ಹೂಥೀಗಳೆಂದರೆ ಯಾರು? ಮಧ್ಯಪ್ರಾಚ್ಯದ ಯುದ್ಧಕ್ಕೆ ಯಾಕೆ ಧುಮುಕಿದ್ದಾರೆ?

Date:


ಹೂಥೀಗಳು ಪಶ್ಚಿಮ ಏಷ್ಯಾದಲ್ಲಿ ಇರಾನ್ ಬೆಂಬಲಿತ “ಪ್ರತಿರೋಧ ಅಕ್ಷ” (axis of resistance) ಭಾಗವಾಗಿದ್ದು, ಗಾಜಾದ ಹಮಾಸ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಗಳ ಜೊತೆ ಸೇರಿದ್ದಾರೆ. ಆದರೆ ಇಸ್ರೇಲ್ ಈ ಎರಡೂ ಸಂಘಟನೆಗಳ ಬಲವನ್ನು ಬಹುಮಟ್ಟಿಗೆ ಕುಗ್ಗಿಸಿತ್ತು. ಹೀಗಾಗಿ ಹೂಥೀಗಳು ಈಗ ಇರಾನ್ ನ ಸಕ್ರಿಯ ಬೆಂಬಲದೊಂದಿಗೆ ಇರಾನ್‌ನ ಪರ ಯುದ್ಧ ಕಣಕ್ಕಿಳಿದಿದ್ದಾರೆ.

ಮಧ್ಯಪ್ರಾಚ್ಯದ
ಯುದ್ಧ ಹೊಸ ಹೊರಳು ಪಡೆದಿದೆ. ಯೆಮೆನ್ ದೇಶದ ‘ಹೂಥೀ’ಗಳು ಇರಾನ್ ಪರವಾಗಿ ಯುದ್ಧ ಪ್ರವೇಶಿಸಿದ್ದಾರೆ. ಶನಿವಾರ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿ ತಮ್ಮ ಮೊದಲ ದಾಳಿ ನಡೆಸಿದ್ದಾರೆ.

- Advertisement -

“ಸೂಕ್ಷ್ಮ ಇಸ್ರೇಲಿ ಸೈನಿಕ ಕೇಂದ್ರಗಳ” ಮೇಲೆ ಗುರಿ ಇಟ್ಟಿದ್ದಾರೆ. ಯೆಮನ್‌ನಿಂದ ಬಂದ ಕ್ಷಿಪಣಿಯನ್ನು ಗಗನದಲ್ಲೇ ತಡೆದು ಉರುಳಿಸಿರುವುದಾಗಿ ಎಂದು ಇಸ್ರೇಲ್ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಕಳೆದ ನಾಲ್ಕು ವಾರಗಳಿಂದ ನಡೆದಿರುವ ಯುದ್ಧವು ಕೊಲ್ಲಿಯ ಅರಬ್ ಮೈತ್ರಿ ರಾಷ್ಟ್ರಗಳಿಗೆ ಹಬ್ಬಿ, ಹೋರ್ಮುಜ್ ಜಲಸಂಧಿಯನ್ನು ಮುಚ್ಚಿ, ಜಾಗತಿಕ ಇಂಧನ ಸಂಕಟವನ್ನು ಹುಟ್ಟಿ ಹಾಕಿದೆ. ಈ ನಡುವೆ ಇಸ್ರೇಲ್, ದಕ್ಷಿಣ ಲೆಬನಾನ್‌ ಮೇಲೆ ದಾಳಿ ನಡೆಸಿ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನೂ ಮೈಮೇಲೆ ಎಳೆದುಕೊಂಡಿದೆ.

