ತಿಯ ಹೆಸರು, ಗಂಡನ ಹೆಸರು, ಮನೆ ನಂಬರ್‌ಗಳನ್ನು ಬೇರೆಬೇರೆಯಾಗಿ ದಾಖಲಿಸಿದೆ. ಕನ್ನಡದಲ್ಲೊಂದು ಹೆಸರು, ಇಂಗ್ಲಿಷ್‌ನಲ್ಲಿ ಮತ್ತೊಂದು ಹೆಸರು ಹಾಕಿ, ಗೊಂದಲ ಸೃಷ್ಟಿ ಮಾಡಿದೆ. ಇದೆಲ್ಲವೂ ಆಗಿರುವುದು ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹುಟ್ಟೂರಿನಲ್ಲಿ. ಮಾತ್ರವಲ್ಲ, ಅವರ ತಾಯಿಯ ಹೆಸರಿನೊಂದಿಗೆ ಬೆಸೆದುಕೊಂಡಿರುವ ದಾಖಲೆಗಳಲ್ಲಿ.

ಆದ್ದರಿಂದಲೇ, ಇತ್ತೀಚೆಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ ಎಂದು ವರದಿಯಾಗಿತ್ತು. ಆನಂತರ, ಬೆಂಗಳೂರು ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಿ, ನೋಟಿಸ್‌ ಬಂದಿರುವುದು ಡಿ.ಕೆ ಶಿವಕುಮಾರ್ ಅವರ ತಾಯಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ, ಅವರ ಸ್ಪಷ್ಟನೆಯ ಬಳಿಕ ದಾಖಲೆಗಳನ್ನು ಪರಿಶೀಲಿಸಿದರೆ, ಡಿ.ಕೆ ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ವಿಧಾನಸಭಾ ಕ್ಷೇತ್ರ (184), ಅವರ ಹುಟ್ಟೂರು ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 249ರ ದಾಖಲೆಗಳು ಚುನಾವಣಾ ಆಯೋಗದ ಅಧ್ವಾನಗಳಿಗೆ ಕನ್ನಡಿ ಹಿಡಿದಿವೆ.

ಮತಗಟ್ಟೆ ಸಂಖ್ಯೆ 249ರ ಇಂಗ್ಲಿಷ್ ಕರಡು ಪಟ್ಟಿಯ ಕ್ರಮ ಸಂಖ್ಯೆ 464ರಲ್ಲಿ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರ ವಿವರವಿದೆ. ಅದರಲ್ಲಿ ಮತದಾರರ ವಿವರವು; ‘ಗೌರಮ್ಮ, ಗಂಡ ಕೆಂಪೇಗೌಡ, ಮನೆ ಸಂಖ್ಯೆ 127, ವಯಸ್ಸು 85, ಎಪಿಕ್ ZVG4032298’ ಎಂದು ದಾಖಲಾಗಿದೆ. ಕನ್ನಡ ಕರಡು ಪಟ್ಟಿಯಲ್ಲೂ ಇದೇ ಕ್ರಮ ಸಂಖ್ಯೆ ಮತ್ತು EPICಗೆ ಗೌರಮ್ಮ, ಕೆಂಪೇಗೌಡ, ಮನೆ ಸಂಖ್ಯೆ 127 ಎಂಬ ವಿವರಗಳಿವೆ. ಅಂದರೆ, ಎರಡೂ ಭಾಷೆಗಳ ಕರಡುಪಟ್ಟಿಯಲ್ಲಿ ಸರಿಯಾಗಿಯೇ ಇದೆ.

ಆದರೆ, ಸಮಸ್ಯೆ ಇರುವುದು ಅವರ ವಿವರಗಳ ಪಕ್ಕದಲ್ಲಿರುವ ‘ಕ್ರಮ ಸಂಖ್ಯೆ 465’ರಲ್ಲಿ. ಈ ಕ್ರಮ ಸಂಖ್ಯೆಯ ಮಾಹಿತಿಗಳನ್ನು ಇಂಗ್ಲಿಷ್ ಕರಡು ಪಟ್ಟಿಯಲ್ಲಿ ಗಮನಿಸಿದರೆ; ಕ್ರಮ ಸಂಖ್ಯೆ 465, ಗೌರಮ್ಮ, ಗಂಡ ಕೆಂಪೇಗೌಡ, ಮನೆ ಸಂಖ್ಯೆ 127, ವಯಸ್ಸು 73, ಎಪಿಕ್ ZVG3144276’ ಎಂಬ ವಿವರಗಳಿವೆ. ಆದರೆ, ಅದೇ ದಿನ ಪ್ರಕಟವಾದ ಕನ್ನಡ ಪಟ್ಟಿಯಲ್ಲಿನ ಅದೇ ಕ್ರಮ ಸಂಖ್ಯೆಯ ವಿವರಗಳನ್ನು ಗಮನಿಸಿದರೆ; ‘ಕ್ರಮ ಸಂಖ್ಯೆ 465, ಹೆಸರು ರಾಜಮ್ಮ, ಗಂಡ ನಾಗರಾಜು, ಮನೆ ಸಂಖ್ಯೆಯ 145, ವಯಸ್ಸು 73, ಎಪಿಕ್ ZVG3144276’ ಎಂದಿದೆ.

