ಈ ದಿನ ಕವಿತೆ | ಓದದ ಪುಟ- ಅಲಿ ಸರ್ದಾರ್‌ ಜಾಫ್ರಿ

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಅಲಿ ಸರ್ದಾರ್ ಜಾಫ಼್ರಿ ಅವರ ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ

- Advertisement -

ಓದದ ಪುಟ
ನಾನೊಂದು ಪುಟ
ಇದರ ಮೇಲೆ ಬರೆದವರು ಯಾರು?
ಇದನ್ನೋದಿದವರು ಯಾರು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಒಂದೊಂದು ಮರವೂ ಲೇಖನಿಯೇ
ಒಂದೊಂದು ರೆಂಬೆಯೂ ಲೇಖನಿಯೇ
ಸಮುದ್ರವು ಶಾಯಿ ಕುಡಿಕೆ.
ಅಸಂಖ್ಯ ನದಿಗಳು ಲೀನವಾದ ಬೆಳಕೇ ಶಾಯಿ‌

ತಂಗಾಳಿಯ ಕೈಗಳು
ಆಕಾಶದ ನೀಲಿಯಿಂದ ಬರೆಯುವುದು.
ನಕ್ಷತ್ರಗಳ ಬೆಳಕು ಬರೆಯುವುದು;
ನೆಲದ ನರ್ತನವು ಬರೆಯುವುದು;
ದಿಗಂತದಿಂದ ಮೇಲೇಳುವ ತಿಳಿಗೆಂಪು ಸೂರ್ಯ
ತನ್ನ ಬಂಗಾರದ ಕಿರಣಗಳಿಂದ ಬರೆಯುವನು;
ಗತಿಸಿದ ಕ್ಷಣಗಳು ತನ್ನ
ಅಲಗಿನಿಂದ ಬರೆಯುವುವು;
ಇತಿಹಾಸವು ತನ್ನ
ಭರ್ಜಿಯಿಂದ ಬರೆಯುವುದು;
ನನ್ನೆಲ್ಲಾ ಮಿತ್ರರು ಬರೆಯುವರು;
ನನ್ನೆಲ್ಲಾ ಶತ್ರುಗಳು ಬರೆಯುವರು;
ನನ್ನ ವೈರಿಗಳ ಒರೆಯೊಳಗೆ ರಕ್ತದ ಕತ್ತಿಯಿದೆ;
ರಾಜಕೀಯದ ದುಷ್ಟ ಅಲಗು ಬರೆಯುವುದು.
ನನ್ನ ಗಾಯಗಳ ಹೂಗಳ ಸುಗಂಧವೀಗ ಅಕ್ಷರಗಳು
ನನ್ನ ಪ್ರೀತಿ ಪಾತ್ರರ ಮುಗುಳು ನಗೆಯೂ ಸಹ
ಮಚ್ಚರದ ಮುಳ್ಳಿನ ಮೊನೆಯು
ಲೇಖನಿಯ ನಾಲಗೆ.
ಆದರೆ ನನ್ನ ಹೃದಯ,ನನ್ನ ಹುಚ್ಚುತನ ಕೂಡಾ ಬರೆಯುವುದು.
ನಾನೊಂದು ಪುಟ:
ಅಪೂರ್ಣತೆಯ ಭಾವದಾಚೆಗೂ
ನಾನೊಂದು ಸಂಪೂರ್ಣ ಕೃತಿ

ನೀನು ಓದಬಲ್ಲೆಯಾದರೆ
ದಯವಿಟ್ಟು ಹೇಳು
ಈ ಕೃತಿಯಲ್ಲೇನಿದೆ ಎಂದು

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...