ಬೆಂಗಳೂರು ಶ್ರೀಮಂತರಿಗಷ್ಟೇ ಅಲ್ಲ, ದುಡಿಯುವ ವರ್ಗಕ್ಕೂ ಸೇರಿದ್ದು: ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಿಂದ ಸರ್ಕಾರಕ್ಕೆ ಬಹಿರಂಗ ಪತ್ರ

Date:

“ಬೆಂಗಳೂರು ನಗರವು ಕೇವಲ ಶ್ರೀಮಂತರು ಮತ್ತು ಅಧಿಕಾರಶಾಲಿಗಳ ಸ್ವತ್ತಲ್ಲ; ಇದನ್ನು ದಿನವಿಡೀ ಸ್ವಚ್ಛಗೊಳಿಸುವ, ಕಟ್ಟುವ ಮತ್ತು ಸಜೀವವಾಗಿಡುವ ಶ್ರಮಿಕ ವರ್ಗಕ್ಕೂ ಸೇರಿದ್ದು” ಎಂದು ಹೇಳಿ ಬೀದಿ ವ್ಯಾಪಾರಿಗಳು ಮತ್ತು ಪೌರಕಾರ್ಮಿಕರ ಒಕ್ಕೂಟವು ರಾಜ್ಯ ಸರ್ಕಾರಕ್ಕೆ ಖಾರವಾದ ಬಹಿರಂಗ ಪತ್ರವೊಂದನ್ನು ರವಾನಿಸಿದೆ.

- Advertisement -

ಐತಿಹಾಸಿಕವಾಗಿ ಪೌರಕಾರ್ಮಿಕರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದ ಐ.ಪಿ.ಡಿ. ಸಾಲಪ್ಪ ಅವರ ಪ್ರತಿಮೆಯ ಮುಂದೆ ಒಟ್ಟುಗೂಡಿದ ಶ್ರಮಿಕರು, ಬಡವರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇಂದು ಅದೇ ಬಡವರನ್ನು ಮತ್ತು ದುಡಿಯುವ ಜನರನ್ನು ತೀವ್ರ ನಿರ್ಲಕ್ಷ್ಯ ಹಾಗೂ ಅವಮಾನದಿಂದ ನೋಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಇದನ್ನೂ ಓದಿ: ಜಿಬಿಎ ರಚನೆ ಬಳಿಕ ಮೊದಲ ಬಜೆಟ್‌ ಮಂಡನೆ : ಮುಖ್ಯಾಂಶಗಳೇನು?

ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014ರ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಹಾಗೂ ಪುನರ್ವಸತಿ ಕಲ್ಪಿಸದೆ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಸಂಘಟನೆಗಳು ಪ್ರತಿಭಟಿಸಿದಾಗ ಹೊಸ ಸಮೀಕ್ಷೆ ಹಾಗೂ ಪುನರ್ವಸತಿಯ ಭರವಸೆ ನೀಡಿದ್ದ ಸಚಿವರು, ಇದುವರೆಗೂ ಅದನ್ನು ಈಡೇರಿಸಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.

ದಿನನಿತ್ಯ ಪ್ರಾಣಾಪಾಯ ಮತ್ತು ಆರೋಗ್ಯದ ತೀವ್ರ ಅಪಾಯಗಳ ನಡುವೆ ಕೆಲಸ ಮಾಡುವ ಪೌರಕಾರ್ಮಿಕರಿಗೆ ಮೂಲಭೂತ ಹಕ್ಕುಗಳಾದ ವಾರದ ರಜೆ, ವಿಶ್ರಾಂತಿ ಮತ್ತು ಇಎಸ್‌ಐ/ಪಿಎಫ್ ಸೌಲಭ್ಯಗಳನ್ನು ತಲುಪಿಸಲಾಗುತ್ತಿಲ್ಲ. 1976ರ ಸಾಲಪ್ಪ ವರದಿಯನ್ವಯ ಪ್ರತಿ 500 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕಿತ್ತು. ಇಂದಿನ ಕಸದ ಪ್ರಮಾಣಕ್ಕೆ ಕನಿಷ್ಠ 1:250 ಅನುಪಾತ ಬೇಕಿದ್ದರೂ, ಸರ್ಕಾರ ಇಂದಿಗೂ 1:700 ಅನುಪಾತವನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

2017ರಿಂದ ನಿವೃತ್ತರಾದ ಹಾಗೂ ಮೃತಪಟ್ಟ ಪೌರಕಾರ್ಮಿಕರ ಜಾಗಗಳನ್ನು ಭರ್ತಿ ಮಾಡದಿರುವುದರಿಂದ ಹಾಲಿ ಇರುವ ಸಿಬ್ಬಂದಿಯೇ ಮೂರು ಜನರ ಕೆಲಸವನ್ನು ಮಾಡುವಂತಾಗಿದೆ. ಉದಾಹರಣೆಗೆ, ಶಿವಾಜಿನಗರದಲ್ಲಿ 20 ಜನರಿದ್ದ ಜಾಗದಲ್ಲಿ ಪ್ರಸ್ತುತ ಕೇವಲ 9 ಜನರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಚಾಲಕರು ಮತ್ತು ಲೋಡರ್‌ಗಳನ್ನು ಇನ್ನೂ ಖಾಯಂಗೊಳಿಸದೆ ಗುತ್ತಿಗೆ ಆಧಾರದಲ್ಲೇ ಇರಿಸಿಕೊಳ್ಳಲಾಗಿದೆ. 2017ರಲ್ಲಿ 34,000 ಕಾರ್ಮಿಕರ ಹೆಸರಿನಲ್ಲಿ ಹಣ ಪಾವತಿಸಲಾಗುತ್ತಿದ್ದರೂ, ವಾಸ್ತವದಲ್ಲಿ ಕೇವಲ 18,000 ಜನ ಕೆಲಸ ಮಾಡುತ್ತಿದ್ದು, ‘ಘೋಸ್ಟ್ ವರ್ಕರ್ಸ್’ ಹೆಸರಿನಲ್ಲಿ ಬಿಬಿಎಂಪಿಯಲ್ಲಿ ಭಾರಿ ಅಕ್ರಮ ನೆಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಬೀದಿ ವ್ಯಾಪಾರಿಗಳ ಬದುಕು ಧ್ವಂಸಗೈಯುವುದೇ ಕಾಂಗ್ರೆಸ್‌ನ ಸಮಾಜವಾದವೇ?

ತಮ್ಮ ಹಕ್ಕುಗಳಿಗಾಗಿ ಬಂದ ಪೌರಕಾರ್ಮಿಕರನ್ನು ಸಚಿವ ಕೃಷ್ಣ ಬೈರೇಗೌಡರು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಾರ್ಡ್‌ಗಳಲ್ಲಿ 70% ಹಾಜರಾತಿಯಿದ್ದರೆ, ಉಳಿದ 30% ಗೈರುಹಾಜರಿಗೆ ಗುತ್ತಿಗೆದಾರರ ಅಕ್ರಮ ಹಾಗೂ ಕಾರ್ಮಿಕರ ಆರೋಗ್ಯ ಸಮಸ್ಯೆ ಕಾರಣವೇ ಎಂಬುದನ್ನು ತನಿಖೆ ಮಾಡುವ ಬದಲು, ಇಡೀ ಕಾರ್ಮಿಕ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ಒಕ್ಕೂಟ ಪ್ರತಿಪಾದಿಸಿದೆ.

ಸಚಿವರ ಈ ನಡೆಯಿಂದ ಕಿರಣ್ ಮಜುಂದಾರ್ ಷಾ ಅವರಂತಹ ಪ್ರಭಾವಿಗಳು ಶ್ರಮಿಕರ ವಿರುದ್ಧ ಮಾತನಾಡುವಂತಾಯಿತು ಹಾಗೂ ಅಧಿಕಾರಿಗಳು ಕಾರ್ಮಿಕರಿಗೆ ಬೆದರಿಕೆ ಹಾಕುವ ವಾತಾವರಣ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

“ಸಚಿವ ಕೃಷ್ಣ ಬೈರೇಗೌಡರು ಪೌರಕಾರ್ಮಿಕರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ತಕ್ಷಣವೇ ಕಾಯಂಗೊಳಿಸಬೇಕು. ತೆರವುಗೊಳಿಸಲಾದ ಬೀದಿ ವ್ಯಾಪಾರಿಗಳಿಗೆ ಹಳೆಯ ಸ್ಥಳಗಳಲ್ಲೇ ಮತ್ತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ಬೀದಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ‘ಶೂನ್ಯ ತೆರವು’ ಜಾರಿಗೆ ತರಬೇಕು. ಎಲ್ಲಾ ಬೀದಿ ವ್ಯಾಪಾರಿಗಳನ್ನು ಒಳಗೊಂಡಂತೆ ಸಮಗ್ರ ಹೊಸ ಸಮೀಕ್ಷೆ ನಡೆಸಬೇಕು” ಎಂಬುದು ಪ್ರಮುಖ ಬೇಡಿಕೆಗಳಾಗಿವೆ.

“ಜನಾದೇಶ ನೀಡಿ ಅಧಿಕಾರಕ್ಕೆ ತಂದ ಬಡವರನ್ನು ಅವಮಾನಿಸುವುದು ಜನಾದೇಶಕ್ಕೆ ಮಾಡಿದ ದ್ರೋಹ. ಕಾರ್ಮಿಕರು ತಮಗೆ ಆದ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ” ಎಂದು ಎಚ್ಚರಿಸಿರುವ ಒಕ್ಕೂಟವು, ಸರ್ಕಾರ ತಕ್ಷಣವೇ ತನ್ನ ನಿಲುವು ತಿದ್ದುಪಡಿ ಮಾಡಿಕೊಂಡು ಕಾನೂನು ಹಾಗೂ ಶ್ರಮಿಕ ಗೌರವವನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾನೂನುಬಾಹಿರ ನೇಮಕದ ಆರೋಪ: ಚಂದ್ರಶೇಖರನ್ ಬೆನ್ನಿಗೆ ನಿಂತ ಮಂಡಳಿ, ವಿರೋಧಿಸಿದ ನೊಯೆಲ್ ಟಾಟಾ

ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ ರೈತರ ಒತ್ತಾಯ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು...

‘ಕಠಿಣ ಆದೇಶಕ್ಕೆ ಆಹ್ವಾನ ನೀಡದಿರಿ’: ಮಣಿಪುರ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದಾಗಿ ಮನೆ ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರ...

ಪಡಿತರ ಚೀಟಿ ಇ-ಕೆವೈಸಿ ಗಡುವು ವಿಸ್ತರಣೆ: ಸರ್ಕಾರ ಆದೇಶ

ಕರ್ನಾಟಕದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ರೇಷನ್ ಕಾರ್ಡ್ ಇ-ಕೆವೈಸಿ...