ಅಂದರೆ, ಕನ್ನಡ ಪಟ್ಟಿಯಲ್ಲಿ ರಾಜಮ್ಮ ಅವರ ವಿವರಗಳು ಸ್ಪಷ್ಟವಾಗಿ ಸರಿಯಾಗಿವೆ. ಆದರೆ, ಇಂಗ್ಲಿಷ್ ಪಟ್ಟಿಯಲ್ಲಿ ವಯಸ್ಸು ಮತ್ತು ಎಪಿಕ್ ನಂಬರ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾಹಿತಿಗಳನ್ನೂ ಡಿ.ಕೆ ಶಿವಕುಮಾರ್ ಅವರ ತಾಯಿಯ ವಿವರಗಳನ್ನೇ ಕಾಪಿ-ಪೇಸ್ಟ್‌ ಮಾಡಲಾಗಿದೆ.

dk kannada english 1

ಇದು ಕೇವಲ spelling mistake ಮಾತ್ರವಾ?
ರಾಜಮ್ಮ – ಗೌರಮ್ಮ ಆಗುವುದು spelling mistake ಅಲ್ಲ.
ನಾಗರಾಜು – ಕೆಂಪೇಗೌಡ ಆಗುವುದು transliteration (ಅಕ್ಷರಾಂತರ) ಸಮಸ್ಯೆಯಲ್ಲ.
ಮನೆ ಸಂಖ್ಯೆ 145 – 127 ಆಗುವುದು ಭಾಷಾಂತರದ ತಪ್ಪಲ್ಲ.

ಇದು ಒಂದೇ EPIC ಸಂಖ್ಯೆಗೆ ಎರಡು ಬೇರೆ ಗುರುತಿನ ವಿವರಗಳನ್ನು ಸೇರಿಸಿರುವ ಗಂಭೀರ ಡೇಟಾ ವೈರುಧ್ಯ.

ಆದರೂ, ಆಯೋಗ ತಾನು ಮಾಡಿದ ತಪ್ಪಿನ ಕೃತ್ಯಕ್ಕೆ ಈಗ ಕನ್ನಡ ಪಟ್ಟಿಯಲ್ಲಿ ಎಲ್ಲ ವಿವರಗಳು ಸ್ಪಷ್ಟವಾಗಿದ್ದರೂ, ‘ಕ್ರಮ ಸಂಖ್ಯೆ 465 ಮತ್ತು ಎಪಿಕ್ ZVG3144276’ ಹೊಂದಿರುವ ರಾಜಮ್ಮ ಅವರಿಗೆ ಇಂಗ್ಲಿಷ್‌ ಪಟ್ಟಿ ಆಧರಿಸಿ ನೋಟಿಸ್‌ ನೀಡಿದೆ. ನೋಟಿಸ್‌ನಲ್ಲಿ ವೈಯಕ್ತಿಕ ಹೆಸರು (ಸೆಲ್ಫ್‌ ನೇಮ್) ಹೊಂದಾಣಿಕೆಯಾಗುತ್ತಿಲ್ಲ. ದಾಖಲೆಗಳನ್ನು ಕೊಟ್ಟು, ಸಾಬೀತು ಮಾಡಿ ಎಂದು ತಾಕೀತು ಮಾಡಿದೆ.

