ಐಪಿಎಲ್‌ 2023 | ಮನೆಗೆಲಸ ಮಾಡುತ್ತಿದ್ದ ಕ್ರಿಕೆಟಿಗ ಇಂದು ಐಪಿಎಲ್‌ ಹೀರೋ

Date:

ಅಕ್ಟೋಬರ್ 12, 1997ರಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದ ರಿಂಕು ಸಿಂಗ್ ಅವರ ತಂದೆ ಎಲ್‌ಪಿಜಿ ಸಿಲಿಂಡರ್‌ ವಿತರಿಸುವ ಕೆಲಸ ಮಾಡುತ್ತಿದ್ದರೆ, ಸಹೋದರ ಆಟೋ ರಿಕ್ಷಾ ಚಲಾಯಿಸುತ್ತಿದ್ದ.

ಐಪಿಎಲ್‌ನ ಇತಿಹಾಸದಲ್ಲೇ ಅಚ್ಚಳಿಯದೆ ನನಪಿನಲ್ಲಿ ಉಳಿಯುವ ಪಂದ್ಯವೊಂದಕ್ಕೆ ಭಾನುವಾರ (ಏಪ್ರಿಲ್‌ 09) ಅಹ್ಮದಾಬಾದ್‌ ಸಾಕ್ಷಿಯಾಗಿದೆ.

ಐಪಿಎಲ್ 16ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ (ಕೆಕೆಆರ್​) ವೀರೋಚಿತ ಗೆಲುವು ದಾಖಲಿಸಿತ್ತು. 205 ರನ್‌ ಬೆನ್ನಟ್ಟುವ ವೇಳೆ ಕೆಕೆಆರ್‌ ಗೆಲುವಿಗೆ ಅಂತಿಮ ಓವರ್‌ನಲ್ಲಿ 29 ರನ್‌ಗಳ ಕಠಿಣ ಗುರಿ ಮುಂದಿತ್ತು. ಆದರೆ ಟೈಟಾನ್ಸ್‌ ತಂಡದ ಯಶ್​ ದಯಾಳ್​ ಎಸೆದ ಕೊನೆಯ ಓವರ್​ನಲ್ಲಿ ಸತತ ಐದು ಸಿಕ್ಸರ್​ ಬಾರಿಸಿದ ಎಡಗೈ ಬ್ಯಾಟರ್‌ ರಿಂಕು ಸಿಂಗ್​ ಕೆಕೆಆರ್‌ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಆ ಮೂಲಕ ರಿಂಕು ಸಿಂಗ್‌ ಇದೀಗ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದಾರೆ.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಂಕು ಸಿಂಗ್‌ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ್ದರು. ತಾನೆದುರಿಸಿದ ಮೊದಲ 14 ಎಸೆತಗಳಲ್ಲಿ ಕೇವಲ 8 ರನ್‌ಗಳನ್ನಷ್ಟೇ ರಿಂಕು ಗಳಿಸಿದ್ದರು. ಆದರೆ ಅದೇನಾಯಿತೋ ಏನೋ ಇದ್ದಕಿದ್ದ ಹಾಗೆ ರಿಂಕು ಉಗ್ರ ರೂಪ ತಾಳಿಬಿಟ್ಟರು. ಆ ನಂತರದಲ್ಲಿ  ಎದುರಿಸಿದ, ಮುಂದಿನ ಏಳು ಎಸೆತಗಳಲ್ಲಿ ಆರು ಸಿಕ್ಸರ್‌ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಕೇವಲ 7 ಎಸೆತಗಳಲ್ಲಿ 40 ರನ್‌ ಚಚ್ಚಿದರು.

ಅತಿ ಕಡಿಮೆ ಎಸೆತದಲ್ಲಿ (7 ಎಸೆತ) 40 ರನ್‌ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಅಂತಿಮವಾಗಿ 21 ಎಸೆತಗಳಲ್ಲಿ 48 ರನ್‌ಗಳಿಸಿ ಅಜೇಯರಾಗುಳಿದರು. ಕೆಕೆಆರ್‌ ಕೈಚೆಲ್ಲಿದ್ದ ಪಂದ್ಯವನ್ನು ಅಚ್ಚರಿ ಎಂಬಂತೆ ಗೆದ್ದುಕೊಟ್ಟರು.

ಯಾರು ಈ ರಿಂಕು ಸಿಂಗ್​?

ಅಕ್ಟೋಬರ್ 12, 1997ರಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ರಿಂಕು ಸಿಂಗ್ ಜನಿಸಿದ್ದರು. ತಂದೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದರೆ, ಸಹೋದರ ಆಟೋ ರಿಕ್ಷಾ ಚಲಾಯಿಸುತ್ತಿದ್ದರು. ಕ್ರಿಕೆಟ್‌ನಲ್ಲಿ ಚಿಕ್ಕ ವಯಸ್ಸಿನಿಂದಲೇ  ರಿಂಕು ಆತೀವ ಆಸಕ್ತಿ ಹೊಂದಿದ್ದರು.

ಅದಾಗಿಯೂ  ಮನೆಯ ಪರಿಸ್ಥಿತಿ ಕ್ರಿಕೆಟ್‌ ತರಬೇತಿ ಪಡೆಯಲು ಪೂರಕವಾಗಿರಲಿಲ್ಲ. ಹೀಗಾಗಿ ಸಹೋದರನ ಸಲಹೆಯಂತೆ ಮನೆ ಕೆಲಸಕ್ಕೆ ʻಸಫಾಯಿ ಔರ್ ಪೋಚಾ ಮಾರ್ನಾʼ (ಗುಡಿಸುವುದು ಮತ್ತು ಒರೆಸುವುದು) ಹೋಗುತ್ತಿದ್ದರು. ಈ ವಿಷಯವನ್ನು ಸ್ವತಃ ರಿಂಕು ಕೆಲ ವರ್ಷಗಳ ಹಿಂದೆ ‘ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿದ್ದರು.

ಕೆಕೆಆರ್​ ಅಕಾಡೆಮಿಯಲ್ಲಿ ​ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರ ಗರಡಿಯಲ್ಲಿ ಪಳಗಿದ ರಿಂಕು ಸಿಂಗ್‌, ಬಳಿಕ ಉತ್ತರಪ್ರದೇಶ ತಂಡದ ಪ್ರಮುಖ ಆಟಗಾರನಾಗಿ ಬದಲಾದರು. 2018-19 ರಣಜಿ ಟ್ರೋಫಿ ಟೂರ್ನಿಯಲ್ಲಿ ನಾಲ್ಕು ಶತಕ ದಾಖಲಿಸಿ ಮಿಂಚಿದ್ದ ರಿಂಕು, 10 ಇನ್ನಿಂಗ್ಸ್‌ಗಳಲ್ಲಿ ಒಟ್ಟು 953 ರನ್ ಗಳಿಸುವ ಮೂಲಕ ಕೂಟದಲ್ಲಿ ಆ ವರ್ಷ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ರಿಂಕು ಸಿಂಗ್‌ ಸಿಕ್ಸರ್‌ಗಳ ಸುರಿಮಳೆ; ಗುಜರಾತ್‌ಗೆ ಮೊದಲ ಸೋಲು   

2017ರಲ್ಲಿ ರಿಂಕು ಸಿಂಗ್‌ ಮೊದಲ ಬಾರಿಗೆ ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದರು. ಆ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದ ಭಾಗವಾಗಿದ್ದರು. ಆದರೆ ಆ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಪಡೆದಿರಲಿಲ್ಲ. ಮುಂದಿನ ಆವೃತ್ತಿಯ ಹರಾಜಿನಲ್ಲಿ (2018) ಕೆಕೆಆರ್ ಫ್ರಾಂಚೈಸಿ ₹80 ಲಕ್ಷ ನೀಡಿ ರಿಂಕು ಅವರನ್ನು ​ ಖರೀದಿಸಿತ್ತು.

2018ರಲ್ಲಿ ಕೆಕೆಆರ್‌ ಪರ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದ ರಿಂಕು, 2019ರಲ್ಲಿ ಐದು ಮತ್ತು 2020ರ ಆವೃತ್ತಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿದ್ದರು. ಆದಾಗಿಯೂ 2022ರ ಐಪಿಎಲ್‌ ಹರಾಜಿನಲ್ಲಿ ಈ  ಎಡಗೈ ಆಟಗಾರನನ್ನು ₹55 ಲಕ್ಷಕ್ಕೆ  ಕೆಕೆಆರ್‌ ಫ್ರಾಂಚೈಸಿ  ತಮ್ಮಲ್ಲೇ ಉಳಿಸಿಕೊಂಡಿತ್ತು. 2022ರ ಐಪಿಎನಲ್ಲಿ ಏಳು ಪಂದ್ಯಗಳನ್ನಾಡಿದ್ದ ರಿಂಕು, 148 ಸ್ಟ್ರೈಕ್ ರೇಟ್‌ನಲ್ಲಿ 174 ರನ್ ಗಳಿಸಿದ್ದರು.

ಬಿಸಿಸಿಐನಿಂದ ಅಮಾನತುಗೊಂಡಿದ್ದ ರಿಂಕು ಸಿಂಗ್!

2019ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಾಗಿದ್ದ ಭಾರತ-ಎ ತಂಡಕ್ಕೆ ಉತ್ತರಪ್ರದೇಶದ ಎಡಗೈ ಬ್ಯಾಟರ್‌ ರಿಂಕು ಸಿಂಗ್‌ ಆಯ್ಕೆಯಾಗಿದ್ದರು. ಆದರೆ ಈ ನಡುವೆ ಅನುಮತಿ ಪಡೆಯದೆ ಅಬುಧಾಬಿಯಲ್ಲಿ ನಡೆದ ಟಿ20 ಪಂದ್ಯಾವಳಿಯೊಂದರಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬಿಸಿಸಿಐ, 2019ರ ಜೂನ್‌ನಲ್ಲಿ ಮೂರು ತಿಂಗಳುಗಳ ಕಾಲ ರಿಂಕು ಅವರನ್ನು ಅಮಾನತುಗೊಳಿಸಿತ್ತು.

ಬಿಸಿಸಿಐ ನಿಯಮಗಳ ಪ್ರಕಾರ, ಮಂಡಳಿಯಲ್ಲಿ ನೋಂದಾಯಿತ ಆಟಗಾರರು ಅನುಮತಿ ಪಡೆಯದೇ ವಿದೇಶಗಳಲ್ಲಿ ನಡೆಯುವ ಯಾವುದೇ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ.

ಈವರೆಗೂ 40 ಪ್ರಥಮ ದರ್ಜೆ, 50 ಲಿಸ್ಟ್-ಎ ಮತ್ತು 78 ಟಿ20 ಪಂದ್ಯಗಳನ್ನು ಆಡಿರುವ 25 ವರ್ಷದ ಆಟಗಾರ ಎಂಟು ಶತಕ ಮತ್ತು 41 ಅರ್ಧಶತಕಗಳನ್ನೊಳಗೊಂಡ 6,016 ರನ್ ಗಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ‘ಮ್ಯಾಚ್ ವಿನ್ನರ್’ ಆದ ದಿನೇಶ್ ಕಾರ್ತಿಕ್: ಆರ್‌ಸಿಬಿಗೆ ರೋಚಕ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದಿನೇಶ್...

ಐಪಿಎಲ್ | ಅಲ್‌ಝಾರಿ ಜೋಸೆಫ್ ದುಬಾರಿ ಬೌಲಿಂಗ್; ಆರ್‌ಸಿಬಿಗೆ ಗೆಲ್ಲಲು 177 ರನ್‌ಗಳ ಗುರಿ ನೀಡಿದ ಪಂಜಾಬ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 6ನೇ ಪಂದ್ಯವು ರಾಯಲ್ ಚಾಲೆಂಜರ್ಸ್‌...

ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯ ದಕ್ಷಿಣ ಭಾರತದಲ್ಲಿ ಆಯೋಜನೆ

ಬಿಸಿಸಿಐ ಇಂದು ಐಪಿಎಲ್‌ 2024ರ ಎರಡನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ....

ಐಪಿಎಲ್ | ಉಮೇಶ್ ಯಾದವ್ ಸಾಹಸ: ಮುಂಬೈ ವಿರುದ್ಧ ಗುಜರಾತ್‌ಗೆ 6 ರನ್‌ಗಳ ರೋಚಕ ಜಯ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌ನ 5ನೇ...