ಇರಾನ್-ಅಮೆರಿಕ ಶಾಂತಿ ಒಪ್ಪಂದ: ಕಚ್ಚಾ ತೈಲ ಬೆಲೆ ಕುಸಿತ; ರೂಪಾಯಿ ಮೌಲ್ಯ ಏರಿಕೆ!

Date:

ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಪ್ರಸ್ತಾಪಿತ ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಇರಾನ್ ಒಪ್ಪಿಗೆ ಸೂಚಿಸಿದೆ. ಈ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 84 ಡಾಲರ್‌ಗಿಂತ ಕೆಳಕ್ಕೆ ಕುಸಿತ ಕಂಡಿದೆ. ಪರಿಣಾಮ, ಡಾಲರ್ ಎದುರು ರೂಪಾಯಿ ಮೌಲ್ಯವು 43 ಪೈಸೆಯಷ್ಟು ಏರಿಕೆ ಕಂಡಿದೆ. ಭಾರತೀಯ ಷೇರು ಮಾರುಕಟ್ಟೆ 1.4% ರಷ್ಟು ಜಿಗಿದಿದೆ.

- Advertisement -

ಸೋಮವಾರ ಬೆಳಿಗ್ಗೆ 10:15ರ ಸುಮಾರಿಗೆ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (NSE) ನಿಫ್ಟಿ 50 ಸೂಚ್ಯಂಕವು 320.70 ಅಂಕಗಳು (1.4%) ಏರಿಕೆ ಕಂಡು 23,943.60 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಇತ್ತ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ (BSE) ಸೆನ್ಸೆಕ್ಸ್ ಸೂಚ್ಯಂಕ ಕೂಡ 1.4%ರಷ್ಟು ಏರಿಕೆಯಾಗಿ 76,595.13ಕ್ಕೆ ತಲುಪಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಪಶ್ಚಿಮ ಏಷ್ಯಾ ಯುದ್ಧದಿಂದ ತೀವ್ರವಾಗಿ ತೊಂದರೆಗೊಳಗಾಗಿದ್ದ ವಾಯುಯಾನ, ತೈಲ, ಅನಿಲ ಹಾಗೂ ರಾಸಾಯನಿಕ ವಲಯಗಳ ಷೇರುಗಳು ಕೂಡ ಭಾರಿ ಚೇತರಿಕೆ ಕಂಡಿವೆ. ಮಾರುಕಟ್ಟೆಯ ಏರಿಳಿತವನ್ನು ಸೂಚಿಸುವ ‘ಇಂಡಿಯಾ ವಿಐಎಕ್ಸ್’ (India VIX) ಸೂಚ್ಯಂಕವು 4%ರಷ್ಟು ಇಳಿಕೆಯಾಗಿ 14.13ಕ್ಕೆ ತಲುಪಿದೆ.

“ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ ಮತ್ತು ಕಚ್ಚಾ ತೈಲ ಬೆಲೆ 84 ಡಾಲರ್‌ಗಿಂತ ಕೆಳಕ್ಕೆ ಇಳಿದಿರುವುದು ಭಾರತೀಯ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಗೆ ಒಳ್ಳೆಯ ದಿನಗಳನ್ನು ತಂದಿದೆ. ರೂಪಾಯಿ ಮೌಲ್ಯ ಮತ್ತಷ್ಟು ಬಲಗೊಳ್ಳಲಿದ್ದು, ಡಾಲರ್ ಎದುರು 95 ರೂ.ಗಿಂತ ಕೆಳಕ್ಕೆ ಇಳಿಯುವ ಸಾಧ್ಯತೆಯಿದೆ. ರೂಪಾಯಿ ಸ್ಥಿರಗೊಳ್ಳುತ್ತಿರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPIs) ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಷೇರು ಮಾರಾಟವನ್ನು ನಿಲ್ಲಿಸಬಹುದು” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ

ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನವು, ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ತಲುಪಿವೆ ಎಂದು ಸೋಮವಾರ ಮುಂಜಾನೆ ಅಧಿಕೃತವಾಗಿ ಘೋಷಿಸಿದೆ. ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸೋಮವಾರದಿಂದಲೇ ಲೆಬನಾನ್ ಸೇರಿದಂತೆ ಎಲ್ಲೆಡೆ ಯುದ್ಧವನ್ನು ನಿಲ್ಲಿಸುವುದಾಗಿ ತಿಳಿಸಿದೆ. ಇರಾನ್‌ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳ ತೆರವು, ಇರಾನ್‌ನಲ್ಲಾದ ಹಾನಿಗೆ ಅಮೆರಿಕದಿಂದ ಪರಿಹಾರ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶದಂತಹ ಪ್ರಮುಖ ವಿಷಯಗಳುಳ್ಳ ಅಧಿಕೃತ ಶಾಂತಿ ಒಪ್ಪಂದಕ್ಕೆ ಉಭಯ ದೇಶಗಳು ಜಂಟಿಯಾಗಿ ಮುಂದಿನ ಶುಕ್ರವಾರ ಸ್ವಿಟ್ಜರ್ಲೆಂಡ್‌ನಲ್ಲಿ ಸಹಿ ಹಾಕಲಿವೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ವಿರುದ್ಧ ‘ಮಹಾಭಿಯೋಗ’ಕ್ಕೆ ‘ಇಂಡಿಯಾ’ ಒಕ್ಕೂಟದಿಂದ ಅಣಕು ಸಂಸತ್ ಅಧಿವೇಶನ

ಸಿಇಸಿ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಸಾಂಕೇತಿಕವಾಗಿ 'ಮಹಾಭಿಯೋಗ' (ವಜಾ) ನಿರ್ಣಯ...

ಬ್ಲೂಟೂತ್‌ ಪದಕ್ಕಿದೆ ಸಾವಿರ ವರ್ಷಗಳ ಇತಿಹಾಸ: ಇದು ನಿಮಗೆ ಗೊತ್ತೇ?

ಬ್ಲೂಟೂತ್‌ನ ಲೋಗೋ ಸಹ ಕೇವಲ ಒಂದು ಜ್ಯಾಮಿತೀಯ ವಿನ್ಯಾಸವಲ್ಲ. ಅದು ಹರಾಲ್ಡ್...

ಸೌಜನ್ಯ ಪ್ರಕರಣ: ಹರ್ಷೇಂದ್ರ ಕುಮಾರ್‌ಗೆ ಎಸ್‌ಐಟಿ ನೋಟಿಸ್ ಸಾಧ್ಯತೆ

ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ...

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...