ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ದಿವ್ಯ ಬ್ರಹ್ಮ ರಥೋತ್ಸವ ಜಾತ್ರೆ ಅದ್ದೂರಿಯಿಂದ ನೆರವೇರಲಿದೆ.
ಜಿಲ್ಲಾಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾ.27ರಿಂದ 2/04/2026 ರವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸುವುದು ಸೂಕ್ತ ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಮಾ. 23ರಿಂದ ಏಪ್ರಿಲ್ 5ರವರೆಗೆ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಲತಾ ಕುಮಾರಿ ಮಾತಾಡಿ, “ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 115 ಹಾಗೂ 1989 ರ ನಿಯಮ 221ಎ(5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ, ವೈಕುಂಠ ಬೀದಿ, ಕೆರೆ ಬೀದಿ, ಮಸೀದಿ ರಸ್ತೆ, ದೇವಸ್ಥಾನದ ಮುಂಭಾಗದ ರಸ್ತೆ, ದೇವಸ್ಥಾನದ ಬಲಭಾಗದ ರಸ್ತೆ, ದೇವಸ್ಥಾನದ ಎಡಭಾಗದ ರಸ್ತೆ, ದೇವಸ್ಥಾನದ ಹಿಂಭಾಗದ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಮಾ. 27ರಿಂದ ಏಪ್ರಿಲ್ 2ರವರೆಗೆ ಸಾರ್ವಜನಿಕರ ವಾಹನಗಳ ಸಂಚಾರ ನಿಷೇಧಿಸಿ ಎಂದು ಆದೇಶಿಸಿದ್ದಾರೆ.
This video cannot be played in your browser. Open the video directly





