ಮೈದಾನದಲ್ಲಿ ಗೆದ್ದರೂ, ರೆಫರಿಗಳ ವಿವಾದಾತ್ಮಕ VAR ತೀರ್ಪುಗಳಿಂದ ಸೋತ ಈಜಿಪ್ಟ್

Date:

ಈಜಿಪ್ಟ್ ತಂಡದ ಮುಖ್ಯ ತರಬೇತುದಾರ ಹೊಸ್ಸಾಮ್ ಹಸನ್, “ನಾವು ಹಾಲಿ ಚಾಂಪಿಯನ್‌ಗಳಿಗಿಂತಲೂ ಅತ್ಯುತ್ತಮವಾಗಿ ಆಡಿದೆವು. ಆದರೆ ರೆಫರಿಯ ತೀರ್ಪುಗಳು ಮತ್ತು ಮೈದಾನದ ಆಂತರಿಕ-ಬಾಹ್ಯ ಶಕ್ತಿಗಳು ನಮ್ಮಿಂದ ಗೆಲುವನ್ನು ಕಸಿದುಕೊಂಡವು. ನಮಗೆ ಸ್ಪಷ್ಟವಾಗಿ ಅನ್ಯಾಯವಾಗಿದೆ,” ಎಂದು ಕಿಡಿಕಾರಿದ್ದಾರೆ.

- Advertisement -

ಫಿಫಾ ವಿಶ್ವಕಪ್ 2026ರ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿ ಗೆಲುವಿನ ಸನಿಹದಲ್ಲಿದ್ದ ಈಜಿಪ್ಟ್ ತಂಡವು, ರೆಫರಿಯ ವಿವಾದಾತ್ಮಕ ತೀರ್ಪುಗಳಿಂದಾಗಿ 3-2 ಗೋಲುಗಳ ಅಂತರದ ವೀರೋಚಿತ ಸೋಲು ಕಂಡಿದೆ. ಗೆಲ್ಲುವ ಸ್ಪಷ್ಟ ಅವಕಾಶವಿದ್ದರೂ, ವಿಎಆರ್ (VAR – Video Assistant Referee) ತೀರ್ಪುಗಳು ಹಾಗೂ ರೆಫರಿಯ ನಿರ್ಧಾರಗಳು ಈಜಿಪ್ಟ್ ತಂಡದ ಆಸೆಯ ಮೇಲೆ ತಣ್ಣೀರೆರಚಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಪಂದ್ಯದ ಆರಂಭದಿಂದಲೇ ಅರ್ಜೆಂಟೀನಾ ಮೇಲೆ ಸವಾರಿ ಮಾಡಿದ ಈಜಿಪ್ಟ್, ಮೊದಲಾರ್ಧದಲ್ಲಿ ಯಾಸರ್ ಇಬ್ರಾಹಿಂ ಬಾರಿಸಿದ ಗೋಲಿನಿಂದ 1-0 ಅಂತರದ ಮುನ್ನಡೆ ಸಾಧಿಸಿತ್ತು. ಅಷ್ಟೇ ಅಲ್ಲದೆ, ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿ ಹೊಡೆದ ಪೆನಾಲ್ಟಿ ಕಿಕ್ ಅನ್ನು ಈಜಿಪ್ಟ್ ಗೋಲ್‌ಕೀಪರ್ ಮೊಸ್ತಫಾ ಶೊಬೇರ್ ಅತ್ಯದ್ಭುತವಾಗಿ ತಡೆದು ನಿಲ್ಲಿಸಿದ್ದರು. ಪಂದ್ಯದ 59ನೇ ನಿಮಿಷದಲ್ಲಿ ಮುನ್ಸಾಟಗಾರ ಮೊಸ್ತಫಾ ಜಿಕೊ ಆಕರ್ಷಕವಾಗಿ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದ್ದರು. ಆದರೆ, ‘ವಿಎಆರ್’ ಪರಿಶೀಲನೆ ನಡೆಸಿದ ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್, ಗೋಲು ಸೃಷ್ಟಿಗೂ ಮುನ್ನ ಫೌಲ್ ನಡೆದಿದೆ ಎಂಬ ಕಾರಣ ನೀಡಿ ಈ ಮಹತ್ವದ ಗೋಲನ್ನು ರದ್ದುಗೊಳಿಸಿ ನಿರಾಸೆ ಮೂಡಿಸಿದರು.

ಈ ವಿವಾದಾತ್ಮಕ ತೀರ್ಪಿನಿಂದ ಎದೆಗುಂದದ ಈಜಿಪ್ಟ್ ಆಟಗಾರರು ತಮ್ಮ ಛಲ ಬಿಡಲಿಲ್ಲ. 67ನೇ ನಿಮಿಷದಲ್ಲಿ ಮೊಹಮ್ಮದ್ ಸಲಾಹ್ ಮತ್ತು ಹಸನ್ ಅವರ ಅತ್ಯುತ್ತಮ ಪಾಸ್‌ನ ನೆರವಿನಿಂದ ಜಿಕೊ ಮತ್ತೊಂದು ಗೋಲು ಬಾರಿಸಿ ತಂಡಕ್ಕೆ 2-0 ಅಂತರದ ಮುನ್ನಡೆ ತಂದುಕೊಟ್ಟರು. ಈ ಹಂತದಲ್ಲಿ ಈಜಿಪ್ಟ್‌ನ ಐತಿಹಾಸಿಕ ಗೆಲುವು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, 79ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಹಾಗೂ 83ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ಬಾರಿಸಿದ ಗೋಲುಗಳಿಂದ ಅರ್ಜೆಂಟೀನಾ 2-2 ರಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಫ್ರಿಕನ್ ಕಪ್ಪುವಜ್ರಗಳಿಂದ ಭಾರತ ಕಲಿಯಬೇಕಾದ ಪಾಠವೇನು?

ಪಂದ್ಯದ ಹೆಚ್ಚುವರಿ ಸಮಯದಲ್ಲಿ (ಸ್ಟಾಪೇಜ್ ಟೈಮ್) ಎಂಜೊ ಫರ್ನಾಂಡಿಸ್ ಹೆಡರ್ ಮೂಲಕ ಅರ್ಜೆಂಟೀನಾಗೆ 3-2 ಅಂತರದ ರೋಚಕ ಗೆಲುವು ತಂದುಕೊಟ್ಟರು. ಆದರೆ, ಈ ನಿರ್ಣಾಯಕ ಗೋಲು ಬಾರಿಸುವ ಮುನ್ನ ಅರ್ಜೆಂಟೀನಾ ಆಟಗಾರನಿಂದ ಫೌಲ್ ಆಗಿತ್ತು ಹಾಗೂ ತಮಗೆ ಪೆನಾಲ್ಟಿ ಸಿಗಬೇಕಿತ್ತು ಎಂದು ಈಜಿಪ್ಟ್ ಮಾಡಿದ ಮನವಿಯನ್ನು ರೆಫರಿ ತಳ್ಳಿಹಾಕಿದರು. ಈ ಬಾರಿ ‘ವಿಎಆರ್’ ಪರಿಶೀಲನೆ ನಡೆಸಲು ರೆಫರಿ ನಿರಾಕರಿಸಿದ್ದು ಈಜಿಪ್ಟ್ ಪಾಳಯದ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಪಂದ್ಯದ ನಂತರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಈಜಿಪ್ಟ್ ತಂಡದ ಮುಖ್ಯ ತರಬೇತುದಾರ ಹೊಸ್ಸಾಮ್ ಹಸನ್, “ನಾವು ಹಾಲಿ ಚಾಂಪಿಯನ್‌ಗಳಿಗಿಂತಲೂ ಅತ್ಯುತ್ತಮವಾಗಿ ಆಡಿದೆವು. ಆದರೆ ರೆಫರಿಯ ತೀರ್ಪುಗಳು ಮತ್ತು ಮೈದಾನದ ಆಂತರಿಕ-ಬಾಹ್ಯ ಶಕ್ತಿಗಳು ನಮ್ಮಿಂದ ಗೆಲುವನ್ನು ಕಸಿದುಕೊಂಡವು. ನಮಗೆ ಸ್ಪಷ್ಟವಾಗಿ ಅನ್ಯಾಯವಾಗಿದೆ,” ಎಂದು ಕಿಡಿಕಾರಿದ್ದಾರೆ. ಗೋಲು ವಂಚಿತ ಜಿಕೊ ಕೂಡ, “ಪಂದ್ಯದ ಆರಂಭದಿಂದಲೂ ರೆಫರಿ ನಮ್ಮ ವಿರುದ್ಧವಿದ್ದರು. ನಾವು 2-0 ಮುನ್ನಡೆ ಸಾಧಿಸಿದ್ದರೂ ನಮ್ಮನ್ನು ಗೆಲ್ಲಲು ಬಿಡಲಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಆಟವಾಡಿದರೂ ಈಜಿಪ್ಟ್ ಕಣ್ಣೀರಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಲಾಪ್ರತಿಭೋತ್ಸವ: ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

ಮಕ್ಕಳು ಹಾಗೂ ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ...

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆಯಲಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ ಜೇಬಿಗೂ ಕತ್ತರಿ!

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ...

ಬೀದರ್‌ | ಮೊಬೈಲ್‌ಗಿಂತ ಕಲೆಯತ್ತ ಮಕ್ಕಳ ಆಸಕ್ತಿ ಹೆಚ್ಚಲಿ: ಸಿದ್ರಾಮ ಸಿಂಧೆ

ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವುದರಿಂದ ಅವರ ಸೃಜನಶೀಲ...