ಇರಾನ್ ದೇಶವನ್ನು ಬೆಂಬಲಿಸುವ ಹೂಥೀಗಳು ಈವರೆಗೆ ಯುದ್ಧಕ್ಕೆ ನೇರವಾಗಿ ಧುಮುಕಿರಲಿಲ್ಲ. ಈ ಹಂತದಲ್ಲಿ ಅವರ ಪ್ರವೇಶವು ಯುದ್ಧವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಜೊತೆಗೆ, ಕೆಂಪು ಸಮುದ್ರದ ಬ್ಯಾಬ್ ಎಲ್-ಮಾಂಡೆಬ್ ಜಲಸಂಧಿಯತ್ತ ಗಮನ ಸೆಳೆದಿದೆ. ‘ಕಣ್ಣೀರುಗಳ ದ್ವಾರ’ ಎಂಬ ಅರ್ಥದ ಬ್ಯಾಬ್ ಎಲ್ ಮಾಂಡೆಬ್ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲೊಂದು. ಇದರ ಸ್ಥಿರತೆ ಜಾಗತಿಕ ಆರ್ಥಿಕತೆಗೆ ಅತ್ಯಂತ ಅಗತ್ಯ. ಹಾರ್ಮುಜ್ ಜಲಸಂಧಿಯಂತೆ ಬ್ಯಾಬ್ ಎಲ್ ಮಾಂಡೆಬ್ ನೇರವಾಗಿ ಸಾಗುವ ಕಿರಿದಾದ ಮಾರ್ಗ. ಈ ಮಾರ್ಗದಲ್ಲಿ ವ್ಯತ್ಯಯ ಆದರೆ ಹಡಗುಗಳು ಆಫ್ರಿಕಾವನ್ನು ಸುತ್ತಿ ಹಾಕಿಕೊಂಡು ಸಾಗುವ ಬಳಸು ದಾರಿಯನ್ನು ಬಳಸಬೇಕಾಗುತ್ತದೆ. ಪ್ರಯಾಣದ ಸಮಯ ಮತ್ತು ವೆಚ್ಚ ಹೆಚ್ಚುತ್ತದೆ. ಜಾಗತಿಕ ಸರಕು ಸರಪಳಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹೂಥೀಗಳು ಈಗಾಗಲೇ 2023ರ ಕಡೆಯ ಭಾಗದಲ್ಲಿ, ಬ್ಯಾಬ್ ಎಲ್ ಮಾಂಡೆಬ್ ಜಲಸಂಧಿಯ ಮಾರ್ಗದಲ್ಲಿ ಬಹುದೊಡ್ಡ ವ್ಯತ್ಯಯ ಉಂಟುಮಾಡಿದ್ದರು.

ಹೂಥೀಗಳು ಯಾರು?

ಹೂಥೀಗಳು ಯೆಮನ್‌ನ ಶಿಯಾ ಮುಸ್ಲಿಂ ಅಲ್ಪಸಂಖ್ಯಾತರಾದ ಜೈದಿ ಸಮುದಾಯದ ಹಕ್ಕುಗಳನ್ನು ಪ್ರತಿನಿಧಿಸುವ ಸಶಸ್ತ್ರ ರಾಜಕೀಯ ಮತ್ತು ಧಾರ್ಮಿಕ ಗುಂಪು.

1990ರ ದಶಕದಲ್ಲಿ ಹುಸೈನ್ ಬದ್ರುದ್ದೀನ್ ಅಲ್-ಹೂಥೀ ಸ್ಥಾಪಿಸಿದ ಚಳವಳಿಯಿದು. ಸ್ಥಾಪಕನ ಹೆಸರಿನಿಂದಲೇ ಗುರುತಿಸಲ್ಪಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೋರಾಡುವುದೇ ಈ ಚಳವಳಿಯ ಪ್ರಮುಖ ಉದ್ದೇಶ.

ಹೂಥೀಗಳು ಪಶ್ಚಿಮ ಏಷ್ಯಾದಲ್ಲಿ ಇರಾನ್ ಬೆಂಬಲಿತ “ಪ್ರತಿರೋಧ ಅಕ್ಷ” (axis of resistance) ಭಾಗವಾಗಿದ್ದು, ಗಾಜಾದ ಹಮಾಸ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆಗಳ ಜೊತೆ ಸೇರಿದ್ದಾರೆ. ಆದರೆ ಇಸ್ರೇಲ್ ಈ ಎರಡೂ ಸಂಘಟನೆಗಳ ಬಲವನ್ನು ಬಹುಮಟ್ಟಿಗೆ ಕುಗ್ಗಿಸಿತ್ತು. ಹೀಗಾಗಿ ಹೂಥೀಗಳು ಈಗ ಇರಾನ್ ನ ಸಕ್ರಿಯ ಬೆಂಬಲದೊಂದಿಗೆ ಇರಾನ್‌ನ ಪರ ಯುದ್ಧ ಕಣಕ್ಕಿಳಿದಿದ್ದಾರೆ.

2014ರಲ್ಲಿ ಹೂಥೀಗಳು ಯೆಮನ್ ರಾಜಧಾನಿ ಸನಾ ನಗರವನ್ನು ವಶಪಡಿಸಿಕೊಂಡು, ಅಧ್ಯಕ್ಷ ಅಬ್ದ್ ರಬ್ಬು ಮನ್ಸೂರ್ ಹಾದಿಯನ್ನು ಅಧಿಕಾರದಿಂದ ಕೆಳಗಿಳಿಸಿದರು. ಆಗಿನಿಂದ ದೇಶದ ಶಕ್ತಿಸಮತೋಲನವನ್ನು ತಮ್ಮತ್ತ ತಿರುಗಿಸಿಕೊಂಡಿದ್ದಾರೆ.

2023ರಲ್ಲಿ ಹೂಥಿಗಳು ಸಾಗಣೆ ವ್ಯತ್ಯಯವನ್ನು ಹೇಗೆ ಉಂಟುಮಾಡಿದರು?

2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ನಂತರ, ಇಸ್ರೇಲ್ ಗಾಜಾದ ಮೇಲೆ ಯುದ್ಧ ಆರಂಭಿಸಿದಾಗ, ಹೂಥೀಗಳು ಗಾಜಾಕ್ಕೆ ಬೆಂಬಲ ಘೋಷಿಸಿದರು.

ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದರು. ಮೂರು ಕಡೆ ನೀರಿನಿಂದ ಆವರಿಸಿದ್ದು ಒಂದೆಡೆ ಭೂಭಾಗಕ್ಕೆ ಸಂಪರ್ಕ ಹೊಂದಿರುವ ಅರೇಬಿಯನ್ ಸೀಮೆ ಮತ್ತು ಕೆಂಪು ಸಮುದ್ರದ ಸಾಗಣೆ ಮಾರ್ಗಗಳ ಮೇಲೆ ದಾಳಿಗಳನ್ನು ಕೇಂದ್ರೀಕರಿಸಿದ್ದರು.

ಬ್ಯಾಬ್ ಎಲ್-ಮಂಡೆಬ್ ಜಲಸಂಧಿಯ ಸಮೀಪದಲ್ಲಿದೆ ಯೆಮೆನ್. ಕೆಂಪು ಸಮುದ್ರಕ್ಕೆ ಪ್ರವೇಶದ್ವಾರ. ಈ ಮಾರ್ಗವು ಸೂಯೆಝ್ ಕಾಲುವೆ ಮತ್ತು ಸುಮೇಡ್ ಪೈಪ್‌ಲೈನ್ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಹೊಂದಿದೆ.

ಈ ಮಾರ್ಗಗಳು ಪರ್ಷಿಯನ್ ಗಲ್ಫ್‌ನ ತೈಲ ಮತ್ತು ಅನಿಲವನ್ನು ಯೂರೋಪ್ ಮತ್ತು ಉತ್ತರ ಅಮೆರಿಕಕ್ಕೆ ಸಾಗಿಸಲು ಅತ್ಯಂತ ಮಹತ್ವದ್ದಾಗಿವೆ. 2023ರಲ್ಲಿ ಜಾಗತಿಕ ಸಮುದ್ರ ಮಾರ್ಗದ ತೈಲ ವ್ಯಾಪಾರದ ಸುಮಾರು 12% ಮತ್ತು ಎಲ್‌ಎನ್‌ಜಿ ವ್ಯಾಪಾರದ ಸುಮಾರು 8% ಈ ಮಾರ್ಗಗಳ ಮೂಲಕ ನಡೆದವು.

ಸೂಯೆಝ್ ಕಾಲುವೆಯೊಂದರ ಮೂಲಕವೇ ಜಾಗತಿಕ ವ್ಯಾಪಾರದ ಸುಮಾರು 12% ರಿಂದ 15%ರಷ್ಟು ಪ್ರಮಾಣ ಈಡೇರಿತು. ಆದರೆ 2023ರ ಡಿಸೆಂಬರ್‌ನಲ್ಲಿ ಹೂಥೀಗಳು ದಾಳಿಗಳನ್ನು ಆರಂಭಿಸಿದ ನಂತರ ಎರಡು ತಿಂಗಳಲ್ಲಿ, ಸೂಯೆಝ್ ಕಾಲುವೆಯ ಮೂಲಕ ಸಾಗಣೆಯು 40% ಕ್ಕಿಂತ ಹೆಚ್ಚು ಕುಸಿತ ಕಂಡಿತು.

