ಟಿವಿ, ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ, ಡಿಜಿಟಲ್ ಮಾಧ್ಯಮಗಳು ಹೆಚ್ಚು ಸತ್ಯ ಹೇಳುತ್ತಿವೆ: ಸಿಎಂ ಸಿದ್ದರಾಮಯ್ಯ

Date:

ಮೀಡಿಯಾ ಪ್ರಬಲವಾದ ಅಸ್ತ್ರ. ಎಲ್ಲರಿಗೂ ಧ್ವನಿಯಾಗಿ ಕೆಲಸ ಮಾಡುವ ಮಾಧ್ಯಮ. ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಹೋಲಿಸಿದರೆ, ಡಿಜಿಟಲ್ ಮಾಧ್ಯಮ ಹೆಚ್ಚಾಗಿ ಜನರಿಗೆ ಸತ್ಯವನ್ನ ತಿಳಿಸುವ ಕೆಲಸ ಮಾಡುತ್ತಿದೆ. ಧ್ವನಿ ಇಲ್ಲದವರ ಧ್ವನಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

- Advertisement -

ಬೆಂಗಳೂರಿನಲ್ಲಿ ಈದಿನ.ಕಾಮ್ ಆಯೋಜಿಸಿದ್ದ ಓದುಗರ ಸಮಾವೇಶದಲ್ಲಿ ಈದಿನ.ಕಾಮ್‌ನ ‘ವಿಶೇಷ ಸಂಚಿಕೆ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗುಳಿಯದೆ, ಕರಾವಳಿ ಭಾಗದ ದಶಕಗಳ ಬೇಡಿಕೆಗಳಿಗೆ ಜೀವ ನೀಡುವ ಪ್ರಮುಖ ವೇದಿಕೆಯಾಗುವ ನಿರೀಕ್ಷೆಯಿದೆ. ರಸ್ತೆ ಮತ್ತು ಹೆದ್ದಾರಿಗಳ ದುರಸ್ತಿ, ಮಂಗಳೂರು...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

50 ವರ್ಷದ ಕರ್ನಾಟಕವನ್ನು ನೋಡಿರುವ ಹಿರಿಯರಾದ ಜಿ ಬಿ ಪಾಟೀಲ್, ಅಕ್ಬರ್ ಅಲಿ ಉಡುಪಿ, ಬಡಗಲಪುರ ನಾಗೇಂದ್ರ ಅವರು ‘ನಮ್ಮ ಕರ್ನಾಟಕ 50: ನಡೆದ ಹೆಜ್ಜೆಗಳು; ಮುಂದಿನ ದಿಕ್ಕು’ ಎಂಬ ವಿಶೇಷ ಸಂಚಿಕೆಗಳನ್ನು ಸಿಎಂ ಸಿದ್ದರಾಮಯ್ಯನವರಿಗೆ ಕೊಟ್ಟರೆ, ಅವರು ಅದನ್ನು ಮುಂದಿನ ಭವಿಷ್ಯವಾದ ಮಕ್ಕಳ ಕೈಗೆ ನೀಡುವ ಮೂಲಕ ಬಿಡುಗಡೆ ಮಾಡಿದರು. ಸಿಎಂ ನಗುತ್ತಾ ಕೊಟ್ಟರೆ, ಮಕ್ಕಳು ಖುಷಿಯಿಂದ ಬಿಗಿದಪ್ಪಿಕೊಂಡರು.

“ಅಂಬೇಡ್ಕರ್ ಅವರು ಸಂವಿಧಾನ ಜಾರಿಯ ವೇಳೆ ‘ನಾವು ವೈವಿಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ’ ಎಂದಿದ್ದರು. ಈ ಅಸಮಾನತೆಗೆ ಜಾತಿವ್ಯವಸ್ಥೆಯೇ ಮೂಲ ಕಾರಣ. ಅನೇಕ ಶತಮಾನಗಳ ಕಾಲ ಶೂದ್ರರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಅವಕಾಶ ವಂಚಿತರಾಗಿದ್ದರು. ಎಲ್ಲರನ್ನೂ ಸಮಾಜದಲ್ಲಿ‌ ಜಾತಿಯಿಂದ ಅಳೆಯಲಾಗುತ್ತಿತ್ತೇ ಹೊರತು, ಅವರ ವ್ಯಕ್ತಿತ್ವದ ಮೇಲೆ ಯಾರೊಬ್ಬರ ಸಾಮರ್ಥ್ಯವನ್ನ ಅಳೆಯಲಾಗಿಲ್ಲ. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ. ಶಿಕ್ಷಣ ಕಲಿಯುವ, ಆಸ್ತಿ ಗಳಿಸುವ ಅವಕಾಶ ಸಿಕ್ಕ ಮೇಲೆ ಕೆಲವರು ಮುಂದೆ ಬಂದರು” ಎಂದು ವಿವರಿಸಿದರು.

“ಅಂಬೇಡ್ಕರ್ ಅವರು ಯಾರಿಗೆ ಇತಿಹಾಸ ಗೊತ್ತಿಲ್ಲವೋ, ಅವರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲ. ಪ್ರಜಾಪ್ರಭುತ್ವ ಯಶಸ್ಸು ಕಾಣಲಿಕ್ಕೆ ಸಾಮಾಜಿಕ, ಆರ್ಥಿಕ ಸಮಾನತೆ ಸಿಕ್ಕಾಗ ಮಾತ್ರ ಸಾಧ್ಯ ಎಂದಿದ್ದರು. ಅದರಂತೆ ನಾವು ಸಾಮಾಜಿಕ, ಆರ್ಥಿಕ‌ ಸಮಾನತೆಗಾಗಿ ಹೋರಾಟ ಮಾಡಬೇಕು. ಆ ದಿಕ್ಕಿನಲ್ಲಿ‌ ನಡೆಯಬೇಕು” ಎಂದರು.

“ಬುದ್ಧನ ಕಾಲದಿಂದಲೂ ಸಮಾನತೆ ಬಗ್ಗೆ ಮಾತನಾಡುತ್ತಿದ್ದೇವೆ. ಬಸವಣ್ಣನ ಕಾಲದಲ್ಲಿ ಅನೇಕ‌ ಚಳವಳಿಗಳು ನಡೆದವು. ಆದರೂ, ಸಮಾನತೆ ಇನ್ನೂ ದೊರೆತಿಲ್ಲ. ಅನೇಕ ವಿದ್ಯಾವಂತರು ಇನ್ನೂ ಮೌಢ್ಯವನ್ನ ಬಿಟ್ಟಿಲ್ಲ. ತಮ್ಮ ಇಂದಿನ ಪರಿಸ್ಥಿತಿಗೆ ಹಿಂದಿನ ಜನ್ಮದ ಪಾಪ ಕಾಣವೆಂದು ನಂಬುವವರಿದ್ದಾರೆ. ಇಂತಹ ಮೌಢ್ಯ ಮೀರಿ, ಬದಲಾವಣೆ ತರಬೇಕು. ನಾವೆಲ್ಲ ವೈಚಾರಿಕೆತೆಯನ್ನ ರೂಢಿಸಿಕೊಂಡಾಗ ಹಲವು ಕೆಡಕುಗಳನ್ನ ತೊಡೆಯಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

“ನನ್ನ ಬಗ್ಗೆ ಹಲವರು ಕೆಟ್ಟದಾಗಿ ಬರೀತಾರೆ, ಟೀಕೆ ಮಾಡ್ತಾರೆ. ಆದರೆ, ನಾನು ಯಾರಿಗೂ ಯಾಕೆ ಹೀಗೆ ಬರೀತಿದ್ದೀರಿ ಅಂತ ಪ್ರಶ್ನೆ ಮಾಡಿಲ್ಲ. ಮಾಧ್ಯಮಗಳು ಸತ್ಯವನ್ನು ಹೇಳಬೇಕು. ಸತ್ಯವನ್ನು ಬರೆಯಬೇಕು. ಒಂದು ವೇಳೆ, ಮಾಧ್ಯಮಗಳು ಸುಳ್ಳು ಹೇಳಿದರೆ, ತಪ್ಪು ಬರೆದರೆ, ಅದನ್ನ ಓದುಗರು ಖಂಡಿಸಬೇಕು. ಸತ್ಯ ಬರೆಯುವಂತೆ ಹೇಳಬೇಕು. ಈಗ ಫೇಕ್ ನ್ಯೂಸ್‌ಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನ ತಡೆಯಬೇಕು. ಇತ್ತೀಚಿನ ದಿನಗಳಲ್ಲಿ ತನಿಖಾ ಪತ್ರಿಕೋದ್ಯಮ ಕಾಣೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ‌ ಗುರಿ ಸಂವಿಧಾನದ ಆಶಯಗಳನ್ನ ಜಾರಿಗೆ ತರುವುದು. ಅದರಂತೆ ನಡೆಯುವುದು. ಆದರೆ, ಇಲ್ಲಿ ಸಂವಿಧಾನವನ್ನ ವಿರೋಧ ಮಾಡುವವರು ಇದ್ದಾರೆ. ದೇಶದಲ್ಲಿ ಹಕ್ಕುಗಳನ್ನ ಮಾತ್ರ ಕೇಳುವವರಿದ್ದಾರೆ, ಕರ್ತವ್ಯಗಳನ್ನ ಪಾಲಿಸುವವರು ಇಲ್ಲ. ನಾವು ಮೂಲಭೂತ ಕರ್ತವ್ಯಗಳನ್ನೂ ಪಾಲಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಮೋದಾನಿ ಫೈಲ್ಸ್ | ಜಾರ್ಖಂಡ್‌ನ ಅದಾನಿ ವಿದ್ಯುತ್ ಸ್ಥಾವರದ ವಿಚಿತ್ರ ಕಥೆ ಇದು!

“ಎಲ್ಲ ಮಾಧ್ಯಮಗಳು 2023ರ ಚುನಾವಣೆಯಲ್ಲಿ ಯಾರಿಗೂ ಬಹಮತ ಬರಲ್ಲ. ಅತಂತ್ರ ವಿಧಾನಸಭೆ ಬರುತ್ತದೆ ಎಂದಿದ್ದವು. ಆದರೆ, ಈದಿನ.ಕಾಮ್ ಮಾತ್ರ ಕಾಂಗ್ರೆಸ್ 130ಕ್ಕೂ ಹೆಚ್ಚು ಕ್ಷೇತ್ರಗಳನ್ನ ಗೆಲ್ಲುತ್ತದೆ ಎಂದು ನಿಖರವಾಗಿ ಸಮೀಕ್ಷೆ ನಡೆಸಿ, ವರದಿ ಮುಂದಿಟ್ಟಿತ್ತು. ಈಗಲೂ ಜನರ ಧ್ವನಿಯಾಗಿ ಮುನ್ನಡೆಯುತ್ತಿದೆ. ಈದಿನ.ಕಾಮ್ ವಿಸ್ತಾರವಾಗಿ ಬೆಳೆಯಲಿ” ಎಂದು ಆಶಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಸಚ್ಚಿದಾನಂದ

ಭೂ ದಾಖಲೆಗಳ ತಿದ್ದುಪಡಿ ಮತ್ತು 'ಖರಾಬು' ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ...

ಕರ್ನಾಟಕದ 85% ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಅಳತೆಯಲ್ಲಿ ಮೋಸ

ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಇಂಧನ ಅಳತೆಯಲ್ಲಿ ಮೋಸವಾಗುತ್ತಿದೆ. ಇದನ್ನು ತಡೆಗಟ್ಟಲು...

ಪೆಟ್ರೋಲ್ ಹಾಕಿಸುವ ಮುನ್ನ ಎಚ್ಚರ: ಶೇ 85ಕ್ಕೂ ಹೆಚ್ಚು ಬಂಕ್‌ಗಳಲ್ಲಿ ಇಂಧನ ಕಡಿತ; ರಾಜ್ಯ ಸರ್ಕಾರದ ತಪಾಸಣೆಯಲ್ಲಿ ಬಟಾಬಯಲು

ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಇಂಧನ ವಿತರಿಸುವ ಶೇ 85ಕ್ಕೂ...