ಹೆಸರಾಯಿತು ಕಲ್ಯಾಣ ಕರ್ನಾಟಕ; ಬದಲಾಗದ ಜನರ ಬದುಕು!

Date:

ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಎರಡು ಸ್ವಾತಂತ್ರ್ಯ ಸಂಭ್ರಮದ ದಿನ. ಒಂದು ಬ್ರಿಟಿಷರಿಂದ ಮುಕ್ತಿ ಹೊಂದಿದ್ದ ಆಗಸ್ಟ್ 15ರ ಭಾರತದ ಸ್ವಾತಂತ್ರ್ಯ ದಿನ, ಇನ್ನೊಂದು ದೇಶದೊಳಗಿನ ರಾಜರ ಸುಪರ್ದಿಯಲ್ಲಿದ್ದ ಪ್ರದೇಶ ಬಿಡುಗಡೆಯಾಗಿ ಸ್ವತಂತ್ರ ದೇಶದೊಳಗೆ ವಿಲೀನವಾದ ಕಲ್ಯಾಣ ಕರ್ನಾಟಕ ಉತ್ಸವ ದಿನ. ಹೆಚ್ಚು ಕಮ್ಮಿ 1 ತಿಂಗಳ ಅಂತರದಲ್ಲಿ ಎರಡು ಬಾರಿ ಸ್ವಾತಂತ್ರ್ಯ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ʼಕಲ್ಯಾಣʼ ಜನರದಾಗಿದೆ.

- Advertisement -

ದೇಶೀಯ ಅರಸ ಹೈದ್ರಾಬಾದ್ ನಿಜಾಂ ಆಳಿಸಿಕೊಂಡ ದಾಸ್ಯದ ಧ್ವನಿಯಾದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ʼಕಲ್ಯಾಣ ಕರ್ನಾಟಕʼ ಎಂದು ಬದಲಾಗಿದೆ. ಶರಣರ ವಚನ ಪ್ರಜ್ಞೆಯ ಈ ನೆಲವನ್ನು 2019ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಈ ಪ್ರದೇಶಕ್ಕೆ ʼಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಕಲ್ಯಾಣ ಕರ್ನಾಟಕ ಭಾಗ ನಿಜಾಂಮನ ದಾಸ್ಯದಿಂದ ಬಿಡುಗಡೆಯಾಗಿ 78 ವರ್ಷ ಕಳೆದರೆ, ಹೈದ್ರಾಬಾದ್‌ ಕರ್ನಾಟಕ ಎಂಬ ಹೆಸರಿನಿಂದ ಕರೆಯುತ್ತಿದ್ದ ಈ ಭಾಗವನ್ನು ʼಕಲ್ಯಾಣ ಕರ್ನಾಟಕʼ ಎಂದು ಮರುನಾಮಕರಣಗೊಂಡು 7 ವರ್ಷ ಪೂರ್ಣಗೊಂಡಿದೆ. ಈ ಭಾಗದ ಜನರು ಹೆಸರು ಬದಲಾವಣೆಗಾಗಿ ಜನಪ್ರತಿನಿಧಿಗಳ ಪ್ರತಿಧ್ವನಿಗೆ ಸ್ಪಂದಿಸಿದ ಕಾರಣಕ್ಕೆ ಹೆಸರೇನೋ ಬದಲಾಗಿದೆ. ಜನರ ಭಾವನಾತ್ಮಕ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸರ್ಕಾರ, ಇಲ್ಲಿನ ಸರ್ವಾಗೀಣ ಅಭಿವೃದ್ಧಿ ವಿಚಾರದಲ್ಲಿ ಸ್ಪಂದಿಸಲು ಹಿಂದೇಟು ಹಾಕುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಹೀಗಾಗಿ ಕಲ್ಯಾಣ ಜನರ ಅಭಿವೃದ್ಧಿ ಎಂಬುದು ಇಂದಿಗೂ ಕನಸಾಗಿಯೇ ಉಳಿದಿದೆ.

