ಇರಾನ್‌ ಇಸ್ರೇಲ್‌ನತ್ತ ಜಗತ್ತಿನ ಚಿತ್ತ: ಗಾಜಾ ಅಸ್ಥಿರ

Date:

ಅಪಾರ ಯುದ್ಧ ಹಾನಿಗೊಳಗಾದ ಗಾಜಾದಲ್ಲಿ ಕದನ ವಿರಾಮ ಜಾರಿಯಾಗಿ ಆರು ತಿಂಗಳು ಕಳೆದಿದೆ. ಸಾಮ್ರಾಜ್ಯಶಾಹಿಗಳ ಈ ಯುದ್ಧದಾಹ ಪ್ಯಾಲೇಸ್ತೇನಿಯರ ಬದುಕನ್ನು ಅಧಃಪತನಕ್ಕೆ ತಳ್ಳಿದೆ.

- Advertisement -

ಮಾರುಕಟ್ಟೆಗಳಲ್ಲಿ ಆಹಾರ ಅಭಾವ ಸೃಷ್ಟಿಯಾಗಿದೆ, ಲಭ್ಯವಿರುವ ಆಹಾರ ಸರಕುಗಳ ಬೆಲೆಯೂ ಗಗನಕ್ಕೇರಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ನಿರಂತರ ಯುದ್ಧದಿಂದಾಗಿ ಇಸ್ರೇಲಿನಿಂದ ಸರಬರಾಜು ಆಗುತ್ತಿದ್ದ ಸರಕುಗಳಿಗೂ ಕತ್ತರಿ ಬಿದ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇರಾನ್ ಇಸ್ರೇಲ್‌ ಯುದ್ಧಗಳು ನಮ್ಮ ಮೇಲೆ ಯಾವ ಪರಿಣಾಮ ಬೀರಿದೆ ಇಲ್ಲಿ ಸಾಮಾನು ಸರಂಜಾಮುಗಳು ದುಬಾರಿಯಾಗಿವೆ, ಹಿಂದಿನಂತೆ ಸರಕುಗಳ ಸರಬರಾಜು ನಡೆಯುತ್ತಿಲ್ಲ. ಈ ಹೊಸ ಯುದ್ದದಲ್ಲಿ ಇಸ್ರೇಲ್‌, ಇರಾನ್‌, ಅಮೆರಿಕಗಳತ್ತ ಇಡೀ ಜಗತ್ತಿನ ಗಮನವಿದೆ, ಗಾಜಾ ಎಲ್ಲರ ಸ್ಮರಣೆಯಿಂದ ಅಳಿಸಿ ಹೋಗಿದೆ ಎಂದು ಗಾಜಾದ ಅಂಗಡಿ ವ್ಯಾಪಾರಿ ಹಸನ್ ಫಕವಿ ವ್ಯಥೆ ತೋಡಿಕೊಂಡಿದ್ದಾರೆ.

ಇದನ್ನು ಓದಿ ಗಾಝಾ ಪಟ್ಟಿ ಮರು ಆಕ್ರಮಿಸುವ ಇಸ್ರೇಲ್ ನಡೆಗೆ ಅಮೆರಿಕ ವಿರೋಧ

ಜಗತ್ತು ಇರಾನ್‌ನ ಕಡೆಗೆ ತನ್ನ ಚಿತ್ತ ಹರಿಸಿರುವ ಪ್ರಸ್ತುತ ಸಂದರ್ಭದಲ್ಲಿ ಗಾಜಾ ಮುಂದೇನು ಎಂಬ ತಲ್ಲಣಗಳ ನಡುವೆ ದಿನ ಸಾಗಿಸುತ್ತಿದೆ. ಟ್ರಂಪ್‌ನ 20 ಅಂಶಗಳ ಶಾಂತಿ ಒಪ್ಪಂದ 2025 ಅಕ್ಟೋಬರಲ್ಲಿ ಗಾಜಾ ಸಂಘರ್ಷ ಸ್ಥಗಿತಗೊಳಿಸಿತ್ತು. ಸೂರಿಲ್ಲದೆ ಆಹಾರ ನೀರಿಗೆ ಪರದಾಡುತ್ತಿರುವ ಪ್ಯಾಲೆಸ್ತೇನಿಯರಿಗೆ ನಿರಂತರ ಸುರಿವ ಮಳೆಯು ಬದುಕನ್ನು ನಿರ್ದಯಗೊಳಿಸಿದೆ. ಇತ್ತ ಹಮಾಸ್‌ ದೈನಂದಿನ ಬಳಕೆಯ ವಸ್ತುಗಳಿಗೆ ತೆರಿಗೆ ಹೆಚ್ಚಿಸಿ ಮಾರುತ್ತಿದೆ. ಉದ್ಯೋಗವಿಲ್ಲದೆ ಆದಾಯ ಮೂಲ, ತಂಗಲು ಇದ್ದ ವಸತಿಯನ್ನು ಕಳೆದುಕೊಂಡ ಜನರ ಬದುಕು ಸಂಕಷ್ಟದಲ್ಲಿದೆ. ‌

ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಗಾಜಾದ ಜನರ ಟೆಂಟ್‌ಗಳ ಒಳಗೆ ನೀರು ನುಗ್ಗಿದೆ. ಯುದ್ದ ತ್ಯಾಜ್ಯದಿಂದ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಇದುವರೆಗೂ ದೊಡ್ಡ ಮಟ್ಟದಲ್ಲಿ ಯುದ್ದತ್ಯಾಜ್ಯ ನಿರ್ವಹಣೆ ನಡೆದಿಲ್ಲ ಎನ್ನುತ್ತಾರೆ ಪ್ಯಾಲೆಸ್ತೀನಿಯರು.

ಟ್ರಂಪ್‌ ಮಧ್ಯಸ್ತಿಕೆಯ ಬೋರ್ಡ್‌ ಆಫ್‌ ಪೀಸ್‌ ಮತ್ತು ಇಸ್ರೇಲ್‌ ಒಟ್ಟಾಗಿ  ಹಮಾಸ್‌ ನಿಶಸ್ತ್ರೀಕರಣಕ್ಕೆ ಪಟ್ಟು ಹಿಡಿದಿವೆ. ಹಮಾಸ್‌ ಅಮೆರಿಕದ ಈ ಸಂಧಾನ ಕಾರ್ಯ ಇಸ್ರೇಲ್‌ ಪರವಾಗಿದ್ದು ಇದಕ್ಕೆ ತನ್ನ ಅಭಿಮತವಿಲ್ಲ ಎಂಬ ಹೇಳಿಕೆ ನೀಡಿದೆ. ಕದನವಿರಾಮದ ನಡಯವೆಯೂ ಗಾಜಾದ ಮೇಲೆ ಸತತ ಬಾಂಬ್‌ ದಾಳಿಗಳು ನಡೆಯುತ್ತಲೇ ಇದೆ. ಫೆಬ್ರವರಿಯಿಂದ ಈಚೆಗೆ ಇರಾನ್‌ ಮೇಲಿನ ಇಸ್ರೇಲ್‌ ದಾಳಿ ಆರಂಭವಾದ ನಂತರ  ಗಾಜಾದ ಮೇಲೆಯೂ ವೈಮಾನಿಕ ದಾಳಿ ನಡೆದಿದೆ.

ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ ನೂರಾರು ನಾಗರಿಕರು ಮೃತಪಟ್ಟಿದ್ದಾರೆ. ಇಸ್ರೇಲ್‌ ಹಮಾಸ್‌ ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ಕೊಟ್ಟಿದ್ದು ದಾಳಿಯಲ್ಲಿ ಮೃತರಾದವರು ಹಮಾಸ್‌ ಪಡೆಯ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಎಂದು ಹೇಳಿಕೆ ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...