ಕದನ ವಿರಾಮಕ್ಕೆ ಇರಾನ್ ಅಸಮಾಧಾನ: ಯುರೇನಿಯಂ ಉತ್ಪಾದನೆ ನಿಲ್ಲಿಸುವುದಿಲ್ಲವೆಂದು ಅಮೆರಿಕಗೆ ಎಚ್ಚರಿಕೆ

Date:

ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಹತ್ವದ ಮಾತುಕತೆಗೂ ಮುನ್ನವೇ, ಯುರೇನಿಯಂ ಪುಷ್ಟೀಕರಣದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಇರಾನ್ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ. ಈ ವಿಚಾರದಲ್ಲಿ ತನ್ನ ‘ಕೆಂಪು ಗೆರೆ’ಯನ್ನು (Red Line) ಸ್ಪಷ್ಟಪಡಿಸಿರುವ ಇರಾನ್, ಪ್ರಸ್ತುತ ಘೋಷಣೆಯಾಗಿರುವ ಕದನ ವಿರಾಮವು ‘ಅಸಮಂಜಸ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

- Advertisement -

ಇತ್ತೀಚೆಗಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಆದರೆ, ಮಾತುಕತೆಗಳು ಆರಂಭವಾಗುವ ಮುನ್ನವೇ ಅಮೆರಿಕವು ಪ್ರಸ್ತಾವಿತ 10 ಅಂಶಗಳ ಶಾಂತಿ ಒಪ್ಪಂದದ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್-ಬಾಘರ್ ಗಾಲಿಬಾಫ್ ಗಂಭೀರ ಆರೋಪ ಮಾಡಿದ್ದಾರೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಗಳು ಮತ್ತು ಇರಾನ್ ವಾಯುಪ್ರದೇಶಕ್ಕೆ ನುಗ್ಗಿದ ಡ್ರೋನ್ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, ಈ ಕದನ ವಿರಾಮ ಒಪ್ಪಂದವು ಸಮರ್ಥನೀಯವಲ್ಲ ಎಂದು ಟೀಕಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | “ಟ್ರಾಫಿಕ್ ಪೊಲೀಸರ ಶ್ರಮಕ್ಕೆ ಆಡಳಿತದ ಸಹಕಾರವಿಲ್ಲವೇ?...

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಖ್ಯೆ ಏರಿಕೆ, ವಾಣಿಜ್ಯ ಚಟುವಟಿಕೆಗಳ ವಿಸ್ತರಣೆ ಹಾಗೂ ರಸ್ತೆ ಒತ್ತುವರಿಯಿಂದಾಗಿ ಸಂಚಾರ ದಟ್ಟಣೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನು ಸುಧಾರಿಸಲು ಪೊಲೀಸ್‌ ಇಲಾಖೆ...

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್...

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ 22 ಸೀಟುಗಳ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿಯವರೆಗೂ 254 ಡೆಮೊಕ್ರಟಿಕ್ ಅಭ್ಯರ್ಥಿಗಳು ಮತ್ತು 169 ರಿಪಬ್ಲಿಕನ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸಮೀಕ್ಷೆಗಳ...

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಕದನ ವಿರಾಮದ ಒಪ್ಪಂದದಂತೆ ಇರಾನ್ ತನ್ನ ಯುರೇನಿಯಂ ಪುಷ್ಟೀಕರಣವನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಹಾಗೂ ಅಲ್ಲಿನ ಭೂಗತ ಪರಮಾಣು ನೆಲೆಗಳನ್ನು ತೆರವುಗೊಳಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ, ಟ್ರಂಪ್ ಅವರ ಈ ಹೇಳಿಕೆಯನ್ನು ಇರಾನ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಯುರೇನಿಯಂ ಪುಷ್ಟೀಕರಣವು ತಮ್ಮ ಸಾರ್ವಭೌಮ ಹಕ್ಕಾಗಿದ್ದು, ಅದರ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಇರಾನ್ ಕಡ್ಡಿ ಮುರಿದಂತೆ ಹೇಳಿದೆ. ಈ ಮೂಲಕ ಅಮೆರಿಕಕ್ಕೆ ತನ್ನ ನಿಲುವಿನ ಸ್ಪಷ್ಟ ಸಂದೇಶ ರವಾನಿಸಿದೆ.

ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
​
ಲೆಬನಾನ್ ಕುರಿತಾದ ಭಿನ್ನಾಭಿಪ್ರಾಯ
ಈ ಕದನ ವಿರಾಮ ಒಪ್ಪಂದವು ಲೆಬನಾನ್‌ಗೂ ಅನ್ವಯಿಸುತ್ತದೆ ಹಾಗೂ ಅಲ್ಲಿಯೂ ಶಾಂತಿ ನೆಲೆಸಲಿದೆ ಎಂಬುದು ಇರಾನ್‌ನ ಬಲವಾದ ನಂಬಿಕೆಯಾಗಿತ್ತು. ಆದರೆ, ಅಮೆರಿಕ ಮತ್ತು ಇಸ್ರೇಲ್ ಈ ಒಪ್ಪಂದದಿಂದ ಲೆಬನಾನ್ ಅನ್ನು ಪ್ರತ್ಯೇಕಿಸಿವೆ. ಕದನ ವಿರಾಮದ ವ್ಯಾಪ್ತಿಗೆ ಲೆಬನಾನ್ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಇಸ್ರೇಲ್, ಅಲ್ಲಿನ ಹಿಜ್ಬುಲ್ಲಾ ನೆಲೆಗಳ ಮೇಲೆ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಇದು ಉಭಯ ದೇಶಗಳ ನಡುವಿನ ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಎಲ್ಲಾ ಆರೋಪ-ಪ್ರತ್ಯಾರೋಪಗಳು ಮತ್ತು ಬಿಕ್ಕಟ್ಟುಗಳ ನಡುವೆಯೂ, ಶಾಂತಿ ಮಾತುಕತೆಗಾಗಿ ಅಮೆರಿಕ ಮತ್ತು ಇರಾನ್ ನಿಯೋಗಗಳು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಭೇಟಿಯಾಗುತ್ತಿವೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಈ ಮಾತುಕತೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯುದ್ಧವನ್ನು ತಡೆಯುವ ನಿಟ್ಟಿನಲ್ಲಿ ಯತ್ನಿಸುತ್ತಿದ್ದಾರೆ. ಆದಾಗ್ಯೂ, ಕದನ ವಿರಾಮದ ಷರತ್ತುಗಳ ಬಗ್ಗೆ ಎರಡು ದೇಶಗಳ ನಡುವೆ ಇರುವ ಪರಸ್ಪರ ವಿರುದ್ಧ ನಿಲುವುಗಳು ಮತ್ತು ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧಗಳಿಂದಾಗಿ, ಮುಂಬರುವ ಈ ಮಾತುಕತೆಯು ಅತ್ಯಂತ ಸೂಕ್ಷ್ಮ ಹಂತದಲ್ಲಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನವೆಂಬರ್ 21ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತ ಸಾಧ್ಯತೆ!

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ವಿಮಾನಗಳ...

ಶಿವಮೊಗ್ಗ | ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಪ್ರತಿಭಟನೆ!

ಶಿವಮೊಗ್ಗ : ರಾಜ್ಯದಲ್ಲಿ ಹಾಲು ಮತ್ತು ಬಸ್ ಪ್ರಯಾಣ ದರ ಹೆಚ್ಚಳದಿಂದ...

ಶಿವಮೊಗ್ಗ | ನಾಳೆ ರಾಜ್ಯವ್ಯಾಪಿ ಶಾಲೆಗಳಲ್ಲಿ ಅಡುಗೆ ತಯಾರಿಕೆಯನ್ನು ಬಂದ್​ ಮಾಡಿ ಮುಷ್ಕರ

ಶಿವಮೊಗ್ಗ ಶಾಲಾ ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೆ ಕುತ್ತು ತರುವಂತಹ ಪ್ರಯತ್ನಗಳನ್ನು...

ಮುಂಬೈ | ಕಿರುಕುಳ ಪ್ರಶ್ನಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಿಡಿಗೇಡಿ; ಯುವತಿಯ ಎಡಗೈ ತುಂಡು

ಮುಂಬೈ ಜೀವನಾಡಿಯಾಗಿರುವ ಲೋಕಲ್ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ...