ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಇಲ್ಲ: ಬಡತನ ಮೆಟ್ಟಿ ನಿಂತು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ನೀರು ದಂಡಾ

Date:

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಸೇರಿದಂತೆ ಯಾವೊಂದು ಸೌಕರ್ಯವೂ ಇಲ್ಲ. ಕೈಯಲ್ಲಿ ಬಿಪಿಎಲ್ (BPL) ಕಾರ್ಡ್ ಹಿಡಿದು ಪಡಿತರ ತರಲು ಹೊರಟಿದ್ದ ಸುದೇಶ್ ದೇವಿ ಅವರ ಹಳೆಯ ಕೀಪ್ಯಾಡ್ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬರುತ್ತದೆ. ಆ ಕರೆಯಲ್ಲಿ “ಏಷ್ಯನ್ ಗೇಮ್ಸ್‌ನಲ್ಲಿ ನಿಮ್ಮ ಮಗಳು ನೀರು ಚಿನ್ನ ಗೆದ್ದಿದ್ದಾಳೆ” ಎಂಬ ಸುದ್ದಿ ಕೇಳಿ ಅವರು ಒಂದು ಕ್ಷಣ ಸ್ತಬ್ಧರಾಗುತ್ತಾರೆ. ಈ ಸುದ್ದಿ ನಿಜವೋ ಸುಳ್ಳೋ ಎಂದು ಖಚಿತಪಡಿಸಿಕೊಳ್ಳಲು ಊರವರನ್ನು ಕೇಳಿ, ಸುದ್ದಿ ನಿಜವೆಂದು ತಿಳಿದಾಗ ಆ ತಾಯಿಯ ಕಣ್ಣಲ್ಲಿ ಆನಂದಭಾಷ್ಪ!

- Advertisement -

ಹೌದು, ಇದು ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಮಹಿಳೆಯರ ಟ್ರ್ಯಾಪ್ ಶೂಟಿಂಗ್ (Trap Shooting) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಹರಿಯಾಣದ ಸಂಗತ್‌ಪುರ ಗ್ರಾಮದ ನೀರು ದಂಡಾ ಅವರ ಕಥೆ. ಈ ಐತಿಹಾಸಿಕ ಸಾಧನೆಯೊಂದಿಗೆ, ವೈಯಕ್ತಿಕ ಟ್ರ್ಯಾಪ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ನೀರು ಪಾತ್ರರಾಗಿದ್ದಾರೆ. ಇದು 1978ರಲ್ಲಿ ದಿವಂಗತ ರಣಧೀರ್ ಸಿಂಗ್ ಚಿನ್ನ ಗೆದ್ದ ನಂತರ, ಭಾರತಕ್ಕೆ ಈ ವಿಭಾಗದಲ್ಲಿ ಒಲಿದ ಮೊದಲ ಚಿನ್ನವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...

ಐಐಟಿಗಳ ಹೊಳೆಯುವ ಕ್ಯಾಂಪಸ್‌ನೊಳಗೆ ಮಡುಗಟ್ಟಿರುವ ಜಾತಿ ತಾರತಮ್ಯದ ಅಂಧಕಾರ

ದೇಶದ ಅತ್ಯುನ್ನತ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳು (IIT) ಕೇವಲ ತಾಂತ್ರಿಕ ಜ್ಞಾನದ ದೇಗುಲಗಳಾಗಿ ಉಳಿದಿಲ್ಲ; ಬದಲಾಗಿ ಮೀಸಲಾತಿ ಅಡಿಯಲ್ಲಿ ಪ್ರವೇಶ ಪಡೆಯುವ ದಲಿತ, ಆದಿವಾಸಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು...

ಈ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಕೇವಲ ಎರಡು ವಾರಗಳ ಹಿಂದೆಯಷ್ಟೇ ನೀರು ಅವರಿಗೆ H1N1 ಜ್ವರದ ಶಂಕೆ ವ್ಯಕ್ತವಾಗಿ ಭೋಪಾಲ್‌ನ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ದಾಖಲಾಗಿದ್ದರು. ಐದು ದಿನಗಳ ಕಾಲ ಕೇವಲ ದ್ರವಾಹಾರ ಸೇವಿಸಿ, ಸುಮಾರು ಮೂರುವರೆ ವಾರಗಳ ಕಾಲ ಅಭ್ಯಾಸದಿಂದ ದೂರವಿದ್ದರು. ಅವರು ಗೇಮ್ಸ್‌ನಲ್ಲಿ ಭಾಗವಹಿಸುವುದೇ ಅನುಮಾನವಾಗಿತ್ತು. ಆದರೂ ದೃತಿಗೆಡದ ಅವರು, ಪ್ರತಿಕೂಲ ಹವಾಮಾನ, ಬಿರುಗಾಳಿ, ಮಳೆಯ ನಡುವೆಯೂ ಏಕಾಗ್ರತೆ ಕಳೆದುಕೊಳ್ಳದೆ ಚಿನ್ನಕ್ಕೆ ಮುತ್ತಿಕ್ಕಿದರು.

ಅವರ ಈ ಸಾಹಸ ಆರಂಭವಾಗಿದ್ದು ಮನೆಯ ಸಮೀಪದ ಒಂದು ಕೆರೆಯ ಬಳಿ. 2018ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರ ಸಂಬಂಧಿ ಲಕ್ಷಯ್ ಶಿಯೋರಾನ್ ಅವರಿಂದ ಸ್ಫೂರ್ತಿ ಪಡೆದ ನೀರು, 2019ರಲ್ಲಿ ಭೋಪಾಲ್‌ನ ಮಧ್ಯಪ್ರದೇಶ ಶೂಟಿಂಗ್ ಅಕಾಡೆಮಿ ಸೇರಿದರು. ಆರಂಭದಲ್ಲಿ ಮನೆಯಲ್ಲಿ ಬಂದೂಕು ಖರೀದಿಸಲು ಹಣವಿರಲಿಲ್ಲ. ಆಗ ಲಕ್ಷಯ್ ಅವರೇ ತಮ್ಮ ರೈಫಲ್ ನೀಡಿ ಪ್ರೋತ್ಸಾಹಿಸಿದರು.

ಬಡತನದ ಬೇಗೆಯಲ್ಲಿ ಬೆಂದ ಈ ಕುಟುಂಬದ ಹೋರಾಟ ಅಸಾಮಾನ್ಯ. ಮಗಳ ಶೂಟಿಂಗ್ ಕನಸಿಗೆ ನೀರೆರೆಯಲು ತಾಯಿ ಸುದೇಶ್ ದೇವಿ ಎಮ್ಮೆ ಹಾಲು ಮಾರಿ ಹಣ ಹೊಂದಿಸುತ್ತಿದ್ದರು. “ನನಗೆ ಹೆಣ್ಣು ಮಕ್ಕಳೇ ಹುಟ್ಟಿದ್ದಾರೆ ಎಂಬ ಬಗ್ಗೆ ಎಂದಿಗೂ ಬೇಸರವಿಲ್ಲ. ನನ್ನ ಮಗಳು ‘ಅಮ್ಮಾ, ಜಗತ್ತು ಏನೇ ಹೇಳಿದರೂ ನನ್ನ ಮೇಲೆ ನಂಬಿಕೆ ಇಡು’ ಎನ್ನುತ್ತಿದ್ದಳು. ಇಂದು ಅವಳ ಸಾಧನೆ ಕಂಡು ಹೆಮ್ಮೆಯಾಗುತ್ತಿದೆ” ಎನ್ನುತ್ತಾರೆ ಸುದೇಶ್.

ಸಾಮಾಜಿಕ ಕಟ್ಟುಪಾಡುಗಳಿರುವ ‘ಖಾಪ್’ (Khap) ಪ್ರದೇಶದಿಂದ ಬಂದು ಈ ಸಾಧನೆ ಮಾಡಿರುವ ನೀರು, ತನ್ನ ಕುಟುಂಬಕ್ಕೆ ಒಂದು ಸ್ವಂತ ಮನೆ ಕಟ್ಟಿಸಿಕೊಡುವವರೆಗೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಇಂದು ಅವಳ ಗೆಲುವು ಇಡೀ ಗ್ರಾಮಕ್ಕೆ ಹಬ್ಬದ ವಾತಾವರಣ ತಂದಿದ್ದು, ಬಡತನದ ನಡುವೆಯೂ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೀರು ದಂಡಾ ಅವರ ಕಥೆ ಜ್ವಲಂತ ಉದಾಹರಣೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಮನಾಬಾದ್‌ | ರಾತ್ರಿ ಪಾಳಿಯಲ್ಲಿ ವೈದ್ಯರ ಕೊರತೆ, ಪರದಾಡಿದ ಗರ್ಭಿಣಿಯರು!

ಹುಮನಾಬಾದ್‌ ಪಟ್ಟಣದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರು...

SIR | ಫಾರ್ಮ್-6 ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ; ಆದರೆ, ಪೂರ್ಣ ವಿನಾಯಿತಿಯಲ್ಲ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಂಕೀರ್ಣ ಕಾಗದಪತ್ರಗಳ ಕಟ್ಟುನಿಟ್ಟಿನ...

​’ಇದು ಶತಮಾನದ ಅತಿ ದೊಡ್ಡ ನಾಟಕ’: ನಿರ್ಮಲಾ ಸೀತಾರಾಮನ್ ಸಿಟಿ ಬಸ್ ಪ್ರಯಾಣಕ್ಕೆ ನೆಟ್ಟಿಗರ ಕಟು ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ...

ಶಿಕಾರಿಪುರದಲ್ಲಿ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ

ಇಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ಗ್ರಾಮದಿಂದ ‘ಭಾರತ್ ಜೋಡೋ...