ಪಡಿತರ ಚೀಟಿ ಇ-ಕೆವೈಸಿ ಗಡುವು ವಿಸ್ತರಣೆ: ಸರ್ಕಾರ ಆದೇಶ

Date:

ಕರ್ನಾಟಕದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿವುದನ್ನು ಕಡ್ಡಾಯಗೊಲಿಸಿರುವ ಸರ್ಕಾರ, e-KYC ಪ್ರಕ್ರಿಯೆಗೆ ನಿಗದಿಯಾಗಿದ್ದ ಗಡುವನ್ನು ವಿಸ್ತರಿಸಿದೆ. ಅಕ್ಟೋಬರ್ 20ರವರೆಗೆ ಇ-ಕೆವೈಸಿ ಮುಂದುವರೆಸಲು ಆದೇಶ ಹೊರಡಿಸಿದೆ.

- Advertisement -

ಈ ಮೊದಲು ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸಲು ಸೆಪ್ಟೆಂಬರ್ 30 ಅನ್ನು ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿತ್ತು. ಆದಾಗ್ಯೂ, ರಾಜ್ಯದಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಂಪ್ರತಿ ತೀವ್ರ ಜನದಟ್ಟಣೆ ಕಂಡುಬರುತ್ತಿತ್ತು. ಇದರೊಂದಿಗೆ ತಾಂತ್ರಿಕವಾಗಿ ಸರ್ವರ್ ಡೌನ್ ಸಮಸ್ಯೆಗಳು ಪದೇ ಪದೇ ಎದುರಾಗುತ್ತಿದ್ದವು. ಪರಿಣಾಮವಾಗಿ, ಸಾರ್ವಜನಿಕರು ತಮ್ಮ ನಿತ್ಯದ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ತೊಂದರೆ ಅನುಭವಿಸುವಂತಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಪ್ರಸ್ತುತ ರಾಜ್ಯದಲ್ಲಿ ಇನ್ನೂ ಒಂದು ಕೋಟಿಗೂ ಅಧಿಕ ಪಡಿತರ ಚೀಟಿಗಳಿಗೆ ಇ-ಕೆವೈಸಿ ಪ್ರಕ್ರಿಯೆ ಬಾಕಿ ಉಳಿದಿದೆ. ಇತ್ತ ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ಫೋನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಹೊಸ ಯೋಜನೆಯೊಂದನ್ನು ಸರ್ಕಾರ ಸಿದ್ಧಪಡಿಸುತ್ತಿದ್ದು, ಅದನ್ನು ಜಾರಿಗೆ ತರಲು ಇನ್ನು ಒಂದು ವಾರದ ಸಮಯಾವಕಾಶ ಬೇಕಾಗಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಗಡುವನ್ನು ವಿಸ್ತರಿಸಿರುವುದಾಗಿ ಸರ್ಕಾರ ಹೇಳಿಕೊಂಡಿದೆ.

ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರತಿ 5 ವರ್ಷಕ್ಕೊಮ್ಮೆ ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ರಾಜ್ಯದ ಸುಮಾರು 2.67 ಕೋಟಿ ಫಲಾನುಭವಿಗಳು ಈ ನಿಯಮದ ವ್ಯಾಪ್ತಿಗೆ ಬರಲಿದ್ದು, ನಿಯಮಿತವಾಗಿ ಇ-ಕೆವೈಸಿ ಮಾಡಿಸದಿದ್ದಲ್ಲಿ ಅಂತಹ ಪಡಿತರ ಚೀಟಿಗಳು ರದ್ದಾಗುವ ಅಥವಾ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ.

ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸಾರ್ವಜನಿಕರು ಕುಟುಂಬದ ಎಲ್ಲ ಸದಸ್ಯರ ಮೂಲ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ ಹಾಗೂ ಎಲ್‌ಪಿಜಿ ಗ್ಯಾಸ್ ಸಂಪರ್ಕದ ವಿವರಗಳನ್ನು ಒದಗಿಸಬೇಕಾಗುತ್ತದೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ಲಾಂಗೆ ಯುವಕ ಮತಾಂತರ; ‘ಬ್ರೇನ್‌ವಾಶ್’ ಆರೋಪ: ಇಷ್ಟದ ಧರ್ಮ ಅನುಸರಿಸುವ ಸ್ವಾತಂತ್ರ್ಯವಿದೆ ಎಂದ ಹೈಕೋರ್ಟ್

ವಯಸ್ಕನಾದ ವ್ಯಕ್ತಿಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಾಗೂ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ...

ಧಾರವಾಡ | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಸಚ್ಚಿದಾನಂದ

ಭೂ ದಾಖಲೆಗಳ ತಿದ್ದುಪಡಿ ಮತ್ತು 'ಖರಾಬು' ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ...

ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತ- ಪಾಕ್ ಯುದ್ಧನೌಕೆಗಳು ಢಿಕ್ಕಿ ಹೊಡೆದ ಕತೆಯೇನು?

ಅರಬ್ಬಿ ಸಮುದ್ರದ ಉತ್ತರ ಭಾಗದ ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತ ಮತ್ತು ಪಾಕಿಸ್ತಾನದ...

ವಿಜಯಪುರ | ವಿದ್ಯಾರ್ಥಿನಿಯರು ಆರೋಗ್ಯ ಕಾಳಜಿ ಮಾಡಬೇಕು: ಪ್ರೊ. ವಿಜಯಾ ಬಿ ಕೊರಿಶೆಟ್ಟಿ

ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಣ್ಣಿನ ಆರೋಗ್ಯವನ್ನು...