ಇಂದಿನ ಇಸ್ಲಾಂ ಅನ್ನುವುದು ಒಂದು unitary ಐಡೆಂಟಿಟಿ ಅಲ್ಲವೇ ಅಲ್ಲ. ಮುಸ್ಲಿಂ ರಾಷ್ಟ್ರಗಳ ಒಳಗೆ ನಡೆಯುತ್ತಿರುವ ಮಂಥನವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಒಮ್ಮೊಮ್ಮೆ ಅಧಿಕಾರಯುತ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕೂಡ ಜನರ ಅಸ್ಮಿತೆಯನ್ನು ಬದಲಾಯಿಸುತ್ತವೆ.
ನನಗೆ ನೆನಪಿದೆ 2017ರಲ್ಲಿ ಸೌದಿ, ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಯಾಗಿ ಖತಾರ್ ದೇಶದ ಮೇಲೆ ರಾಜತಾಂತ್ರಿಕ, ಆರ್ಥಿಕ ದಿಗ್ಬಂಧನವನ್ನು ಹೇರಿದ್ದವು. ಕಾಲ ಉರುಳಿತು ಮಾಸಿದ ಸೌದಿ ಮತ್ತು ಅರಬ್ ಎಮಿರೇಟ್ಸ್ ಸಂಬಂಧಗಳಿಗೆ ತ್ಯಾಪೆ ಹಾಕಲು ಖತಾರ್ ಸಂಧಾನ ಮಾಡಲು ಮುಂದಾಯಿತು. ಮತ್ತೊಂದೆಡೆ ಇರಾನ್ ಮತ್ತು ಅಮೆರಿಕ/ಇಸ್ರೇಲ್ ಕದನ ನಿಲ್ಲಿಸಲು ಬೇಕಾದ ಸಂಧಾನ ಮಾತುಕತೆ ಪ್ರಕ್ರಿಯೆಯ ಮುಂದಾಳತ್ವವನ್ನು ಪಾಕಿಸ್ತಾನ ವಹಿಸಿದ್ದು ನಮಗೆಲ್ಲಾ ತಿಳಿದೇ ಇದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಕದನವನ್ನು ತಗ್ಗಿಸಲು ಸಂಧಾನ ಮಾಡಿಸುವೆವು ಎಂದು ಇರಾನ್ ಮುಂದೆ ಬಂದಿದ್ದು ಈಗ ಹೊಸ ಸುದ್ದಿ! ಸೌದಿ ಪಾಕಿಸ್ತಾನಕ್ಕೆ ಬಹಳ ಹತ್ತಿರವಾದರೆ, ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತ ಮತ್ತು ಇಸ್ರೇಲ್ ಜೊತೆಗೆ ಆಪ್ತ ಬಾಂಧವ್ಯ ಬೆಳೆಸಿಕೊಂಡಿದೆ.
ನಿನ್ನೆ ಒಪೆಕ್ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ದೇಶದ ವಿರುದ್ಧ ಯೆಮೆನ್, ಲಿಬಿಯಾ, ಸುಡಾನ್, ಸುಮಾಲಿಯ ದೇಶಗಳಲ್ಲಿ ಸೆಣಸುತ್ತಿದೆ. ಬಹುಬೇಗ ಇಥಿಯೋಪಿಯಾ ಮತ್ತು ಎರಿಟ್ರಿಯಾ ದೇಶಗಳಲ್ಲೂ ಸಂಘರ್ಷ ಶುರುವಾಗಲಿದೆ. ಸೌದಿ ಇಂದಿಗೂ ಪೊಲಿಟಿಕಲ್ ಇಸ್ಲಾಂ ಅನ್ನು ನಂಬಿದ್ದರೆ, UAE ಈಗಾಗಲೇ ವೆಸ್ಟೆರ್ನ್ ಹೊರನೋಟವನ್ನು ಅಳವಡಿಸಿಕೊಂಡು ವರುಷಗಳೇ ಆಗಿದೆ.
ಇದೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ… ಇಂದಿನ ಇಸ್ಲಾಂ ಅನ್ನುವುದು ಒಂದು unitary ಐಡೆಂಟಿಟಿ ಅಲ್ಲವೇ ಅಲ್ಲ. ಮುಸ್ಲಿಂ ರಾಷ್ಟ್ರಗಳ ಒಳಗೆ ನಡೆಯುತ್ತಿರುವ ಮಂಥನವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇಲ್ಲಿ ಮತ್ತೊಂದು ಉದಾಹರಣೆ ಕೊಡಬಯಸುತ್ತೇನೆ- ಪಾಕಿಸ್ತಾನವನ್ನೇ ತೆಗೆದುಕೊಳ್ಳಿ. ಅದು ಇಸ್ಲಾಮಿಕ್ ರಾಷ್ಟ್ರವೇ ಆಗಿರಬಹುದು ಆದರೆ ಅಲ್ಲಿ ಪಶ್ತೂನ್, ಬಲೂಚ್, ಸಿಂಧಿಸ್, ಪಂಜಾಬಿಸ್, ಮುಹಾಜಿರ್ಸ್ ಎಲ್ಲರೂ ಇದ್ದಾರೆ. ಈ ಬುಡಕಟ್ಟುಗಳ ನಡುವೆ ನಿರಂತರ ಸಂಘರ್ಷವಿದೆ ನಿಜ, ಅದನ್ನು ಮೀರಿ ಬುಡಕಟ್ಟುಗಳ ಒಳಪಂಗಡಗಳ ನಡುವೆಯು ಬಹಳ ದೊಡ್ಡ ಕಿತ್ತಾಟಗಳಿವೆ. ಲೆಬನಾನ್, ಈಜಿಪ್ಟ್, ಲಿಬಿಯಾ, ಸುಡಾನ್, ಇರಾಕ್ ಮತ್ತು ಸಿರಿಯಾಗಳಲ್ಲಿ ಕೂಡ ಈ ರೀತಿಯ ಘರ್ಷಣೆಗಳಿಗೆ ಬಲಿಯಾದವರು ಸಾವಿರಾರು ಮಂದಿ!
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿ ಬೆವರಿಳಿಸಿದ ಬಂಗಾಳದ ನವದುರ್ಗೆಯರು
ʼದುರಂಧರ್ʼ ಚಿತ್ರ ನೋಡಿದ್ದೀರಿ ಅದರ ಮೊದಲ ಭಾಗದಲ್ಲಿ ಮುಂಬೈ 26/11 ದಾಳಿಗೆ ಅನುಕೂಲ ಮಾಡಿಕೊಡುವುದು, ಶಸ್ತ್ರಾಸ್ತ ಸರಬರಾಜು ಮಾಡುವುದು ಬಲೂಚರು. ಆದರೆ ಚಿತ್ರದ ಎರಡನೇ ಭಾಗದಲ್ಲಿ ಅದೇ ಬಲೂಚರ ಸಹಾಯದಿಂದ ಮುರಿದ್ಕೆ ಭಯೋತ್ಪಾದಕ ಜಾಲವನ್ನೇ ನಾಯಕ ನಾಶಪಡಿಸುತ್ತಾನೆ! ಬಹುಶಃ ಆದಿತ್ಯ ಧರ್ ಅವರಿಗೂ ಮುಸ್ಲಿಂ ಸಮುದಾಯವನ್ನು ಒಂದು ಯುನಿಫೈಡ್ ಈವಿಲ್ ಆಗಿ ಬಿಂಬಿಸಲು ಆಗಲಿಲ್ಲ ಅನಿಸುತ್ತೆ. ಚಿತ್ರದ ಪ್ರೊಪಗಾಂಡಾ ಒಪ್ಪುವ ನೋಡುಗ ಕೂಡ will sympathise with the characters of ಉಜೈರ್ ಬಲೂಚ್ ಮತ್ತು ಶಿರಾಣಿ ಅಹ್ಮದ್ ಬಲೂಚ್… ʼದುರಂಧರ್ʼ ಚಿತ್ರದ ಪ್ರಸ್ತಾಪ ವಿಷಯಾಂತರ ಅಂತ ಅನ್ನಿಸಬಹುದು. ಆದರೆ ಮುಸ್ಲಿಂ ಜಗತ್ತಿನ ಈ ಬಹುತ್ವ ಮತ್ತವರ ಪ್ಲೂರಲ್ ಐಡೆಂಟಿಟಿಯನ್ನು ಇಂದು ಗುರುತಿಸುವ ಅವಶ್ಯಕತೆ ಇದೆ.

ಒಮ್ಮೊಮ್ಮೆ ಅಧಿಕಾರಯುತ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕೂಡ ಜನರ ಅಸ್ಮಿತೆಯನ್ನು ಬದಲಾಯಿಸುತ್ತವೆ. ಅಬು ಮುಹಮ್ಮದ್ ಆಲ್ ಜುಲಾನಿ ಒಂದು ಕಾಲದಲ್ಲಿ ಆಲ್ ಖೈದಾ ಉಗ್ರಗಾಮಿ. ಆತ ಮುಂದುವರೆದು ಅಲ್ ನುಸ್ರ ಎಂಬ ಭಯೋತ್ಪಾದಕ ಸಂಘಟನೆಯನ್ನು ಸಿರಿಯಾದಲ್ಲಿ ಕಟ್ಟಿದ. ರಷ್ಯಾ ಬೆಂಬಲಿತ, ಇರಾನ್ ಸಖ್ಯವಿದ್ದ ಸಿರಿಯಾದ ಅಸಾದ್ ರಿಜೀಮ್ ಉರುಳಿಸಬೇಕೆಂದಾಗ ಅಮೆರಿಕ, ಇಸ್ರೇಲ್ ಮತ್ತು ಟರ್ಕಿಗೆ ನೆನಪಾದದ್ದು ಇದೆ ಉಗ್ರಗಾಮಿ. ಅಸಾದ್ ಪತನವಾಯಿತು. ಇಂದು ಜುಲಾನಿ ಸಿರಿಯಾದ ಅಧ್ಯಕ್ಷ. ಒಂದು ಕಾಲಕ್ಕೆ ಉಗ್ರಗಾಮಿಯಾಗಿದ್ದ ಜುಲಾನಿ ಹೆಸರು ಬದಲಾಯಿಸಿ ಆಲ್ ಶರಾ ಆಗಿ ಶ್ವೇತಭವನದ ಆತಿಥ್ಯವನ್ನು ಸ್ವೀಕರಿಸಿದರು, ಇರಲಿ.
UAE ಒಪೆಕ್ ಒಕ್ಕೂಟದಿಂದ ಹೊರಬಂದಿದ್ದರ ಪರಿಣಾಮದಿಂದ ಮುಂದಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆಗಳು ತಗ್ಗಬಹುದು. ಮುಂದಿನ ದಿನಗಳಲ್ಲಿ ಒಪೆಕ್/ಸೌದಿಯ ಕಡಿವಾಣಗಳಿಲ್ಲದೆ ಸ್ವತಂತ್ರವಾಗಿ ಕಚ್ಚಾ ತೈಲವನ್ನು extract ಮಾಡಿ ರಪ್ತು ಮಾಡಬಹುದು. ಸೌರಶಕ್ತಿ, ನವೀಕರಿಸಬಹುದಾದ ಇಂಧನ, ಅಣುಶಕ್ತಿಯ, cleaner ಎನರ್ಜಿಯ ಹೆಚ್ಚುತ್ತಿರುವ ಪ್ರಾಬಲ್ಯ, ಏರುತ್ತಿರುವ ವಿದ್ಯುತ್ ಚಾಲಿತ ವಾಹನ ಸಂಖ್ಯೆ ತೈಲಭರಿತ ರಾಷ್ಟ್ರಗಳನ್ನು ಅತಿಯಾದ ಒತ್ತಡದಲ್ಲಿ ಸಿಲುಕಿಸಿವೆ. ಈ ಒತ್ತಡ ಹೇಗಿದೆ ಎಂದರೆ ಇನ್ನತ್ತು ವರುಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಚ್ಚಾ ತೈಲವನ್ನು extract ಮಾಡಿ ಹಣ ಮಾಡಿಕೊಳ್ಳಬೇಕೆಂಬ ಒತ್ತಡ ಎಲ್ಲಾ ತೈಲಭರಿತ ರಾಷ್ಟ್ರಗಳ ಮೇಲಿದೆ. ಇದನ್ನು ಗ್ರೀನ್ ಪ್ಯಾರಡಾಕ್ಸ್ ಎನ್ನುತ್ತೇವೆ.
ನಾವು cleaner energy sourceಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತರಾದಂತೆ ಕಚ್ಚಾ ತೈಲದ extraction ಕೂಡ ಹೆಚ್ಚಾಗುತ್ತದೆ! ಈ ಒತ್ತಡಗಳು ಮುಸ್ಲಿಂ ರಾಷ್ಟ್ರಗಳನ್ನು, ಅವರ ಅಸ್ಮಿತೆಯನ್ನು ಹೇಗೆ ರೂಪಿಸುತ್ತದೆ ಅನ್ನುವುದನ್ನು ನಾವು ಕಾದು ನೋಡಬೇಕಿದೆ… ಸದ್ಯಕ್ಕೆ ಮುಸ್ಲಿಂ ಅನ್ನುವುದು ಏಕಮಾತ್ರ ಐಡೆಂಟಿಟಿ ಅಲ್ಲ ಎಂಬುದನ್ನ ಅರಿಯಬೇಕಿದೆ.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ



