ಅಂಡರ್ 19 ವಿಶ್ವಕಪ್ | ಫೈನಲ್‌ನಲ್ಲಿ ಎಡವಿದ ಭಾರತ; ಟ್ರೋಫಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

Date:

ಅಂಡರ್ 19 ವಿಶ್ವಕಪ್ ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ ಟೀಂ ಇಂಡಿಯಾ ಕಿರಿಯರ ತಂಡ ಫೈನಲ್‌ನಲ್ಲಿ ಎಡವಿತು. ಕಳೆದ ವರ್ಷ ಭಾರತದ ಹಿರಿಯರ ತಂಡದ ಸೋಲು ಇಲ್ಲಿ ಮರುಕಳಿಸಿತು. 79 ರನ್‌ಗಳಿಂದ ಗೆಲುವು ಸಾಧಿಸಿದ ಆಸೀಸ್ 4ನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಆಸ್ಟ್ರೇಲಿಯಾ ನೀಡಿದ 254 ರನ್‌ಗಳ ಸವಾಲವನ್ನು ಬೆನ್ನಟ್ಟಿದ ಭಾರತದ ಕಿರಿಯರ ಪಡೆ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು.

ಕೊನೆಯ ಗಳಿಗೆಯಲ್ಲಿ 42 ರನ್‌ ಬಾರಿಸಿದ ಮುರುಗನ್‌ ಅಭಿಷೇಕ್‌ ಮಿಂಚಿದ್ದು ಬಿಟ್ಟರೆ ಆರಂಭಿಕ ಆಟಗಾರ ಆದರ್ಶ್ ಸಿಂಗ್ 47, ಹಾಗೂ ಮುಶೀರ್ ಖಾನ್ 22 ರನ್‌ ಗಳಿಕೆಯೆ ಟೀಂ ಇಂಡಿಯಾ ಆಟಗಾರರ ವೈಯಕ್ತಿಕ ಹೆಚ್ಚಿನ ಮೊತ್ತವಾಗಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಬಿಟ್ಟರೆ ಉಳಿದ ಆಟಗಾರರು 10ರ ಗಡಿ ದಾಟಲು ವಿಫಲರಾದರು. ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಟವಾಡಿದ್ದ ನಾಯಕ ಉದಯ್‌ ಸಹಾರನ್‌ 8, ಸಚಿನ್‌ ದಾಸ್‌ 9 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿ ನಿರಾಸೆ ಮೂಡಿಸಿದರು. ಎರಡು ಶತಕ ಬಾರಿಸಿದ್ದ ಮುಶೀರ್ ಖಾನ್ ಕೂಡ 22 ರನ್‌ಗಳಿಗೆ ಬೌಲ್ಡ್‌ ಆದರು.

ಇದನ್ನೂ ಓದಿಪ್ರಧಾನಿ ಮೋದಿ ಭಾಷಣದಲ್ಲೇ ಉಳಿದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್

ಉತ್ತಮವಾಗಿ ಬೌಲಿಂಗ್‌ ಮಾಡಿದ ಮಾಹ್ಲಿ ಬಿಯರ್ಡಮನ್ 15/3 ಹಾಗೂ ರಾಫ್ ಮ್ಯಾಕ್ಮಿಲನ್ 33/3, ಕ್ಯಾಲಮ್ ವಿಡ್ಲರ್ 35/2 ವಿಕೆಟ್ ಕಬಳಿಸಿ ಆಸೀಸ್ ಗೆಲುವಿನ ರೂವಾರಿಗಳಾದರು.

ಆಸೀಸ್ ಪರ ಹರ್ಜಸ್ ಸಿಂಗ್ ಅರ್ಧ ಶತಕ

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್‌ ಕಲೆ ಹಾಕಿತು. ಆಸೀಸ್ ಪರ ಭಾರತೀಯ ಮೂಲದ ಹರ್ಜಸ್ ಸಿಂಗ್ ಅರ್ಧ ಶತಕ ಮಿಂಚಿದರು. 64 ಎಸೆತಗಳಲ್ಲಿ 3 ಮೌಂಡರಿ ಹಾಗೂ 3 ಸಿಕ್ಸರ್‌ನೊಂದಿಗೆ 55 ರನ್‌ ಬಾರಿಸಿದರು.

ಇನ್ನುಳಿದಂತೆ ನಾಯಕ ಹಗ್‌ ವೈಬ್ಜನ್‌(48), ಆರಂಭಿಕ ಆಟಗಾರ ಹ್ಯಾರಿ ಡಿಕ್ಸನ್(42), ಆಲಿವರ್ ಪೀಕ್ (32) ರನ್‌ ಗಳಿಸಿ ತಂಡ 250ರ ಗಡಿ ದಾಟಲು ಕಾರಣರಾದರು.

ಟೀಂ ಇಂಡಿಯಾ ಪರ ರಾಜ್‌ ಲಿಂಬಾನಿ 38/3, ನಮನ್‌ ತಿವಾರಿ 55/2, ಸುಮಯ್‌ ಪಾಂಡೆ ಹಾಗೂ ಮುರುಗನ್ ಅಭಿಷೇಕ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4ನೇ ಟೆಸ್ಟ್‌ | ಇಂಗ್ಲೆಂಡ್‌ ಸ್ಪಿನ್‌ ದಾಳಿಗೆ ನಲುಗಿದ ಟೀಮ್ ಇಂಡಿಯಾ; ಯಶಸ್ವಿ ಜೈಸ್ವಾಲ್ ಹೊಸ ದಾಖಲೆ

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ...

ನಾಲ್ಕನೇ ಟೆಸ್ಟ್ | ರೂಟ್ ಶತಕ, ಇಂಗ್ಲೆಂಡ್ 302/7; ಸ್ಪಿನ್ನರ್ ಅಶ್ವಿನ್ ಮತ್ತೊಂದು ಮೈಲಿಗಲ್ಲು

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್...

ನಾಲ್ಕನೇ ಟೆಸ್ಟ್ | ಚೊಚ್ಚಲ ಪಂದ್ಯದಲ್ಲೇ ಆಕಾಶ್‌ ದೀಪ್‌ಗೆ 3 ವಿಕೆಟ್: ಇಂಗ್ಲೆಂಡ್‌ನ 5 ವಿಕೆಟ್ ಪತನ

ಭಾರತ - ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ರಾಂಚಿಯ ಜೆಎಸ್‌ಸಿಎ...