ಬೆಂಗಳೂರು | ದೇವದಾಸಿ ಮಹಿಳೆಯರ ಹಕ್ಕುಗಳ ಹೋರಾಟಕ್ಕೆ ಶಿಕ್ಷಣವೇ ಅಸ್ತ್ರ: ದು. ಸರಸ್ವತಿ

Date:

ದೇವದಾಸಿ ತಾಯಂದಿರ ಬದುಕಿನ ನೈಜ ವಾಸ್ತವ, ನೋವು, ಅವಮಾನ ಮತ್ತು ಹೋರಾಟಗಳನ್ನು ಅಧಿಕಾರದಲ್ಲಿರುವವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ದಲಿತರು ಮತ್ತು ದೇವದಾಸಿ ಮಹಿಳೆಯರ ಬಗ್ಗೆ ತಾತ್ಸಾರ ಮನೋಭಾವ ಆಡಳಿತ ವ್ಯವಸ್ಥೆಯಲ್ಲಿದೆ. ಇದು ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಡ್ಡಿಯಾಗಿದೆ ಎಂದು ಖ್ಯಾತ ಲೇಖಕಿ ದು. ಸರಸ್ವತಿ ಹೇಳಿದರು. 

- Advertisement -

ಬೆಂಗಳೂರು ನಗರದ ಆಶೀರ್ವಾದ ತರಬೇತಿ ಕೇಂದ್ರದಲ್ಲಿ ಜು.07 ರಂದು ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ವತಿಯಿಂದ ‘ವಿಮುಕ್ತ ಸಂಗಮ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ದೇವದಾಸಿ ಸಮುದಾಯದ ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಜಾತಿ ವ್ಯವಸ್ಥೆ, ಧಾರ್ಮಿಕ ಮೌಢ್ಯ ಹಾಗೂ ಸಾಮಾಜಿಕ ಪ್ರಾಬಲ್ಯಗಳ ಸಂಚಿನಿಂದ ದೇವದಾಸಿ ಪದ್ಧತಿ ಇನ್ನೂ ಜೀವಂತವಾಗಿದೆ. ಜನರ ಮನಸ್ಸಿನಲ್ಲಿ ಅಜ್ಞಾನ ಮತ್ತು ಭಯವನ್ನು ತುಂಬುವ ಮೂಲಕ ಮಹಿಳೆಯರ ಬದುಕನ್ನು ನಿಯಂತ್ರಿಸಿ ಶೋಷಿಸಲಾಗುತ್ತಿದ್ದು, ಈ ಅನ್ಯಾಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಶಿಕ್ಷಣ ಮತ್ತು ಸಂಘಟಿತ ಹೋರಾಟವೊಂದೇ ಏಕೈಕ ಮಾರ್ಗವಾಗಿದೆ ಎಂದರು. 

ದುರಂತವೆಂದರೆ, ಜನಪರ, ದಲಿತ ಮತ್ತು ಮಹಿಳಾ ಚಳುವಳಿಗಳು ಸಹ ದೇವದಾಸಿ ತಾಯಂದಿರ ಸಮಸ್ಯೆಗಳನ್ನು ಮುನ್ನೆಲೆಗೆ ತರಲು ವಿಫಲವಾದವು. ಮಾಜಿ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಭೂಮಿಯ ಹಕ್ಕು, ಗೌರವಯುತ ಪುನರ್ವಸತಿ, ಉದ್ಯೋಗದಲ್ಲಿ ಪ್ರಾತಿನಿಧ್ಯ ಹಾಗೂ ಸಮಾನ ಅವಕಾಶಗಳು ದೊರೆಯುವವರೆಗೂ ಸಾಮಾಜಿಕ ನ್ಯಾಯ ಎಂಬುದು ಕೇವಲ ಅಪೂರ್ಣ ಕನಸಾಗಿಯೇ ಉಳಿಯುತ್ತದೆ ಎಂದರು. 

ಸಿಪಿಎಂಎಲ್ ರೆಡ್ ಸ್ಟಾರ್ ಪಕ್ಷದ ಸ್ಥಾಪಕ ಆರ್. ಮಾನಸಯ್ಯ ಮಾತನಾಡಿ, 46 ಸಾವಿರ ಮಾಜಿ ದೇವದಾಸಿ ಮಹಿಳೆಯರ ಸಂಖ್ಯೆಯನ್ನು ಮರುಸಮೀಕ್ಷೆಯಲ್ಲಿ 23 ಸಾವಿರಕ್ಕೆ ಇಳಿಸಿರುವುದು ದೊಡ್ಡ ಅನ್ಯಾಯ. ತಪ್ಪು ಮಾಡಿದ್ದು ದೇವದಾಸಿ ತಾಯಂದಿರಲ್ಲ, ಅವರನ್ನು ಈ ಸ್ಥಿತಿಗೆ ತಳ್ಳಿದ ಸಮಾಜ. ಸರ್ಕಾರ ಪಾರದರ್ಶಕ ಮರುಸಮೀಕ್ಷೆ ನಡೆಸಿ, ಪ್ರತಿಯೊಬ್ಬ ಅರ್ಹ ಮಹಿಳೆಯನ್ನು ಗುರುತಿಸಬೇಕು. ಪ್ರತಿಯೊಂದು ಮಾಜಿ ದೇವದಾಸಿ ಕುಟುಂಬಕ್ಕೂ ಭೂಮಿ ಹಕ್ಕು ನೀಡಿ, ಗೌರವಯುತ ಪುನರ್ವಸತಿ ಖಚಿತಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

ದೇವದಾಸಿ ಸಮುದಾಯದ ಹೋರಾಟಗಾರ ಚಂದಾಲಿಂಗ ಕಲಲಾಬಂಡಿ ಮಾತನಾಡಿ, ಮಾಜಿ ದೇವದಾಸಿ ಮಹಿಳೆಯರಿಗೆ ಮಾಸಿಕ ಗೌರವಧನ ಹೆಚ್ಚಿಸಬೇಕು, ಮನೆ ಹಾಗೂ ನಿವೇಶನ ನೀಡಬೇಕು, ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಉದ್ಯೋಗದಲ್ಲಿ ಆದ್ಯತೆ ಕಲ್ಪಿಸಬೇಕು. ಆರೋಗ್ಯ ವಿಮೆ, ಉಚಿತ ಚಿಕಿತ್ಸೆ, ಸ್ವಯಂ ಉದ್ಯೋಗಕ್ಕಾಗಿ ಬಡ್ಡಿರಹಿತ ಸಾಲ ಹಾಗೂ ಕೌಶಲ್ಯ ತರಬೇತಿ ಒದಗಿಸಬೇಕು. ದೇವದಾಸಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ನಿರ್ಮೂಲನೆ ಮಾಡಿ, ಪುನರ್ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು. 

ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಿ. ಎಸ್. ಶರಣು ಪ್ರಾಸ್ತವಿಕ ನುಡಿಗಳನ್ನಾಡಿದರು. 

ಈ ಸಂದರ್ಭದಲ್ಲಿ, ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ. ವೈ. ಜೆ. ರಾಜೇಂದ್ರ, ಜನಕವಿ ದಾನಪ್ಪ ನಿಲೋಗಲ್, ವೇದಿಕೆಯ ಗೌರವ ಅಧ್ಯಕ್ಷೆ ಪಡಿಯಮ್ಮ ಕ್ಯಾದಗುಂಪಿ, ಅಧ್ಯಕ್ಷೆ ಮಹಾನಂದ ದೊಡ್ಡಮನಿ, ರಾಯಚೂರು ಜಿಲ್ಲಾ ಸಂಚಾಲಾಕಿ ರತ್ನಾ ಮಸ್ಕಿ, ಉಪಾಧ್ಯಕ್ಷ ಪಂಪಾಪತಿ ಬಳ್ಳಾರಿ, ಸ್ನೇಹ ಸಂಸ್ಥೆಯ ಎನ್ ಆರ್ ನೇತ್ರಾವತಿ, ಮುಕ್ತ ಒಕ್ಕೂಟದ ಶೋಭಾ, ಅಮ್ಮ ಪೌಂಡೇಶನ್ ಸದಸ್ಯ ಸಾವಿತ್ರಿ ತಾಳಗೇರಿ, ಮಹಿಳಾ ಧ್ವನಿಯ ವಿರುಪಮ್ಮ, ಸಿಪಿಐ ಸದಸ್ಯ ಕೆ ರೇಣುಕಾ, ರಾಜ್ಯ ಮಹಿಳಾ ಒಕ್ಕೂಟದ ಮೋಕ್ಷಮ್ಮ, ಅಕ್ಕಮ್ಮ ಹನುಮೇಶ್, ಸಮತಾ ಗ್ರಾಮೀಣ ಟ್ರಸ್ಟ್ ನ ಸದಸ್ಯೆ ಶಶಿಕಲಾ ಹಿರೇಸಿಂದೋಗಿ, ಗೋಕಾಕ್ ಶಕ್ತಿ ಸಂಘದ ಮೈಲಾವ್ವ, ಜಾಗೃತ ಮಹಿಳಾ ಸಂಘದ ರೇಣುಕಾ, ದಲಿತ ಬಹುಜನ ಚಳುವಳಿಯ ರಮೇಶ್ ಕೋಳೂರ್, ಜನಸಹಯೋಗದ ನಿರುಪಾದಿ ಕಂದಕೂರು, ಅಂಬೇಡ್ಕರ್ ವಿಚಾರ ವೇದಿಕೆಯ ಚನ್ನಬಸುವ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ʼನಿನ್ನನ್ನು ಪಾಕಿಸ್ತಾನಕ್ಕೆ ಕಣ್ಮರೆ ಮಾಡುವೆನುʼ: ಮಹಿಳೆಗೆ ಕಿರುಕುಳ, ಎಫ್‌ಐಆರ್

ಬೆಂಗಳೂರು ಮಹಿಳೆಗೆ ಆಕಸ್ಮಿಕವಾಗಿ ಪರಿಚಯವಾದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ʼಸ್ನೇಹವನ್ನು ಮುರಿದರೆ...

ತೆರಿಗೆ ವಂಚನೆ ಪ್ರಕರಣ ಮುಚ್ಚಿಹಾಕಲು ಲಂಚ: ಜಿಎಸ್‌ಟಿ ಅಧಿಕಾರಿ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಪೊಲೀಸರು, ಬೆಂಗಳೂರಿನ ಕೋರಮಂಗಲದಲ್ಲಿ ಕೇಂದ್ರ ಜಿಎಸ್‌ಟಿ ಇಲಾಖೆಯ ಸೂಪರಿಂಟೆಂಡೆಂಟ್ ಮತ್ತು...

ಉರ್ದು ಸೇರಿ ಭಾಷಾ ಶಿಕ್ಷಕರ ನೇಮಕಾತಿ: ಸರ್ಕಾರ ಮಾತಿಗೆ ತಪ್ಪಿದರೆ ತೀವ್ರ ಹೋರಾಟದ ಎಚ್ಚರಿಕೆ

ಉರ್ದು ಸೇರಿದಂತೆ ಭಾಷಾ ಶಿಕ್ಷಕರ ನೇಮಕಾತಿಯಲ್ಲಿ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯಯುತ...