ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್‌ವೊಂದು (ಟಿಟಿ) ಕಳುವಾಗಿರುವ ಘಟನೆ ನಡೆದಿದೆ. ಭಟ್ಕಳದ ಮಣ್ಣುಳಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಫಿರ್ಯಾದುದಾರ ಕೃಷ್ಣ ತಂದೆ ಅನಂತ ಅವರು ತಮ್ಮ ಬಿಳಿ ಬಣ್ಣದ ಟ್ರಾವೆಲರ್ ಮಿನಿ ಬಸ್ (ಕೆಎ 47/7838) ಅನ್ನು ಸೆ.27ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ
ಸೆ.27ರ ಬೆಳಿಗ್ಗೆ 11 ಗಂಟೆಯಿಂದ ಸೆ.28ರ ಮಧ್ಯಾಹ್ನ 12.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮಿನಿ ಬಸ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿನಲ್ಲಿ ತಿಳಿಸಿದ್ದಾರೆ.
ಕಳುವಾಗಿರುವ ಮಿನಿ ಬಸ್‌ನ್ನು ಪತ್ತೆಹಚ್ಚಿ, ಕಳವು ಮಾಡಿದ ಆರೋಪಿತನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೃಷ್ಣ ಅವರು ಠಾಣೆಗೆ ದೂರು ನೀಡಿದ್ದಾರೆ.




