ಗುಜರಾತ್‌ನ ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಶತಕದ ನೆರವಿನಿಂದ 322 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
2ನೇ ದಿನದ ಮುಕ್ತಾಯದ ವೇಳೆ ನಿನ್ನೆ ಇಂಗ್ಲೆಂಡ್ ಬ್ಯಾಟಿಂಗ್ ಮಾಡುತ್ತಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ, ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್, ಮೂರನೇ ದಿನ 319 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ನಿನ್ನೆಯ ರನ್‌ಗೆ 112 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಆ ಮೂಲಕ ಟೀಮ್ ಇಂಡಿಯಾ 126 ರನ್‌ಗಳ ಮುನ್ನಡೆ ಪಡೆದಿತ್ತು.
End of a magnificent day with the bat & ball! 🙌#TeamIndia reach 196/2, with a lead of 322 runs
Scorecard ▶️ https://t.co/FM0hVG5X8M#INDvENG | @IDFCFIRSTBank pic.twitter.com/y30QqTGtk4
— BCCI (@BCCI) February 17, 2024
126 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ, ಮೂರನೇ ದಿನದಾಟದ ಮುಕ್ತಾಯದ ವೇಳೆ 196ಕ್ಕೆ 2 ವಿಕೆಟ್ ಕಳೆದುಕೊಂಡಿದೆ. ಆ ಮೂಲಕ ಒಟ್ಟು 322 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
A leap of joy to celebrate his second century of the series 🙌
Well played, Yashasvi Jaiswal 👏👏#TeamIndia | #INDvENG | @ybj_19 | @IDFCFIRSTBank pic.twitter.com/pdlPhn5e3N
— BCCI (@BCCI) February 17, 2024
ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅವರು ಇನ್ನಿಂಗ್ಸ್ ಆರಂಭಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಆಸರೆಯಾಗಿದ್ದ ನಾಯಕ ರೋಹಿತ್ ಶರ್ಮಾ, ಜೋ ರೂಟ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು, 28 ಎಸೆತಗಳಲ್ಲಿ 19 ರನ್ ಗಳಿಸಿ ಔಟಾದರು.
ಇದನ್ನು ಓದಿದ್ದೀರಾ? ಮೂರನೇ ಟೆಸ್ಟ್ | ಟೀಮ್ ಇಂಡಿಯಾದ ಬಿಗು ಬೌಲಿಂಗ್‌ಗೆ ತತ್ತರಿಸಿದ ಇಂಗ್ಲೆಂಡ್: 126 ರನ್‌ಗಳ ಬೃಹತ್ ಮುನ್ನಡೆ
ಆ ಬಳಿಕ ಜೈಸ್ವಾಲ್‌ಗೆ ಜೋಡಿಯಾದ ಶುಭ್‌ಮನ್ ಗಿಲ್ ಉತ್ತಮ ಜೊತೆಯಾಟ ನಡೆಸಿದರು. ಈ ಜೋಡಿಯು 155 ರನ್‌ಗಳ ಜೊತೆಯಾಟ ನಡೆಸಿತು.
ಗಾಯಾಳಾಗಿ ಮೈದಾನ ತೊರೆದ ಶತಕವೀರ ಜೈಸ್ವಾಲ್
ಶತಕ ಗಳಿಸಿದ್ದ ವೇಳೆ ನಡೆಸಿದ ಸಂಭ್ರಮಾಚರಣೆಯ ವೇಳೆ ಪಕ್ಕೆಲುಬುವಿನಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಯಶಸ್ವಿ ಜೈಸ್ವಾಲ್, ಗಾಯದಿಂದ ಮೈದಾನ ತೊರೆಯಬೇಕಾಯಿತು. ಮೈದಾನ ತೊರೆಯುವುದಕ್ಕೂ ಮುನ್ನ 133 ಎಸೆತಗಳನ್ನು ಎದುರಿಸಿದ್ದ ಜೈಸ್ವಾಲ್ 5 ಸಿಕ್ಸ್ ಹಾಗೂ 9 ಬೌಂಡರಿಯ ನೆರವಿನಿಂದ 103 ರನ್ ಗಳಿಸಿದ್ದರು.
ಆ ಬಳಿಕ ಕ್ರೀಸ್‌ಗೆ ಬಂದ ಯುವ ಬ್ಯಾಟರ್ ರಜತ್ ಪಾಟೀದಾರ್, ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ವಿಫಲರಾದರು. ಸ್ಪಿನ್ನರ್ ಟಾಮ್ ಹಾರ್ಟ್‌ಲೀ ಎಸೆತದಲ್ಲಿ ರೆಹಾನ್ ಅಹ್ಮದ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಗಳಿಸಿ, ಔಟಾಗಿದ್ದರು. ಶೂನ್ಯ ಸುತ್ತುವ ಮೂಲಕ ಬ್ಯಾಟಿಂಗ್‌ನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಪಾಟೀದಾರ್ ಮತ್ತೊಮ್ಮೆ ವಿಫಲರಾದರು. ಬಳಿಕ ನೈಟ್ ವಾಚ್‌ಮೆನ್ ಆಗಿ ಬೌಲರ್ ಕುಲ್‌ದೀಪ್ ಯಾದವ್ ಕ್ರೀಸ್‌ಗೆ ಆಗಮಿಸಿದರು.
ದಿನದಾಟದ ಅಂತ್ಯದ ವೇಳೆಗೆ ಅರ್ಧಶತಕ ಗಳಿಸಿರುವ ಶುಭ್‌ಮನ್ ಗಿಲ್(65 ರನ್) ಹಾಗೂ ಕುಲ್‌ದೀಪ್ ಯಾದವ್ ಮೂರು ರನ್ ಗಳಿಸಿದ್ದು, ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ಟೀಮ್ ಇಂಡಿಯಾ 196 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.
ಇಂಗ್ಲೆಂಡ್ ಪರ ಸ್ಪಿನ್ನರ್ ಟಾಮ್ ಹಾರ್ಟ್‌ಲೀ ಹಾಗೂ ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ:
ಟೀಮ್ ಇಂಡಿಯಾ: ಮೊದಲ ಇನ್ನಿಂಗ್ಸ್: 445ಕ್ಕೆ ಆಲೌಟ್
ಇಂಗ್ಲೆಂಡ್: ಮೊದಲ ಇನ್ನಿಂಗ್ಸ್: 319ಕ್ಕೆ ಆಲೌಟ್
ಟೀಮ್ ಇಂಡಿಯಾಗೆ 126 ರನ್‌ಗಳ ಮುನ್ನಡೆ
ಟೀಮ್ ಇಂಡಿಯಾ: 2ನೇ ಇನ್ನಿಂಗ್ಸ್: 196ಕ್ಕೆ 2 ವಿಕೆಟ್
322 ರನ್‌ಗಳ ಮುನ್ನಡೆ