4,682 ಕೋಟಿ ರೂ. ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು; ಸರ್ಕಾರ ಚಾಟಿ ಬೀಸುವುದೇ?

Date:

ಕಳೆದ ವರ್ಷ ಎಫ್‌ಆರ್‌ಪಿ ನಿಗದಿ ಪಡಿಸಿಲ್ಲವೆಂದು ಬೀದಿಗೆ ಇಳಿದ ರೈತರ ಹೋರಾಟಕ್ಕೆ ಸರ್ಕಾರ ಮಣಿದು, ಪ್ರತಿ ಟನ್‌ಗೆ 3,300ರೂ ಗಳನ್ನು ನಿಗದಿ ಪಡಿಸಿದ್ದಾಗಲೂ, ಇಷ್ಟೊಂದು ಮೊತ್ತದ ಹಣವನ್ನು ಕಾರ್ಖಾನೆಗಳು ಬಾಕಿ ಉಳಿಸಿಕೊಂಡು ರೈತರ ಎದೆಯ ಮೇಲೆ ಇನ್ನಷ್ಟು ಭಾರ ಹಾಕಲು ನಿರ್ಧರಿಸಿದಂತಿದೆ.

- Advertisement -

ರಾಜ್ಯದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿ ಮೂರು ತಿಂಗಳು ಕಳೆಯುತ್ತ ಬಂದಿದ್ದರೂ, ಕಬ್ಬು ಪೂರೈಸಿದ ರೈತರ ಕಬ್ಬಿನ ಬಿಲ್‌ 4,682 ಕೋಟಿ ರೂಗಳನ್ನು ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ರಾಜ್ಯದಲ್ಲಿ ಈಗಾಗಲೇ 81 ಸಕ್ಕರೆ ಕಾರ್ಖಾನೆಗಳು, ಸುಮಾರು 390 ಲಕ್ಷ ಟನ್‌ ಕಬ್ಬನ್ನು ನುರಿಸಿವೆ. ಜನವರಿ 15ರ ವರೆಗೆ 31.72 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. 15,609 ಕೋಟಿ ರೂ ಪಾವತಿಸಬೇಕಿದ್ದ ಕಾರ್ಖಾನೆಗಳು, 10,935 ಕೋಟಿ ರೂಗಳನ್ನು ಮಾತ್ರ ರೈತರಿಗೆ ಪಾವತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಕಳೆದ ವರ್ಷದ ಅಂತ್ಯದ ತಿಂಗಳಾದ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಕಬ್ಬು ಬೆಳೆಗಾರರು ಬೀದಿಗಿಳಿದು ಪ್ರತಿಭಟಿಸಿದ್ದರು. ಕೇಂದ್ರ ಸರ್ಕಾರವು ಪ್ರತಿ ಟನ್‌ ಕಬ್ಬಿಗೆ ನಿಗದಿಪಡಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ದರ(ಎಫ್‌ಆರ್‌ಪಿ) ಆಧಾರದಲ್ಲಿ ರಾಜ್ಯದಲ್ಲಿ ಬೆಲೆ ನಿಗದಿ ಮಾಡಲಾಗಿದ್ದರೂ ಸಕ್ಕರೆ ಕಾರ್ಖಾನೆಗಳು ಕಡಿಮೆ ದರ ನೀಡುತ್ತಿವೆ ಎಂಬುದು ಪ್ರತಿಭಟನಕಾರ ರೈತರ ಆಕ್ರೋಶವಾಗಿತ್ತು.

ಕಬ್ಬು ನುರಿಯುವ ಹಂಗಾಮು ಪ್ರಾರಂಭವಾದರೂ, ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಧಾರ ಬಂದಿಲ್ಲ. ಪ್ರತಿ ಟನ್‌ ಕಬ್ಬಿಗೆ 3,500ರೂ ಕೊಡಬೇಕು, ಆದರೆ ಕಾರ್ಖಾನೆಗಳು ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ವಾರಗಟ್ಟಲೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ, ಪ್ರತಿಪಕ್ಷಗಳು ರೈತರ ಬಳಿಗೆ ಬಂದವು. ಆಡಳಿತ ಪಕ್ಷದ ಸಕ್ಕರೆ ಸಚಿವರೂ ಪ್ರತಿಭಟನಾ ನಿರತ ರೈತರ ಸ್ಥಳಕ್ಕೆ ಧಾವಿಸಿ ಛೀಮಾರಿ ಹಾಕಿಸಿಕೊಂಡರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ರೈತರ ಜೊತೆ ವಿಧಾನಸೌಧದಲ್ಲಿ ಸಭೆಯನ್ನು ನಡೆಸಿ, ಪ್ರತಿ ಟನ್‌ ಕಬ್ಬಿಗೆ 3,300 ರೂ ನಿಗದಿ ಪಡಿಸುವ ತೀರ್ಮಾನವನ್ನು ಕೈಗೊಳ್ಳಬೇಕಾಯಿತು.

ಇದನ್ನು ಓದಿ :ಬಾಗಲಕೋಟ | ಬಾಕಿ ಹಣ ಬಿಡುಗಡೆ ಮಾಡುವಂತೆ ಕಬ್ಬು ಬೆಳೆಗಾರರು ಒತ್ತಾಯ

ಕಾರ್ಖಾನೆಗಳು ಈ ಹಿಂದೆ ನಿಗದಿಪಡಿಸಿದ್ದ 3,200ರೂ ಜೊತೆಗೆ, ಹೆಚ್ಚುವರಿಯಾಗಿ 50ರೂ ಹಾಗೂ ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ 50ರೂ ಪಾವತಿಸಲಿದೆ. ಸಾಗಣಿ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ11.25 ಇಳುವರಿ ಪ್ರಮಾಣ ಇರುವ ಪ್ರತಿ ಟನ್‌ ಕಬ್ಬಿಗೆ 3,300ರೂ ಹಾಗೂ ಶೇ10.5 ಇಳುವರಿ ಪ್ರಮಾಣ ಇರುವ ಕಬ್ಬಿನ ಟನ್‌ ಗೆ 3,200ರೂ ಸಿಗಲಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದರು.

ರಾಜ್ಯಸರ್ಕಾರದ ತೀರ್ಮಾನದಿಂದ ಬಹುತೇಕ ರೈತರಿಗೆ ಅಸಮಾಧಾನವಿದ್ದರೂ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸುವಲ್ಲಿ ಸಮ್ಮತಿ ಸೂಚಿಸಿದರು. ಹೀಗೆ ಕಳೆದ ಮೂರು ತಿಂಗಳಿನಿಂದ 390 ಲಕ್ಷ ಟನ್‌ ಕಬ್ಬನ್ನೂ ನುರಿಸಿರುವ ಕಾರ್ಖಾನೆಗಳು ರೈತರಿಗೆ 4,682 ಕೋಟಿ ರೂಗಳಷ್ಟು ಕೊಡಬೇಕಿರುವ ಹಣವನ್ನು ಬಾಕಿ ಉಳಿಸಿಕೊಂಡಿವೆ. ಇವುಗಳಲ್ಲಿ ರಾಜಕಾರಣಿಗಳ ಕಾರ್ಖಾನೆಗಳೇ ಹೆಚ್ಚಿವೆ.

ರಾಜ್ಯ ಸರ್ಕಾರ ಕರೆದಿರುವ ವಿಶೇಷ ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯದ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣದ ಕುರಿತು ವಿಧಾನ ಪರಿಷತ್ ಸದಸ್ಯ ಡಾ ಎಂ.ಜಿ.ಮುಳೆ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ವಿಧಾನಸಭೆ ಅಧಿವೇಶನಕ್ಕೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಮಾಹಿತಿ ಒದಗಿಸಿದ್ದಾರೆ.

2025-26ನೇ ಸಾಲಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಸ್.ಆರ್. ಪಾಟೀಲ್, ಶಾಮನೂರು ಶಿವಶಂಕರಪ್ಪ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ರಾಜಕೀಯ ಪ್ರಭಾವಿಗಳ ಕುಟುಂಬ ಸದಸ್ಯರ ಒಡೆತನದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು ಈ ಪಟ್ಟಿಯಲ್ಲಿವೇ ಎಂಬುದು ಸಚಿವರು ಕೊಟ್ಟ ಉತ್ತರದಿಂದ ಗೊತ್ತಾಗಿದೆ.

ಬೆಳಗಾವಿಯಲ್ಲಿ 29 ಸಕ್ಕರೆ ಕಾರ್ಖನೆಗಳಿಂದ 1,769.3 ಕೋಟಿ ರೂ, ಬಾಗಲಕೋಟೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ 1,382.26 ಕೋಟಿ ರೂ, ಬೀದರ್‌ ನಲ್ಲಿರುವ 5 ಸಕ್ಕರೆ ಕಾರ್ಖಾನೆಗಳಲ್ಲಿ 249.62 ಕೋಟಿ ರೂ, ಕಲಬುರಗಿಯಲ್ಲಿರುವ 5 ಸಕ್ಕರೆ ಕಾರ್ಖಾನೆಗಳಲ್ಲಿ 386.04 ಕೋಟಿ ರೂ, ಮಂಡ್ಯದಲ್ಲಿರುವ 5 ಸಕ್ಕರೆ ಕಾರ್ಖಾನೆಗಳಿಂದ 12.68 ಕೋಟಿ ರೂ, ವಿಜಯಪುರದಲ್ಲಿರುವ 10 ಕಾರ್ಖಾನೆಗಳಿಂದ 608.95 ಕೋಟಿ ರೂ, ಬಾಕಿ ಉಳಿಸಿಕೊಂಡಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಮೀ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್ ಲಿಮಿಟೆಡ್ 54.36 ಕೋಟಿ ರೂ., ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಡೆತನದಲ್ಲಿರುವ ಸತೀಶ್ ಷುಗರ್ಸ್ ಲಿಮಿಟೆಡ್, 65.07 ಕೋಟಿ ರೂ.ಗಳನ್ನು, ರಮೇಶ್ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಷುಗರ್ಸ್ ಲಿಮಿಟೆಡ್ 26.77 ಕೋಟಿ ರೂ. ಹಣವನ್ನು ಕಬ್ಬು ಬೆಳೆಗಾರರಿಗೆ ಪಾವತಿಸಲು ಬಾಕಿ ಇರಿಸಿಕೊಂಡಿದೆ.

ಮುರುಗೇಶ್ ನಿರಾಣಿ ಕುಟುಂಬದ ಒಡೆತನದಲ್ಲಿರುವ ನಿರಾಣಿ ಷುಗರ್ಸ್ 168.4 ಕೋಟಿ ರೂ, ಬೀಳಗಿ ಷುಗರ್ ಮಿಲ್ 49.55 ಕೋಟಿ ರೂ., ಕಲ್ಲಾಪುರದಲ್ಲಿರುವ ನಿರಾಣಿ ಅವರ ಕುಟುಂಬ ಸದಸ್ಯರ ಮತ್ತೊಂದು ಸಮೂಹ ಎಂಆರ್‌ಎನ್ ಕೇನ್ ಪವರ್ 64.41 ಕೋಟಿ ರೂ., ಮಂಡ್ಯದಲ್ಲಿರುವ ಎಂಆರ್‌ಎನ್ ಕೇನ್ ಪವರ್ ಬಯೋ ರಿಫೈನರೀಸ್ 2.27 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದ ಶಾಮನೂರು ಷುಗರ್ಸ್ 25.27 ಕೋಟಿ ರೂ, ಮೈಲಾರ್ ಷುಗರ್ಸ್ 20.22 ಕೋಟಿ, ದಾವಣಗೆರೆ ಷುಗರ್ಸ್ ಲಿಮಿಟೆಡ್ 16.93 ಕೋಟಿ ರೂ ಬಾಕಿ ಉಳಿಸಿಕೊಂಡಿವೆ.

ಕಲಬುರಗಿಯಲ್ಲಿ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಅಧ್ಯಕ್ಷರಾಗಿರುವ ಸಿದ್ಧಸಿರಿ ಎಥನಾಲ್ ಪವರ್ ಯುನಿಟ್ 100.97 ಕೋಟಿ ರೂ ಬಾಕಿ ಹಾಗೂ ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಕುಟುಂಬದ ಭಾಲ್ಕೇಶ್ವರ ಷುಗರ್ಸ್ ಲಿಮಿಟೆಡ್ 50.90 ಕೋಟಿ ರೂ ಬಾಕಿ ಉಳಿಸಿಕೊಂಡಿದೆ.

ರಾಜ್ಯ ಸರ್ಕಾರ ನಿಗದಿ ಪಡಿಸಿದ ಎಫ್‌ಆರ್‌ಪಿಯನ್ನು, ಕಬ್ಬು ಕಟಾವು ಮಾಡಿ ಕಾರ್ಖಾನೆಗಳು ಕೊಂಡೋಯ್ದ 14 ದಿನಗಳ ಒಳಗೆ ರೈತರಿಗೆ ಹಣವನ್ನು ಪಾವತಿಸಬೇಕು. ಆದರೆ ವಿಧಾನಸಭೆಯಲ್ಲಿ ಸಕ್ಕರೆ ಸಚಿವರು ಕೊಟ್ಟ ಉತ್ತರದ ಪ್ರಕಾರ, ಕಳೆದ ನವೆಂಬರ್‌ ಮತ್ತು ಡಿಸೆಂಬರ್ ಎರಡೂ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಶೇ30 ರಷ್ಟು ಹಣವನ್ನು ಬಾಕಿ ಉಳಿಸಿಕೊಂಡಿವೆ. ಕೆಲ ಕಾರ್ಖಾನೆಗಳು ಶೇ25 ರಿಂದ ಶೇ40 ಪಾವತಿಸಿದ್ದರೆ, ಇನ್ನು ಕೆಲ ಕಾರ್ಖಾನೆಗಳು ಶೇ70 ರಿಂದ ಶೇ80 ರಷ್ಟು ಪಾವತಿಸಿವೆ.

ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ʼಈದಿನʼ ಜೊತೆ ಮಾತನಾಡಿ “ಕಬ್ಬು ಕಾರ್ಖಾನೆ ನಡೆಸುವವರು ಸರ್ಕಾರಕ್ಕಿಂತಲೂ ದೊಡ್ಡವರೆಂಬ ಭಾವನೆಯಲ್ಲಿ ವರ್ತಿಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಪ್ರಮುಖರೇ ಕಾರ್ಖಾನೆಯ ಒಡೆತನ ಹೊಂದಿದ್ದಾರೆ. ಈ ಕಾರಣಕ್ಕಾಗಿ ರೈತರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕಬ್ಬಿನ ಎಫ್‌ಆರ್‌ಪಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಗಳಲ್ಲಿ ಸಮಸ್ಯೆಯಿದೆ. ಆದರೂ ಕಬ್ಬು ಬೆಳೆಗಾರರ ಹೋರಾಟದ ಸಮಯದಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವೆ ಮಧ್ಯಸ್ಥಿಕೆ ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸರಿಯಾದ ಪರಿಹಾರವನ್ನು ಕೊಡಬೇಕು ಎಂದು ಜಂಟಿ ತೀರ್ಮಾನ ಕೈಗೊಂಡಗಲೂ, 4,682 ಕೋಟಿ ರೂಗಳನ್ನು ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ಇದನ್ನು ಕೇಳಲು ಹೋದರೆ, ನೆಪಗಳನ್ನು ಹೇಳಿ ತಳ್ಳಿಹಾಕ್ತಾರೆ.  ಆದ್ದರಿಂದ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಕಬ್ಬು ಬೆಳೆಗಾರರು ಮತ್ತೆ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯಬೇಕಾಗುತ್ತದೆ” ಎಂದು ಎಚ್ಚರಿಕೆ ಕೊಟ್ಟರು.

ಸರ್ಕಾರದ ಒಡೆತನದಲ್ಲಿ ಮಂಡ್ಯದಲ್ಲಿರುವ ಮೈಷುಗರ್‌, ಹಾಸನದಲ್ಲಿರುವ ಹೇಮಾವತಿ ಸಕ್ಕರೆ ಕಾರ್ಖಾನೆ, ವಿಜಯಪುರದಲ್ಲಿರುವ ನಂದಿ ಸಕ್ಕರೆ ಕಾರ್ಖಾನೆ, ಬೆಳಗಾವಿಯಲ್ಲಿರುವ ಕೃಷ್ಣ ಸಕ್ಕರೆ ಕಾರ್ಖಾನೆಯು ರೈತರಿಗೆ ಕೊಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿವೆ.

ಮೇಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳ ಕುಟುಂಬದ ಒಡೆತನದಲ್ಲಿವೆ. ಕಳೆದ ವರ್ಷ ಎಫ್‌ಆರ್‌ಪಿ ನಿಗದಿ ಪಡಿಸಿಲ್ಲವೆಂದು ಬೀದಿಗೆ ಇಳಿದ ರೈತರ ಹೋರಾಟಕ್ಕೆ ಸರ್ಕಾರ ಮಣಿದು, ಪ್ರತಿ ಟನ್‌ಗೆ 3,300ರೂ ಗಳನ್ನು ನಿಗದಿ ಪಡಿಸಿದ್ದಾಗಲೂ, ಇಷ್ಟೊಂದು ಮೊತ್ತದ ಹಣವನ್ನು ಕಾರ್ಖಾನೆಗಳು ಬಾಕಿ ಉಳಿಸಿಕೊಂಡು ರೈತರ ಎದೆಯ ಮೇಲೆ ಇನ್ನಷ್ಟು ಭಾರ ಹಾಕಲು ನಿರ್ಧರಿಸಿದಂತಿದೆ.

ಖಾಸಗಿ ಕಾರ್ಖಾನೆಗಳ ಜೊತೆಗೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವುದು ದುರಂತವೇ ಸರಿ. ಕಷ್ಟಪಟ್ಟು ಬೆಳೆದ ಕಬ್ಬಿಗೆ ಸರಿಯಾದ ಬೆಲೆಯನ್ನು ನಿಗದಿ ಪಡಿಸಲು ಬೀದಿಗಿಳಿದಂತೆ, ತಕ್ಷಣವೇ ಹಣ ಪಾವತಿಸಲು ಬೀದಿಗಳಿಯಬೇಕಾ ಎಂಬ ಪ್ರಶ್ನೆ ಬರುತ್ತದೆ. ಬಹುತೇಕ ಕಾರ್ಖಾನೆಗಳು ಆಡಳಿತ ಪಕ್ಷದ ರಾಜಕಾರಣಿಗಳ ಒಡೆತನದಲ್ಲಿದೆ. ಇವುಗಳು ತ್ವರಿತವಾಗಿ ಬಾಕಿ ಪಾವತಿಸದೆ ಹೋದರೆ, ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕವ ಪರಿಸ್ಥಿತಿ ಎದುರಾಗಬಹುದು. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ, ತ್ವತರಿತವಾಗಿ ರೈತರಿಗೆ ಕೊಡಬೇಕಾದ ಬಾಕಿ ಹಣವನ್ನು ಪಾವತಿಸುವಂತ ಎಚ್ಚರಿಸಬೇಕಾಗಿದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...