ಐಪಿಎಲ್‌ ಹಿನ್ನೋಟ | 15 ಆವೃತ್ತಿ, 3 ಫೈನಲ್, ಒಮ್ಮೆಯೂ ಒಲಿಯದ ಚಾಂಪಿಯನ್‌ ಪಟ್ಟ

Date:

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್‌ 31ರಂದು ಅಹ್ಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟನ್ಸ್‌-ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಈ ಬಾರಿಯ ಟೂರ್ನಿಗೆ ಚಾಲನೆ ದೊರೆಯಲಿದೆ.

2008ರಲ್ಲಿ 8 ತಂಡಗಳೊಂದಿಗೆ ಆರಂಭವಾದ ಐಪಿಎಲ್‌, ಈ ಬಾರಿ 16ನೇ ಆವೃತ್ತಿಗೆ ಕಾಲಿಡುತ್ತಿದ್ದು, 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಕಳೆದ 15 ಆವೃತ್ತಿಗಳಲ್ಲೂ ಅಭಿಮಾನಿಗಳ ನೆಚ್ಚಿನ ತಂಡವಾಗಿದ್ದರೂ ಸಹ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಆರ್‌ಸಿಬಿ ತಂಡ ಒಮ್ಮೆಯೂ ಚಾಂಪಿಯನ್‌ ಆಗಿಲ್ಲ ಎಂಬುದು ವಿಶೇಷ. 2016ರಲ್ಲಿ ಕೊನೆಯದಾಗಿ  ಫೈನಲ್‌ ಪ್ರವೇಶಿಸಿದ್ದ ಆರ್‌ಸಿಬಿ, ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ  8 ರನ್‌ಗಳ ಅಂತರದಲ್ಲಿ ಶರಣಾಗಿತ್ತು.    

2013ರಿಂದ 2021ರವರೆಗೂ ಟೀಮ್‌ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರೂ ಸಹ ಚಾಂಪಿಯನ್‌ ಪಟ್ಟದಿಂದ ದೂರವೇ ಉಳಿದಿದೆ. ಇದುವರೆಗೂ ಮೂರು ಬಾರಿ ಫೈನಲ್‌ ಪ್ರವೇಶಿಸಿದ್ದೇ ಐಪಿಎಲ್‌ನಲ್ಲಿ ಆರ್‌ಸಿಬಿಯ ದೊಡ್ಡ ಸಾಧನೆ. ಆದರೆ ಈ ಮೂರೂ ಫೈನಲ್‌ಗಳಲ್ಲೂ ಬೆಂಗಳೂರು ತಂಡ ಮುಗ್ಗರಿಸಿದೆ.

ಆರ್‌ಸಿಬಿ ಫೈನಲ್‌ ಆಡಿದ ವರ್ಷ, ಎದುರಾಳಿ ತಂಡ ಮತ್ತು ಮೈದಾನ

2009 ಡೆಕ್ಕನ್‌ ಚಾರ್ಜರ್ಸ್‌, ವಾಂಡರರ್ಸ್‌ ಸ್ಟೇಡಿಯಂ,

2011 ಚೆನ್ನೈ ಸೂಪರ್‌ ಕಿಂಗ್ಸ್‌ , ಎಂ ಎ ಚಿದಂಬರಂ ಸ್ಟೇಡಿಯಂ

2016 ಸನ್‌ರೈಸರ್ಸ್‌ ಹೈದರಾಬಾದ್‌, ಎಂ ಚಿನ್ನಸ್ವಾಮಿ ಸ್ಟೇಡಿಯಂ  

2008ರಿಂದ 2022ರವರೆಗಿನ ಆರ್‌ಸಿಬಿಯ ಐಪಿಎಲ್‌ ಪಯಣ

2008 ಲೀಗ್ ಹಂತ, 7ನೇ ಸ್ಥಾನ

2009 ರನ್ನರ್ಸ್-ಅಪ್

2010 ಪ್ಲೇಆಫ್‌

2011 ರನ್ನರ್ಸ್-ಅಪ್

2012 ಲೀಗ್ ಹಂತ, 5ನೇ ಸ್ಥಾನ

2013 ಲೀಗ್ ಹಂತ, 5ನೇ ಸ್ಥಾನ

2014 ಲೀಗ್ ಹಂತ, 7ನೇ ಸ್ಥಾನ

2015 ಪ್ಲೇಆಫ್‌

2016 ರನ್ನರ್ಸ್ ಅಪ್

2017 ಲೀಗ್ ಹಂತ, 8ನೇ ಸ್ಥಾನ

2018 ಲೀಗ್ ಹಂತ 6ನೇ ಸ್ಥಾನ

2019 ಲೀಗ್ ಹಂತ 8ನೇ ಸ್ಥಾನ

2020 ಪ್ಲೇಆಫ್

2021 ಪ್ಲೇ ಆಫ್‌

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಆಸೀಸ್ ಕ್ರಿಕೆಟಿಗ ಮಿಚೆಲ್ ಮಾರ್ಷ್

ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟ ಬಗ್ಗೆ ಮೊದಲ ಬಾರಿಗೆ  ಆಸೀಸ್ ಕ್ರಿಕೆಟಿಗ...

ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರಿಕೆ

ರಾಹುಲ್‌ ದ್ರಾವಿಡ್‌ ಅವರನ್ನು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್‌...

ಬೈಜೂಸ್‌ನಿಂದ 160 ಕೋಟಿ ಬಾಕಿ: ಕಂಪನಿ ಕಾನೂನುಗಳ ನ್ಯಾಯಮಂಡಳಿಯ ಮೊರೆಹೋದ ಬಿಸಿಸಿಐ

ಒಂದರ ನಂತರ ಒಂದಾಗಿ ಹಲವಾರು ಸಮಸ್ಯೆಗಳಲ್ಲಿ ಸಿಲುಕುತ್ತಾ ಬರುತ್ತಿರುವ ಬೈಜೂಸ್ ಈಗ...

ಟಿ20 | ರೋಚಕ ಪಂದ್ಯದಲ್ಲಿ ಶತಕದ ಮೂಲಕ ಪಂದ್ಯ ಗೆಲ್ಲಿಸಿದ ಮ್ಯಾಕ್ಸ್‌ವೆಲ್

ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್...