ಹಾಸನ | ಹೈ ವೋಲ್ಟೇಜ್‌ ಕ್ಷೇತ್ರದಲ್ಲಿ ಸ್ವರೂಪ್‌ ಜಯಬೇರಿ; ಪ್ರೀತಂ ಗೌಡಗೆ ಮುಖಭಂಗ

Date:

ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ತ್ವರಿತವಾಗಿ ಸಾಗುತ್ತಿದೆ. ಹಾಸನ ಜಿಲ್ಲೆಯ ಜಿದ್ದಾಜಿದ್ದಿನ ಹೈವೋಲ್ಟೇಜ್‌ ಕ್ಷೇತ್ರವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ಪ್ರಕಾಶ್‌ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸಾಶಕ ಪ್ರೀತಂ ಗೌಡ ಸೋಲುಂಡಿದ್ದು, ಮುಖಭಂಗ ಅನುಭವಿಸಿದ್ದಾರೆ.

ಜೆಡಿಎಸ್ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲಕ್ಕೊಳಗಾಗಿದ್ದ ಹಾಸನ ಕ್ಷೇತ್ರದಲ್ಲಿ ಕೊನೆ ಹಂತದಲ್ಲಿ ಗೌಡರ ಕುಟುಂಬದಿಂದ ಸ್ವರೂಪ್‌ ಪ್ರಕಾಶ್‌ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದರು. ಬಳಿಕ ಗೌಡರ ಕುಟುಂಬ ಬಿಜೆಪಿಯನ್ನು ಈ ಬಾರಿ ಸೋಲಿಸಿ ಹಾಸನ ಭದ್ರಕೋಟೆಯನ್ನು ಉಳಿಸಿಕೊಳ್ಳಲೇಬೇಕೆಂದು ಟೊಂಕಕಟ್ಟಿ ನಿಂತಿತ್ತು.

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ, “ನಾನು ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ನಾನು ತುಂಬಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನ್ನ ಗೆಲುವಿನ ಜೈಕಾರ ಹೊಳೆನರಸೀಪುರದ ವರೆಗೂ ಕೇಳುತ್ತದೆ” ಎಂದು ಪರೋಕ್ಷವಾಗಿ ಗೌಡರ ಕುಟುಂಕ್ಕೆ ಸವಾಲು ಹಾಕಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಟ್ಟಾರೆಯಾಗಿ ಮೂರು ಬಾರಿ ಶಾಸಕರಾಗಿದ್ದ ದಿವಂಗತ‌ ಎಚ್.ಎಸ್‌. ಪ್ರಕಾಶ ಅವರ ಪುತ್ರ ಸ್ವರೂಪ್ ಸುಮಾರು 8 ಸಾವಿರ ಮತಗಳಿಂದ ಗೆಲುವು‌ ಸಾಧಿಸಿದ್ದಾರೆ. ಅನುಕಂಪ, ಆಡಳಿತ‌ ವಿರೋಧಿ ಅಲೆ ಕ್ಷೇತ್ರದಲ್ಲಿ‌ ಕೆಲಸ ಮಾಡಿದೆ.

ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರಿಗೆ ಹಿನ್ನಡೆಯಾಗಿದ್ದು, ಮುಖಭಂಗವಾಗಿದೆ. ಅತಿಯಾದ ಆತ್ಮವಿಶ್ವಾಸ, ಅನಗತ್ಯ ಹೇಳಿಕೆಗಳಿಂದ ಗೊಂದಲ ಸೃಷ್ಟಿಸಿಕೊಂಡ ಪ್ರೀತಂ ಗೌಡ ಅವರನ್ನು ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗೆಲುವಿನ ಖಾತೆ ತೆರೆದ ಕಾಂಗ್ರೆಸ್, ಹಾಸನದಲ್ಲಿ ಜೆಡಿಎಸ್‌ನ ಸ್ವರೂಪ್‌ ಗೆಲುವು; ಚಾಮರಾಜನಗರದಲ್ಲಿ ಸೋಮಣ್ಣಗೆ ಸೋಲು

ದಾಸ ಒಕ್ಕಲಿಗ ಸಮುದಾಯದ ಮತಗಳು ಬಿಜೆಪಿ, ಜೆಡಿಎಸ್‌ಗೆ ಹಂಚಿಕೆಯಾಗಿದ್ದು, ಅಲ್ಪಸಂಖ್ಯಾತರ ಮತಗಳು ಸಂಪೂರ್ಣವಾಗಿ ಜೆಡಿಎಸ್ ಪರ ಬಂದಿದ್ದರಿಂದ ಸ್ವರೂಪ್ ಗೆಲುವು ಸುಲಭವಾಯಿತು.

ಸ್ವರೂಪ್‌ಗೆ ಟಿಕೆಟ್ ಕೊಡಲು ಆರಂಭದಲ್ಲಿ ಅಪಸ್ವರ ಎತ್ತಿದ್ದ ಎಚ್.ಡಿ.ರೇವಣ್ಣ ಕುಟುಂಬ ಸ್ವರೂಪ ಪರ ನಿಂತಿದ್ದು ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಭಾವನಾತ್ಮಕ ಪ್ರಚಾರಗಳು ಸ್ವರೂಪ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಪ್ರದೇಶ | ದೇಶದ ಹಿರಿಯ ಎಸ್‌ಪಿ ಸಂಸದ ಶಫೀಕುರ್ ರೆಹಮಾನ್ ಬರ್ಕ್ ನಿಧನ

ದೇಶದ ಹಿರಿಯ ಸಂಸದರಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಕುರ್...

ಬಾಬಾ ರಾಮ್‌ದೇವ್‌ ಮಾಲೀಕತ್ವದ ಪತಂಜಲಿಯ ಜಾಹೀರಾತಿಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ? ಸುಪ್ರೀಂ ಕೋರ್ಟ್‌ ಗರಂ ಸುಪ್ರೀಂ...

ಮಧ್ಯ ಪ್ರದೇಶ | ಕೆಲಸ ಕಳೆದುಕೊಳ್ಳುವ ಭಯ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ...

ಮಾಲೆಗಾಂವ್‌ ಪ್ರಕರಣ | ವಿಚಾರಣೆಗೆ ಬಾರದಿದ್ದರೆ ಕ್ರಮ; ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್‌ಗೆ ಕೋರ್ಟ್‌ ಎಚ್ಚರಿಕೆ

"ಒಂದೋ ವಿಚಾರಣೆಗೆ ಹಾಜರಾಗಿ, ಇಲ್ಲವೇ ಸೂಕ್ತ ಕ್ರಮ ಎದುರಿಸಲು ಸಿದ್ಧರಾಗಿ"...ಹೀಗಂತ ಹೇಳಿದ್ದು...