ಮಧ್ಯಪ್ರಾಚ್ಯ ಸಂಘರ್ಷ: ದೇಶದ ಹೆದ್ದಾರಿ ಯೋಜನೆಗಳ ವೇಗಕ್ಕೆ ತಟ್ಟಿದ ಡಾಂಬರು ಅಭಾವದ ಬಿಸಿ

Date:

ಡಾಂಬರು ಪೂರೈಕೆ ಕಡಿಮೆಯಾಗುತ್ತಿದ್ದಂತೆ, ಬೆಲೆ ಶೇಕಡ 20 ರಿಂದ 30ಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ. ಇದು ಗುತ್ತಿಗೆದಾರರ ಬಜೆಟ್ ಅನ್ನು ಏರುಪೇರಾಗಿಸುತ್ತಿದೆ. ಈಗಾಗಲೇ ಅಟಲ್ ಸುರಂಗ ಸೇರಿದಂತೆ ಕೇಂದ್ರದ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕಳಪೆ ಕಾಮಗಾರಿಗೆ ಪ್ರಸಿದ್ಧ. ಈಗ ಡಾಂಬರು ಲಭ್ಯವಿಲ್ಲದೆ ಇನ್ನಷ್ಟು ಕಳಪೆ ಕಾಮಗಾರಿಯನ್ನು ನಾವು ಕಾಣಬೇಕಾದೀತು. ಇವೆಲ್ಲವೂ ಮುಂದೊಂದು ದಿನ "ಕಳ್ಳನಿಗೊಂದು ಪಿಳ್ಳೆ ನೆವ"ವಾದರೂ ಆಶ್ಚರ್ಯವಿಲ್ಲ!

ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸಿದ ದಾಳಿಯು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಈ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ನಡೆದಿದೆ. ಆದರೆ ಯುದ್ಧ ಬಿಟ್ಟುಹೋದ ಕರಿನೆರಳು ಹಲವಾರು ತಿಂಗಳು, ವರ್ಷಗಳು ಕಳೆದರೂ ಮಾಸದಾಗಿದೆ. ಈ ಯುದ್ಧವು ಕೇವಲ ರಾಜತಾಂತ್ರಿಕ ಬಿಕ್ಕಟ್ಟಾಗಿ ಉಳಿಯದೆ, ಜಾಗತಿಕ ಸರಬರಾಜು ಸರಪಳಿಯ ಬೆನ್ನೆಲುಬನ್ನೇ ಮುರಿದಿರುವುದು ವಾಸ್ತವ. ಜಾಗತಿಕ ಕಚ್ಚಾ ತೈಲ ಮತ್ತು ಅದರ ಉಪ-ಉತ್ಪನ್ನಗಳ ಪ್ರಮುಖ ಕೇಂದ್ರ ಮಧ್ಯಪ್ರಾಚ್ಯ. ಇಲ್ಲಿ ಕಂಡುಬಂದಿರುವ ಅಸ್ಥಿರತೆ ಭಾರತದ ಮೂಲಸೌಕರ್ಯ ಯೋಜನೆಗಳ ಮೇಲೆ ನೇರವಾಗಿ ಪ್ರಭಾವ ಬೀರಿದೆ.

- Advertisement -

ದೇಶದಲ್ಲಿ ದೇಶೀಯ ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಾದ ಡಾಂಬರು (Bitumen) ಪೈಕಿ ಗಮನಾರ್ಹ ಪಾಲನ್ನು ಇರಾನ್, ಯುಎಇ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕೆಂಪು ಸಮುದ್ರದ ಜಲಮಾರ್ಗದಲ್ಲಿ ಎದುರಾಗಿರುವ ಭದ್ರತಾ ಸವಾಲುಗಳು ನಡುವೆ ಡಾಂಬರು ಆಮದು ಪ್ರಕ್ರಿಯೆಯು ತೀವ್ರವಾಗಿ ಕುಂಠಿತಗೊಂಡಿದೆ. ಈ ಜಾಗತಿಕ ಬಿಕ್ಕಟ್ಟು ದೇಶದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಗಳ (PWD) ಯೋಜನೆಗಳ ವೇಗಕ್ಕೆ ಬ್ರೇಕ್ ಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಇದನ್ನು ಓದಿದ್ದೀರಾ? ʼಕಾಂಕ್ರೀಟ್‌ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!

ಡಾಂಬರಿನ ತೀವ್ರ ಅಭಾವ ಮತ್ತು ಮಾರುಕಟ್ಟೆಯಲ್ಲಿ ಅದರ ಬೆಲೆ ದಿಢೀರನೆ ಶೇ.25ರಿಂದ 30ರಷ್ಟು ಹೆಚ್ಚಾಗಿರುವುದರಿಂದ ಗುತ್ತಿಗೆದಾರರನ್ನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದೇಶಾದ್ಯಂತ ರಸ್ತೆ ನವೀಕರಣ, ಹೊಸ ಹೆದ್ದಾರಿಗಳ ನಿರ್ಮಾಣ ಕಾರ್ಯಗಳು ಸೊರಗುತ್ತಿವೆ. ಡಾಂಬರು ಕೊರತೆಯು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ರಸ್ತೆ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಡಾಂಬರು ಕೊರತೆಗೆ ಇರುವ ನಂಟೇನು?

ಡಾಂಬರು ಎಂಬುದು ಕಚ್ಚಾ ತೈಲವನ್ನು ಸಂಸ್ಕರಿಸಿರುವಾಗ ಸಿಗುವ ಒಂದು ಉಪ-ಉತ್ಪನ್ನ. ಭಾರತವು ಡಾಂಬರನ್ನು ಸಾಮಾನ್ಯವಾಗಿ ಇರಾನ್, ಯುಎಇ ಮತ್ತು ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಕೆಂಪು ಸಮುದ್ರ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಸಂಘರ್ಷದಿಂದಾಗಿ ಸರಕು ಹಡಗುಗಳ ಸಂಚಾರಕ್ಕೆ ಭಾರೀ ಧಕ್ಕೆಯಾಗಿದೆ. ಹಡಗುಗಳು ದೀರ್ಘ ಮಾರ್ಗಗಳನ್ನು ಬಳಸಬೇಕಾಗುತ್ತಿದೆ. ಇದರಿಂದಾಗಿ ಡಾಂಬರು ಆಮದು ಸಮಯ, ವೆಚ್ಚ ಎರಡೂ ಅಪಾರವಾಗಿ ಅಧಿಕಗೊಂಡಿದೆ. ಇನ್ನೊಂದೆಡೆ ಭಾರತಕ್ಕೆ ಅತಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಡಾಂಬರು ಅಥವಾ ಅದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇರಾನ್ ಯುದ್ಧದ ವಾತಾವರಣಕ್ಕೆ ತುತ್ತಾಗಿ ಆಮದು ಪ್ರಮಾಣ ತೀವ್ರವಾಗಿ ಕುಸಿದಿದೆ.

ಇನ್ನೊಂದೆಡೆ ಜಾಗತಿಕವಾಗಿ ಯುದ್ಧದ ವಾತಾವರಣ ನಿರ್ಮಾಣವಾದಾಗ ಕಚ್ಚಾತೈಲದ ಬೆಲೆಗಳು ಗಗನಕ್ಕೇರಿದವು. ಈ ಸಂದರ್ಭದಲ್ಲಿ ತೈಲ ಸಂಸ್ಕರಣಾ ಕಂಪನಿಗಳು ಹೆಚ್ಚು ಲಾಭ ತಂದುಕೊಡುವ ಪೆಟ್ರೋಲ್, ಡೀಸೆಲ್ ಮತ್ತು ಜಿಪ್ ಇಂಧನಗಳ (Aviation Fuel) ಉತ್ಪಾದನೆಗೆ ಆದ್ಯತೆ ನೀಡಿತು. ಡಾಂಬರಿನ ಒಟ್ಟಾರೆ ಉತ್ಪಾದನೆಯೂ ತಗ್ಗಿತು. ಇದು ಮಾರುಕಟ್ಟೆಯಲ್ಲಿ ಭಾರಿ ಕೊರತೆಯನ್ನು ಸೃಷ್ಟಿಸಿತು. ಈ ಡಾಂಬರು ಕೊರತೆಯಿಂದಾಗಿ ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ರಸ್ತೆ ಯೋಜನೆಗಳು ಮಂದಗತಿಯಲ್ಲಿ ಸಾಗುತ್ತಿವೆ. ರಸ್ತೆ ನಿರ್ಮಾಣ ವಲಯವು ಲಕ್ಷಾಂತರ ದಿನಗೂಲಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತದೆ. ಕಾಮಗಾರಿಗಳು ಸೊರಗಿರುವುದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ಇದನ್ನು ಓದಿದ್ದೀರಾ? ಮಳೆ ವೇಳೆ ರಸ್ತೆಗೆ ಡಾಂಬರು ಹಾಕಲು ವೆಟ್ ಮಿಕ್ಸಿಂಗ್ ವಿಧಾನ ಬಳಕೆ: ಡಿಸಿಎಂ ಡಿ ಕೆ ಶಿವಕುಮಾರ್

ಡಾಂಬರು ಲಭ್ಯವಿಲ್ಲದ ಕಾರಣ ರಸ್ತೆಗಳಿಗೆ ಅಂತಿಮ ಹಂತದ ‘ಟಾರಿಂಗ್’ ವಿಳಂಬವಾಗುತ್ತಿದೆ. ಇದರಿಂದಾಗಿ ರಸ್ತೆಯ ಬಿರುಕುಗಳ ಮೂಲಕ ನೀರು ಒಳಹೊಕ್ಕು, ರಸ್ತೆಯ ತಳಪಾಯವೇ ಹಾಳಾಗುವ ಸಾಧ್ಯತೆಯಿದೆ. ಡಾಂಬರು ಸಿಗದೆ ನಿಗದಿತ ಅವಧಿಯಲ್ಲಿ ಮುಗಿಯಬೇಕಿದ್ದ ಯೋಜನೆಗಳು ತಿಂಗಳುಗಟ್ಟಲೆ ಮುಂದೂಡಲ್ಪಡುತ್ತಿದೆ. ಡಾಂಬರು ಪೂರೈಕೆ ಕಡಿಮೆಯಾಗುತ್ತಿದ್ದಂತೆ, ಬೆಲೆ ಶೇಕಡ 20 ರಿಂದ 30ಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ. ಇದು ಗುತ್ತಿಗೆದಾರರ ಬಜೆಟ್ ಅನ್ನು ಏರುಪೇರಾಗಿಸುತ್ತಿದೆ. ಈಗಾಗಲೇ ಅಟಲ್ ಸುರಂಗ ಸೇರಿದಂತೆ ಕೇಂದ್ರದ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕಳಪೆ ಕಾಮಗಾರಿಗೆ ಪ್ರಸಿದ್ಧ. ಈಗ ಡಾಂಬರು ಲಭ್ಯವಿಲ್ಲದೆ ಇನ್ನಷ್ಟು ಕಳಪೆ ಕಾಮಗಾರಿಯನ್ನು ನಾವು ಕಾಣಬೇಕಾದೀತು. ಇವೆಲ್ಲವೂ ಮುಂದೊಂದು ದಿನ “ಕಳ್ಳನಿಗೊಂದು ಪಿಳ್ಳೆ ನೆವ”ವಾದರೂ ಆಶ್ಚರ್ಯವಿಲ್ಲ!

ದೇಶದಲ್ಲೇ ಇರುವ IOCL, BPCL ಮತ್ತು HPCL ನಂತಹ ತೈಲ ಸಂಸ್ಕರಣಾಗಾರಗಳು ಡಾಂಬರು ಉತ್ಪಾದಿಸುತ್ತವೆ. ಆದರೂ ದೇಶದ ಒಟ್ಟು ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ಈ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಇವೆಲ್ಲವುದರ ನಡುವೆ ಪ್ರಸ್ತುತ ದೇಶದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕೆ ಅಧಿಕ ಆದ್ಯತೆ ನೀಡಲಾಗುತ್ತಿದೆ ಎಂಬುದು ಗಮನಾರ್ಹ. ಆದರೆ ಗ್ರಾಮೀಣ ರಸ್ತೆಗಳು, ನಗರ ಪ್ರದೇಶದ ರಸ್ತೆಗಳು ಮತ್ತು ಹೆದ್ದಾರಿಗಳ ಮೇಲ್ಪದರಕ್ಕೆ ಡಾಂಬರು ಅತ್ಯಗತ್ಯ. ದೇಶೀಯ ರಿಫೈನರಿಗಳೂ ಸದ್ಯಕ್ಕೆ ಹೆಚ್ಚಿನ ಪ್ರೀಮಿಯಂ ದರದಲ್ಲಿ ಡಾಂಬರು ಪೂರೈಸುತ್ತಿರುವುದು ಗುತ್ತಿಗೆದಾರರಿಗೆ ಹೊರೆಯಾಗಿದೆ.

ಜಾಗತಿಕ ಸರಬರಾಜು ಜಾಲದ ಮೇಲಿನ ಅತಿಯಾದ ಅವಲಂಬನೆಯು ದೇಶೀಯ ಅಭಿವೃದ್ಧಿ ಯೋಜನೆಗಳನ್ನು ಹೇಗೆ ಅಪಾಯಕ್ಕೆ ದೂಡಬಹುದು ಎಂಬುದಕ್ಕೆ ಈ ಡಾಂಬರು ಕೊರತೆಯೇ ಪ್ರತ್ಯಕ್ಷ ಸಾಕ್ಷಿ. ಪ್ರಸ್ತುತ ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದ್ದರೂ ಇದು ಭಾರತಕ್ಕೆ ಎಚ್ಚರಿಕೆಯ ಗಂಟೆ. ಇನ್ನು ಮುಂದಾದರೂ ಭಾರತ ಕೇವಲ ಮಧ್ಯಪ್ರಾಚ್ಯದ ಆಮದಿನ ಮೇಲೆ ಅವಲಂಬಿತವಾಗದೆ, ಡಾಂಬರು ಉತ್ಪಾದನೆಯನ್ನು ಹೆಚ್ಚಿಸುವೆಡೆ ಗಮನಹರಿಸಬಹುದು. ಆದರೆ ಡಾಂಬರು ಉತ್ಪಾದನೆ ಹೆಚ್ಚಿಸಲು ಕೂಡ ನಾವು ಪರೋಕ್ಷವಾಗಿ ವಿದೇಶಿ ಕಚ್ಚಾ ತೈಲದ ಮೇಲೆಯೇ ಅವಲಂಬಿಸಬೇಕಾಗುತ್ತದೆ ಎಂಬುದು ವಾಸ್ತವ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದಿಂದ ನಾಡಿಗೆ ಮುಕ್ತಿ ಸಿಗಲಿ: ಗಾಣಗಾಪುರ ದತ್ತಾತ್ರೇಯನ ಮೊರೆ ಹೋದ ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ಜನತೆಗೆ ಶೀಘ್ರವೇ ಮುಕ್ತಿ ಸಿಗಲಿ ಹಾಗೂ...

ಕಾನೂನುಬಾಹಿರ ನೇಮಕದ ಆರೋಪ: ಚಂದ್ರಶೇಖರನ್ ಬೆನ್ನಿಗೆ ನಿಂತ ಮಂಡಳಿ, ವಿರೋಧಿಸಿದ ನೊಯೆಲ್ ಟಾಟಾ

ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ ರೈತರ ಒತ್ತಾಯ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು...

‘ಕಠಿಣ ಆದೇಶಕ್ಕೆ ಆಹ್ವಾನ ನೀಡದಿರಿ’: ಮಣಿಪುರ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಮನೆ ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ...