ರಣಜಿ ಟ್ರೋಫಿ ವಿವಾದ: ಕೋರ್ಟ್ ಆದೇಶದ ನಂತರ ಪೂರ್ಣ ತಂಡವೇ ಬದಲು; ಮೈದಾನದಲ್ಲಿ ಆಟಗಾರರ ಕಣ್ಣೀರು

Date:

ಮೇಘಾಲಯ ಕ್ರಿಕೆಟ್ ಸಂಸ್ಥೆಯ (MCA) ಆಂತರಿಕ ಕಚ್ಚಾಟವೀಗ ರಾಜ್ಯ ರಣಜಿ ಟ್ರೋಫಿ ತಂಡದ ಮೇಲೆ ನೇರ ಪರಿಣಾಮ ಬೀರಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ, ನಾಗಾಲ್ಯಾಂಡ್ ವಿರುದ್ಧದ ‘ಪ್ಲೇಟ್ ವಿಭಾಗ’ದ ಪಂದ್ಯಕ್ಕೆ ಕೇವಲ ಎರಡು ದಿನಗಳಿರುವಾಗ ಇಡೀ ಮೇಘಾಲಯ ರಣಜಿ ತಂಡವನ್ನೇ ಬದಲಾಯಿಸಲಾಗಿದೆ.

- Advertisement -

​ಅಚ್ಚರಿಯ ಸಂಗತಿಯೆಂದರೆ, ದಿಢೀರ್ ವಜಾಗೊಂಡಿರುವ ಮೂಲ ತಂಡದ ಆಟಗಾರರು ಈಗಾಗಲೇ ಪ್ರಸಕ್ತ ಟೂರ್ನಿಯ ಮೂರು ಪಂದ್ಯಗಳಲ್ಲಿ ಆಡಿದ್ದರು. ಅಲ್ಲದೆ, ತಮ್ಮ ನಾಲ್ಕನೇ ಪಂದ್ಯಕ್ಕಾಗಿ ಮೈದಾನದಲ್ಲಿ ಭರ್ಜರಿ ತಾಲೀಮು ಕೂಡ ನಡೆಸುತ್ತಿದ್ದರು. ಈ ಹಂತದಲ್ಲಿ ಬಂದ ಹೈಕೋರ್ಟ್ ಆದೇಶ ಇಡೀ ತಂಡದ ಚಿತ್ರಣವನ್ನೇ ಬದಲಾಯಿಸಿದ್ದು, ಆಟಗಾರರು ತೀವ್ರ ಅಸಮಾಧಾನಗೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ...

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ ಸಮಸ್ಯೆ ಇಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳುವುದು,...

​ಮೇಘಾಲಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಜೇಮ್ಸ್ ಸಂಗ್ಮಾ ಮತ್ತು ಕಾರ್ಯದರ್ಶಿ ರೆನಾಲ್ಡ್ ಖಾರ್ಕಮ್ನಿ ನಡುವಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಗುದ್ದಾಟವೇ ಈ ದಿಢೀರ್ ಬೆಳವಣಿಗೆಗೆ ಪ್ರಮುಖ ಕಾರಣ. ಮೇಘಾಲಯದ 23 ವರ್ಷದೊಳಗಿನವರ (U-23) ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ದೂರುಗಳು ಕೇಳಿಬಂದಾಗ, ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಆರೋಪದ ಮೇಲೆ ಕಾರ್ಯದರ್ಶಿ ಖಾರ್ಕಮ್ನಿ ಅವರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು.

​ಈ ಪ್ರಕರಣದ ವಿಚಾರಣೆ ನಡೆಸಿದ ಮೇಘಾಲಯ ಹೈಕೋರ್ಟ್, ಖಾರ್ಕಮ್ನಿ ತೆಗೆದುಕೊಂಡಿದ್ದ ನಿರ್ಧಾರಗಳು ಕಾನೂನುಬಾಹಿರ ಎಂದು ಇತ್ತೀಚೆಗೆ ಘೋಷಿಸಿತು. ಅಲ್ಲದೆ, ಸಂಸ್ಥೆಯ ಅಪೆಕ್ಸ್ ಕೌನ್ಸಿಲ್ ಆಯ್ಕೆ ಮಾಡಿದ್ದ ರಣಜಿ ತಂಡವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತು. ನ್ಯಾಯಾಲಯದ ಈ ಮಧ್ಯಪ್ರವೇಶದ ನಂತರ, ಎಂಸಿಎ ಅಧ್ಯಕ್ಷ ಜೇಮ್ಸ್ ಸಂಗ್ಮಾ ಅವರ ಉಸ್ತುವಾರಿಯಲ್ಲಿ ನಾಗಾಲ್ಯಾಂಡ್ ವಿರುದ್ಧದ ಪಂದ್ಯಕ್ಕಾಗಿ ಸಂಪೂರ್ಣ ಹೊಸ ತಂಡವನ್ನು ಆಯ್ಕೆ ಮಾಡಲಾಗಿದೆ.

ಈ ಅನಿರೀಕ್ಷಿತ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ನ್ಯಾಯಾಲಯದ ಆದೇಶವನ್ನು ಪಾಲಿಸದೆ ಮಂಡಳಿಗೆ ಬೇರೆ ದಾರಿಯಿರಲಿಲ್ಲ ಎಂದಿದ್ದಾರೆ. “ಹೈಕೋರ್ಟ್ ನಿರ್ದೇಶನವನ್ನು ಪಾಲಿಸಲೇಬೇಕಾದ ಅನಿವಾರ್ಯತೆಯಿಂದಾಗಿ, ಎಂಸಿಎ ಅಧ್ಯಕ್ಷರ ನೇತೃತ್ವದಲ್ಲಿ ಆಯ್ಕೆಯಾದ ಹೊಸ ತಂಡಕ್ಕೆ ರಣಜಿ ಟ್ರೋಫಿಯಲ್ಲಿ ಮೇಘಾಲಯವನ್ನು ಪ್ರತಿನಿಧಿಸಲು ಅನುಮೋದನೆ ನೀಡಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ತಂಡ ಪ್ರಕಟವಾಗಿದ್ದರಿಂದ ಹಳೆಯ ತಂಡದಲ್ಲಿದ್ದ ಅನುಭವಿ ಬ್ಯಾಟರ್ ರಾಹುಲ್ ದಲಾಲ್ ಸೇರಿದಂತೆ ಹಲವು ಆಟಗಾರರು ಅತಂತ್ರರಾಗಿದ್ದಾರೆ.
​ರಾಹುಲ್ ದಲಾಲ್ ತಮ್ಮ ತೀವ್ರ ನಿರಾಸೆ ವ್ಯಕ್ತಪಡಿಸಿದ್ದು, “ನಾವು ಈಗಾಗಲೇ ಮೂರು ಸುತ್ತಿನ ಪಂದ್ಯಗಳನ್ನು ಮುಗಿಸಿ, ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತಿದ್ದೆವು. ಶುಕ್ರವಾರ ಕೋರ್ಟ್ ತೀರ್ಪು ಬಂದಿದ್ದರೂ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ನಾವು ಶನಿವಾರ ಮತ್ತು ಭಾನುವಾರವೂ ಮೈದಾನದಲ್ಲಿ ಬೆವರು ಹರಿಸಿದ್ದೆವು. ಆದರೆ ಭಾನುವಾರ ನಾವು ಅಭ್ಯಾಸ ಮುಗಿಸಿ ಹೊರಬರುತ್ತಿದ್ದಂತೆ, ಅದೇ ಮೈದಾನದಲ್ಲಿ ಬೇರೊಂದು ಹೊಸ ತಂಡ ಅಭ್ಯಾಸ ಮಾಡಲು ಬಂದಿರುವುದನ್ನು ನೋಡಿ ನಮಗೆ ಆಘಾತವಾಯಿತು. ಪಂದ್ಯಕ್ಕೆ ಇಷ್ಟು ಹತ್ತಿರದಲ್ಲಿ ಇಂತಹ ದೊಡ್ಡ ಬದಲಾವಣೆ ಆಗುತ್ತದೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯೇಂದ್ರ ಹೇಳಿಕೆಗೆ ಖಂಡನೆ: ಬಿಜೆಪಿ ನಾಯಕರ ನಿವಾಸ, ಕಚೇರಿ ಬಳಿ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ಈಗ ಪೋಸ್ಟರ್...

ಅಲಿಗಢ ಮುಸ್ಲಿಂ ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ನಶ್ರಾ ನಯೀಮ್; 40 ವರ್ಷಗಳ ಬಳಿಕ ಒಲಿದ ಉಪಾಧ್ಯಕ್ಷ ಸ್ಥಾನ

ಉತ್ತರ ಪ್ರದೇಶದ ಪ್ರತಿಷ್ಠಿತ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ವಿದ್ಯಾರ್ಥಿ ಸಂಘದ...

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್ ಅಗೆದು ಕೊಟ್ಟ ‘ಮ್ಯಾಜಿಕ್ ಸಂಜೀವಿನಿ’

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ...

ಅಪರಾಧ ಹಿನ್ನೆಲೆ ಜಾಮೀನು ನೀಡಲು ಸಕಾರಾತ್ಮಕ ಅಂಶವಲ್ಲ: ಸುಪ್ರೀಂ ಕೋರ್ಟ್

ಆರೋಪಿಯೋರ್ವನ ಅಪರಾಧ ಹಿನ್ನೆಲೆಯನ್ನು ಆತನಿಗೆ ಜಾಮೀನು ನೀಡಲು ಯಾವುದೇ ಕಾರಣಕ್ಕೂ 'ಸಕಾರಾತ್ಮಕ'...