ಸೂರ್ಯ ಕುಮಾರ್‌ ಯಾದವ್‌ ಸ್ಫೋಟಕ ಆಟ; ವಿಂಡೀಸ್‌ ವಿರುದ್ಧ ಟಿ20 ಸರಣಿ ಜೀವಂತವಾಗಿರಿಸಿಕೊಂಡ ಭಾರತ

ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್
suryakumar yadav

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಟಿ20 ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಗೆಲುವು ದಾಖಲಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ವಿಂಡೀಸ್‌ ನೀಡಿದ 160 ರನ್‌ ಗುರಿ ಬೆನ್ನಟ್ಟಿದ ಭಾರತ ತಂಡ ಸೂರ್ಯಕುಮಾರ್‌ ಯಾದವ್‌ (83) ಸ್ಪೋಟಕ ಬ್ಯಾಟಿಂಗ್‌ ಹಾಗೂ ತಿಲಕ್ ವರ್ಮಾ ಅವರ ಅಜೇಯ 49 ರನ್‌ಗಳ ಆಟದಿಂದ 17.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ಪಡೆಯಿತು.

ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್‌ ಗಿಲ್‌ ಬೇಗನೇ ಔಟಾದರೂ 44 ಚೆಂಡುಗಳಲ್ಲಿ 10 ಬೌಂಡರಿ, 4 ಸಿಕ್ಸರ್‌ನೊಂದಿಗೆ ಅದ್ಭುತ ಬ್ಯಾಟಿಂಗ್‌ ಆಡಿ 83 ರನ್‌ ಸಿಡಿಸಿದ ಸೂರ್ಯಕುಮಾರ್‌ ಯಾದವ್‌ ಗೆಲುವಿನ ರೂವಾರಿಯಾದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಯಾದವ್‌ 13ನೇ ಓವರ್‌ನಲ್ಲಿ ಔಟಾಗಿ ಪೆವಿಲಿಯನ್‌ಗೆ ತೆರಳಿದ ನಂತರ ಯುವ ಆಟಗಾರ ತಿಲಕ್‌ ವರ್ಮಾ ಅಜೇಯ 49 ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ ಅಜೇಯ 20 ರನ್‌ ಗಳಿಸಿ ಭಾರತ ತಂಡಕ್ಕೆ ಜಯದ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.ವಿಂಡೀಸ್ ಪರ ನಾಯಕ ರೋವ್ಮನ್ ಪೊವೆಲ್ ಕೇವಲ 19 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 40 ರನ್ ಗಳಿಸಿ ಔಟಾಗದೆ ಉಳಿದರು.

ಈ ಸುದ್ದಿ ಓದಿದ್ದೀರಾ? ಟಿ20 | ಮತ್ತೆ ಎಡವಿದ ಭಾರತ; ಎರಡನೇ ಪಂದ್ಯದಲ್ಲೂ ವಿಂಡೀಸ್‌ಗೆ ರೋಚಕ ಗೆಲುವು

ಆರಂಭಿಕರಾದ ಬ್ರಂಡನ್ ಕಿಂಗ್ ಹಾಗೂ ಕೈಲ್ ಮೇಯರ್ಸ್ ಮೊದಲ ವಿಕೆಟ್ಗೆ 55 ರನ್ ಒಟ್ಟು ಸೇರಿಸಿದರು. ಬ್ರಂಡನ್ 42 ಹಾಗೂ ಮೇಯರ್ಸ್ 25 ರನ್ ಗಳಿಸಿದರು. ನಿಕೋಲಸ್ ಪೂರನ್ 20 ರನ್‌ಗಳ ಕಾಣಿಕೆ ನೀಡಿದರು. ಇನ್ನುಳಿದಂತೆ ಜಾನ್ಸನ್ ಕಾರ್ಲ್ಸ್ 12, ಶಿಮ್ರಾನ್ ಹೆಟ್ಮೆಯರ್ 9 ಹಾಗೂ ರೊಮರಿಯೊ ಶೆಫರ್ಡ್ ಅಜೇಯ 2 ರನ್ ಗಳಿಸಿದರು.

ಭಾರತದ ಪರ ಕುಲದೀಪ್‌ ಯಾದವ್ ಮೂರು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ ಎನಿಸಿದರು. ಇನ್ನುಳಿದಂತೆ ಅಕ್ಷರ್‌ ಪಟೇಲ್‌ ಮತ್ತು ಮುಕೇಶ್ ಕುಮಾರ್ ತಲಾ ಒಂದೊಂದು ವಿಕೇಟ್ ಪಡೆದರು.

LEAVE A REPLY

Please enter your comment!
Please enter your name here