‘ಖಾಲಿ ಕಪ್ ಮನಸ್ಥಿತಿ’ಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ…

Date:

ಮನಸ್ಸನ್ನು ಬದಲಾಯಿಸಿಕೊಳ್ಳುವ ಇಚ್ಛಾಶಕ್ತಿಯೇ ಬುದ್ಧಿವಂತಿಕೆಯ ಅಂತಿಮ ಸಂಕೇತವೆಂದರೆ ತಪ್ಪಲ್ಲ. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಹೊಸ ಮಾಹಿತಿಗೆ ಅನುಗುಣವಾಗಿ ತಮ್ಮ ಮನಸ್ಸನ್ನು ಆಗಾಗ್ಗೆ ಬದಲಾಯಿಸಿಕೊಳ್ಳುತ್ತಾರೆ. ಸಾಫ್ಟ್‌ವೇರ್ ಅಪ್‌ಡೇಟ್‌ನಂತೆ...

“ನಿಮಗೆ ತಿಳಿಯದೇ ಇರುವ ವಿಷಯಗಳು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವುದಿಲ್ಲ. ಆದರೆ ನೀವು ಅಚಲವಾಗಿ ಸತ್ಯವೆಂದು ನಂಬಿರುವ ತಪ್ಪು ವಿಷಯಗಳೇ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ.”
-ಮಾರ್ಕ್ ಟ್ವೈನ್

- Advertisement -

19ನೇ ಶತಮಾನದ ಮಧ್ಯಭಾಗ. ಡಾ. ಇಗ್ನಾಜ್ ಸೆಮ್ಮೆಲ್ವೀಸ್ ವಿಯೆನ್ನಾ ಜನರಲ್ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಆತ ಅಲ್ಲಿ ಕರ್ತವ್ಯ ನಿರ್ವಹಿಸುವಾಗ ಒಂದು ಕುತೂಹಲಕಾರಿ ವಿಷಯವನ್ನು ಗಮನಿಸಿದ. ಆ ಆಸ್ಪತ್ರೆಗೆ ಅಂಟಿಕೊಂಡಂತೆ ಎರಡು ಪ್ರಸೂತಿ ಚಿಕಿತ್ಸಾಲಯಗಳಿದ್ದವು. ಒಂದು ಪ್ರಸೂತಿ ಕೇಂದ್ರವನ್ನು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನೋಡಿಕೊಂಡರೆ ಮತ್ತೊಂದನ್ನು ದಾದಿಯರು (midwives) ನೋಡಿಕೊಳ್ಳುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಆ ಕಾಲದ ಆಸ್ಪತ್ರೆಗಳಲ್ಲಿ ‘ಚೈಲ್ಡ್ ಬೆಡ್ ಫೀವರ್’ (ಹೆರಿಗೆಯ ನಂತರ ತಾಯಂದಿರಿಗೆ ಬರುವ ಬ್ಯಾಕ್ಟೀರಿಯಾ ಸೋಂಕು) ಎನ್ನುವ ಕಾಯಿಲೆ ವ್ಯಾಪಕವಾಗಿತ್ತು. ಆದರೆ ಅಚ್ಚರಿ ಎಂಬಂತೆ ಈ ಎರಡು ಪ್ರಸೂತಿ ಕೇಂದ್ರಗಳಲ್ಲಿ ಈ ಸೋಂಕಿನ ಪ್ರಮಾಣದಲ್ಲಿ ಬಹಳ ವ್ಯತ್ಯಾಸವಿತ್ತು. ವೈದ್ಯರಿದ್ದ ಚಿಕಿತ್ಸಾಲಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ. 18ರಷ್ಟಿದ್ದರೆ, ದಾದಿಯರಿದ್ದ ಕಡೆ ಅದು ಕೇವಲ ಶೇ. 2ರಷ್ಟಿತ್ತು. ಇದನ್ನು ಗಮನಿಸಿದ ಗರ್ಭಿಣಿಯರು ದಾದಿಯರ ಬಳಿಯೇ ಹೆರಿಗೆ ಮಾಡಿಸಲು ಅಂಗಲಾಚುತ್ತಿದ್ದರು!

ಡಾ. ಸೆಮ್ಮೆಲ್ವೀಸ್ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದರೂ ಮೊದಮೊದಲು ಏನೂ ಅರ್ಥವಾಗಲಿಲ್ಲ. ಆದರೆ ಅಕಸ್ಮಾತಾಗಿ ನಡೆದುಹೋದ ದುರಂತವೊಂದು ಅವರಿಗೆ ಸೋಂಕು ಕುರಿತಾಗಿ ಹೊಸ ಹೊಳವು ನೀಡಿತ್ತು. ಅವರ ಆಪ್ತ ವೈದ್ಯ ಸ್ನೇಹಿತನೊಬ್ಬ ಶವಪರೀಕ್ಷೆ (autopsy) ಮಾಡುವಾಗ ಹರಿತವಾದ ಚೂರಿಯಿಂದ ಅಕಸ್ಮಾತ್ತಾಗಿ ಮಾಡಿಕೊಂಡ ಗಾಯದಿಂದಾಗಿ ಮೃತಪಟ್ಟರು. ಆತ ಗಾಯದಿಂದ ಮೃತಪಟ್ಟಿರಲಿಲ್ಲ ಬದಲಾಗಿ ಸೋಂಕಿನಿಂದ ಮೃತಪಟ್ಟಿದ್ದ. ಆಗ ಸೆಮ್ಮೆಲ್ವೀಸ್ ಗೆ ಒಂದು ಸರಳ ವಿಷಯ ಹೊಳೆಯಿತು: ವೈದ್ಯರು ಮತ್ತು ವಿದ್ಯಾರ್ಥಿಗಳು ಶವಗಳನ್ನು ಪರೀಕ್ಷೆ ಮುಗಿಸಿ ನೇರವಾಗಿ ಹೆರಿಗೆ ಮಾಡಿಸಲು ಬರುತ್ತಿದ್ದರು. ಮಧ್ಯದಲ್ಲಿ ಅವರು ಕೈಗಳನ್ನು ತೊಳೆಯುತ್ತಿರಲಿಲ್ಲ!

ಇದನ್ನು ಓದಿದ್ದೀರಾ?: ಕಾಡುವ ಚಿತ್ರಗಳನ್ನು ಮರೆಯುವುದುಂಟೇ?

ಅಂದಿನಿಂದ ಡಾ. ಸೆಮ್ಮೆಲ್ವೀಸ್ ಎಲ್ಲ ವೈದ್ಯರು ಕ್ಲೋರಿನೇಟೆಡ್ ಸುಣ್ಣದ ನೀರಿನಿಂದ ಪದೇ ಪದೆ ಕೈ ತೊಳೆಯುವುದನ್ನು ಕಡ್ಡಾಯಗೊಳಿಸಿದರು. ಅದರ ಫಲಿತಾಂಶ ಸ್ಪಷ್ಟವಾಗಿತ್ತು; ವೈದ್ಯರು ನೋಡಿಕೊಳ್ಳುತ್ತಿದ್ದ ಪ್ರಸೂತಿ ಕೇಂದ್ರದಲ್ಲಿ ಮರಣ ಪ್ರಮಾಣ ತಕ್ಷಣವೇ ಶೇ.18ರಿಂದ ಶೇ. 2ಕ್ಕಿಂತ ಕೆಳಕ್ಕೆ ಇಳಿಯಿತು.

ವಿಪರ್ಯಾಸವೆಂದರೆ, ಸೆಮ್ಮೆಲ್ವೀಸ್ ಅವರನ್ನು ಕೊಂಡಾಡುವ ಬದಲು ವೈದ್ಯಕೀಯ ಲೋಕ ಅವರನ್ನು ಅಪಹಾಸ್ಯ ಮಾಡಿತು. ಆಗಿನ್ನು ಕ್ರಿಮಿ ಸಿದ್ಧಾಂತ (germ theory) ಅಸ್ತಿತ್ವದಲ್ಲಿರಲಿಲ್ಲ. ತಮ್ಮ ಕೈಗಳೇ ರೋಗಕ್ಕೆ ಕಾರಣ ಎಂಬ ಮಾತನ್ನು ಒಪ್ಪಿಕೊಳ್ಳಲು ವೈದ್ಯರ ಅಹಂ ಅಡ್ಡಿಬಂದಿತು. ಸಹೋದ್ಯೋಗಿಗಳ ಈ ಮೊಂಡುತನದಿಂದ ಬೇಸತ್ತ ಡಾ. ಸೆಮ್ಮೆಲ್ವೀಸ್ ಆಸ್ಫತ್ರೆಯಿಂದ ಹೊರಬಂದರು. ಅವರು ಬದಲಾವಣೆಗಾಗಿ ವರ್ಷಗಟ್ಟಲೆ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅವರಿಗೆ ಹುಚ್ಚನೆಂಬ ಹಣೆಪಟ್ಟಿ ಕಟ್ಟಿ ಹುಚ್ಚಾಸ್ಪತ್ರೆಗೆ ಸೇರಿಸಲಾಯಿತು, ಅಲ್ಲಿ ಕಾವಲುಗಾರರ ಹೊಡೆತಕ್ಕೆ, ನಿರಂತರ ಕಿರುಕುಳಕ್ಕೆ ಸಿಲುಕಿ, ಯಾತನೆಯಲ್ಲೇ ತಮ್ಮ 47ನೇ ವಯಸ್ಸಿನಲ್ಲಿ ಅವರು ಮೃತಪಟ್ಟರು.

ಪುರಾವೆಗಳು ಸ್ಪಷ್ಟವಾಗಿದ್ದರೂ ಯಾರೂ ಸಹ ಅದನ್ನು ಒಪ್ಪದಿದ್ದ ಪ್ರಸಂಗಗಳನ್ನು ‘ಸೆಮ್ಮೆಲ್ವೀಸ್ ರಿಫ್ಲೆಕ್ಸ್’ ಎಂದು ಜನ ಕರೆಯತೊಡಗಿದರು. ನಮ್ಮ ಹಳೆಯ ನಂಬಿಕೆಗಳಿಗೆ ವಿರುದ್ಧವಾಗಿ ಹೊಸ ಪುರಾವೆಗಳು ಬಂದಾಗ ಅದನ್ನು ತಿರಸ್ಕರಿಸುವ ಮಾನವ ಗುಣ ಸಹಜ ಎಂಬುದು ಕೂಡ ಸಾಬೀತಾಯಿತು.

ಇದಕ್ಕೆ ಪೂರಕವಾದ ಒಂದು ಪುರಾತನ ಝೆನ್ ಕಥೆಯಿದೆ: ಪ್ರೊಫೆಸರ್ ಒಬ್ಬ ಝೆನ್ ಗುರುವಿನ ಬಳಿ “ಝೆನ್” ಬಗ್ಗೆ ಕಲಿಯಲು ಬಂದರಂತೆ. ಗುರುಗಳು ಮಾತನಾಡಲು ಶುರು ಮಾಡಿದಾಗಲೆಲ್ಲಾ ಪ್ರೊಫೆಸರ್ ಮಧ್ಯೆ ಪ್ರವೇಶಿಸಿ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದರಂತೆ. ಇದನ್ನು ಗಮನಿಸಿದ ಗುರುಗಳು, ಸದ್ಯಕ್ಕೆ ವಿರಾಮ ತೆಗೆದುಕೊಳ್ಳುವ, ಬನ್ನಿ ಟೀ ಕುಡಿಯುವ ಎಂದರಂತೆ. ಹೀಗೆಂದ ಗುರುಗಳು ಪ್ರೊಫೆಸರರ ಕಪ್ಪಿನ ಒಳಕ್ಕೆ ಟೀ ಸುರಿಯಲು ಆರಂಭಿಸಿದರಂತೆ. ಕಪ್ ತುಂಬಿದರೂ ಅವರು ಸುರಿಯುವುದನ್ನು ನಿಲ್ಲಿಸಲಿಲ್ಲವಂತೆ. ಟೀ ಮೇಜಿನ ಮೇಲೆ ಸುರಿದು, ನೆಲದ ಮೇಲೆಲ್ಲಾ ಚೆಲ್ಲತೊಡಗಿತಂತೆ. “ನಿಲ್ಲಿಸಿ ಗುರುಗಳೇ! ಕಪ್ ಆಗಲೇ ತುಂಬಿದೆ, ಇನ್ನು ಅದರೊಳಗೆ ಹಿಡಿಸುವುದಿಲ್ಲ” ಎಂದು ಪ್ರೊಫೆಸರ್ ಏರು ದನಿಯಲ್ಲಿ ಹೇಳಿದರಂತೆ. ಆಗ ಗುರುಗಳು “ನಿಖರವಾಗಿ! ನೀವು ಕೂಡ ಈ ಕಪ್‌ನಂತೆಯೇ ಇದ್ದೀರಿ. ನಿಮ್ಮ ತಲೆಯಲ್ಲಿ ನಿಮ್ಮದೇ ಆದ ಆಲೋಚನೆಗಳು ತುಂಬಿವೆ. ಮೊದಲು ನಿಮ್ಮ ಕಪ್ ಅನ್ನು ಖಾಲಿ ಮಾಡಿಕೊಂಡು ಬನ್ನಿ, ಆಗ ಮಾತ್ರ ನಾನು ನಿಮಗೆ ಏನನ್ನಾದರೂ ಕಲಿಸಲು ಸಾಧ್ಯ.” ಶಾಂತವಾಗಿ ನುಡಿದರಂತೆ.

ಸೆಮ್ಮೆಲ್ವೀಸ್ ನನ್ನು ಗೇಲಿ ಮಾಡಿದ ವೈದ್ಯರು ಮೂರ್ಖರಾಗಿರಲಿಲ್ಲ. ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನುರಿತ ತಜ್ಞರಾಗಿದ್ದರು. ನಿಖರವಾಗಿ ಹೇಳಬೇಕೆಂದರೆ ಅದೇ ಅವರ ಸಮಸ್ಯೆಯಾಗಿತ್ತು. ಸೆಮ್ಮೆಲ್ವೀಸ್ ನ ಪುರಾವೆಗಳನ್ನು ಒಪ್ಪಿಕೊಳ್ಳುವುದು ಎಂದರೆ ಕೇವಲ ಒಂದು ಪ್ರಕ್ರಿಯೆಯನ್ನು ಬದಲಾಯಿಸುವುದು ಎಂದಲ್ಲ, ಅದು ಅವರು ಆಳವಾಗಿ ನಂಬಿದ್ದ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು ಎಂದರ್ಥವಾಗಿತ್ತು. ಅವರ ಮನಸ್ಸೆಂಬ ಟೀ ಕಪ್ಪಿನಲ್ಲಿ ಅದಕ್ಕೆ ಜಾಗವಿರಲಿಲ್ಲ.

ನಿಮಗೆ ತಿಳಿದಷ್ಟು ನಿಮ್ಮ ಮನಸ್ಸಿನ ಪಾತ್ರೆ ತುಂಬುತ್ತಾ ಹೋಗುತ್ತದೆ. ನಿಮ್ಮ ಎಲ್ಲಾ ಅನುಭವ, ಮಾನ್ಯತೆ ಮತ್ತು ಯಶಸ್ಸು ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ನಂಬಿಕೆಗಳನ್ನು ಗಟ್ಟಿಗೊಳಿಸುತ್ತದೆ.

ತುಂಬಿದ ಪಾತ್ರೆಯು ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅಲ್ಲಿ ಹೊಸ ಆಲೋಚನೆಗಳಿಗೆ ಜಾಗವಿಲ್ಲ, ಅಳವಡಿಸಿಕೊಳ್ಳುವ ಸಾಮರ್ಥ್ಯವಿಲ್ಲ ಮತ್ತು ಅನಿಶ್ಚಿತತೆಗೆ ಅವಕಾಶವಿಲ್ಲ.

brain and bowl 1

ಇದಕ್ಕೆ ಮದ್ದೇ “ಖಾಲಿ ಪಾತ್ರೆಯ ಮನಸ್ಥಿತಿ” (Empty Cup Mindset): ಹೊಸ ಆಲೋಚನೆ, ಹೊಸ ಮಾಹಿತಿ ಮತ್ತು ಹೊಸ ದೃಷ್ಟಿಕೋನಗಳಿಗೆ ಮುಕ್ತವಾಗಿರುವುದು— ಅವು ನಿಮಗೆ ಈಗಾಗಲೇ ತಿಳಿದಿರುವುದನ್ನು ಸವಾಲು ಮಾಡಿದಾಗಲೂ ಸಹ. ವಿಶೇಷವಾಗಿ ಅವು ನಿಮಗೆ ತಿಳಿದಿರುವುದನ್ನು ಸವಾಲು ಮಾಡಿದಾಗ ಹೆಚ್ಚು ಮುಕ್ತವಾಗಿರಬೇಕು. ಇದು ಬಲವಾದ ಅಭಿಪ್ರಾಯಗಳನ್ನು ಸಡಿಲವಾಗಿ ಹಿಡಿದಿಟ್ಟುಕೊಳ್ಳುವ ಮನೋಭಾವವಿದು. ಪುರಾವೆಗಳು ಅನಿವಾರ್ಯವೆನಿಸಿದಾಗ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವ ಇಚ್ಛಾಶಕ್ತಿಯಿದು. ಖಚಿತತೆಯನ್ನು (certainty) ಒಂದು ಸಾಮರ್ಥ್ಯ ಎಂದು ಭಾವಿಸದೆ, ಎಚ್ಚರಿಕೆಯ ಸಂಕೇತವೆಂದು ಪರಿಗಣಿಸುವ ಭಾವವಿದು.

ಇದನ್ನು ಓದಿದ್ದೀರಾ?: ಬೌದ್ಧ ಗುರು ಥಿಚ್ ನಾಥ್ ಹಾನ್ ಮತ್ತು ಅಮೆರಿಕನ್ ಯೋಧ

ಮನಸ್ಸನ್ನು ಬದಲಾಯಿಸಿಕೊಳ್ಳುವ ಇಚ್ಛಾಶಕ್ತಿಯೇ ಬುದ್ಧಿವಂತಿಕೆಯ ಅಂತಿಮ ಸಂಕೇತವೆಂದರೆ ತಪ್ಪಲ್ಲ. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಹೊಸ ಮಾಹಿತಿಗೆ ಅನುಗುಣವಾಗಿ ತಮ್ಮ ಮನಸ್ಸನ್ನು ಆಗಾಗ್ಗೆ ಬದಲಾಯಿಸಿಕೊಳ್ಳುತ್ತಾರೆ. ಸಾಫ್ಟ್‌ವೇರ್ ಅಪ್‌ಡೇಟ್‌ನಂತೆ.

ಬುಕರ್ ಪ್ರಶಸ್ತಿ ವಿಜೇತ ಲೇಖಕ ಜಾರ್ಜ್ ಸಾಂಡರ್ಸ್ (George Saunders) ಇದನ್ನು ಸುಂದರವಾಗಿ ಹೇಳಿದ್ದಾರೆ: “ಕಡಿಮೆ ಮಾಹಿತಿಯ ಆಧಾರದ ಮೇಲೆ ಎಲ್ಲವನ್ನೂ ಭಾವೋದ್ರೇಕದಿಂದ ತಿಳಿದಿರುವಂತೆ ನಟಿಸುವ ಜನರ ನಡುವೆ, ಎಲ್ಲಿ ಖಚಿತತೆಯನ್ನು ಅಧಿಕಾರವೆಂದು ತಪ್ಪಾಗಿ ಭಾವಿಸಲಾಗುತ್ತದೆಯೋ ಅಂತಹ ಜಗತ್ತಿನಲ್ಲಿ, ಒಬ್ಬ ವ್ಯಕ್ತಿ ಅನಿಶ್ಚಿತವಾಗಿರಲು (unsure) ಧೈರ್ಯ ತೋರುತ್ತಾನೆ ಎಂದರೆ ಅದು ಎಂತಹ ಸಮಾಧಾನದ ವಿಷಯ!”

“ಖಾಲಿ ಪಾತ್ರೆಯ ಮನಸ್ಥಿತಿ”ಯನ್ನು ಅಳವಡಿಸಿಕೊಂಡರೆ, ನಮ್ಮ ನಂಬಿಕೆಗಳು ಮತ್ತು ಪ್ರಪಂಚದ ಬಗ್ಗೆ ನಮ್ಮ ತಿಳಿವಳಿಕೆಯ ನಮ್ಯತೆಯನ್ನು (flexibility) ನಾವು ನಿಯಮಿತವಾಗಿ ಪರೀಕ್ಷಿಸಿಕೊಂಡರೆ ಎಷ್ಟು ಚನ್ನ ಅಲ್ಲವೇ?

(ಸಾಹಿಲ್ ಬ್ಲೂಮ್ ಬರಹ ಪ್ರೇರಿತ)

Harish Gangadhar
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...