ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌; ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 183 ರನ್‌ ಮುನ್ನಡೆ

Date:

ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್ ಸಿರಾಜ್‌ ಅವರ ಮಾರಕ ಬೌಲಿಂಗ್‌ನಿಂದ ವೆಸ್ಟ್‌ ಇಂಡೀಸ್‌ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್‌ ಆಗಿ 183 ರನ್‌ಗಳ ಹಿನ್ನಡೆ ಅನುಭವಿಸಿತು.

ಟ್ರಿನಿಡಾಡ್​ನ ಪೋರ್ಟ್‌ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ನಾಲ್ಕನೇ ದಿನವಾದ ಇಂದು ಭಾರತ ನೀಡಿದ 438 ರನ್‌ಗಳಿಗೆ ಉತ್ತರವಾಗಿ ವೆಸ್ಟ್‌ ಇಂಡೀಸ್‌ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್‌ ಆಯಿತು.

ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 229 ರನ್ ಗಳಿಸಿದ್ದ ವಿಂಡೀಸ್‌ ತಂಡ ಕೇವಲ 21 ರನ್‌ ಆಗುವಷ್ಟರಲ್ಲಿ ತನ್ನ ಉಳಿದ 5 ವಿಕೆಟ್‌ಗಳನ್ನು ಕಳೆದುಕೊಂಡಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವೆಸ್ಟ್ ಇಂಡೀಸ್ ಪರ ನಾಯಕ ಕ್ರೈಗ್ ಬ್ರಾಥ್​ವೈಟ್ (75), ಟಿ ಚಂದ್ರಪಾಲ್ (33), ಅಲಿಕ್ ಅಥಾನಾಜೆ (37) ಹಾಗೂ ಕಿರ್ಕ್ ಮೆಕೆಂಜಿ (32) ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ.

ಈ ಸುದ್ದಿ ಓದಿದ್ದೀರಾ? ವಿಂಡೀಸ್‌ ವಿರುದ್ಧ ದ್ವಿತೀಯ ಟೆಸ್ಟ್‌: ಕೊಹ್ಲಿಗೆ 500ನೇ ಪಂದ್ಯ, ಭಾರತಕ್ಕೆ ನೂರನೇ ಟೆಸ್ಟ್

ವೇಗಿ ಮೊಹಮ್ಮದ್ ಸಿರಾಜ್‌ ಅವರ ಬೌಲಿಂಗ್‌ ದಾಳಿಗೆ ವೆಸ್ಟ್‌ ಇಂಡೀಸ್‌ ಪಡೆ ಧೂಳಿಪಟವಾಯಿತು. ಸಿರಾಜ್‌ 23.4 ಓವರ್‌ಗಳಲ್ಲಿ 60 ರನ್‌ ನೀಡಿ ಎದುರಾಳಿ ತಂಡದ ಪ್ರಮುಖ 5 ವಿಕೆಟ್ ಕಬಳಿಸಿದರು.

ಉದಯೋನ್ಮುಖ ಆಟಗಾರ ಮುಖೇಶ್ ಕುಮಾರ್‌ ಪದಾರ್ಪಣೆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೇ ಎರಡು ವಿಕೆಟ್‌ (48/2) ಪಡೆದು ಗಮನ ಸೆಳೆದರು. ಇನ್ನುಳಿದಂತೆ ರವೀಂದ್ರ ಜಡೇಜ 37/2 ಹಾಗೂ ಆರ್‌ ಅಶ್ವಿನ್ 61/1 ವಿಕೆಟ್ ಪಡೆದು ವಿಂಡೀಸ್ ಆಲೌಟ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ತಂಡ ಭೋಜನ ವಿರಾಮಕ್ಕೂ ಮುನ್ನ ಹತ್ತು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 91 ರನ್‌ ಪೇರಿಸಿದೆ. ನಾಯಕ ರೋಹಿತ್‌ ಶರ್ಮಾ ಅಜೇಯ 56 ಹಾಗೂ ಯಶಸ್ವಿ ಜೈಸ್ವಾಲ್‌ ಅಜೇಯ 32 ರನ್‌ ಬಾರಿಸಿ ಆಟವಾಡುತ್ತಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರನೇ ಟೆಸ್ಟ್ : ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಇಂಗ್ಲೆಂಡ್ ;ಭಾರತಕ್ಕೆ 434 ರನ್‍ ಅಂತರದ ಭರ್ಜರಿ ಜಯ

ರಾಜ್‍ಕೋಟ್‍ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ  ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ...

ಮೂರನೇ ಟೆಸ್ಟ್ | ಜೈಸ್ವಾಲ್ ದಾಖಲೆಯ ದ್ವಿಶತಕ ;556 ರನ್ ಮುನ್ನಡೆ ಪಡೆದ ಭಾರತ

ಇಂಗ್ಲೆಂಡ್ ವಿರುದ್ಧದ ರಾಜಕೋಟ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಎರಡನೇ ಇನಿಂಗ್ಸ್‍ನಲ್ಲಿ...

ಮೂರನೇ ಟೆಸ್ಟ್‌ | ಶತಕ ಬಾರಿಸಿ ಮಿಂಚಿದ ಯಶಸ್ವಿ ಜೈಸ್ವಾಲ್: ಟೀಮ್ ಇಂಡಿಯಾಗೆ ಬೃಹತ್ ರನ್‌ಗಳ ಮುನ್ನಡೆ

ಗುಜರಾತ್‌ನ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ...

ಮೂರನೇ ಟೆಸ್ಟ್‌ | ಟೀಮ್ ಇಂಡಿಯಾದ ಬಿಗು ಬೌಲಿಂಗ್‌ಗೆ ತತ್ತರಿಸಿದ ಇಂಗ್ಲೆಂಡ್: 126 ರನ್‌ಗಳ ಬೃಹತ್ ಮುನ್ನಡೆ

ಗುಜರಾತ್‌ನ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ...