ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

Date:

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್”

- Advertisement -

ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ ಹೋಲಿಕೆ ನಡೆದು ಒಬ್ಬರು ಮತ್ತೊಬ್ಬರಿಗಿಂತ ಮಿಗಿಲು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜರುಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ...

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ...

ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಮತ್ತು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಇಬ್ಬರೂ ಇದೇ ಜುಲೈನಲ್ಲಿ ನಡೆದ ದೆಹಲಿಯ ಜಂತರ್ ಮಂತರ್‌ ಪ್ರತಿಭಟನೆಯಲ್ಲಿ ದೇಶದ ಗಮನ ಸೆಳೆದರು.

ಇಬ್ಬರೂ ಯುವ ನಾಯಕರು. ಆದರೆ ಇಬ್ಬರ ಸಂಘಟನೆಗಳು ಬೇರೆ. ಹಲವಾರು ಬಾರಿ ಇಬ್ಬರೂ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದಾರೆ.

Advertisements

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಇಬ್ಬರನ್ನೂ ಹೋಲಿಕೆ ಮಾಡುತ್ತಿದ್ದಾರೆ. ಯಾರು ಹೆಚ್ಚು ಪರಿಪಕ್ವರು, ಯಾರು ಹೆಚ್ಚು ಪ್ರತಿಭಾವಂತರು ಎಂಬುದು ಚರ್ಚೆಯ ವಸ್ತು.

ಶನಿವಾರವೂ ಇದೇ ರೀತಿಯ ಕೆಲವು ಪೋಸ್ಟ್‌ಗಳು ಎಕ್ಸ್‌ನಲ್ಲಿ ಹರಿದಾಡಿವೆ. ಈ ಪೋಸ್ಟ್ ಗಳಿಗೆ ಅಭಿಜಿತ್ ಮತ್ತು ನೇಹಾ ಇಬ್ಬರೂ ಪ್ರತಿಕ್ರಿಯಿಸಿದ್ದಾರೆ.

‘Amock’ ಎಂಬ ಎಕ್ಸ್ ಬಳಕೆದಾರ ನೇಹಾ ಬೋರಾ ಅವರ ಫೋಟೋ ಹಾಕಿ, ಹೀಗೆ ವಾದಿಸಿದ್ದಾರೆ- “ನೇಹಾ ಬೋರಾ, ಅಭಿಜೀತ್ ದೀಪ್ಕೆಗಿಂತ ಹೆಚ್ಚು ಪ್ರತಿಭಾವಂತರು. ಹೀಗೆ ಅರ್ಥಮಾಡಿಕೊಳ್ಳುವುದೇ ಪರಿಪಕ್ವತೆ. ಅವರು ಜನ್‌ ಝೀ ಯುವಜನರ ನಿಜವಾದ ಐಕನ್. ಅವರ ಸ್ಟೈಲ್ ಕೂಡ ಅದ್ಭುತ” ಎಂದು ಬರೆದಿದ್ದರು.

ಈ ಪೋಸ್ಟ್‌ನ್ನು ಹಂಚಿಕೊಂಡ ಅಭಿಜೀತ್ ದೀಪ್ಕೆ, “ನಾನು ಇದಕ್ಕೆ ಒಪ್ಪುತ್ತೇನೆ” ಎಂದು ಪ್ರತಿಕ್ರಿಯಿಸಿದರು.

ತುಸು ಸಮಯದ ನಂತರ ನೇಹಾ ಬೋರಾ, ಪ್ರತಿಕ್ರಿಯಿಸಿ- “ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ಬರೆದರು. ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್”

ಹಲವರು ನೇಹಾ ಮತ್ತು ಅಭಿಜಿತ್ ಇಬ್ಬರನ್ನೂ ಬೆಂಬಲಿಸುತ್ತಿದ್ದಾರೆ. ಅರ್ಥಶಾಸ್ತ್ರಜ್ಞೆ ಜಯತಿ ಘೋಷ್, “ಭಾರತದ ಭವಿಷ್ಯದ ಬಗ್ಗೆ ನಮಗಿರುವ ಆಶಾವಾದಕ್ಕೆ ಆಧಾರ, ನೇಹಾ ಬೋರಾ ಮತ್ತು ಅಭಿಜೀತ್ ದೀಪ್ಕೆ ಅವರಂತಹ ಧೈರ್ಯವಂತ ಮತ್ತು ಪ್ರತಿಬದ್ಧ ಯುವಜನರು” ಎಂದು ಬರೆದಿದ್ದಾರೆ.