ಬಸವಾದಿ ಶರಣರ ತವರು ನೆಲ, ಕಲ್ಯಾಣ ಸಮಾಜದ ಪರಿಕಲ್ಪನೆ ಸೇರಿದಂತೆ ದಾಸರು, ಸೂಫಿ, ಸಂತ, ತತ್ವಪದಕಾರರ ನೆಲೆವೀಡಾದ ಈ ಪ್ರದೇಶಕ್ಕೆ ʼಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿರುವುದಾಗಿ ಸರ್ಕಾರಗಳು ಸಮರ್ಥಿಸಿಕೊಂಡಿವೆ. ಕಲ್ಯಾಣ ಎಂದರೆ ಅದೊಂದು ಸ್ಥಳವಲ್ಲ, ನಿಗದಿತ ಪ್ರದೇಶದ ಹೆಸರೂ ಅಲ್ಲ. ಕಲ್ಯಾಣ ಎಂದರೆ ಒಳಿತು, ಸಮೃದ್ಧಿ, ಅಭ್ಯುದಯ, ಜನಾಭಿವೃದ್ಧಿ ಹೊಂದಿದ ಪ್ರದೇಶವನ್ನು ʼಕಲ್ಯಾಣʼ ನೆಲ ಎಂದು ಕರೆಯಬಹುದು.

ಸಮಾಜೋಧಾರ್ಮಿಕ ಬದಲಾವಣೆಗಾಗಿ ಶರಣರು ಕಾಯಕ ಚಳವಳಿ ಪರಿಕಲ್ಪನೆ ಮುಖಾಂತರ ಸಮಾನತೆ ಕನಸು ಕಂಡಿದ್ದರು. ಆದರೆ ʼಕಲ್ಯಾಣʼ ಹೆಸರಿನೊಂದಿಗೆ ಬದಲಾದ ಹೈದ್ರಾಬಾದ್ ಕರ್ನಾಟಕ ಭಾಗವನ್ನು ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸರ್ಕಾರಗಳು ಧೋರಣೆ ಅನುಸರಿಸುತ್ತಲೇ ಬಂದಿವೆ. ಅಂದರೆ ರಾಜ್ಯದ ಉಳಿದ ಭಾಗದ ಸರ್ವಾಂಗೀಣ ಅಭಿವೃದ್ಧಿ ಕಂಡರೆ ಈ ಭಾಗ ಅದೆಷ್ಟು ʼಕಲ್ಯಾಣ’ ವಾಗಿದೆ ಎಂಬುದು ಅರ್ಥವಾಗದೇ ಇರದು.

ಒಂದು ಭಾಗದ ಜನರು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಪ್ರಗತಿ ಹೊಂದಬೇಕು. ಅದನ್ನು ಸಾಕಾರಗೊಳಿಸಲು ಸರ್ಕಾರಗಳು ಕಾಲಕಾಲಕ್ಕೆ ಅಭಿವೃದ್ಧಿ ಯೋಜನೆಗಳು ಕಾರ್ಯಗತಗೊಳಿಸಿದಾಗ ಮಾತ್ರ ‘ಕಲ್ಯಾಣ’ ಎಂಬ ಪದಕ್ಕೆ ಸೂಕ್ತ ಅರ್ಥ ಬರುವುದು.

ಕಲ್ಯಾಣ ಕರ್ನಾಟಕ ಭಾಗಕ್ಕೆ ದಕ್ಕಿದ ವಿಶೇಷ ಸ್ಥಾನಮಾನ ಸಂವಿಧಾನದ 371(ಜೆ) ಕಲಂ ಜಾರಿಯ ದಶಮಾನೋತ್ಸವ ಸಡಗರವೂ ಮುಗಿತು. ಆದರೆ, 371(ಜೆ) ಯಿಂದ ಶೈಕ್ಷಣಿಕವಾಗಿ ಒಂದಿಷ್ಟು ಲಾಭವಾಗಿದ್ದು, ಬಿಟ್ಟರೆ ದೊಡ್ಡ ಮಟ್ಟದ ಶೈಕ್ಷಣಿಕ, ಆರ್ಥಿಕ, ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಕಾಣದೆ ಅಯ್ಯೋಮಯ ಸ್ಥಿತಿಯಲ್ಲಿದೆ.

ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟುಕೊಂಡ ಈ ಭಾಗದ ಜನರ ಬದುಕಿನಲ್ಲಿ ಯಾವ ಬದಲಾವಣೆಯೂ ಕಂಡುಕೊಳ್ಳಲಿಲ್ಲ. ಪುಟ್ಟ ಕಂದಮ್ಮಗಳನ್ನು ಒಡಲಲ್ಲಿ ಇಟ್ಟುಕೊಂಡು ನಗರಗಳಿಗೆ ವಲಸೆ ಹೋಗುವ ಮಜಬೂರಿ ಇನ್ನೂ ತಪ್ಪಿಲ್ಲ.‌ ಕೆಲಸ ಅರಸಿಕೊಂಡು ಹೋದ ಈ ಭಾಗದ ಸುಶಿಕ್ಷಿತ, ಕಾರ್ಮಿಕ ವರ್ಗದಿಂದ ಮೆಟ್ರೊ ನಗರಗಳು ಮತ್ತಷ್ಟು ಅಭಿವೃದ್ಧಿಗೊಂಡಿವೆ. ಹೊರತು ಇಲ್ಲಿನ ಜನರ ಬಡತನ, ಕೃಷಿ, ತಲಾ ಆದಾಯ, ಸಾಮಾಜಿಕ ಜೀವನಮಟ್ಟ ನೆಲಬಿಟ್ಟು ಮೇಲೇಳಲಿಲ್ಲ. ಘೋಷಣೆಯಾಗುವ ಅಭಿವೃದ್ಧಿ ಯೋಜನೆಗಳು ಪರಿಣಾಮಕಾರಿ ಅನುಷ್ಠಾನಗೊಳ್ಳದೇ ಇರುವುದು, ಜನರ ಜೀವನಮಟ್ಟ ಸುಧಾರಣೆಗಾಗಿ ಟೊಂಕಕಟ್ಟಿ ಶ್ರಮಿಸುವ ಕಾಳಜಿಯುಳ್ಳ ಜನನಾಯಕರ ಕೊರತೆ ಇದ್ದೇ ಇರುವುದು ಸುಳ್ಳಲ್ಲ.

ಡಿ.ಎಂ.ನಂಜುಡಪ್ಪ ವರದಿ ಶಿಫಾರಿಸ್ಸಿನಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಲ್ಲಿ ಸಾಮಾಜಿಕ ನ್ಯಾಯದೊಂದಿಗೆ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಹಾಗೂ ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಮುಖ್ಯ ಉದ್ದೇಶದಿಂದ 2013ರಲ್ಲಿ ಅಸ್ತಿತ್ವಕ್ಕೆ ಬಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಧ್ಯೇಯ (ಕೆಕೆಆರ್‌ಡಿಬಿ) ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಗಳಲ್ಲಿ ಇರುವ ಅಭಿವೃದ್ಧಿ ಅಂತರವನ್ನು ಕಡಿಮೆಗೊಳಿಸಲು ಅಗತ್ಯ ಮತ್ತು ಆದ್ಯತೆ ಆಧಾರಿತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಾಗಿದೆ.

WhatsApp Image 2026 09 17 at 2.01.53 PM
ಪ್ರೊ.ಎಂ.ಗೋವಿಂದರಾವ್‌ ಸಮಿತಿ ನೀಡಿದ ವರದಿ

ಕೆಕೆಆರ್‌ಡಿಬಿಗೆ ಈ ಹಿಂದೆ ಪ್ರತಿ ವರ್ಷಕ್ಕೆ ₹1,500 ಕೋಟಿ ವಿಶೇಷ ಅನುದಾನ ಘೋಷಿಸಿತು, ನಂತರ ಅದು ₹3,000 ಕೋಟಿಗೆ ಹೆಚ್ಚಾಯ್ತು. ಇದೀಗ ಪ್ರತಿ ವರ್ಷಕ್ಕೆ ₹5 ಸಾವಿರ ಕೋಟಿ ಅನುದಾನ ನೀರಿನಂತೆ ಹರಿದು ಬರುತ್ತಿದೆ . ಆದರೆ, ಈ ಅನುದಾನದಿಂದ ಯಾವ ಕಾಮಗಾರಿಗಳು, ಎಲ್ಲಿ ನಡೆದಿವೆ? ಎಷ್ಟು ಅನುದಾನ ಬಳಕೆಯಾಗಿದೆ ಎಂಬುದು ಅರ್ಥವಾಗದ ರೀತಿಯಲ್ಲಿದೆ. ಆಗಬೇಕಾದ ಪ್ರಗತಿ ಆಗಲಿಲ್ಲ. ಅದೆಷ್ಟೋ ಊರು, ತಾಡಾಗಳಿಗೆ ಇಂದಿಗೂ ಸರಿಯಾದ ರಸ್ತೆಗಳಿಲ್ಲ, ಸಾರಿಗೆ, ಸಂಪರ್ಕ ಕಾಣದ ಗ್ರಾಮಗಳ ಸಂಖ್ಯೆ ಲೆಕ್ಕವಿಲ್ಲ. ಬೇಸಿಗೆ ಬಂದ್ರೆ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹರಸಾಹಸ ಪಡಬೇಕಾದ ಅದೆಷ್ಟು ಹಳ್ಳಿಗಳ ಜನರ ಒಡಲ ಸಂಕಟ ಹೇಳತೀರದು.

ರೈತರ ಆತ್ಮಹತ್ಯೆ, ಅಪೌಷ್ಟಿಕತೆಯ ಪ್ರಮಾಣ ಏರಿಕೆ ಹಾದಿ ಹಿಡಿದಿದೆ. ಪ್ರತಿ ಬಾರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಈ ಭಾಗದ ಏಳು ಜಿಲ್ಲೆಗಳ ಸ್ಥಾನ ಕೆಳಗಡೆಯಿಂದ ಮೇಲೆ ಓದುವುದು ಸಾಮಾನ್ಯವಾಗಿದೆ. ಪದೇ ಪದೇ ಎದುರಾಗುವ ಅತಿವೃಷ್ಟಿಯ ಒಣ ಬರ, ಅನಾವೃಷ್ಟಿಯ ಹಸೀ ಬರದಿಂದಾಗಿ ಈ ಭಾಗದ ರೈತರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ. ಇದು ಕೃಷಿಯಿಂದ ವಿಮುಖ ಆಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಖಾಯಂ ಉದ್ಯೋಗಿಗಳ ಕೊರೆತೆಯಿಂದ ಶ್ವವಿದ್ಯಾಲಯಗಳಲ್ಲಿ ಗುಣಮಟ್ಟ ಶಿಕ್ಷಣದ ಹಸಿವು ಕಾಡುತ್ತಿದೆ. ಇನ್ನು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸೇರಿ ಸಮರ್ಪಕ ವ್ಯವಸ್ಥೆ ಕಾಣದೆ ಬಡ ರೋಗಿಗಳು ನಿತ್ಯ ಪರದಾಡುವುದು ತಪ್ಪಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಜಿಲ್ಲೆಗಳ ಸ್ಥಿತಿ ಶೋಚನೀಯವಾಗಿದೆ.

ರಾಜ್ಯದ ಮುಖ್ಯಮಂತ್ರಿಗಳು ಪ್ರತಿವರ್ಷ ಸೆಪ್ಟೆಂಬರ್ 17ಕ್ಕೆ ಕಲಬುರಗಿಯಲ್ಲಿ ಧ್ವಜಾರೋಹಣ ನೆರವೇರಿಸಿ ʼಕಲ್ಯಾಣ ಕರ್ನಾಟಕ ವಿಮೋಚನೆ’ ಕುರಿತು ಮಾತನಾಡಿ, ಈ ಭಾಗದ ಸಮಸ್ಯೆಗಳು ಬಗೆಹರಿಸುವುದು, ಖಾಲಿ ಹುದ್ದೆ ಭರ್ತಿ ಮಾಡುವುದು, ಉದ್ಯೋಗ ಸೃಷ್ಟಿ, ಹೊಸ ಯೋಜನೆಗಳು ಸೇರಿ ಹಲವು ಆಶ್ವಾಸನೆ ನೀಡುವುದು ಮುಂದುವರೆದಿದೆ. ತದನಂತರ ಈ ಭಾಗದ ಜಲ್ವಂತ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮರೆತು ಬಿಡುವುದು, ಯೋಜನೆಗಳನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸರ್ಕಾರಗಳ ನಿರ್ಲಕ್ಷ್ಯ ತೋರುವುದು ನಡೆಯುತ್ತಿದೆ. ಕಲ್ಯಾಣದ ಸಮಗ್ರ ಅಭಿವೃದ್ಧಿ ಮುನ್ನೋಟಕ್ಕಾಗಿ ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಗಟ್ಟಿಧ್ವನಿ ಎತ್ತದೇ ಇರುವುದರಿಂದ ಕಲ್ಯಾಣ ಪ್ರಗತಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಡಿ.ಎನ್.ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ ಒಟ್ಟು 175 ತಾಲೂಕುಗಳ ಪೈಕಿ ಶೇ.65ರಷ್ಟು ಅಂದ್ರೆ 175 ರಲ್ಲಿ 114 ತಾಲೂಕು ಹಿಂದುಳಿದಿದ್ದು, ಅದರಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು 39, ಅತಿ ಹಿಂದುಳಿದ ತಾಲ್ಲೂಕು 40 ಹಾಗೂ ಹಿಂದುಳಿದ ತಾಲ್ಲೂಕು 35 ಎಂದು ಮೂರು ಭಾಗವಾಗಿ ವರ್ಗೀಕರಿಸಿತು. ಅತ್ಯಂತ ಹಿಂದುಳಿದ 39 ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ್ದೇ 21 ತಾಲೂಕುಗಳಿದ್ದವು. ಅಂದ್ರೆ ಶೇ.60ಕ್ಕಿಂತ ಹೆಚ್ಚು ಭಾಗ ಹಿಂದುಳಿದುರುವಿಕೆ ಎಂದರ್ಥ. ಇದರಲ್ಲಿ ಉತ್ತರ ಭಾಗದ 26 ಹಾಗೂ ದಕ್ಷಿಣ ಭಾಗದ 13 ತಾಲ್ಲೂಕು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿದ್ದವು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹೊಸ ತಾಲೂಕುಗಳು ಸೇರಿ ಒಟ್ಟು 50 ತಾಲೂಕುಗಳಿವೆ. ಪ್ರಾದೇಶಿಕ ಅಸಮಾತೋಲನ ನಿವಾರಣೆಗೆ ರಚಿಸಿದ ಪ್ರೊ.ಎಂ.ಗೋವಿಂದರಾವ್‌ ನೇತ್ರತ್ವದ ಸಮಿತಿಯು ಈಚೆಗೆ ವರದಿ ನೀಡಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕದ ಒಟ್ಟು 39 ತಾಲೂಕು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿವೆ, ಇನ್ನು ಅತಿ ಹಿಂದುಳಿದ 9 ಹಾಗೂ ಹಿಂದುಳಿದ ಪಟ್ಟಿಗೆ 2 ಸೇರಿವೆ. ಕಲ್ಯಾಣದ ಒಂದೂ ತಾಲೂಕು ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಯಲ್ಲಿ ಜಾಗ ಪಡೆದಿಲ್ಲ. ಅಷ್ಟೇ ಅಲ್ಲ, ಹೊಸದಾಗಿ ರಚನೆಯಾದ ಎಲ್ಲ ತಾಲೂಕು ಅತ್ಯಂತ ಹಿಂದುಳಿದ ಪಟ್ಟಿಗೆ ನೂಕಲ್ಪಟ್ಟಿದೆ.

24 ವರ್ಷಗಳ ಹಿಂದೆ ಎಂ.ನಂಜುಂಡಪ್ಪ ನೇತ್ರತ್ವದ ಸಮಿತಿ ವರದಿ ನೀಡಿದ ವರದಿಗಿಂತ ಭಿನ್ನವಾಗಿ ಗೋವಿಂದರಾವ್‌ ನೇತ್ರತ್ವದ ಸಮಿತಿ ವರದಿಯಲ್ಲಿ ಈ ಭಾಗ ಆರ್ಥಿಕ ಅಸಮತೋಲನ ವ್ಯಾಪಕವಾಗಿರುವ ಬಗ್ಗೆ ಉಲ್ಲೇಖಿಸಿದೆ. ಕಲ್ಯಾಣದಲ್ಲಿ ಪ್ರಾದೇಶಿಕ ಅಸಮಾನತೆಯಿಂದಾಗಿ ಈ ಭಾಗ ಹಿಂದುಳಿಯಲು ಮುಖ್ಯ ಕಾರಣವೆಂಬುದು ಮತ್ತೊಮ್ಮೆ ಗೋವಿಂದರಾವ್‌ ಸಮಿತಿ ನೀಡಿದ ವರದಿಯಿಂದ ಸಾಬೀತಾಗಿದೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ), ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇದ್ದರೂ ದಕ್ಷಿಣ ಕರ್ನಾಟಕದಂತೆ ಅಭಿವೃದ್ಧಿ ಹೊಂದಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಈ ಭಾಗದ ಜನಪ್ರತಿನಿಧಿಗಳು ಮತ್ತೆ ಮತ್ತೆ ಯೋಚಿಸಬೇಕಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿರೇಂದ್ರ ಪಾಟೀಲ್‌ ಎರಡು ಬಾರಿ ಹಾಗೂ ಎನ್.‌ ಧರ್ಮಸಿಂಗ್‌ ಒಂದು ಸಲ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದರೂ ದಕ್ಷಿಣದಂತೆ ಕಲ್ಯಾಣ ಆಗುವುದರಲ್ಲಿ ಹಿಂದೆ ಇರುವುದು ಸ್ಪಷ್ಟವಾಗಿದೆ.

ಪ್ರತ್ಯೇಕ ಸಚಿವಾಲಯ

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಬೇಕೆಂಬ ಈ ಭಾಗದ ಜನರ ಕೂಗಿಗೆ ಸ್ಪಂದಿಸಿದ ಸರ್ಕಾರ ಕಳೆದ ವರ್ಷ ಅಂದಿನ ಸಿಎಂ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಘೋಷಿಸಿ ಸೆ.25 ರಂದು ಪ್ರತ್ಯೇಕ ಸಚಿವಾಲಯ ರಚಿಸಿದ್ದು, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯದ ಸಚಿವರಾಗಿರುತ್ತಾರೆ.

ಈ ಸಚಿವಾಲಯಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿ-1, ಸರ್ಕಾರದ ಉಪ/ಜಂಟಿ ಕಾರ್ಯದರ್ಶಿ-1, ಸರ್ಕಾರದ ಅಧೀನ ಕಾರ್ಯದರ್ಶಿ-1, ಶಾಖಾಧಿಕಾರಿ-2 ಸೇರಿ ಒಟ್ಟು 16 ಹುದ್ದೆಗಳು ಮೀಸಲಿರಿಸಲಾಗಿದೆ. ಆದರೆ, ಪ್ರತ್ಯೇಕ ಸಚಿವಾಲಯ ರಚಿಸಿದರೂ ಪ್ರತ್ಯೇಕ ಖಾತೆ ಅಲ್ಲ, ಬೇರೆ ಖಾತೆಯೊಂದಿಗೆ ಜೋಡಿಸಲಾಗಿದೆ, ಇದರಲ್ಲಿ ವಿಶೇಷ ಏನೂ ಇಲ್ಲ.

