ಎಫ್‌ಎ ಕಪ್‌ | 7ನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿದ ಮ್ಯಾಂಚೆಸ್ಟರ್‌ ಸಿಟಿ

Date:

  • 13 ಸೆಕೆಂಡ್‌ಗಳಲ್ಲೇ ದಾಖಲೆಯ ಗೋಲು!
  • ಎರಡು ಗೋಲು ದಾಖಲಿಸಿದ ಗುಂಡೋಗನ್‌

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ತಂಡ ಮ್ಯಾಂಚೆಸ್ಟರ್‌ ಸಿಟಿ, ಏಳನೇ ಬಾರಿಗೆ ಪ್ರತಿಷ್ಠಿತ ಫುಟ್ಬಾಲ್ ಅಸೋಸಿಯೇಷನ್ ಚಾಲೆಂಜ್ ಕಪ್ (ಎಫ್‌ಎ ಕಪ್‌) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

- Advertisement -

ಲಂಡನ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಫೈನಲ್‌ ಪಂದ್ಯದಲ್ಲಿ ಸಿಟಿ ತಂಡವು, ಬಲಿಷ್ಠ ಮಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿತು. ಕಳೆದ ವಾರವಷ್ಟೇ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ (ಇಪಿಲ್‌) ಚಾಂಪಿಯನ್‌ ಪಟ್ಟವನ್ನಲಂಕರಿಸಿದ್ದ ಸಿಟಿ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಗೆಲ್ಲುತ್ತಿರುವ ಎರಡನೇ ಪ್ರಶಸ್ತಿ ಇದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

13 ಸೆಕೆಂಡ್‌ಗಳಲ್ಲೇ ಗೋಲು!

ಫೈನಲ್‌ ಪಂದ್ಯ ಪ್ರಾರಂಭವಾಗಿ 13 ಸೆಕೆಂಡ್‌ ಕಳೆಯುವಷ್ಟರಲ್ಲಿಯೇ ಸಿಟಿ ತಂಡವು ಗೋಲಿನ ಖಾತೆ ತೆರೆದಿತ್ತು. ಸಿಟಿ ನಾಯಕ ಇಲ್ಕೇ ಗುಂಡೋಗನ್‌ ತಂಡಕ್ಕೆ ಆರಂಭದಲ್ಲೇ ಮುನ್ನಡೆ ತಂದುಕೊಟ್ಟಿದ್ದರು. ಎಫ್‌ಎ ಕಪ್‌ ಇತಿಹಾಸದಲ್ಲೇ ಅತಿ ಕಡಿಮೆ ಅವಧಿಯಲ್ಲಿ ದಾಖಲಾದ ಗೋಲು ಎಂಬ ದಾಖಲೆಗೂ ಇದು ಪಾತ್ರವಾಯಿತು.

33ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಶೂಟೌಟ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಯುನೈಟೆಡ್ ಮಿಡ್‌ಫೀಲ್ಡರ್ ಬ್ರೂನೋ ಫೆರ್ನಾಂಡಿಸ್, ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು.

ದ್ವಿತಿಯಾರ್ಧದ 51ನೇ ನಿಮಿಷದಲ್ಲಿ ಕೆವಿನ್ ಡಿ ಬ್ರೂಯ್ನ್‌ ಫ್ರೀ ಕಿಕ್‌ ಮೂಲಕ ಚೆಂಡನ್ನು ಎಡಗಾಲಿನಿಂದ ಒದ್ದ ಗುಂಡೋಗನ್‌, ಯುನೈಟೆಡ್  ಇಬ್ಬರು ಡಿಫೆಂಡರ್‌ ಮತ್ತು ಗೋಲ್‌ ಕೀಪರ್‌ ಡೇವಿಡ್ ಡಿ ಗಿಯಾರನ್ನು ವಂಚಿಸಿ ಗೋಲು ಬಲೆಯೊಳಕ್ಕೆ ಸೇರಿಸಲು ಯಶಸ್ವಿಯಾದರು.

ಇದಾದ ಬಳಿಕ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಸಿಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎರಡೂ ಗೋಲನ್ನು ಗಳಿಸಿದ ಗುಂಡೋಗನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮೇ 10, ಶನಿವಾರದಂದು ಇಸ್ತಾನ್‌ಬುಲ್‌ನ ಅಟಾಟುರ್ಕ್ ಒಲಿಂಪಿಕ್ ಸ್ಟೇಡಿಯಂನಲ್ಲಿ ನಡೆಯುವ ಯುಇಎಫ್ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಇಟಾಲಿಯನ್‌ ಕ್ಲಬ್‌ ಇಂಟರ್‌ ಮಿಲಾನ್‌ ತಂಡವನ್ನು ಪೆಪ್‌ ಗಾರ್ಡಿಯೋಲ ಸಾರಥ್ಯದ ಮ್ಯಾಂಚೆಸ್ಟರ್‌ ಸಿಟಿ ಎದುರಿಸಲಿದೆ. ಮೊದಲ ಚಾಂಪಿಯನ್ಸ್ ಲೀಗ್ ಕಿರೀಟದ ನಿರೀಕ್ಷೆಯಲ್ಲಿರುವ ಸಿಟಿ ತಂಡಕ್ಕೆ ಇಂಟರ್‌ ಸುಲಭ ಸವಾಲಾಗುವ ನಿರೀಕ್ಷೆ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹ್ಯಾಟ್ರಿಕ್ ಗೆಲುವಿನ ಬೆನ್ನಲ್ಲೇ ನಾಯಕತ್ವಕ್ಕೆ ವಿದಾಯ: ದಿಟ್ಟ ನಿರ್ಧಾರದೊಂದಿಗೆ ನಿರ್ಗಮಿಸಿದ ಹರ್ಮನ್‌ಪ್ರೀತ್ ಕೌರ್

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಹರ್ಮನ್‌ಪ್ರೀತ್ ಕೌರ್...

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವ್ಯಕ್ತಿಗತ ಚಿನ್ನದ ಕೊರತೆ; ಒಲಿಂಪಿಕ್ಸ್‌ಗೆ ಎಚ್ಚರಿಕೆಯ ಗಂಟೆ

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ...