ಈ ದಿನ ಸಂಪಾದಕೀಯ | ಆಫ್ರಿಕನ್ ಕಪ್ಪುವಜ್ರಗಳಿಂದ ಭಾರತ ಕಲಿಯಬೇಕಾದ ಪಾಠವೇನು?

Date:

ವಿಶ್ವಕಪ್‌ನಲ್ಲಿ ಆಫ್ರಿಕಾ ತಂಡಗಳ ಸಾಧನೆಯನ್ನು ಕೇವಲ ಕೊಂಡಾಡುವುದಕ್ಕಿಂತ, ಅವರ ಬೆಳವಣಿಗೆಯ ಮಾದರಿಯನ್ನು ಅಧ್ಯಯನ ಮಾಡಿ ಭಾರತೀಯ ಕ್ರೀಡಾ ನೀತಿಯಲ್ಲಿ ಅಳವಡಿಸಿಕೊಳ್ಳುವುದು ಹೆಚ್ಚು ಅಗತ್ಯ. ವಿಶ್ವದ ಅತಿ ದೊಡ್ಡ ಯುವಜನಸಂಖ್ಯೆಯ ದೇಶವಾದ ಭಾರತವು ಈ ಪಾಠಗಳನ್ನು ಗಂಭೀರವಾಗಿ ಸ್ವೀಕರಿಸಿದರೆ, ಒಂದು ದಿನ ವಿಶ್ವಕಪ್ ವೇದಿಕೆಯಲ್ಲಿ ಭಾರತೀಯ ತ್ರಿವರ್ಣಧ್ವಜ ಹಾರಾಡುವುದು ಅಸಾಧ್ಯವೇನಲ್ಲ.

2026ರ ಫಿಫಾ ವಿಶ್ವಕಪ್‌ನಲ್ಲಿ ಆಫ್ರಿಕಾದ ದೇಶಗಳು ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿವೆ. ಒಬ್ಬೊಬ್ಬ ಆಟಗಾರನೂ ಒಂದೊಂದು ಕಪ್ಪುವಜ್ರದಂತೆ ಪ್ರಪಂಚದಾದ್ಯಂತ ಪ್ರಜ್ವಲಿಸುತ್ತಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಹಲವು ಬಾರಿ ನಿರೀಕ್ಷೆ ಹುಟ್ಟಿಸಿದ್ದ ಆಫ್ರಿಕನ್ ತಂಡಗಳು, ಈ ಬಾರಿ ಕೂಡ ತಮ್ಮ ಪ್ರತಿಭೆ, ಶಿಸ್ತು, ವೇಗ ಮತ್ತು ಆತ್ಮವಿಶ್ವಾಸದಿಂದ ಬಲಿಷ್ಠ ಯುರೋಪಿಯನ್ ಹಾಗೂ ದಕ್ಷಿಣ ಅಮೆರಿಕದ ತಂಡಗಳಿಗೆ ಸವಾಲು ಹಾಕಿವೆ. ಸೋಲು-ಗೆಲುವುಗಳು ಕ್ರೀಡೆಯ ಭಾಗವಾಗಿದ್ದರೂ, ಆಫ್ರಿಕಾದ ಫುಟ್‌ಬಾಲ್ ಏಳಿಗೆಯ ಹಿಂದೆ ಇರುವ ಸಾಮಾಜಿಕ, ಆಡಳಿತಾತ್ಮಕ ಮತ್ತು ಕ್ರೀಡಾ ಸಂಸ್ಕೃತಿಯ ಪಾಠಗಳು ಭಾರತದಂತಹ ದೇಶಕ್ಕೆ ಅತ್ಯಂತ ಮಹತ್ವದ್ದಾಗಿವೆ.

- Advertisement -

ಭಾರತವು 140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ಇಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಆ ಪ್ರತಿಭೆಗಳನ್ನು ಗುರುತಿಸುವ ಗುಣ, ದೇಶ ಮುನ್ನಡೆಸುವ ನಾಯಕರಿಗಿಲ್ಲ. ಆ ನಾಯಕರಿಗೆ ಫುಟ್‌ಬಾಲ್‌ ಗೊತ್ತಿದ್ದರೂ, ಕುರ್ಚಿ ಬಿಟ್ಟು ಬೇರೆ ಯೋಚಿಸುವುದಿಲ್ಲ. ಹಾಗಾಗಿ ಫುಟ್‌ಬಾಲ್‌ನಲ್ಲಿ ವಿಶ್ವಮಟ್ಟದ ಸಾಧನೆ ಇವತ್ತಿಗೂ ಸಾಧ್ಯವಾಗಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

ಅಚ್ಚರಿಯ ಸಂಗತಿ ಎಂದರೆ, ಜನಸಂಖ್ಯೆಯಲ್ಲಿ ಭಾರತದ ಒಂದು ರಾಜ್ಯದಷ್ಟು, ಜಿಲ್ಲೆಯಷ್ಟು ಪುಟ್ಟದಾದ ಅನೇಕ ಆಫ್ರಿಕನ್ ದೇಶಗಳು- ಮೊರಾಕ್ಕೊ, ಈಜಿಪ್ಟ್‌, ಘಾನಾ, ಸೆನೆಗಲ್‌, ಕ್ಯಾಮರೂನ್‌, ಅಲ್ಜೀರಿಯಾ, ಐವರಿ ಕೋಸ್ಟ್‌, ಕೇಪ್‌ ವರ್ಡ್‌, ಡಿಆರ್‌ ಕಾಂಗೊ- ವಿಶ್ವಕಪ್ ವೇದಿಕೆಯಲ್ಲಿ ಅರ್ಹತೆ ಗಳಿಸಿವೆ, ಸ್ಪರ್ಧಾತ್ಮಕ ಪ್ರದರ್ಶನ ನೀಡುತ್ತಿವೆ. ಬಲಿಷ್ಠ ತಂಡಗಳ ಸ್ಟಾರ್‌ ಆಟಗಾರರಿಗೆ ಮಣ್ಣು ಮುಕ್ಕಿಸಿ ಮಿಂಚುತ್ತಿವೆ. ದೇಶಕ್ಕೆ ಗೌರವ ತರುತ್ತಿವೆ. ಜಗತ್ತಿನಾದ್ಯಂತ ಕೀರ್ತಿ ಪತಾಕೆ ಹಾರಿಸುತ್ತಿವೆ.

ಈ ವಿಶ್ವಕಪ್‌ನ ಅಚ್ಚರಿಯ ಕಥೆಯೇ ಕೇಪ್ ವರ್ಡ್. ವಿಶ್ವಕಪ್ ನಾಕ್ಔಟ್ ಹಂತ ತಲುಪಿದ, ಕೇವಲ ಐದಾರು ಲಕ್ಷ ಜನಸಂಖ್ಯೆ ಹೊಂದಿರುವ ಈ ದ್ವೀಪಸಮೂಹ ರಾಷ್ಟ್ರ, ಟೂರ್ನಿ ಆರಂಭಕ್ಕೂ ಮುನ್ನ ಯಾರಿಗೂ ಗೊತ್ತಿರಲಿಲ್ಲ. ಇನ್ನು ಈ ದೇಶದ ಆಟಗಾರರು, ವಿಶ್ವದ ವಿವಿಧ ರಾಷ್ಟ್ರಗಳ ಎರಡನೇ ಹಾಗೂ ಮೂರನೇ ದರ್ಜೆಯ ಲೀಗ್‌ಗಳಲ್ಲಿ ಆಡುತ್ತಿದ್ದರು. ಸ್ಪೇನ್ ವಿರುದ್ಧ ಗೋಲುರಹಿತ ಡ್ರಾದಿಂದ ಆರಂಭಿಸಿ, ಅರ್ಜೆಂಟೀನಾ ವಿರುದ್ಧ 3-2 ಅಂತರದ ಸೋಲಿನವರೆಗೆ ಅವರು ಆಡಿದ ಪ್ರತಿಯೊಂದು ಪಂದ್ಯವೂ ಫೆಂಟಾಸ್ಟಿಕ್‌. ಆಟಕ್ಕೇ ಒಂದು ಕಳೆ.

ಇದನ್ನು ಓದಿದ್ದೀರಾ?: ಜನಾಂಗೀಯ ನಿಂದನೆ ಎಂಬ ರೋಗ ಮತ್ತು ಫಿಫಾ ಫುಟ್‌ಬಾಲ್

ವಿಶೇಷವಾಗಿ ಅರ್ಜೆಂಟೀನಾ ವಿರುದ್ಧದ ಪಂದ್ಯ ಈ ವಿಶ್ವಕಪ್‌ನ ಅತ್ಯುತ್ತಮ ಪಂದ್ಯವಾಗಿ ದಾಖಲೆಗೆ ಸೇರಿಹೋಯಿತು. ಕೇಪ್‌ ವರ್ಡ್ ವಿರುದ್ಧ ಅರ್ಜೆಂಟೀನಾ ಗೆದ್ದಿರಬಹುದು, ವಿಶ್ವಮಟ್ಟದ ಸ್ಟಾರ್‌ ಆಟಗಾರ ಮೆಸ್ಸಿ ಗೋಲು ಹೊಡೆದಿರಬಹುದು. ಆದರೆ ಮೆಸ್ಸಿಯನ್ನೇ ಮಣಿಸಿ, ತಬ್ಬಿಬ್ಬುಗೊಳಿಸಿದ್ದು ಸುಲಭವಲ್ಲ. ನಲವತ್ತು ವರ್ಷದ ಗೋಲಿ ವೋಜಿನಾನ ಆಟ ಮೆಚ್ಚಿದ ಮೆಸ್ಸಿ, ತಬ್ಬಿ, ಟೀ ಶರ್ಟ್‌ ಕೊಡುಗೆಯಾಗಿ ಕೊಟ್ಟಿದ್ದು, ಕೊಂಡಾಡಿದ್ದು ಸಾಮಾನ್ಯ ಸಂಗತಿಯಲ್ಲ.

ಹಾಗಾದರೆ ಆಫ್ರಿಕಾ ದೇಶಗಳು ತಮ್ಮ ಫುಟ್ಬಾಲ್ ಅದೃಷ್ಟವನ್ನು ಬದಲಿಸಿದ ಬಗೆ ಹೇಗೆ?

ಆಫ್ರಿಕಾದ ಬಹುತೇಕ ದೇಶಗಳಲ್ಲಿ ಬಡತನ, ರಾಜಕೀಯ ಅಸ್ಥಿರತೆ ಮತ್ತು ಮೂಲಸೌಕರ್ಯದ ಸಮಸ್ಯೆಗಳಿದ್ದರೂ ಫುಟ್‌ಬಾಲ್‌ ಬಗ್ಗೆ ಅಪಾರ ಆಸಕ್ತಿಯಿದೆ, ಸಾಮಾಜಿಕ ಗೌರವವಿದೆ. ಬೀದಿಗಳಲ್ಲಿ, ಶಾಲೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಚೆಂಡು ಸಿಕ್ಕರೆ ಸಾಕು, ಆಟ ಆರಂಭವಾಗುತ್ತದೆ. ಕ್ರೀಡೆಯು ಕೇವಲ ಮನರಂಜನೆಯಲ್ಲ, ಬದುಕನ್ನು ಬದಲಾಯಿಸುವ ಅವಕಾಶ ಎಂಬ ನಂಬಿಕೆ ಅಲ್ಲಿ ಬಲವಾಗಿದೆ.

ಎರಡು ದಶಕಗಳ ಹಿಂದೆ ಆಫ್ರಿಕಾ ಕಪ್ ಆಫ್ ನೇಷನ್ಸ್‌ನಲ್ಲಿ ಗುಂಪು ಹಂತವನ್ನೇ ದಾಟಲಾರದ, ವಿಶ್ವಕಪ್‌ಗೂ ಅರ್ಹತೆ ಪಡೆಯಲಾಗದ ದೇಶವಾಗಿದ್ದ ಮೊರೊಕ್ಕೊ, ಇಂದು ಜಾಗತಿಕ ಫುಟ್ಬಾಲ್ ಶ್ರೇಯಾಂಕದ ಅಗ್ರ 10 ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. ಅದಕ್ಕೆ ಕಾರಣ, ಮೊರೊಕ್ಕೊದ ರಾಜ ಮೊಹಮ್ಮದ್ VI. ಆತ ಫುಟ್ಬಾಲ್ ಆಟದ ಸಮಗ್ರ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ.

ಭಾರತದಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ನಗರೀಕರಣ, ಪರೀಕ್ಷಾ ಕೇಂದ್ರಿತ ಶಿಕ್ಷಣ, ಪೋಷಕರ ಉದ್ಯೋಗದ ಆತಂಕಗಳು ಅನೇಕ ಪ್ರತಿಭೆಗಳನ್ನು ಬಾಲ್ಯದಲ್ಲಿಯೇ ಕ್ರೀಡೆಯಿಂದ ದೂರ ಮಾಡುತ್ತವೆ. ಕ್ರೀಡೆಯನ್ನು ವೃತ್ತಿಯಾಗಿ ಪರಿಗಣಿಸುವ ಮನೋಭಾವ ನಮ್ಮಲ್ಲಿ ಇನ್ನೂ ಬೆಳೆದುಬಂದಿಲ್ಲ. ಜೊತೆಗೆ ಸಮಾಜವು ಕೂಡ ಕ್ರೀಡೆಯನ್ನು ಆಸಕ್ತಿ ಮತ್ತು ಅಭಿರುಚಿಯ ಆಯ್ಕೆಯನ್ನಾಗಿ, ಉದ್ಯೋಗದ ಮಾರ್ಗವನ್ನಾಗಿ, ದೇಶದ ಪ್ರತಿಷ್ಠೆಯನ್ನಾಗಿ ನೋಡುತ್ತಿಲ್ಲ.

ಕಳೆದ ಎರಡು ದಶಕಗಳಲ್ಲಿ ಆಫ್ರಿಕಾ ದೇಶಗಳಲ್ಲಾದ ಬದಲಾವಣೆ ಮತ್ತು ಪ್ರತಿಭೆ ಗುರುತಿಸುವ ವಿಧಾನಗಳೇ ವಿಶೇಷವಾಗಿವೆ. ಸ್ಥಳೀಯ ಲೀಗ್‌ಗಳು, ಶಾಲಾ ಟೂರ್ನಿಗಳು, ಯುವ ಅಕಾಡೆಮಿಗಳು ಮತ್ತು ಯುರೋಪಿಯನ್ ಕ್ಲಬ್‌ಗಳ ಸಹಭಾಗಿತ್ವದಿಂದ ಸಾವಿರಾರು ಯುವ ಆಟಗಾರರಿಗೆ ತರಬೇತಿ ದೊರೆಯುತ್ತದೆ. ಒಬ್ಬ ಹುಡುಗ/ಹುಡುಗಿ ಕ್ರೀಡೆ ಬಗ್ಗೆ ಆಸಕ್ತಿ ತಳೆದರು ಎಂದರೆ, ಅವರನ್ನು ಗುರುತಿಸಿ, ಪ್ರೋತ್ಸಾಹಿಸಿ, ದೀರ್ಘಾವಧಿಯ ಯೋಜನೆಯೊಂದಿಗೆ ಬೆಳೆಸಲಾಗುತ್ತದೆ. ಆಫ್ರಿಕಾದ ಅನೇಕ ಆಟಗಾರರು ತಮ್ಮ ದೇಶದ ಲೀಗ್‌ಗಳಿಂದಲೇ ಬೆಳೆಯುತ್ತಾರೆ. ಅಲ್ಲಿಂದ ಯುರೋಪಿನ ಕ್ಲಬ್‌ಗಳಿಗೆ ತೆರಳಿ ವಿಶ್ವಮಟ್ಟದ ಅನುಭವ ಪಡೆಯುತ್ತಾರೆ. ದೇಶೀಯ ಸ್ಪರ್ಧೆಗಳು ಪ್ರತಿಭೆಗೆ ಭದ್ರ ಬುನಾದಿ ಒದಗಿಸುತ್ತವೆ.

ಭಾರತದಲ್ಲಿ ಪ್ರತಿಭೆ ಹುಡುಕುವ ಕಾರ್ಯಕ್ರಮಗಳಿವೆ, ನಿರಂತರತೆಯಲ್ಲಿ ನಿರುತ್ಸಾಹವಿದೆ. ಅದಕ್ಕಿಂತಲೂ ಹೆಚ್ಚಾಗಿ ಜಾತಿ, ಧರ್ಮ, ವರ್ಗ ತಳಕು ಹಾಕಿಕೊಂಡಿದೆ. ರಾಜ್ಯಗಳ ನಡುವೆ ಸಮನ್ವಯದ ಕೊರತೆ, ರಾಜಕೀಯ ಹಸ್ತಕ್ಷೇಪ ಮತ್ತು ಸಂಘಟನೆಗಳ ದುರ್ಬಲತೆ ಉತ್ತಮ ಆಟಗಾರರ ಬೆಳವಣಿಗೆಗೆ ಅಡ್ಡಿಯಾಗಿದೆ. ಭಾರತದಲ್ಲಿ ಇಂಡಿಯನ್ ಸೂಪರ್ ಲೀಗ್ (ISL) ಆರಂಭವಾದ ನಂತರ ಕೆಲವು ಧನಾತ್ಮಕ ಬದಲಾವಣೆಗಳಾಗಿದ್ದರೂ, ತಳಮಟ್ಟದ ಲೀಗ್‌ಗಳು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳು ಇನ್ನೂ ಸಾಕಷ್ಟು ಬಲಗೊಂಡಿಲ್ಲ.

ಆಫ್ರಿಕಾದಲ್ಲಿ ಫುಟ್‌ಬಾಲ್ ಕೇವಲ ಆಟವಲ್ಲ, ಅದು ರಾಷ್ಟ್ರೀಯ ಹೆಮ್ಮೆ, ಸಾಮಾಜಿಕ ಏಕತೆ ಮತ್ತು ಯುವಕರ ಆಶಾಕಿರಣ. ಕ್ರೀಡೆಯನ್ನು ಅವರು ಬಡತನದಿಂದ ಹೊರಬರುವ ದಾರಿಯಾಗಿ, ಭವಿಷ್ಯದ ಬೆಳಕಾಗಿ ನೋಡುತ್ತಾರೆ. ಇದರಿಂದ ಆಟದ ಬಗ್ಗೆ ಅಪಾರ ಪ್ರೀತಿ ಮತ್ತು ಬದ್ಧತೆ ಬೆಳೆಯುತ್ತದೆ.

ಭಾರತ ಕೂಡ ಬಡ ದೇಶವೇ. ಫುಟ್‌ಬಾಲ್‌ ಇಷ್ಟಪಡುವ, ಆಡುವ, ನೋಡುವ, ಮಾತನಾಡುವ ಜನ ಇದ್ದಾರೆ. ವಿಶೇಷವಾಗಿ ಪಶ್ಚಿಮ ಬಂಗಾಳ, ಕೇರಳ, ಗೋವಾ, ಈಶಾನ್ಯ ರಾಜ್ಯಗಳು ಹಾಗೂ ಕರ್ನಾಟಕ- ಅದರಲ್ಲೂ ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿಯ ಹುಡುಗರ ಫುಟ್‌ಬಾಲ್‌ ಆಟವಂತೂ ಅವರ ಬದುಕಿನ ಭಾಗವಾಗಿದೆ. ಆದರೆ ಅವರ ಉತ್ಸಾಹವನ್ನು ರಾಷ್ಟ್ರ ಮಟ್ಟದ ಉತ್ಸವವನ್ನಾಗಿ ರೂಪಾಂತರಿಸಲು ಇವತ್ತಿಗೂ ಸಾಧ್ಯವಾಗಿಲ್ಲ.

ಇದನ್ನು ಓದಿದ್ದೀರಾ?: ‘ನನ್ನ ವಿಶ್ವಕಪ್ ಪಯಣ ಅಂತ್ಯ’; ಕಣ್ಣೀರಿನೊಂದಿಗೆ ವಿಶ್ವಕಪ್‌ಗೆ ಕ್ರಿಸ್ಟಿಯಾನೊ ರೊನಾಲ್ಡೊ ವಿದಾಯ

ಆಫ್ರಿಕಾದ ಆಟಗಾರರ ಯಶಸ್ಸು ನಿಂತಿರುವುದೇ ಅವರ ದೈಹಿಕ ಸಾಮರ್ಥ್ಯದಲ್ಲಿ ಎಂಬ ವಾದವೂ ಇದೆ. ಇದು ಅರ್ಧಸತ್ಯ. ಇವರ ಯಶಸ್ಸಿನ ಹಿಂದಿರುವುದು ವೈಜ್ಞಾನಿಕ ತರಬೇತಿ, ಪೌಷ್ಟಿಕ ಆಹಾರ, ಕ್ರೀಡಾ ವೈದ್ಯಕೀಯ, ಮಾನಸಿಕ ಸಿದ್ಧತೆ, ತಾಂತ್ರಿಕ ಕೌಶಲ್ಯ ಮತ್ತು ಶಿಸ್ತಿನ ಅಭ್ಯಾಸ. ಇದೇ ಅಂಶಗಳನ್ನು ಭಾರತವೂ ಅಳವಡಿಸಿಕೊಳ್ಳಬೇಕು. ಭಾರತವು ವಿಶ್ವಕಪ್ ಕನಸು ಕಾಣಬೇಕಾದರೆ ಕೆಲ ಮೂಲಭೂತ ಬದಲಾವಣೆಗಳು ಅನಿವಾರ್ಯ. ಶಾಲಾ ಮಟ್ಟದಿಂದಲೇ ಫುಟ್‌ಬಾಲ್‌ಗೆ ಆದ್ಯತೆ ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲೂ ಗುಣಮಟ್ಟದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಪ್ರತಿಭೆ ಗುರುತಿಸುವ ವ್ಯವಸ್ಥೆಯನ್ನು ವೈಜ್ಞಾನಿಕಗೊಳಿಸಬೇಕು. ಸ್ಥಳೀಯ ಲೀಗ್‌ಗಳಿಗೆ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲ ಹೆಚ್ಚಿಸಬೇಕು. ಕ್ರೀಡಾ ಸಂಘಟನೆಗಳನ್ನು ವೃತ್ತಿಪರ ಮತ್ತು ಪಾರದರ್ಶಕವಾಗಿಸಬೇಕು. ಆಟಗಾರರ ದೀರ್ಘಾವಧಿಯ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು.

ವಿಶ್ವಕಪ್‌ನಲ್ಲಿ ಆಫ್ರಿಕಾ ತಂಡಗಳ ಸಾಧನೆಯನ್ನು ಕೇವಲ ಕೊಂಡಾಡುವುದಕ್ಕಿಂತ, ಅವರ ಬೆಳವಣಿಗೆಯ ಮಾದರಿಯನ್ನು ಅಧ್ಯಯನ ಮಾಡಿ ಭಾರತೀಯ ಕ್ರೀಡಾ ನೀತಿಯಲ್ಲಿ ಅಳವಡಿಸಿಕೊಳ್ಳುವುದು ಹೆಚ್ಚು ಅಗತ್ಯ. ವಿಶ್ವದ ಅತಿ ದೊಡ್ಡ ಯುವಜನಸಂಖ್ಯೆಯ ದೇಶವಾದ ಭಾರತವು ಈ ಪಾಠಗಳನ್ನು ಗಂಭೀರವಾಗಿ ಸ್ವೀಕರಿಸಿದರೆ, ಒಂದು ದಿನ ವಿಶ್ವಕಪ್ ವೇದಿಕೆಯಲ್ಲಿ ಭಾರತೀಯ ತ್ರಿವರ್ಣಧ್ವಜ ಹಾರಾಡುವುದು ಅಸಾಧ್ಯವೇನಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...

ಈ ದಿನ ಸಂಪಾದಕೀಯ | ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ

ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ....

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಕೊಲೆಗಾರ, ‘ಮೋಶಾ’ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ವಜಾಗೊಳ್ಳಬೇಕು!

ಮೋದಿ-ಅಮಿತ್ ಶಾರ 'ಅಧಿಕಾರದಾಹ'ಕ್ಕೆ ಇಡೀ ಚುನಾವಣಾ ಆಯೋಗವನ್ನೇ ಬಲಿಪಶು ಮಾಡಿ, ದೇಶದ...

ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ...