ಶುಲ್ಕ ಪಾವತಿಸಿಲ್ಲವೆಂದು ಪ್ಲೇ ಸ್ಟೋರ್‌ನಿಂದ ವೈವಾಹಿಕ ಆಪ್‌ಗಳನ್ನು ರದ್ದುಗೊಳಿಸಿದ ಗೂಗಲ್

Date:

ಸೇವಾ ಶುಲ್ಕ ಪಾವತಿ ವಿವಾದಗಳ ಹಿನ್ನೆಲೆಯಲ್ಲಿ ಜನಪ್ರಿಯ ಆನ್‌ಲೈನ್‌ ವೈವಾಹಿಕ ಆಪ್ ಭಾರತ್ ಮ್ಯಾಟ್ರಿಮೋನಿ ಸೇರಿದಂತೆ 10 ಆಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗೂಗಲ್ ತೆಗೆದುಹಾಕಿದೆ.

ವೈವಾಹಿಕ ಆಪ್‌ಗಳು ಸೇರಿದಂತೆ 10 ಆಪ್‌ಗಳು ಗೂಗಲ್ ಗೆ ಸಲ್ಲಿಸಬೇಕಾದ ಪಾವತಿಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸದ ಕಾರಣ ರದ್ದುಪಡಿಸಲಾಗಿದೆ. ಕಂಪನಿಗಳು ತಮ್ಮ ಆಪ್‌ಅನ್ನು ಪ್ಲೇಸ್ಟೋರ್‌ನಲ್ಲಿ ಅಳವಡಿಸಬೇಕಾದರೆ ಕಂಪನಿಯ ನಿಯಮಗಳಂತೆ ಶೇ.11 ರಿಂದ 26ರವರೆಗೂ ಸೇವಾ ಶುಲ್ಕ ಪಾವತಿಸಬೇಕು.

ವೈವಾಹಿಕ ಆಪ್‌ಗಳಾದ ಭಾರತ್ ಮ್ಯಾಟ್ರಿಮೋನಿ, ಶಾದಿ ಡಾಟ್‌ ಕಾಂ, ಕ್ರಿಶ್ಚಿಯನ್ ಮ್ಯಾಟ್ರಮೋನಿ, ಮುಸ್ಲಿಂ ಮ್ಯಾಟ್ರಿಮೋನಿ, ಜೋಡಿ ಆಪ್‌ಗಳಲ್ಲದೆ ಅನ್‌ಅಕಾಡೆಮಿ, ಕುಕು ಎಫ್‌ಎಂ, ಆಲ್ಟ್‌ ಡಿಜಿಟಲ್‌ ಮೀಡಿಯಾ, ಇನ್ಫೋ ಎಡ್ಜ್‌ ಹಾಗೂ ಉದ್ಯೋಗ ಹುಡುಕುವ ನೌಕರಿ ಡಾಟ್‌ ಕಾಂ ಆಪ್‌ಗಳನ್ನು  ಕೂಡ ಗೂಗಲ್ ಪ್ಲೇಸ್ಟೋರ್‌ನಿಂದ ರದ್ದುಪಡಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರದ್ದುಗೊಂಡ ಆಪ್‌ಗಳಲ್ಲದೆ ಹಲವು ಆಪ್‌ಗಳ ಮಾಲೀಕರು ಗೂಗಲ್ ಪ್ಲೇಸ್ಟೋರ್ ವಿಧಿಸುತ್ತಿರುವ ಹೆಚ್ಚುವರಿ ಪಾವತಿಗಳ ವಿರುದ್ಧ ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಭುತ್ವ ಪೋಷಿತ ಮೈತೇಯಿ ಮಿಲಿಟೆಂಟ್‌ ಅಟ್ಟಹಾಸ ಮತ್ತು ಮಣಿಪುರ ಪೊಲೀಸರ ಅಸಹಾಯಕತೆ

ಗೂಗಲ್‌ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮ್ಯಾಟ್ರಿಮೋನಿಯಲ್‌ ಡಾಟ್‌ ಕಾಂ ಮುಖ್ಯಸ್ಥ ಮುರಗವೇಲ್ ಜಾನಕಿರಾಮನ್‌” ಭಾರತೀಯ ಇಂಟರ್‌ನೆಟ್‌ನಲ್ಲಿ ಕಾರಳ ದಿನ” ಎಂದು ಹೇಳಿದ್ದಾರೆ.

ರದ್ದುಗೊಳಿಸಲಾದ ನೌಕರಿ ಡಾಟ್‌ ಕಾಂನ ಮಾತೃ ಸಂಸ್ಥೆ ಇನ್ಫೊ ಎಡ್ಜ್‌ ಇಂಡಿಯಾದ ಸಂಸ್ಥಾಪಕ ಸಂಜೀವ್‌ ಬಿಖ್ಚಂದನಿ ಗೂಗಲ್‌ ಪ್ಲೇಸ್ಟೋರ್‌ ನಿಯಮಗಳ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.

“ಫೆ.09 ರಂದು ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ದಿನದಿಂದ ತಮ್ಮ ಆದೇಶಕ್ಕೆ ಬದ್ಧರಾಗಿದ್ದೇವೆ. ನಾವು ಗೂಗಲ್‌ನ ಯಾವುದೇ ಬಾಕಿಗಳನ್ನು ಉಳಿಸಿಕೊಂಡಿಲ್ಲ. ಎಲ್ಲವನ್ನು ಸಮಯಕ್ಕೆ ಸರಿಯಾಗಿ ಸೇವಾ ಶುಲ್ಕಗಳನ್ನು ಪಾವತಿಸುತ್ತಿದ್ದೇವೆ” ಎಂದು ಸಂಜೀವ್‌ ಬಿಖ್ಚಂದನಿ ತಿಳಿಸಿದ್ದಾರೆ.

ವೈವಾಹಿಕ ಆಪ್‌ಗಳನ್ನು ರದ್ದುಗೊಳಿಸಿದ ನಂತರ ಅವಗಳ ಷೇರುಗಳು ಶೇ.2.7 ರಷ್ಟು ಕುಸಿತ ಕಂಡರೆ, ನೌಕರಿ ಡಾಟ್‌ ಕಾಂನ ಆಪ್‌ಗಳು ಶೇ. 1.5 ಕುಸಿತಕಂಡಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ವರ್ ಡೌನ್ | ಏಕಕಾಲದಲ್ಲಿ ಜಗತ್ತಿನಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಫೇಸ್‌ಬುಕ್, ಇನ್‌ಸ್ಟಾಗ್ರಾಮ್!

ಜಗತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಲಾಗಿನ್ ಮಾಡಲಾಗದೇ ಬಳಕೆದಾರರು...

ಮಧ್ಯಪ್ರದೇಶ: ಫೇಸ್‌ಬುಕ್‌ನಲ್ಲಿ ಹೋಮ್ ಡೆಲಿವರಿಯೊಂದಿಗೆ ಗನ್ ಮಾರಾಟ ಜಾಹಿರಾತು

ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಫೇಸ್‌ಬುಕ್‌ ಪುಟದಲ್ಲಿ ಚಿತ್ರಸಹಿತ ಜಾಹಿರಾತು ನೀಡಿದ್ದ ಆರೋಪಕ್ಕಾಗಿ ಮಧ್ಯಪ್ರದೇಶದ...

2040ಕ್ಕೆ ಚಂದ್ರನ ಮೇಲೆ ನಡಿಗೆ, 2035ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಇಸ್ರೋ ಉದ್ದೇಶ

2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ...

ಪೇಟಿಎಂ ಪಾವತಿ ಬ್ಯಾಂಕ್ | ಅಕ್ರಮ ಹಣ ವ್ಯವಹಾರದ ಬಗ್ಗೆ ಇ.ಡಿ ತನಿಖೆಯ ಅಗತ್ಯವೇಕಿದೆ?

ಪೇಟಿಎಂ ಪಾವತಿ ಬ್ಯಾಂಕ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿರುವ ಸಾಧ್ಯತೆಯನ್ನು ಆರ್‌ಬಿಐ...