ಫುಟ್‌ಬಾಲ್ ವಿಶ್ವಕಪ್ ಫೈನಲ್‌ನ ಒಂದು ಟಿಕೆಟ್ ಬೆಲೆ ಬರೋಬ್ಬರಿ 10 ಲಕ್ಷ ರೂ.; ಇತಿಹಾಸದಲ್ಲೇ ಅತ್ಯಂತ ದುಬಾರಿ ಪಂದ್ಯ

Date:

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಮೊದಲ ಬಹಿರಂಗ ಟಿಕೆಟ್ ಮಾರಾಟದಲ್ಲಿ ಟಿಕೆಟ್ ಬೆಲೆಯು ಗರಿಷ್ಠ 10,990 ಡಾಲರ್‌ಗಳಿಗೆ (ಭಾರತೀಯ ರೂಪಾಯಿಗಳಲ್ಲಿ ಸುಮಾರು 9.12 ಲಕ್ಷ ರೂ.) ಏರಿಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

- Advertisement -

ಇದು ಫುಟ್ಬಾಲ್ ಇತಿಹಾಸದಲ್ಲೇ ಸಾಮಾನ್ಯ ಅಭಿಮಾನಿಗಳಿಗೆ ನಿಗದಿಯಾದ ಅತ್ಯಂತ ದುಬಾರಿ ಟಿಕೆಟ್ ಆಗಿದೆ. 2026ರ ಮೆಗಾ ಟೂರ್ನಿಯ ಬಗ್ಗೆ ಫುಟ್ಬಾಲ್ ಪ್ರೇಮಿಗಳಲ್ಲಿ ತೀವ್ರ ನಿರೀಕ್ಷೆ ಇತ್ತು, ಆದರೆ ಈ ದುಬಾರಿ ಬೆಲೆಯು ಸಾಮಾನ್ಯ ಅಭಿಮಾನಿಗಳಿಗೆ ನಿಜಕ್ಕೂ ದೊಡ್ಡ ಆಘಾತ ತಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಮೂಲ ಅಂದಾಜಿಗಿಂತ ಈ ಬೆಲೆ ಅತಿ ಹೆಚ್ಚು. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳು ಒಗ್ಗೂಡಿ ಟೂರ್ನಿ ಆಯೋಜನೆಗೆ ಬಿಡ್ ಮಾಡಿದ ಸಂದರ್ಭದಲ್ಲಿ, ಫೈನಲ್ ಪಂದ್ಯದ ಗರಿಷ್ಠ ಟಿಕೆಟ್ ಬೆಲೆ 1,550 ಡಾಲರ್ (ಸುಮಾರು 1.28 ಲಕ್ಷ) ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಅಭಿಮಾನಿಗಳ ಸಂಘದ ಸದಸ್ಯರಿಗೆ ಟಿಕೆಟ್ ಬಿಟ್ಟಾಗ ಅದರ ಗರಿಷ್ಠ ಬೆಲೆ 8,680 ಡಾಲರ್‌ಗೆ (ಸುಮಾರು 7.20 ಲಕ್ಷ) ಏರಿತ್ತು. ಈಗ ಬಹಿರಂಗ ಮಾರಾಟದಲ್ಲಿ ಈ ಬೆಲೆ ಶೇ. 38ರಷ್ಟು ಜಿಗಿದು, 10,990 ಡಾಲರ್ ತಲುಪಿದೆ.

ಇದನ್ನು ಓದಿದ್ದೀರಾ? IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ

ವಿಭಾಗವಾರು ನೋಡುವುದಾದರೆ, ಕ್ಯಾಟಗರಿ-1 ಟಿಕೆಟ್ ಬೆಲೆ 10,990 ಡಾಲರ್ ಇದ್ದರೆ, ಕ್ಯಾಟಗರಿ-2 ಬೆಲೆ 5,575 ಡಾಲರ್‌ನಿಂದ (ಸುಮಾರು 4.62 ಲಕ್ಷ ರೂ.) 7,380 ಡಾಲರ್‌ಗೆ (ಸುಮಾರು 6.12 ಲಕ್ಷ ರೂ.) ಏರಿಕೆಯಾಗಿದೆ. ಹಾಗೆಯೇ ಕ್ಯಾಟಗರಿ-3 ಟಿಕೆಟ್ ಬೆಲೆ 4,185 ಡಾಲರ್‌ನಿಂದ (ಸುಮಾರು 3.47 ಲಕ್ಷ ರೂ.) 5,785 ಡಾಲರ್‌ಗೆ (ಸುಮಾರು 4.80 ಲಕ್ಷ ರೂ.) ಜಿಗಿದಿದೆ. 2022ರ ಕತಾರ್ ವಿಶ್ವಕಪ್ ಫೈನಲ್ ಪಂದ್ಯದ ಗರಿಷ್ಠ ಟಿಕೆಟ್ ಬೆಲೆ ಕೇವಲ 1,604 ಡಾಲರ್ (ಸುಮಾರು 1.33 ಲಕ್ಷ ರೂ.) ಇತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಟಿಕೆಟ್ ಖರೀದಿಸಲು ಫಿಫಾ ವೆಬ್‌ಸೈಟ್‌ನಲ್ಲಿ ಕಾದು ಕುಳಿತ ಅಭಿಮಾನಿಗಳಿಗೆ ತಾಂತ್ರಿಕ ದೋಷಗಳು ಮತ್ತು ನಿರಾಸೆ ಎದುರಾದವು. ಆನ್‌ಲೈನ್ ಕ್ಯೂನಲ್ಲಿ ಪಾಲ್ಗೊಂಡು ಬಹಳ ಹೊತ್ತು ಕಾಯಿಸಿದ ನಂತರ ‘ಎರರ್ ಮೆಸೇಜ್’ ಬಂದಿದ್ದನ್ನು ಬಿಬಿಸಿ ವರದಿ ವಿವರಿಸಿದೆ. ಫಿಫಾ ‘ಬೇಡಿಕೆ’ಗೆ ಅನುಗುಣವಾಗಿ ಬೆಲೆಯನ್ನು ಬದಲಾಯಿಸುವ (ಡೈನಾಮಿಕ್ ಪ್ರೈಸಿಂಗ್) ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಇದರಿಂದ ಟಿಕೆಟ್ ಬೆಲೆ ದಿಢೀರ್ ಹೆಚ್ಚಾಗುತ್ತಿದೆ.

ಫಿಫಾದ ಈ ನಿರ್ಧಾರವನ್ನು ‘ಫುಟ್ಬಾಲ್ ಸಪೋರ್ಟರ್ಸ್ ಅಸೋಸಿಯೇಷನ್’ (ಎಫ್‌ಎಸ್‌ಎ) ತೀವ್ರವಾಗಿ ಖಂಡಿಸಿದೆ. ಇದು ಅಭಿಮಾನಿಗಳಿಗೆ ಮಾಡಿದ “ದೊಡ್ಡ ದ್ರೋಹ” ಮತ್ತು ಕೇವಲ ಹಣ ಮಾಡುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 19ರಂದು ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ನೋಡುವುದು ಸಾಮಾನ್ಯ ಫುಟ್ಬಾಲ್ ಅಭಿಮಾನಿಗಳಿಗೆ ಈಗ ಗಗನಕುಸುಮವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ಏಷ್ಯನ್ ಗೇಮ್ಸ್ : ಕ್ರೀಡಾಭಿಮಾನಿಗಳಿಗೆ ರೋಮಾಂಚನ, ಭಾರತದ ಮುಡಿಗೇರಿದ 13 ಚಿನ್ನದ ಪದಕಗಳು!

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ 13ನೇ ದಿನ ಭಾರತಕ್ಕೆ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆ: ಬಸ್ ಕಂಡಕ್ಟರ್ ಆಗಿ ಟಿಕೆಟ್ ನೀಡಿದ ಸಿಎಂ ವಿಜಯ್

ತಮಿಳುನಾಡು ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯನ್ನು...