ಸಂತೋಷ್ ಟ್ರೋಫಿ | 54 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ

Date:

  • ಕಿಂಗ್‌ ಫಹದ್‌ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯ
  • ಮೇಘಾಲಯ ವಿರುದ್ಧ 3-2 ಅಂತರದಿಂದ ಗೆದ್ದ ಕರ್ನಾಟಕ

ಕರ್ನಾಟಕದ ಫುಟ್‌ಬಾಲ್‌ ಅಭಿಮಾನಿಗಳ ಐದು ದಶಕಗಳ ಕನಸು ಕೊನೆಗೂ ನನಸಾಗಿದೆ. ಪ್ರತಿಷ್ಠಿತ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಕರ್ನಾಟಕ, 54 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟಕ್ಕೇರಿದೆ.

ಸೌದಿ ಅರೆಬಿಯದ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್‌ ಫಹದ್‌ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ 76ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್‌ ಪಂದ್ಯದಲ್ಲಿ ಕರ್ನಾಟಕ, ಮೇಘಾಲಯವನ್ನು 3-2 ಗೋಲುಗಳ ಅಂತರದಿಂದ ಮಣಿಸಿ ಸಂಭ್ರಮದಲ್ಲಿ ತೇಲಾಡಿತು. ಇದರೊಂದಿಗೆ ವಿದೇಶಿ ನೆಲದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಯೂ ಕರ್ನಾಟಕ ತಂಡದ್ದಾಯಿತು.

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್‌) ಸೌದಿ ಅರೆಬಿಯ ಫುಟ್‌ಬಾಲ್ ಫೆಡರೇಶನ್‌ ಜೊತೆ ಎಂಒಯುಗೆ ಸಹಿ ಹಾಕಿದೆ. ಈ ಹಿನ್ನಲೆಯಲ್ಲಿ ಈ ಬಾರಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳನ್ನು ಸೌದಿ ಮೈದಾನಗಳಿಗೆ ಸ್ಥಳಾಂತರಿಸಲಾಗಿತ್ತು.

ಪಂದ್ಯ ಪ್ರಾರಂಭವಾಗಿ ಎರಡೇ ನಿಮಿಷದಲ್ಲಿ ಕರ್ನಾಟಕ, ಎಂ ಸುನಿಲ್ ಕುಮಾರ್ ಮೂಲಕ ಗೋಲಿನ ಖಾತೆ ತೆರೆದಿತ್ತು. ಬಳಿಕ 19ನೇ ನಿಮಿಷದಲ್ಲಿ ಬೆಕಿ ಓರಮ್  ಹಾಗೂ ಮೊದಲಾರ್ಧದ ಅಂತಿಮ ನಿಮಿಷದಲ್ಲಿ ರಾಬಿನ್ ಯಾದವ್ ಗೋಲು ಗಳಿಸಿದ್ದರು. ಮತ್ತೊಂದೆಡೆ ಮೊದಲ ಬಾರಿಗೆ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್‌ ಪ್ರವೇಶಿಸಿದ್ದ ಮೇಘಾಲಯ ಪರ ಬ್ರೋಲಿಂಗ್ಟನ್ ವಾರ್ಲರ್‌ಪಿಹ್ (9ನೇ ನಿಮಿಷ) ಮತ್ತು 60ನೇ ನಿಮಿಷದಲ್ಲಿ ಶೀನ್ ಸ್ಟೀವನ್ಸನ್ ಗೋಲು ಗಳಿಸಿದ್ದರು. ಹೆಚ್ಚುವರಿ ಸಮಯದಲ್ಲಿ ಫಿಗೋ ಸಿಂಡೈ ಅವರ ಸುಂದರ ಪ್ರಯತ್ನವು ಗೋಲ್‌ ಪೋಸ್ಟ್‌ಗೆ ಬಡಿಯಿತಾದರೂ ಗೋಲು ದಾಖಲಾಗಲಿಲ್ಲ.

ಈ ಸುದ್ದಿ ಓದಿದ್ದೀರಾ?: ಐಎಸ್‌ಎಲ್‌; ಸುನಿಲ್‌ ಛೆಟ್ರಿ ಗೋಲಿನ ಬಳಿಕ ಹೈಡ್ರಾಮಾ, ಪಂದ್ಯದ ನಡುವೆಯೇ ಮೈದಾನ ತೊರೆದ ಕೇರಳ ಬ್ಲಾಸ್ಟರ್ಸ್

Suprabha
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್

ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟ ಬಗ್ಗೆ ಮೊದಲ ಬಾರಿಗೆ  ಆಸೀಸ್ ಕ್ರಿಕೆಟಿಗ...

ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ

ರಾಹುಲ್‌ ದ್ರಾವಿಡ್‌ ಅವರನ್ನು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್‌...

ಬೈಜೂಸ್‌ನಿಂದ 160 ಕೋಟಿ ಬಾಕಿ: ಕಂಪನಿ ಕಾನೂನುಗಳ ನ್ಯಾಯಮಂಡಳಿಯ ಮೊರೆಹೋದ ಬಿಸಿಸಿಐ

ಒಂದರ ನಂತರ ಒಂದಾಗಿ ಹಲವಾರು ಸಮಸ್ಯೆಗಳಲ್ಲಿ ಸಿಲುಕುತ್ತಾ ಬರುತ್ತಿರುವ ಬೈಜೂಸ್ ಈಗ...

ಟಿ20 | ರೋಚಕ ಪಂದ್ಯದಲ್ಲಿ ಶತಕದ ಮೂಲಕ ಪಂದ್ಯ ಗೆಲ್ಲಿಸಿದ ಮ್ಯಾಕ್ಸ್‌ವೆಲ್

ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್...