“ಮತದಾರರ ದಾಖಲೆಯ ಒಂದು ಅಕ್ಷರ ತಪ್ಪಿದ್ದರೆ ಅವರು ಸಾಕ್ಷಿ ಕೊಡಬೇಕು; ಚುನಾವಣಾ ಆಯೋಗದ ದಾಖಲೆಯಲ್ಲಿ ಹೆಸರು, ಸಂಬಂಧಿಯ ಹೆಸರು, ಮನೆ ನಂಬರ್ ಮೂರೂ ತಪ್ಪಿದ್ದರೆ ಆಯೋಗಕ್ಕೆ ಸಾಕ್ಷಿ ಕೇಳುವವರು ಯಾರು? ಆದರೆ, ತನ್ನ ತಪ್ಪನ್ನು ಮರೆಮಾಚಿ ಆಯೋಗವೇ ದಾಖಲೆ ಕೇಳಿ ನೋಟಿಸ್‌ ಕೊಡುತ್ತಿದೆ. ಇದು ಚುನಾವಣಾ ಆಯೋಗದ ಆಷಾಡಭೂತಿ ತನ” ಎಂದು ವಕೀಲೆ ರಾಜಲಕ್ಷ್ಮಿ ಅಂಕಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪಷ್ಟೀಕರಣದಲ್ಲೂ ಮತ್ತಷ್ಟು ಎಡವಟ್ಟು ಮಾಡಿದ ಚುನಾವಣಾಧಿಕಾರಿ

ಡಿ.ಕೆ ಶಿವಕುಮಾರ್ ಅವರ ತಾಯಿಗೆ ನೋಟಿಸ್‌ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ, ಸೆಪ್ಟೆಂಬರ್ 10ರಂದು ಬೆಂಗಳೂರು ದಕ್ಷಿಣ ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಿಡಿಸದ್ದಾರೆ. ಅದರಲ್ಲಿ; ಕ್ರಮ ಸಂಖ್ಯೆ 464, 532 ಮತ್ತು 460ಗಳನ್ನು ಉಲ್ಲೇಖಿಸಿ ಮತಗಟ್ಟೆ ಸಂಖ್ಯೆ 249ರ ಪಟ್ಟಿಯಲ್ಲಿ ‘ಗೌರಮ್ಮ’ ಹೆಸರಿನ ಒಟ್ಟು ಮೂವರು ಮತದಾರರು ಇದ್ದಾರೆ. ಕ್ರಮ ಸಂಖ್ಯೆ 464ರ ಗೌರಮ್ಮ ಮುಖ್ಯಮಂತ್ರಿಯವರ ತಾಯಿ, ಅವರಿಗೆ SIR ನೋಟಿಸ್ ನೀಡಿಲ್ಲ; ಉಳಿದ ಇಬ್ಬರಿಗೆ ಮಾತ್ರ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ವಿಚಿತ್ರವೆಂದರೆ, ಜಿಲ್ಲಾ ಚುನಾವಣಾಧಿಕಾರಿಯ ಸ್ಪಷ್ಟೀಕರಣ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಅಧಿಕೃತ ಸ್ಪಷ್ಟೀಕರಣದಲ್ಲಿರುವ ಸಂಖ್ಯೆಗಳೇ ಆಯೋಗ ಪ್ರಕಟಿಸಿದ ಕರಡು ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ.

image 196

ಪತ್ರಿಕಾ ಪ್ರಕಟಣೆಯಲ್ಲಿ ಕ್ರಮ ಸಂಖ್ಯೆ 532ರಲ್ಲಿ ಹೆಸರು ಗೌರಮ್ಮ, ಮತ್ತು ಎಪಿಕ್ ZVG4032579 ಎಂದು ಹೇಳಲಾಗಿದೆ. ಆದರೆ, ಆಗಸ್ಟ್ 24ರ ಆಯೋಗ ಬಿಡುಗಡೆ ಮಾಡಿದ ಕರಡು ಮತಪಟ್ಟಿಯಲ್ಲಿ ಕ್ರಮ ಸಂಖ್ಯೆ 532ರಲ್ಲಿ ಇರುವ ಹೆಸರು ಹನುಮಂತ ಮತ್ತು ಎಪಿಕ್ ZVG4032900. 

ಇನ್ನೂ ವಿಚಿತ್ರವೆಂದರೆ ಪತ್ರಿಕಾ ಪ್ರಕಟಣೆಯಲ್ಲಿರುವ ಎಪಿಕ್ ಸಂಖ್ಯೆ ‘ZVG4032579’ ಕರಡು ಪಟ್ಟಿಯಲ್ಲಿನ ಕ್ರಮ ಸಂಖ್ಯೆ 458ಕ್ಕೆ ಹೊಂದಿಕೆಯಾಗುತ್ತದೆ. ಅಲ್ಲಿರುವ ಹೆಸರು ‘ಶಿವರಾಮು’ ಎಂದು ಇದೆ.

ಅದೇ ರೀತಿ, ಪತ್ರಿಕಾ ಪ್ರಕಟಣೆ ಕ್ರಮ ಸಂಖ್ಯೆ ‘460’ನ್ನು ಗೌರಮ್ಮ ಎಂದು ದಾಖಲಿಸಿದೆ. ಆದರೆ, ಆಯೋಗದ ಕರಡು ಪಟ್ಟಿಯ ಕ್ರಮ ಸಂಖ್ಯೆ 460ರಲ್ಲಿ ಇರುವ ಹೆಸರು ಶ್ರೀ ಅರ್ಜುನ್ ಡಿ.ಎಸ್‌ ಮತ್ತು ಎಪಿಕ್ ಸಂಖ್ಯೆ ZVG4688412.  ಅಂದರೆ, ಇದೂ ಕೂಡ ತಪ್ಪು ಮಾಹಿತಿ.

ಮತ್ತೊಂದು ಸಂಗತಿ ಎಂದರೆ, ಮತಗಟ್ಟೆ 249ರಲ್ಲಿ ಗೌರಮ್ಮ ಹೆಸರಿನಲ್ಲಿ ಮೂವರು ಮಾತ್ರವೇ ಇಲ್ಲ, ಒಂಬತ್ತು ಮಂದಿ ಇದ್ದಾರೆ.

ಸಾರ್ವಜನಿಕರ ಅನುಮಾನ ನಿವಾರಿಸಲು ಕೊಡುವ ಪತ್ರಿಕಾ ಪ್ರಕಟಣೆ, ಸಾರ್ವಜನಿಕವಾಗಿ ಪ್ರಕಟಿಸಿರುವ ಆಯೋಗದ ಸ್ವಂತ ಕರಡು ಪಟ್ಟಿಗೇ ಹೊಂದಿಕೆಯಾಗದಿದ್ದರೆ ಹೊಣೆ ಯಾರು?

ಪತ್ರಿಕಾ ಪ್ರಕಟಣೆಯ ಕೊನೆಯಲ್ಲಿ ಡಿ.ಕೆ ಶಿವಕುಮಾರ್ ಅವರ ತಾಯಿಯ ಕುರಿತಾದ ಗೊಂದಲಕ್ಕೆ ‘ಹೆಸರಿನ ಸಾಮ್ಯತೆ’ ಕಾರಣವಾಗಿದೆ. SIR ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ಆದರೆ ಇಲ್ಲಿ ಸಮಸ್ಯೆ ಕೇವಲ ಹೆಸರಿನ ಸಾಮ್ಯತೆಯಲ್ಲ. ಕ್ರಮ ಸಂಖ್ಯೆ ಬದಲಾಗಿದೆ. EPIC ಸಂಖ್ಯೆ ಹೊಂಕೆಯಾಗುತ್ತಿಲ್ಲ. ಒಂದೇ EPICಗೆ ಕನ್ನಡದಲ್ಲಿ ಒಂದು ಹೆಸರು, ಇಂಗ್ಲಿಷ್‌ನಲ್ಲಿ ಮತ್ತೊಂದು ಹೆಸರು ಬಂದಿದೆ. ಗಂಡನ ಹೆಸರು ಬದಲಾಗಿದೆ. ಮನೆ ನಂಬರ್ ಬದಲಾಗಿದೆ. ಇವೆಲ್ಲವನ್ನೂ ‘ಹೆಸರಿನ ಸಾಮ್ಯತೆಯಿಂದಾದ ಗೊಂದಲ’ ಎಂಬ ಒಂದು ವಾಕ್ಯದಲ್ಲಿ ಮುಚ್ಚಿಹಾಕಲು ಸಾಧ್ಯವೇ?

ಮತ್ತೊಂದು ಆತಂಕಕಾರಿ ಸಂಗತಿ ಎಂದರೆ, ಇದೇ ಮತಗಟ್ಟೆ 249ರ ಕನ್ನಡ ಮತ್ತು ಇಂಗ್ಲಿಷ್ ಕರಡು ಪಟ್ಟಿಗಳನ್ನು ತಾಳೆ ಹಾಕಿ ನೋಡಿದರೆ, ಎರಡರ ನಡುವೆ ಸುಮಾರು 45 ವ್ಯತ್ಯಾಸಗಳು ಕಂಡುಬಂದಿವೆ.

ಆಯೋಗ ಎಸಗಿದ ತಪ್ಪಿಗೆ ಹೊಣೆ ಯಾರು?

ಸಾಮಾನ್ಯವಾಗಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿ ಪರಿಶೀಲಿಸುವವರು ಸುಲಭವಾಗಿ ಸಿಗುವ ಇಂಗ್ಲಿಷ್ ಆವೃತ್ತಿಯನ್ನೇ ಹೆಚ್ಚು ಬಳಸುತ್ತಾರೆ. ಅಲ್ಲಿ ತಪ್ಪು ಮಾಹಿತಿ ಇದ್ದರೆ, ಅದನ್ನು ಬಳಸಿಕೊಂಡು ಸರಿಪಡಿಸಿಕೊಳ್ಳಲು ಅಥವಾ ತಪ್ಪು ಮಾಹಿತಿ ಇದೆ ಎಂದು ಭಾವಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಾರೆ. ಅಂತೆಯೇ, ಚುನಾವಣಾ ಆಯೋಗವು ಸ್ವತಃ ರಾಜಮ್ಮ ಅವರ ಹೆಸರು ಗೌರಮ್ಮ ಆಗಿ ಹೊಂದಾಣಿಕೆಯಾಗುತ್ತಿಲ್ಲ (ಮಿಸ್‌ಮ್ಯಾಚ್‌) ಎಂದು ನೋಟಿಸ್‌ ನೀಡಿರುವುದೂ ಇದೇ ಇಂಗ್ಲಿಷ್‌ ಪಟ್ಟಿ ಆಧರಿಸಿ.

ಕನ್ನಡ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿದ್ದರೂ, ಇಂಗ್ಲಿಷ್‌ ಪಟ್ಟಿಯಲ್ಲಿ ಗೌರಮ್ಮ ಎಂದು ಉಲ್ಲೇಖವಾಗಿರುವ ಕಾರಣಕ್ಕಾಗಿ ರಾಜಮ್ಮ ನೋಟಿಸ್‌ ಪಡೆದಿದ್ದಾರೆ. ಇಲ್ಲಿ, ತಪ್ಪು ಯಾರದ್ದು ಮತದಾರನದಾ? ಅಥವಾ ತಪ್ಪು ಡೇಟಾ ದಾಖಲಿಸಿರುವ ಚುನಾವಣಾ ಆಯೋಗದ್ದಾ?

ಖಂಡಿತಾವಾಗಿಯೂ ಚುನಾವಣಾ ಆಯೋಗದ್ದೇ ತಪ್ಪು. ಆದರೆ, ಆಯೋಗದ ಕೃತ್ಯಕ್ಕೆ ರಾಜಮ್ಮ ಬಲಿಪಶು ಆಗಿದ್ದಾರೆ.

 “SIR ಎಂದರೆ ಮತದಾರರನ್ನು ಶಂಕಿತರನ್ನಾಗಿ ಮಾಡಿ, ಅವರಿಂದ ಮತ್ತೆ ಮತ್ತೆ ತಮ್ಮ ಅಸ್ತಿತ್ವ ಸಾಬೀತುಪಡಿಸಿಕೊಳ್ಳುವಂತೆ ಸೂಚಿಸುವನ ಅಭಿಯಾನ ಆಗಿದೆ. ಇಲ್ಲಿ, ಆಯೋಗ ತಪ್ಪು ಮಾಡಿದ್ದರೂ, ಶಿಕ್ಷೆಗೆ ಒಳಗಾಗಿ ದಾಖಲೆ ಹಿಡಿದು ಓಡಾಡಬೇಕಿರುವುದು ಮತದಾರರು. ಮೊದಲು ಆಯೋಗ ತನ್ನ ದತ್ತಾಂಶವನ್ನು SIR ಮಾಡಿಕೊಳ್ಳಬೇಕು. ಈ SIR ಪ್ರಕ್ರಿಯೆಯನ್ನು ‘Special Intensive Revision’ ಎಂದು ಕರೆಯುವುದಕ್ಕಿಂತ, ‘System’s Inconsistencies Revealed’ ಎಂದು ಕರೆಯಬೇಕು” ಎಂದು ವಕೀಲೆ ರಾಜಲಕ್ಷ್ಮಿ ಅಂಕಲಗಿ ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮಾನವೀಯ ಮೌಲ್ಯಗಳ ಸಂದೇಶ ಸಾರಿದ ಮಹರ್ಷಿ ವಾಲ್ಮೀಕಿ: ಶಾಸಕ ವಿಠ್ಠಲ ಕಟಕಧೊಂಡ

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ...

ಬಾಗಲಕೋಟೆ | ಸಾರ್ವಜನಿಕ ಸೇವೆಗಳಲ್ಲಿ ಲೋಪ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒ ಗಜಾನನ ಬಾಲೆ ಸೂಚನೆ

ಬಡವರು, ರೋಗಿಗಳು, ವಿದ್ಯಾರ್ಥಿನಿಯರು ಹಾಗೂ ವೃದ್ಧರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕಾದ ಸರ್ಕಾರಿ...

ಗ್ಯಾನೇಶ್ ಕುಮಾರ್ ವಜಾಗೊಂಡರೆ, 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ: ರಾಹುಲ್‌ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಪ್ರಧಾನಿ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...