ತಮ್ಮನ್ನು ಲಿಬರಲ್ ಎಂದು ಹೇಳಿಕೊಳ್ಳುವ ಕೆಲವರು ಅಭಿಜಿತ್ ದೀಪ್ಕೆ ಅವರನ್ನು ಟೀಕಿಸುತ್ತಿದ್ದಾರೆ ಎಂದು ಸಿಜೆಪಿಯ ಸಹ ಸಂಯೋಜಕ ಆಶುತೋಷ್ ರಾಂಕಾ  ಆರೋಪಿಸಿದ್ದಾರೆ.

ಅವರು ಎಕ್ಸ್‌ನಲ್ಲಿ, “ತಮ್ಮನ್ನು ಉದಾರವಾದಿಗಳು ಎಂದು ಹೇಳಿಕೊಳ್ಳುವ ಒಂದು ಗುಂಪು ಅಭಿಜಿತ್ ವಿರುದ್ಧ ಮಾತನಾಡಲು ಆರಂಭಿಸಿದೆ. ಬಹಳ ಸಮಯದ ನಂತರ ಒಬ್ಬ ಯುವಕ ಲಕ್ಷಾಂತರ ಭಾರತೀಯರ ಗಮನ ಸೆಳೆದಿದ್ದಾನೆ. ಅದೇ ಇವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ….” ಎಂದು ಬರೆದಿದ್ದಾರೆ.

ಆಶುತೋಷ್ ಅವರ ಪೋಸ್ಟ್ ಹಂಚಿಕೊಂಡ ಸಿಜೆಪಿ ನಾಯಕ ಸೌರಭ್ ದಾಸ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

“ಇದು ದೊಡ್ಡ ಸಮಸ್ಯೆ. ಕೆಲವರು ಭಾರತವನ್ನು ಮತ್ತು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ತಮ್ಮದೇ ಎಂದುಕೊಳ್ಳುತ್ತಾರೆ. ಅವರು ತಮ್ಮನ್ನು ಲಿಬರಲ್‌ಗಳು ಮತ್ತು ಸಂವಿಧಾನದ ರಕ್ಷಕರು ಎಂದು ಭಾವಿಸುತ್ತಾರೆ.ಈ ಗುಂಪಿನ ಮನಸುಗಳು ಕಹಿಯಾಗಿವೆ. ಇವರ ನಡವಳಿಕೆ ಕೆಲವು ಸಲ ಬಿಜೆಪಿ ಬೆಂಬಲಿಗರಿಗಿಂತಲೂ ಹೆಚ್ಚು ಆಕ್ರಮಣಕಾರಿಯಾಗಿ ಕಾಣುತ್ತದೆ. ಜನರನ್ನು ಒಡೆದು ಬೇರ್ಪಡಿಸಿ ತಮ್ಮ ಪ್ರಭಾವ ಉಳಿಸಿಕೊಳ್ಳುವ ತಂತ್ರ ಫಲ ನೀಡುವುದಿಲ್ಲ. ಕಳೆದ ಹಲವು ವರ್ಷಗಳ ವೈಫಲ್ಯ ಇಂದಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈಗ ಯುವಜನರು ದೇಶಕ್ಕೆ ದಾರಿ ತೋರಿಸುವ ಸ್ಥಿತಿ ಬಂದಿದೆ.  ನಮ್ಮನ್ನು ಟೀಕಿಸುವ ಬದಲು ಯುವಜನರನ್ನು ಹೇಗೆಲ್ಲ ಬೆಂಬಲಿಸಬಹುದು ಎಂಬುದನ್ನು ಯೋಚಿಸಬೇಕು” ಎಂದು ಹೇಳಿದ್ದಾರೆ.

ಅಭಿಜೀತ್ ದೀಪ್ಕೆ ಯಾರು? ಅಭಿಜೀತ್ ದೀಪ್ಕೆ ಒಬ್ಬ ಯುವ ನಾಯಕ. ದಲಿತ ಮೂಲದವರು. ದುರಿತ ಕಾಲದಲ್ಲಿ ಸಾರ್ವಜನಿಕ ಬದುಕಿಗೆ ಕಾಲಿಟ್ಟವರು. ಸರಳವಾಗಿ ಮಾತನಾಡುವ ಮತ್ತು ಜನರೊಂದಿಗೆ ಸಲೀಸಾಗಿ ಬೆರೆಯುವ ಗುಣದಿಂದ ಅವರು ಯುವಜನರಿಗೆ ಪ್ರಿಯರೆನಿಸಿದವರು.

ಅವರು ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಆರಂಭಿಸಿದ್ದು, ಈ ವರ್ಷದ ಮೇ ತಿಂಗಳಲ್ಲಿ. ನಿರುದ್ಯೋಗಿ ಯುವಕರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯವರು ‘ಕಾಕ್ರೋಚ್’ ಎಂದು ಕರೆದರೆಂಬ ಎಂಬ ವಿವಾದದ ನಂತರ ವಿಡಂಬನಾರ್ಥವಾಗಿ ಕಾಕ್ರೋಚ್ ಹೆಸರಿನ ಸಾಮಾಜಿಕ ಜಾಲತಾಣ ಖಾತೆಯನ್ನು ಆರಂಭಿಸಲಾಗಿತ್ತು. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂದು ನಂತರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸ್ಪಷ್ಟನೆ ನೀಡಿದ್ದರು.

ವಿದ್ಯಾರ್ಥಿ ಹೋರಾಟಗಳಲ್ಲಿ ಗುರುತಿಸಿಕೊಳ್ಳುವ ಮೊದಲು, ಅಭಿಜಿತ್ ಡಿಜಿಟಲ್ ರಾಜಕೀಯ ಪ್ರಚಾರ, ರಾಜಕೀಯ ಸಂದೇಶ ರೂಪಿಸುವುದು ಮತ್ತು ಆನ್‌ಲೈನ್ ಅಭಿಯಾನಗಳ ತಂತ್ರ ರೂಪಿಸುವ ಕೆಲಸ ಮಾಡುತ್ತಿದ್ದರು. ಪುಣೆಯಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದವರು. ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ಕುರಿತು ಎರಡು ವರ್ಷದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಹಲವು ದಿನಗಳ ಕಾಲ ಆನ್‌ಲೈನ್‌ನಲ್ಲಿ ಧ್ವನಿ ಎತ್ತಿದ್ದರು. ತರುವಾಯ ಜೂನ್‌ನಲ್ಲಿ ಭಾರತಕ್ಕೆ ಬಂದರು. ಜಂತರ್ ಮಂತರ್‌ನಲ್ಲಿ ಸಿಜೆಪಿಯ ಮೊದಲ ಪ್ರತಿಭಟನೆಯನ್ನು ಮುನ್ನಡೆಸಿದರು.ನಂತರ ಇತರ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದವು.

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಿಜೆಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿತು. ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು.  ನಂತರ ಅಭಿಜಿತ್, “ಈಗ ಸ್ವಲ್ಪ ಹೊತ್ತು ನಿದ್ರೆ ಮಾಡುತ್ತೇನೆ. ನಂತರ ಮತ್ತೆ ಎಲ್ಲರನ್ನೂ ಭೇಟಿ ಮಾಡುತ್ತೇನೆ” ಎಂದು ಎಕ್ಸ್‌ನಲ್ಲಿ ಬರೆದಿದ್ದುಂಟು. ಕಾಕ್ರೋಚ್ ಜನತಾ ಪಾರ್ಟಿ ಒಂದು ರಾಜಕೀಯ ಒತ್ತಡ ಗುಂಪಾಗಿ ಮುಂದುವರಿಯಲಿದೆ. ವಿವಿಧ ಜನರ ಜೊತೆ ಚರ್ಚಿಸಿ ತನ್ನ ಮುಂದಿನ ಅಜೆಂಡಾ ರೂಪಿಸಲಿದೆ ಎನ್ನುತ್ತಾರೆ ಅಭಿಜಿತ್. ಕಡಿಮೆ ವೆಚ್ಚದ ಶಿಕ್ಷಣ, ಖಾಸಗಿ ಶಾಲೆಗಳ ಶುಲ್ಕಕ್ಕೆ ಮಿತಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯ ನೀಡಬೇಕು ಎಂಬುದು ಅವರ ಒತ್ತಾಯ.

ಜಂತರ್ ಮಂತರ್ ಹೋರಾಟದಲ್ಲಿ ನೇಹಾ ಬೋರಾ ಅವರದು ಕೂಡ ದೊಡ್ಡ ಧ್ವನಿಯಾಗಿತ್ತು. ಅಭಿಜೀತ್ ಬಗ್ಗೆ ಅವರು ಆಡಿರುವ ಮಾತು- “ಅವರು ತುಂಬಾ ವಿನಯಶೀಲರು. ಸಲಹೆಗಳಿಗೆ ಕಿವಿಗೊಡುತ್ತಾರೆ. ಅವರು ನಮ್ಮ ನಾಯಕ ಎಂಬುದಕ್ಕಿಂತ ನಮ್ಮಂತೆಯೇ ಹೋರಾಟದಲ್ಲಿರುವ ವಿದ್ಯಾರ್ಥಿ ಮತ್ತು ಸ್ನೇಹಿತ ಎಂಬ ಭಾವನೆ ಮೂಡಿಸುತ್ತಾರೆ”

ನೇಹಾ ಬೋರಾ ಜೆಎನ್‌ಯುನಲ್ಲಿ ಪಿಎಚ್‌ಡಿ ಸಂಶೋಧಕಿ

ಈಕೆ ಸೇನಾ ಕುಟುಂಬದಿಂದ ಬಂದವರು. ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂಬ ಉಲ್ಲೇಖ ಹಲವು ವರದಿಗಳಲ್ಲಿದೆ. ಉತ್ತರಾಖಂಡದ ಖಟಿಮಾ ಮೂಲದವರು; ಈಗ ಜೆಎನ್‌ಯುನಲ್ಲಿ Theatre and Performance Studies ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ ಮತ್ತು AISA ರಾಷ್ಟ್ರೀಯ ಅಧ್ಯಕ್ಷೆ. ಪ್ರಖರ ಭಾಷಣಕಾರ್ತಿ.

ಅವರ ಕುಟುಂಬದ ರಾಜಕೀಯ ನಿಲುವು ಮತ್ತು ನೇಹಾ ನಿಲುವಿನ ನಡುವೆ ತೀವ್ರ ಭಿನ್ನಾಭಿಪ್ರಾಯ ಇದೆ. ಸಂದರ್ಶನಗಳಲ್ಲಿ ತಮ್ಮ ಕುಟುಂಬ “ಕಟ್ಟರ್ ಬಿಜೆಪಿ ಸಮರ್ಥಕರು”, ಮನೆಯಲ್ಲಿ ರಾಜಕೀಯ ವಿಚಾರವಾಗಿ ದೊಡ್ಡ ವಾಗ್ವಾದಗಳಾಗಿವೆ ಎಂದಿದ್ದಾರೆ.

ತಂದೆಯ ಸೇನಾ ಪೋಸ್ಟಿಂಗ್‌ ಕಾರಣ, 10ರಿಂದ 12ನೇ ತರಗತಿವರೆಗೆ ಉತ್ತರ ಬಂಗಾಳದಲ್ಲಿ ಓದಿದಾಗ ಚಾರು ಮಜುಂದಾರ್, ಪಾಬ್ಲೊ ನೆರುಡಾ, ಅರುಂಧತಿ ರಾಯ್ ಮುಂತಾದವರ ಬರಹ-ಆಲೋಚನೆಗಳ ಪರಿಚಯವಾಯಿತು; ಅದು ತಮ್ಮನ್ನು ಬಲಪಂಥೀಯ ಚಿಂತನೆಯಿಂದ ದೂರ ಮಾಡಿತು ಎಂದು ನೇಹಾ ವಿವರಿಸಿದ್ದಾರೆ.

ಸೋನಂ ವಾಂಗ್ಚುಕ್,   ಜಂತರ್ ಮಂತರ್‌ನಲ್ಲಿ ನಡೆಸಿದ ಅನಿರ್ದಿಷ್ಟಾವಧಿ ಉಪವಾಸದ ಜೊತೆ, AISAದ ಮೂವರು ವಿದ್ಯಾರ್ಥಿಗಳು ಕೂಡ ಉಪವಾಸ ನಡೆಸಿದ್ದರು. ಅವರಲ್ಲಿ ನೇಹಾ ಬೋರಾ, ಮನೀಷ್ ಕುಮಾರ್ ಮತ್ತು ಅಮೀನ್ ಅಮಿತೋಜ್ ಇದ್ದರು.

ಜಂತರ್ ಮಂತರ್ ಪ್ರತಿಭಟನೆಯಲ್ಲಿ, “ಗೋಡ್ಸೆಯನ್ನು ನಂಬುವವರು ಈ ದೇಶವನ್ನು ಆಳಬಾರದು ಎಂದು ಜನರು ಹೇಳತ್ತಿದ್ದರು. ಅಲ್ಲಿ ಆರ್‌ಎಸ್‌ಎಸ್‌ನ ರಾಜಕೀಯದ ಬಗ್ಗೆ ಕೂಡ ಚರ್ಚೆ ನಡೆಯುತ್ತಿತ್ತು. ಎಂದಿದ್ದಾರೆ.

ಒಂದೆಡೆ ಪೇಪರ್ ಲೀಕ್‌ಗಳಂತಹ ಗಂಭೀರ ಸಮಸ್ಯೆಗಳಿವೆ. ಹಿಂದೂ-ಮುಸ್ಲಿಂ ವಿಷಯ ಬಂದರೆ ಜನರ ಗಮನ ಅದಕ್ಕೆ ತಿರುಗುತ್ತದೆ. ಈ ವಿಭಜನೆಯ ರಾಜಕೀಯವೇ ದೇಶವನ್ನು ಇಂದಿನ ದುಸ್ಥಿತಿಗೆ ತಂದಿದೆ ಎಂದು ಜನರು ಮಾತನಾಡುತ್ತಿದ್ದರು” ಎಂದು ಹೇಳಿದ್ದಾರೆ. ಜಂತರ್ ಮಂತರ್ ಹೋರಾಟದಿಂದ ನಾವು ಬಹಳಷ್ಟು ಕಲಿತಿದ್ದೇವೆ. ಅಧಿಕಾರ ಹಿಡಿದವರಿಂದ ಉತ್ತರ ಕೇಳಬಹುದು ಎಂಬ ವಿಶ್ವಾಸ ಮೂಡಿದೆ. ಉಪವಾಸ ಮುಗಿಸಿ ನಾನು ಮೈಕ್ ಹಿಡಿದಾಗ ಒಂದು ಮಾತು ಹೇಳಿದ್ದೆ- ಯುಜನರು ಈ ಭಾವನೆಯನ್ನು ಮರೆಯಬಾರದು. ಒಬ್ಬರ ವಿರುದ್ಧ ಒಬ್ಬರು ಹೋರಾಡುವುದಲ್ಲ. ಒಬ್ಬರಿಗಾಗಿ ಮತ್ತೊಬ್ಬರು  ಹೋರಾಡಬೇಕು. ಈ ಒಗ್ಗಟ್ಟೇ ಮುಖ್ಯ ಎಂಬುದು ಆಕೆಯ ಅನಿಸಿಕೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ...

ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ ಮತದಾರರ ಪಟ್ಟಿ ನಿಯಂತ್ರಣ!

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು...

ಈ ದಿನ ಕವಿತೆ | ಏನೂ ಇಲ್ಲ- ನಾಸೆರ್ ಫಯ್ಜ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ...

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...