ಸಿಎಂ ಡಿ.ಕೆ.ಶಿವಕುಮಾರ ನೇತ್ರತ್ವದ ಸರ್ಕಾರ ಶತಕದಿನ ಪೂರೈಸಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಜೇವರ್ಗಿ ಶಾಸಕ ಅಜಯಸಿಂಗ್‌ ಅವರಿಗೆ ಡಿ.ಕೆ.ಶಿವಕುಮಾರ ನೇತ್ರತ್ವದ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ದಕ್ಕಿದೆ. ಅಜಯಸಿಂಗ್‌ ಅವರು ಸಣ್ಣ ನೀರಾವರಿ ಖಾತೆಯ ಜವಾಬ್ದಾರಿಯೊಂದಿಗೆ, ಕೆಕೆಆರ್‌ಡಿಬಿ ಅಧ್ಯಕ್ಷರಾಗಿಯೂ ಮುಂದುವರೆದಿದ್ದಾರೆ.

ಇದನ್ನೂ ಓದಿ : ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ ಯಾರಿಗೆ?

ಪ್ರತಿ ವರ್ಷ ರಾಜ್ಯದ ಮುಖ್ಯಮಂತ್ರಿಗಳು ಸೆ.17ರಂದು ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸುತ್ತಾರೆ. ಅಂದು ಹಲವು ಯೋಜನೆಗಳು ಘೋಷಣೆಯಾಗುತ್ತವೆ. ತದನಂತರ ಅವು ಜಾರಿಯಾಗದೇ ನನೆಗುದಿಗೆ ಬೀಳುವುದು, ಪರಿಣಾಮಕಾರಿ ಅನುಷ್ಠಾನಗೊಳ್ಳುವುದು ಆಮೆಗತಿಯಲ್ಲಿ ಎಂಬುದು ವಾಸ್ತವ. ಈಗಲಾದರೂ ʼಕಲ್ಯಾಣ ಕರ್ನಾಟಕʼ ಭಾಗದ ಜನರ ಬವಣೆ ನೀಗಿಸಿ ಜನರ ಜೀವನಮಟ್ಟ ಸುಧಾರಣೆಗೆ ಕನಿಷ್ಠ 10 ವರ್ಷಗಳ ಅವಧಿಗೆ ವೈಜ್ಞಾನಿಕ ಆಧಾರದಲ್ಲಿ ಕ್ರಿಯಾಯೋಜನೆ ರೂಪಿಸಿ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ತೋರಬೇಕಿದೆ. ಇಲ್ಲದಿದ್ರೆ ʼಕಲ್ಯಾಣ ಕರ್ನಾಟಕ’ ಅಭಿವೃದ್ಧಿ ಇನ್ನೊಂದು ದಶಕ ಕಳೆದರೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಲಿದೆ!

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ ರೈತರ ಒತ್ತಾಯ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು...

‘ಕಠಿಣ ಆದೇಶಕ್ಕೆ ಆಹ್ವಾನ ನೀಡದಿರಿ’: ಮಣಿಪುರ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಮನೆ ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ...

ಪಡಿತರ ಚೀಟಿ ಇ-ಕೆವೈಸಿ ಗಡುವು ವಿಸ್ತರಣೆ: ಸರ್ಕಾರ ಆದೇಶ

ಕರ್ನಾಟಕದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ರೇಷನ್ ಕಾರ್ಡ್ ಇ-ಕೆವೈಸಿ...

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹತ್ತು ಹೊಸ ಯೋಜನೆಗಳ ಘೋಷಣೆ

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಸಿಎಂ‌ ಡಿ ಕೆ ಶಿವಕುಮಾರ್...