- ರವಾಂಡ ರಾಜಧಾನಿ ಕಿಗಾಲಿಯಲ್ಲಿ ನಡೆದ ಸಭೆ
- 2027ರವರೆಗೆ ಇನ್ಫಾಂಟಿನೋ ಅಧಿಕಾರ ಅವಧಿ
ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ, ಫಿಫಾದ ಅಧ್ಯಕ್ಷರಾಗಿ ಗಿಯಾನಿ ಇನ್ಫಾಂಟಿನೋ ಮರು ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಫಿಫಾ ಕಾಂಗ್ರೆಸ್‌ನಲ್ಲಿ 211 ಸದಸ್ಯರು ಭಾಗವಹಿಸಿದ್ದು, ಸ್ವಿಜರ್‌ಲ್ಯಾಂಡ್‌ನ ವಕೀಲರಾದ ಇನ್ಫಾಂಟಿನೋ ಅವಿರೋಧವಾಗಿ ಆಯ್ಕೆಯಾದರು. 52 ವರ್ಷದ ಗಿಯಾನಿ 2027ರವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ರವಾಂಡ ರಾಜಧಾನಿ ಕಿಗಾಲಿಯಲ್ಲಿ ನಡೆದ ಸಭೆಯ ಬಳಿಕ ಪ್ರತಿಕ್ರಿಯಿಸಿದ ಗಿಯಾನಿ ಇನ್ಫಾಂಟಿನೋ, “ನನ್ನನ್ನು ಇಷ್ಟಪಡುವವರು ಮತ್ತು ನನ್ನನ್ನು ಧ್ವೇಷಿಸುವವರ ಬಳಿ ಒಂದು ಮಾತನ್ನು ಹೇಳಲು ಇಚ್ಛಿಸುತ್ತೇನೆ. ಅದೇನೆಂದರೆ, ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಫಿಫಾದ ನೂತನ ನಿಯಮಾವಳಿಗಳ ಪ್ರಕಾರ ಹೊಸ ಅಧ್ಯಕ್ಷರ ಅಧಿಕಾರವಧಿ 3 ವರ್ಷಗಳಾಗಿರಲಿದೆ.
Gianni Infantino has been elected FIFA President for the 2023-2027 term of office by acclamation.#FIFACongress pic.twitter.com/akzQV0IMNO
— FIFA (@FIFAcom) March 16, 2023
ಕತಾರ್ ವಿಶ್ವಕಪ್ ಆತಿಥ್ಯ ಪಡೆಯುವಲ್ಲಿ ಗಿಯಾನಿ ಇನ್ಫಾಂಟಿನೋ ಸಹಾಯ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ವಲಸೆ ಕಾರ್ಮಿಕರು, ಮಹಿಳೆಯರು ಹಾಗೂ ಎಲ್‌ಜಿಬಿಟಿಕ್ಯೂ ಸಮುದಾಯದ ಕುರಿತಾಗಿ ಕತಾರ್ ತೆಗದುಕೊಂಡ ನಿರ್ಧಾರಗಳ ವಿರುದ್ಧವೂ ಟೀಕೆ ವ್ಯಕ್ತವಾಗಿತ್ತು. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಕತಾರ್ ಮತ್ತು ಫಿಫಾ ಅದ್ಧೂರಿ ಮತ್ತು ಯಶಸ್ವಿಯಾಗಿ ವಿಶ್ವಕಪ್ ಆಯೋಜಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿತ್ತು. ಇನ್ಫಾಂಟಿನೋ ಅವಧಿಯಲ್ಲಿ ಫಿಫಾದ ಆದಾಯದಲ್ಲೂ ಭಾರಿ ಏರಿಕೆಯಾಗಿದೆ. 2022ರಲ್ಲಿ ಕೊನೆಗೊಳ್ಳುವ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ $7.5 ಶತಕೋಟಿ ಆದಾಯ ಗಳಿಸಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಇದು $11 ಶತಕೋಟಿ ದಾಟಲಿದೆ ಎಂದು ಇನ್ಫಾಂಟಿನೋ ಘೋಷಿಸಿದ್ದಾರೆ.
The AIFF & the #IndianFootball ⚽ community congratulate Mr Gianni Infantino on being re-elected FIFA President for a second successive term at the FIFA Congress in Kigali, Rwanda 🇷🇼 pic.twitter.com/yWTbrf2Lgq
— Indian Football Team (@IndianFootball) March 16, 2023
2015ರಲ್ಲಿ ಅಧ್ಯಕ್ಷರಾಗಿದ್ದ ಸೆಪ್ ಬ್ಲಾಟರ್ ಅವರನ್ನು ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಫಾದ ನೈತಿಕ ಸಮಿತಿಯು ಎಂಟು ವರ್ಷಗಳ ಕಾಲ ನಿಷೇಧಿಸಿತ್ತು. ಇದರ ವಿರುದ್ಧ ಕ್ರೀಡಾ ನ್ಯಾಯಾಲಯದಲ್ಲಿ ಬ್ಲಾಟರ್ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತಗೊಂಡಿತ್ತು. ಬಳಿಕ ಗಿಯಾನಿ ಇನ್ಫಾಂಟಿನೋ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಮುಂದಿನ ಆವೃತ್ತಿಯ ಪುರುಷರ ವಿಶ್ವಕಪ್ 2026ರಲ್ಲಿ ಉತ್ತರ ಅಮೆರಿಕದಲ್ಲಿ ನಡೆಯಲಿದ್ದು, ಪ್ರಸ್ತುತ ಪಾಲ್ಗೊಳ್ಳುತ್ತಿರುವ ತಂಡಗಳ ಸಂಖ್ಯೆ 32ರಿಂದ 48ಕ್ಕೆ ಏರಿಕೆಯಾಲಿದೆ. ಮತ್ತೊಂದೆಡೆ ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿದ್ದು, ಮೊದಲ ಬಾರಿಗೆ 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.