ಹಡಗುಗಳು ಆಫ್ರಿಕಾದ ದಕ್ಷಿಣ ತುದಿಯ ‘ಕೇಪ್ ಆಫ್ ಗುಡ್ ಹೋಪ್’ ಮಾರ್ಗವನ್ನು ಬಳಸಬೇಕಾಯಿತು. ಇದರಿಂದ ಪ್ರಯಾಣದ ದೂರ, ಸಮಯ ಮತ್ತು ವಿಮಾ ವೆಚ್ಚಗಳು ಹೆಚ್ಚಾದವು.

ಹೂಥೀ ಪ್ರವೇಶ ಭಾರತ ಮತ್ತು ಜಗತ್ತಿನ ಮೇಲೆ ಬೀರುವ ಪರಿಣಾಮ ಏನು?

ಹೂಥೀಗಳು ಹಾಲಿ ಯುದ್ಧದಲ್ಲಿ ತಮ್ಮ ದಾಳಿಯನ್ನು ಮುಂದುವರೆಸಿದರೆ, ಬ್ಯಾಬ್ ಎಲ್-ಮಾಂಡೆಬ್ ಮಾರ್ಗದಲ್ಲಿ ಮತ್ತೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇದು ಈಗಾಗಲೇ ಹೋರ್ಮುಜ್ ಜಲಸಂಧಿಯ ವ್ಯತ್ಯಯದಿಂದ ಏರಿಕೆಯಾದ ತೈಲ ಬೆಲೆಗಳನ್ನು ಇನ್ನಷ್ಟು ಹೆಚ್ಚಿಸಬಹುದು.

ಜಾಗತಿಕ ವ್ಯಾಪಾರದ 80% ಕ್ಕಿಂತ ಹೆಚ್ಚು ಸಾಗಣೆ ಸಮುದ್ರ ಮಾರ್ಗಗಳ ಮೂಲಕ ನಡೆಯುತ್ತದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಈ ಮಾರ್ಗಗಳನ್ನೇ ಅವಲಂಬಿಸಿವೆ. ಹೋರ್ಮುಜ್ ಮಾರ್ಗವು ಭಾರತದ ಇಂಧನ ಆಮದುಗಳಿಗೆ ಪೂರಕವಾದರೆ, ಕೆಂಪು ಸಮುದ್ರ ಮಾರ್ಗವು ಭಾರತದಿಂದ ಯೂರೋಪ್‌ಗೆ ರಫ್ತಾಗುವ ಸರಕು ಸಾಗಣೆಗೆ ಅತ್ಯಂತ ಅಗತ್ಯ.

ಭಾರತದ ಯೂರೋಪ್ ವ್ಯಾಪಾರದ ಸುಮಾರು 80% ಈ ಮಾರ್ಗದ ಮೂಲಕವೇ ಸಾಗುತ್ತದೆ. ಬ್ಯಾಬ್ ಎಲ್ ಮ್ಯಾಂಡೆಬ್ ಜಲಸಂಧಿಯಲ್ಲಿ ಮತ್ತೊಮ್ಮೆ ವ್ಯತ್ಯಯ ಉಂಟಾದರೆ, ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಮಾರ್ಗವನ್ನು ಬಳಸಬೇಕಾಗಿ ಬರುತ್ತದೆ. ಇದರಿಂದ 4,000–6,000 ನಾಟಿಕಲ್ ಮೈಲುಗಳಷ್ಟು ಹೆಚ್ಚುವರಿ ದೂರ ಮತ್ತು 14–20 ದಿನಗಳ ವಿಳಂಬ ಉಂಟಾಗುತ್ತದೆ.

ಈ ಹೆಚ್ಚುವರಿ ವೆಚ್ಚಗಳು ಭಾರತದಂತಹ ದೇಶಗಳಿಗೆ ಹೆಚ್ಚಿನ ಹೊರೆ ಆಗುತ್ತವೆ. ವಿಶೇಷವಾಗಿ ಕಡಿಮೆ ಮೌಲ್ಯದ ಆದರೆ ಹೆಚ್ಚಿನ ಪ್ರಮಾಣದ ಕೃಷಿ ಮತ್ತು ಜವಳಿ ರಫ್ತುಗಳು ಹೆಚ್ಚಿನ ಹೊಡೆತ ಎದುರಿಸುತ್ತವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...