ಐಪಿಎಲ್‌ 2023 | ಹೈದರಾಬಾದ್‌ ತಂಡಕ್ಕೆ ಮೂರನೇ ಗೆಲುವಿನ ಸಂಭ್ರಮ

Date:

ಐಪಿಎಲ್‌ 16ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮೂರನೇ ಗೆಲುವಿನ ಸಂಭ್ರಮವನ್ನಾಚರಿಸಿದೆ.

ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಚ್‌, ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 9 ರನ್‌ಗಳ ಅಂತರದಲ್ಲಿ ಮಣಿಸಿತು.

197 ರನ್‌ ಚೇಸಿಂಗ್‌ ವೇಳೆ ಒಂದು ಹಂತದಲ್ಲಿ ಡೆಲ್ಲಿ 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ 111 ರನ್‌ಗಳಿಸುವ ಮೂಲಕ ಗೆಲುವಿನತ್ತ ಮುನ್ನಡೆದಿತ್ತು. ನಾಯಕ ವಾರ್ನರ್‌ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಒಪ್ಪಿಸಿದರೂ ಸಹ, ಫಿಲ್‌ ಸಾಲ್ಟ್‌ ಮತ್ತು ಮಿಚೆಲ್‌ ಮಾರ್ಶ್‌ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಲ್ಟ್‌ 59 (35 ಎಸೆತ, 4×9) ಮತ್ತು ಮಾರ್ಶ್‌ 63 ರನ್‌ (39 ಎಸೆತ 4×1 6×6) ವಿಕೆಟ್‌ ಪತನವಾಗುತ್ತಲೇ ಡೆಲ್ಲಿ ಕುಸಿತ ಆರಂಭವಾಗಿತ್ತು. ಕೊನೆಯಲ್ಲಿ ಎಂದಿನಂತೆ ಅಕ್ಷರ್‌ ಪಟೇಲ್‌ ಬಿರುಸಿನ ಬ್ಯಾಟಿಂಗ್‌ (29 ರನ್‌ 14 ಎಸೆತ) ನಡೆಸಿದರಾದರೂ ತಂಡವನ್ನು ಸೋಲಿನಂಚಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಬಾರಿಯ ಫ್ಲೇಆಫ್​ ಹಾದಿ ಇನ್ನಷ್ಟು ಕಠಿಣವಾಗಿದೆ. 8 ಪಂದ್ಯಗಳನ್ನಾಡಿರುವ ಡೆಲ್ಲಿ, ಕೇವಲ 2 ಗೆಲುವು ಕಂಡಿದ್ದು, 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಈ ಸುದ್ದಿ ಓದಿದ್ದೀರಾ?: ರಾಯಲ್ಸ್‌ ಎದುರು ನಡೆಯದ ಕಿಂಗ್ಸ್‌ ಆಟ; ಮತ್ತೆ ಸೋತ ಚೆನ್ನೈ

ಬೌಲಿಂಗ್‌ನಲ್ಲೂ ಮಿಂಚಿದ್ದ ಮಿಚೆಲ್‌ ಮಾರ್ಶ್‌, 4 ಓವರ್‌ಗಳಲ್ಲಿ 27 ರನ್‌ ನೀಡಿ 4 ವಿಕೆಟ್‌ ಪಡೆದಿದ್ದರು. ಅದರಲ್ಲೂ 1 ಓವರ್‌ ಮೇಡನ್‌ ಆಗಿತ್ತು ಎಂಬುದು ವಿಶೇಷ. ಅರ್ಹವಾಗಿಯೇ ಮಾರ್ಶ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌, ಆರಂಭಿಕ ಅಭಿಶೇಕ್‌ ಶರ್ಮಾ ಮತ್ತು ಹೆನ್ರಿಕ್‌ ಕ್ಲಾಸೆನ್‌ ಗಳಿಸಿದ ಅರ್ಧಶತಕಗಳ ನೆರವಿನಿಂದ 6 ವಿಕೆಟ್‌ ನಷ್ಟದಲ್ಲಿ 196 ರನ್‌ಗಳಿಸಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ – ರಾಜಸ್ಥಾನ್ ಐಪಿಎಲ್ ಪಂದ್ಯ; ಚಾಹಲ್ – ಜೈಸ್ವಾಲ್ ವಿನೂತನ ದಾಖಲೆ

ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ...

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...