ಕುಡಿತ ಬೇಡ ಎನ್ನುತ್ತಲೇ ಮದ್ಯ ಮಾರಾಟಕ್ಕೆ ‘ಟಾರ್ಗೆಟ್’: ಜನರಲ್ಲಿ ವ್ಯಸನ ಬೆಳೆಸುತ್ತಿದೆಯೇ ವ್ಯವಸ್ಥೆ?

Date:

ಕಡಿಮೆ ಬೆಲೆಯ ಮದ್ಯ ಹೆಚ್ಚು ಮಾರಾಟವಾದಷ್ಟು ಸರ್ಕಾರದ ಆದಾಯ ಹೆಚ್ಚಬಹುದು, ಆದರೆ ಅಷ್ಟೇ ಪ್ರಮಾಣದಲ್ಲಿ ಆ ಕುಟುಂಬಗಳ ಆರ್ಥಿಕ ಸ್ಥಿತಿ ಕುಸಿಯುತ್ತದೆ. ಇದು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ.

ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಜನರ ಹಿತಾಸಕ್ತಿಗೆ ಅಪಾಯ ಉಂಟು ಮಾಡುವ ಕ್ರಮಕ್ಕೆ ಮುಂದಾಗಿತ್ತು. ಸಾವಿರಕ್ಕೂ ಅಧಿಕ ಹೊಸ ಮದ್ಯದ ಅಂಗಡಿ ಶುರು ಮಾಡಲು ನಿರ್ಧರಿಸಿತ್ತು. ಇದರ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಗ್ಯಾರಂಟಿ ಯೋಜನೆ ಮೂಲಕ ಕುಟುಂಬದ ಮಹಿಳೆಯರಿಗೆ ಸರ್ಕಾರ ಹಣ ನೀಡುತ್ತಿದೆ. ಅದೇ ಸರ್ಕಾರ ಅದೇ ಕುಟುಂಬದ ಗಂಡಸರಿಗೆ ಕುಡಿಸುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಹೋರಾಟಗಾರರು ವಾದಿಸಿದ್ದರು.

- Advertisement -

ರಾಜ್ಯದಲ್ಲಿ 1992ರಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡುವುದನ್ನು ನಿಲ್ಲಿಸಲಾಗಿತ್ತು. ಈ ಕಾರಣದಿಂದಾಗಿ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಈ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕಾದರೆ ಗ್ರಾಮಗಳಲ್ಲಿ ನಾವು ಸಕ್ರಮವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕಾಗುತ್ತದೆ ಎಂಬುದು ಅಬಕಾರಿ ಸಚಿವರು ಆರ್.ಬಿ. ತಿಮ್ಮಾಪುರ ಅವರ ವಾದವಾಗಿದೆ. 1992ರಿಂದ ಈವರೆಗೆ ರಾಜ್ಯದಲ್ಲಿ ಜನಸಂಖ್ಯೆ, ಮದ್ಯ ಮಾರಾಟ ಕೂಡಾ ಹೆಚ್ಚಾಗಿದೆ. ಆದ್ದರಿಂದ ಪರವಾನಗಿ ಇರುವವರು ಬೇರೆ ಸ್ಥಳದಲ್ಲಿ ಮದ್ಯದಂಗಡಿ ತೆರೆದರೆ ಸಾಲದು ಹೊಸ ಮದ್ಯದಂಗಡಿಗಳ ಅಗತ್ಯವಿದೆ ಎಂಬ ವಾದವೂ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ? ಸಿಂಧನೂರು | ಮಾಡಶಿರವಾರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಪ್ರತಿಭಟನೆ

ಕುಡಿತ ಬೇಡ ಎಂದು ಹೇಳುವ ಸರ್ಕಾರ ಮದ್ಯ ಮಾರಾಟಕ್ಕೆ ಟಾರ್ಗೆಟ್ ನೀಡಿದೆ. ಇವೆಲ್ಲ ವಾದ-ವಿವಾದಗಳ ನಡುವೆ ನಾವು ರಾಜ್ಯದ ಮದ್ಯ ಮಾರಾಟದ ಇತಿಹಾಸದತ್ತ ಒಂದು ಇಣುಕು ನೋಟ ಬೀರುವುದು ಮುಖ್ಯ. ಯಾವುದೇ ಒಂದು ಸರಕಾದರೂ ಒಂದು ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತದೆ, ಅಲ್ಲಿಂದ ಡೀಲರ್‌ಗಳಿಗೆ ಹೋಗುತ್ತದೆ, ಬಳಿಕ ರಿಟೇಲ್ ಮಾರಾಟಗಾರರಿಗೆ ಹೋಗುತ್ತದೆ. ಆದರೆ ರಾಜ್ಯದಲ್ಲಿ ಮದ್ಯ ಸರಬರಾಜು ಆ ರೀತಿಯಲ್ಲಿ ನಡೆಯುತ್ತಿಲ್ಲ.

ರಾಜ್ಯದಲ್ಲಿ ಈ ಹಿಂದೆ ಹೆಂಡ, ಸಾರಾಯಿ, ಬಿಯರ್ ಮೊದಲಾದ ಮದ್ಯಗಳಿದ್ದವು. ಈ ಪೈಕಿ ಈಗಾಗಲೇ ಹೆಂಡ ನಿಷೇಧವಾಯಿತು. 2007ರ ಜುಲೈ 1ರಂದು ಸಾರಾಯಿ ನಿಷೇಧವಾಯಿತು. ಇದಕ್ಕೂ ಮುನ್ನವೇ 2003ರ ಮೇ 22ರಂದು ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (KSBCL) ಆರಂಭವಾಯಿತು. ರಾಜ್ಯದಲ್ಲಿ ಮದ್ಯದ ಮಾರಾಟ, ವಿತರಣೆ ಮತ್ತು ಅಬಕಾರಿ ಸುಂಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ತರುವುದು ಈ ನಿಗಮ ಆರಂಭದ ಉದ್ದೇಶ. ಈ ಹಿಂದೆ KSBCL ಮೂಲಕವೇ ರಾಜ್ಯದ ಯಾವುದೇ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಮದ್ಯ ಸಗಟು ಮಾರಾಟಗಾರರಿಗೆ ತಲುಪುತ್ತಿತ್ತು. ಆದರೆ ಈಗ ಹಾಗಿಲ್ಲ.

ರಾಜ್ಯ, ಹೊರ ರಾಜ್ಯ, ಹೊರ ದೇಶದ ಮದ್ಯದ ಮೊದಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ KSBCL ಗೋದಾಮಿಗೆ ತಲುಪಬೇಕು. ಆ ಗೋದಾಮಿನಿಂದ ನೇರವಾಗಿ ಮದ್ಯ ಮಾರಾಟಗಾರರಿಗೆ ತಲುಪಿಸಲಾಗುತ್ತದೆ. ಇದರಿಂದಾಗಿ ಸರ್ಕಾರ ಆದಾಯವನ್ನು ಗಳಿಸುತ್ತಿದೆ. ಇದೀಗ ಇದೇ KSBCL ಸರ್ಕಾರ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದಾಯದ ಮೂಲವಾದ ಕಾರಣ ಆದಾಯ ಹೆಚ್ಚಳಕ್ಕೆ ಹೆಚ್ಚು ಗಮನ ಕೊಡುತ್ತಿದೆ. ಅಷ್ಟು ಮಾತ್ರವಲ್ಲದೆ ಯಾವುದೇ ಪಕ್ಷ ಆಗಿರಲಿ ಪ್ರತಿ ತಿಂಗಳು ಈ ಹಿಂದಿನ ತಿಂಗಳಿಗಿಂತ ಜನರಿಗೆ ಹೆಚ್ಚು ಕುಡಿಸಿ ಎಂಬ ಟಾರ್ಗೆಟ್‌ಗಳನ್ನು ನೀಡುತ್ತಿದೆ. ಈ ಟಾರ್ಗೆಟ್ ತಲುಪಲು ಅಬಕಾರಿ ಇಲಾಖೆ ಮತ್ತು ಮದ್ಯ ಮಾರಾಟಗಾರರು ಶ್ರಮಿಸುತ್ತಾರೆ. ಇದು ವಾಸ್ತವ.

ಮದ್ಯ ಮಾರಾಟದಿಂದ ಆದಾಯ ಹೆಚ್ಚಳ

2003-04ರಲ್ಲಿ ₹2,500 – ₹3,000 ಕೋಟಿ KSBCL ಸ್ಥಾಪನೆಯ ವರ್ಷ
2010-11 ₹8,345 ಕೋಟಿ ಸ್ಥಿರ ಬೆಳವಣಿಗೆಯ ಹಂತ
2015-16 ₹15,333 ಕೋಟಿ
2017-18 ₹17,948 ಕೋಟಿ
2018-19 ₹19,701 ಕೋಟಿ
2020-21 ₹23,332 ಕೋಟಿ ಕೋವಿಡ್ ಸಮಯದಲ್ಲಿ ಮಾರಾಟ ಏರಿಳಿತ
2021-22 ₹26,377 ಕೋಟಿ
2022-23 ₹29,920 ಕೋಟಿ 13.43% ಬೆಳವಣಿಗೆ ದಾಖಲು
2023-24 ₹34,500 ಕೋಟಿ (ಗುರಿ) ಅಬಕಾರಿ ತೆರಿಗೆ ಹೆಚ್ಚಳ
2024-25 ₹38,525 ಕೋಟಿ (ಗುರಿ) ಪ್ರಸಕ್ತ ಸಾಲಿನ ಅಂದಾಜು

ಈ ಆದಾಯ ಏರಿಕೆಯಾಗಿರುವುದು ಜನರು ಕುಡಿತ ಹೆಚ್ಚಿಸಿರುವುದರಿಂದಲೇ ಎಂಬ ವಾದ ಕೆಲವರದ್ದು. ಆದರೆ ವಾಸ್ತವ ಬೇರೆಯೇ ಇದೆ. ಪ್ರತಿ ವರ್ಷ ಮದ್ಯ ಮಾರಾಟ ಹೆಚ್ಚಿಸುವಂತೆ ಟಾರ್ಗೆಟ್ ನೀಡಿರುವುದೇ ಈ ಆದಾಯ ಹೆಚ್ಚಳಕ್ಕೆ ಕಾರಣ. ಪ್ರತಿ ಜಿಲ್ಲೆಗಳಿಗೂ ಅಬಕಾರಿ ಇಲಾಖೆಯು ಟಾರ್ಗೆಟ್ ನಿಗದಿ ಮಾಡಿರುತ್ತದೆ. ಈ ಟಾರ್ಗೆಟ್ ತಲುಪಲು ಸಾಧ್ಯವಾಗಿದ್ದರೆ, ಆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ನಿಟ್ಟಿನಲ್ಲಿ ಕ್ರಮಕ್ಕೆ ಇಲಾಖೆ ಮುಂದಾಗುತ್ತದೆ. ಆದ್ದರಿಂದ ಜಿಲ್ಲೆಯ ಅಧಿಕಾರಿಗಳು ಜಿಲ್ಲೆಯ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳಿಗೆ ಟಾರ್ಗೆಟ್ ನಿಗದಿ ಮಾಡುತ್ತಾರೆ. ಅಕ್ರಮ ಮದ್ಯ ಮಾರಾಟದ ನೋಟಿಸ್‌ನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಮದ್ಯದಂಗಡಿಗಳು ನೀಡಿದ ಟಾರ್ಗೆಟ್‌ನಷ್ಟೇ ಮದ್ಯವನ್ನು ಖರೀಸುತ್ತದೆ. ಆದರೆ ಅಷ್ಟೊಂದು ಮದ್ಯ ಮಾರಾಟ ಅಸಾಧ್ಯವಾದ ಕಾರಣ ಅಲ್ಲೊಂದು ಅಕ್ರಮ ನಡೆಸುತ್ತಾರೆ. ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾಗುತ್ತದೆ, ಅಲ್ಲಿಂದ ಅಕ್ರಮವಾಗಿ ಮದ್ಯಪ್ರಿಯರಿಗೆ ಮಾರಾಟವಾಗುತ್ತದೆ. ಇವೆಲ್ಲವೂ ಸಕ್ರಮ ಮದ್ಯ ಮಾರಾಟದ ನೆಪದಲ್ಲಿ ಸರ್ಕಾರದ ಶಾಮೀಲುದಾರಿಕೆಯಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟ! ಈ ಅಕ್ರಮದಲ್ಲಿ ಯಾವ ಪಕ್ಷವೂ ಹೊರತಾಗಿಲ್ಲ.

ಇದನ್ನು ಓದಿದ್ದೀರಾ? ಬೀದರ್‌ | ಅಕ್ರಮ ಮದ್ಯ ಮಾರಾಟ ತಡೆಗೆ ಕೆಆರ್‌ಎಸ್ ಒತ್ತಾಯ

2009ರಲ್ಲಿ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಮದ್ಯ ಮಾರಾಟ ಮಳಿಗೆ ಆರಂಭವಾಗಿದೆ. ಅದರ ಮೂಲಕವೂ ಅಲ್ಲಲ್ಲಿ ಮದ್ಯ ಮಾರಾಟ ಮಳಿಗೆ ತೆರೆದು ಮದ್ಯ ಮಾರಾಟ ಮಾಡಲಾಗಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ – ಹೀಗೆ ಯಾವುದೇ ಸರ್ಕಾರ ಬಂದರೂ ಮಾಡಿರುವುದೇ ಇದನ್ನೇ.

ರಾಜ್ಯದಲ್ಲಿ ಮದ್ಯದಂಗಡಿಗಳ ಸಂಖ್ಯೆಯಲ್ಲಿ ಹೆಚ್ಚಳ

ಮದ್ಯದಂಗಡಿಗಳ (ಅಬಕಾರಿ ಪರವಾನಗಿ) ಸಂಖ್ಯೆ 2016ರಿಂದೀಚೆಗೆ ಕ್ರಮೇಣ ಹೆಚ್ಚಾಗಿದೆ. ಲಭ್ಯವಿರುವ ಇತ್ತೀಚಿನ ವರದಿಗಳ ಪ್ರಕಾರ, 2024-25ರ ಅವಧಿಯಲ್ಲಿ ರಾಜ್ಯದಲ್ಲಿ ಮದ್ಯದ ಪರವಾನಗಿಗಳ ಸಂಖ್ಯೆ 14,000 ದಾಟಿದೆ. 2016ರ ಆಸುಪಾಸಿನಲ್ಲಿ ಮದ್ಯದಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಮತ್ತು ಎಂಎಸ್‌ಐಎಲ್ (MSIL) ಮಳಿಗೆಗಳನ್ನು ಒಳಗೊಂಡಂತೆ ಒಟ್ಟು ಅಬಕಾರಿ ಪರವಾನಗಿಗಳ ಸಂಖ್ಯೆ ಸರಿಸುಮಾರು 10,000 ರಿಂದ 11,000ದ ಆಸುಪಾಸಿನಲ್ಲಿತ್ತು. ಆದರೆ 2025ರಲ್ಲಿ ಒಟ್ಟು 14,101 ಪರವಾನಗಿಗಳನ್ನು ನವೀಕರಿಸಲಾಗಿದೆ ಅಥವಾ ನೀಡಲಾಗಿದೆ. ಇದರಲ್ಲಿ ಹೆಚ್ಚಾಗಿ CL-2 (ಮದ್ಯ ಮಾರಾಟ ಮಳಿಗೆ) ಮತ್ತು CL-9 (ಬಾರ್ ಮತ್ತು ರೆಸ್ಟೋರೆಂಟ್) ಗಳು ಸೇರಿವೆ. ರಾಜ್ಯದಲ್ಲಿ 2009ರಲ್ಲಿ 463 ಇದ್ದ MSIL ಮದ್ಯದಂಗಡಿಗಳ ಸಂಖ್ಯೆ, 2023ರ ಹೊತ್ತಿಗೆ 1,029ಕ್ಕೆ ಏರಿಕೆಯಾಗಿದೆ.

2011-12ರಲ್ಲಿ ರಾಜ್ಯದ 350 ಹಳ್ಳಿಗಳಲ್ಲಿ ಅಧ್ಯಯನ ಮಾಡಲಾಗಿತ್ತು. ಈ ಅಧ್ಯಯನದಲ್ಲಿ ಹಳ್ಳಿಗಳಲ್ಲಿ ಜನರು ಪ್ರತಿದಿನ ಸಂಜೆ ಕುಡಿಯುವ ಚಟಕ್ಕೆ ಒಳಗಾಗಿರುವುದು ಬಹಿರಂಗವಾಗಿತ್ತು. ಇದಾದ ಬಳಿಕ ರಾಜ್ಯದಲ್ಲಿ ಮಹಿಳಾ ಸಂಘಟನೆಗಳು ಹೋರಾಟ ಶುರು ಮಾಡಿತು. ಇವೆಲ್ಲವುದರ ನಡುವೆ ಅಬಕಾರಿ ಇಲಾಖೆಗೆ ಹೊಸ ಹೊಸ ಟಾರ್ಗೆಟ್ ವಿಧಿಸಲಾಗುತ್ತಿದೆ. ಮತ್ತೆ ಅದೇ ಪ್ರಕ್ರಿಯೆ ಪುನಾರವರ್ತನೆಯಾಗುತ್ತಾ ಸಾಗುತ್ತದೆ.

ಪ್ರಜ್ಞಾಪೂರ್ವಕವಾಗಿ ಹೆಚ್ಚಿನ ಜನರಿಗೆ ಮದ್ಯವನ್ನು ಕುಡಿಸುವಂತಹ ಕೆಲಸವನ್ನು ಅಲ್ಲಲ್ಲಿ ಮದ್ಯದಂಗಡಿ ತೆರೆಯುವ ಮೂಲಕ, ಟಾರ್ಗೆಟ್ ಹೆಚ್ಚಿಸುವ ಮೂಲಕ ಮಾಡಲಾಗುತ್ತದೆ. ಇದನ್ನು ಸರ್ಕಾರ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ನೀಡಬೇಕು. ಯಾವ ಗ್ಯಾರಂಟಿಗಳ ಮೂಲಕ ಮಹಿಳಾ ಸಬಲೀಕರಣದತ್ತ ಈ ಸರ್ಕಾರ ಹೆಜ್ಜೆ ಇಟ್ಟಿದೆಯೋ ಅದೇ ಸರ್ಕಾರ ಈ ಅಪಾಯಕಾರಿ ಬೆಳವಣಿಗೆಯಲ್ಲಿ ತೊಡಗಿರುವುದನ್ನು ನಿಲ್ಲಿಸಬೇಕು. ವಿಪಕ್ಷಗಳೂ ತಾವು ಅಧಿಕಾರವಿದ್ದಾಗ ಮಾಡಿದ್ದು ಇದನ್ನೇ ಎಂದು ಒಪ್ಪಿಕೊಂಡು ಪ್ರಾಮಾಣಿಕವಾಗಿ ಸರ್ಕಾರದ ಕ್ರಮವನ್ನು ಖಂಡಿಸಬೇಕು.

ಸರ್ಕಾರವು “ಮದ್ಯಪಾನ ಆರೋಗ್ಯಕ್ಕೆ ಹಾನಿಕರ” ಎಂಬ ಎಚ್ಚರಿಕೆಯನ್ನು ನೀಡುತ್ತಲೇ, ಮದ್ಯದ ಮಳಿಗೆಗಳ ಪರವಾನಗಿ ಹೆಚ್ಚಿಸುವುದು ಎಷ್ಟು ಸರಿ? ಅಷ್ಟಕ್ಕೂ ಬಡ ಮತ್ತು ಮಧ್ಯಮ ವರ್ಗದ ಜನರು ಈ “ಟಾರ್ಗೆಟ್” ಸಂಸ್ಕೃತಿಯ ನೇರ ಬಲಿಪಶುಗಳು. ಕಡಿಮೆ ಬೆಲೆಯ ಮದ್ಯ ಹೆಚ್ಚು ಮಾರಾಟವಾದಷ್ಟು ಸರ್ಕಾರದ ಆದಾಯ ಹೆಚ್ಚಬಹುದು, ಆದರೆ ಅಷ್ಟೇ ಪ್ರಮಾಣದಲ್ಲಿ ಆ ಕುಟುಂಬಗಳ ಆರ್ಥಿಕ ಸ್ಥಿತಿ ಕುಸಿಯುತ್ತದೆ. ಇದು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ. ಆದಾಯಕ್ಕಾಗಿ ಮದ್ಯವನ್ನು ಅವಲಂಬಿಸುವ ಈ “ದುಶ್ಚಟ” ಸರ್ಕಾರಗಳಿಗೂ ಅಂಟಿಕೊಂಡಿದೆ ಎನ್ನುವುದು ಕಟು ಸತ್ಯ. ಪರ್ಯಾಯ ಆದಾಯದ ಮೂಲಗಳನ್ನು ಹುಡುಕದ ಹೊರತು ಈ ದ್ವಂದ್ವ ನಿಲ್ಲುವುದು ಕಷ್ಟ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...