ಐಪಿಎಲ್‌ 2023 | ಲಕ್ನೊ ವಿರುದ್ಧ ಗುಜರಾತ್‌ ನಿರಾಯಾಸದ ಗೆಲುವು

Date:

ಐಪಿಎಲ್ 16ನೇ ಆವೃತ್ತಿಯಲ್ಲಿ ಹಾರ್ದಿಕ್​ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ 4ನೇ ಗೆಲುವು ದಾಖಲಿಸಿದೆ.

ಲಕ್ನೋದ ಏಕಾನಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್‌ ನಡುವೆ ಹಣಹಣಿ ನಡೆದಿತ್ತು. ಕಡಿಮೆ ರನ್ ಗಳಿಸಿದ್ದರೂ, ಲಕ್ನೋ ತಂಡಕ್ಕೆ ಆ ಮೊತ್ತವನ್ನು ಮೀರಲು ಅವಕಾಶ ನೀಡಿದ ಗುಜರಾತ್ ತಂಡ ಗೆಲವು ಸಾಧಿಸಿದೆ.

ಮೊದಲಿಗೆ ಬ್ಯಾಂಟಿಂಗ್‌ ಮಾಡಿದ ಗುಜರಾತ್ ತಂಡ 6 ವಿಕೆಟ್ ನಷ್ಟದೊಂದಿಗೆ 135 ರನ್‌ ಗಳಿಸಿತ್ತು. ಆ ಮೊತ್ತದ ಬೆನ್ನತ್ತಿದ ಲಕ್ನೊ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದೊಂದಿಗೆ 126 ರನ್ ಗಳಿಸಿ ಸೋಲುಂಡಿತು.

ಗುಜರಾತ್‌ ತಂಡದ ಹಾರ್ದಿಕ್ ಪಾಂಡ್ಯ 66 ರನ್‌ಗಳಿಸಿ ಅರ್ಧ ಶತಕ ಸಿಡಿಸಿದರೆ, ವ್ರಿಡ್ಡಿಮನ್ ಸಹ 47 ರನ್‌ಗಳಿಸಿ, ಅರ್ಧ ಶತಕ ಬಾರಿಸುವುದಕ್ಕೂ ಮುನ್ನವೇ ವಿಕೆಟ್‌ ನೀಡಿದರು.

ಲಕ್ನೊ ತಂಡದ ನಾಯಕ ಕೆ.ಎಲ್‌ ರಾಹುಲ್‌ 68 ರನ್‌ ಗಳಿಸಿ ಅರ್ಧ ಶತಕ ಬಾರಿಸಿದರು. ಅವರೊಬ್ಬರನ್ನು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್‌ಮನ್‌ ಕೂಡ ಅರ್ಧ ಶತಕದ ಸಮೀಪಕ್ಕೂ ರನ್‌ ಗಳಿಸಲಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಸಿಸಿ ಏಕದಿನ ರ್‍ಯಾಂಕಿಂಗ್ | ವಿಶ್ವದ ನಂಬರ್ ಒನ್ ಬೌಲರ್ ಆಗಿ ವೇಗಿ ಮೊಹಮ್ಮದ್ ಸಿರಾಜ್

ಕಳೆದ ರವಿವಾರ ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್...

ಏಷ್ಯಾ ಕಪ್ ಫೈನಲ್ | ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿದ ಸಿರಾಜ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | ಸಿರಾಜ್ ಮ್ಯಾಜಿಕ್; 8ನೇ ಬಾರಿಗೆ ಟೀಮ್ ಇಂಡಿಯಾ ಚಾಂಪಿಯನ್

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ...

ಏಷ್ಯಾ ಕಪ್ ಫೈನಲ್ | 50 ರನ್‌ಗೆ ಆಲೌಟಾದ ಶ್ರೀಲಂಕಾ!

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ...