ನಮ್ಮ ಮೆಟ್ರೋ | ಸುರಂಗ ಕೊರೆಯುವ ಟಿಬಿಎಂ ಯಂತ್ರಗಳಿಗೆ ಅಡ್ಡ ಬಂದ ಬಂಡೆ; ಪಿಂಕ್ ಲೈನ್ ಕಾಮಗಾರಿ ವಿಳಂಬ

Date:

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮದ್ದಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ‘ನಮ್ಮ ಮೆಟ್ರೋ’ ಇನ್ನೂ 72 ಕಿ.ಮೀಗೂ ಹೆಚ್ಚು ವಿಸ್ತರಣೆಯಾಗಿದೆ. ಮೆಟ್ರೋದಲ್ಲಿ ದಿನಕ್ಕೆ ಲಕ್ಷಾಂತರ ಮಂದಿ ಸಂಚಾರ ಮಾಡುತ್ತಿದ್ದಾರೆ. ನಗರದ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಕಡಿಮೆ ಮಾಡಲು ಹಳದಿ ಹಾಗೂ ಪಿಂಕ್ ಮಾರ್ಗದ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ, ಹಳದಿ ಮಾರ್ಗದ ಚಾಲಕ ರಹಿತ ಮೆಟ್ರೋದಟ್ರಯಲ್ಟೆಸ್ಟ್’ ಆರಂಭವಾಗಿದೆ​. ಆದರೆ, ಬಹುನಿರೀಕ್ಷಿತ ಪಿಂಕ್ ಲೈನ್ ಕಾಮಗಾರಿಮತ್ತಷ್ಟು ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.

ನಮ್ಮ ಮೆಟ್ರೊಹಳದಿ ಮಾರ್ಗದಲ್ಲಿ ಪ್ರಮುಖ ಪರೀಕ್ಷೆಗಳು ಗುರುವಾರ ಆರಂಭಗೊಂಡಿವೆ. ಚಾಲಕ ರಹಿತ ಎಂಜಿನ್ಹೊಂದಿರುವ ರೈಲು ಸಂಚರಿಸಿದೆ. ಬೊಮ್ಮಸಂದ್ರ – ಆರ್‌.ವಿ ರಸ್ತೆ ನಡುವಿನ 18.82 ಕಿ.ಮೀ ಹಳಿಯಲ್ಲಿ ಚಾಲಕ ರಹಿತ ಎಂಜಿನ್ಕೋಚ್ನಲ್ಲಿ ತಂತ್ರಜ್ಞರು ಗುರುವಾರ ಸಂಚರಿಸಿ ಟ್ರ್ಯಾಕ್ಷನ್ಮತ್ತು ಬ್ರೇಕಿಂಗ್ಟೆಸ್ಟ್ಮಾಡಿದ್ದಾರೆಇನ್ನು ಮೂರ್ನಾಲ್ಕು ತಿಂಗಳುಗಳ ಕಾಲ ನಾನಾ ಪರೀಕ್ಷೆಗಳು ನಡೆಯಲಿವೆ ಎಂದು ಬಿಎಂಆರ್ಸಿಎಲ್ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಹುನಿರೀಕ್ಷಿತ ಪಿಂಕ್‌ ಮಾರ್ಗದ ಅಂಡರ್ ಪಾಸ್ ಕಾಮಗಾರಿಗಾಗಿ ನೆಲದೊಳಕ್ಕೆ ಇಳಿಸಿದ್ದ ಎರಡು ಟಿಬಿಎಂ ಮಷಿನ್ಗಳಿಗೆ ಬಂಡೆಗಲ್ಲುಗಳು ಅಡ್ಡಿಯಾಗಿವೆ. ಹೀಗಾಗಿ, ಕಾಮಗಾರಿಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ.

ಪಿಂಕ್‌ ಲೈನ್ ಕಾಳೇನ ಅಗ್ರಹಾರದಿಂದ ನಾಗವಾರವನ್ನು ಸಂಪರ್ಕಿಸುತ್ತದೆ. ಈ ಲೈನ್ 21 ಕಿ.ಮೀ ಮಾರ್ಗದ 13 ಕಿಮೀ ಸುರಂಗ ಮಾರ್ಗದಲ್ಲಿ ಮೆಟ್ರೋ ಲೈನ್ ಹಾದು ಹೋಗಿದೆ. ಇದು ಬೆಂಗಳೂರಿನ ಅತಿ ದೊಡ್ಡ ಮೆಟ್ರೋ ಸುರಂಗ ಕಾಮಗಾರಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂಬತ್ತು ಟಿಬಿಎಂ ಮಷಿನ್ಗಳಮೂಲಕ ಸುರಂಗ ಕಾಮಗಾರಿ ಕೆಲಸ ಮಾಡಲಾಗುತ್ತಿದೆ. ಈ ಪೈಕಿ ಏಳು ಟಿಬಿಎಂ ಮಷಿನ್​​​ಗಳು ಯಶ್ವಸಿಯಾಗಿ ಸುರಂಗ ಕೊರೆದು ಹೊರಗೆ ಬಂದಿವೆ. ಇನ್ನು ಎರಡು ಟಿಬಿಎಂ ಮಷಿನ್​​ಗಳಾದ ತುಂಗಾ ಮತ್ತು ಭದ್ರಾ ಆಗಸ್ಟ್ ಒಳಗೆ ಸುರಂಗ ಕೊರೆಯಬೇಕಾಗಿತ್ತು. ಆದರೆ, ಬಂಡೆಕಲ್ಲು ಅಡ್ಡಬಂದಿವೆ. ಹೀಗಾಗಿ, ಮೆಟ್ರೋ ಕಾಮಗಾರಿ ವಿಳಂಬವಾಗಲಿದೆ.

ಈ ಸುದ್ದಿ ಓದಿದ್ದೀರಾ? 254 ಹೊಸ ‘ನಮ್ಮ ಕ್ಲಿನಿಕ್‌’ಗಳಿಗೆ ಸ್ಥಳ ಗುರುತಿಸಿ; ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ದಿನೇಶ್ ಗುಂಡುರಾವ್

ಸುರಂಗ ಕೊರೆಯುವ ವೇಳೆ ಮತ್ತಷ್ಟು ಬಂಡೆಕಲ್ಲುಗಳು ಅಡ್ಡ ಬರುವ ಸಾಧ್ಯತೆ ಹೆಚ್ಚಾಗಿದೆ. ಈಗ ತುಂಗಾ ಟಿಬಿಎಂ ಯಂತ್ರವು ಶೇ.45ರಷ್ಟು ಸುರಂಗ ಕೊರೆದಿದೆ. ಭದ್ರಾ ಶೇ.22ರಷ್ಟು ಮಾತ್ರವೇ ಸುರಂಗ ಕೊರೆದಿದೆ.

ದಿನನಿತ್ಯ ಎರಡು ಟಿಬಿಎಂಗಳು 5 ಕಿ.ಮೀನಷ್ಟು ಸುರಂಗ ಕೊರೆಯುವ ಸಾಮರ್ಥ್ಯ ಹೊಂದಿವೆ. ಆದರೆ, ಈಗ ಬಂಡೆಕಲ್ಲು ಅಡ್ಡ ಬಂದಿರುವ ಪರಿಣಾಮ 3 ಕಿ.ಮೀ ನಷ್ಟು ಮಾತ್ರ ಸುರಂಗ ಕೊರೆಯಲು ಸಾಧ್ಯವಾಗಲಿದೆ ಎನ್ನಲಾಗಿದೆ.

ಪಿಂಕ್ ಮಾರ್ಗದಲ್ಲಿ 18 ಸ್ಟೇಷನ್ ಬರಲಿವೆ. ಈ ಪೈಕಿ ಆರು ಎಲಿವೇಟೆಡ್ 12 ಅಂಡರ್ ಗ್ರೌಂಡ್ ಸ್ಟೇಷನ್ ಇರಲಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಮೆಟ್ರೋದಲ್ಲಿ ಟಿಕೆಟ್ ಖರೀದಿಸದೆ ಪ್ರಯಾಣಿಸಿದ್ದ ಯೂಟ್ಯೂಬರ್ ಈಗ ಯುರೋಪ್ ಸಂಸದ!

ಕಳೆದ ವರ್ಷ ನಮ್ಮ ಮೆಟ್ರೋದಲ್ಲಿ ಟಿಕೆಟ್ ತೆಗೆಯದೆ ಉಚಿತವಾಗಿ ಪ್ರಯಾಣಿಸಿ ಸುದ್ದಿಯಾಗಿದ್ದ...

ಚಿಂತಾಮಣಿ | ಎರಡು ವರ್ಷಗಳ ಪ್ರೀತಿಗೆ ಪೋಷಕರ ವಿರೋಧ; ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ

ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು...

ಈ ದಿನ.ಕಾಮ್ ವರದಿ ಫಲಶೃತಿ | ಕೊನೆಗೂ ಶತಾಯುಷಿ ಅಜ್ಜಿಯ ಖಾತೆಗೆ ಜಮೆಯಾಯ್ತು ವೃದ್ದಾಪ್ಯ ವೇತನ

ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಲಕ್ಷ್ಮೀಬಾಯಿ ಮಹಾಪುರೆ ಎಂಬ 110 ವರ್ಷದ...