ನೈಜೀರಿಯಾ | ಮನೆಗೆ ಮರಳಿದ ಅಪಹರಣಕ್ಕೊಳಗಾಗಿದ್ದ 250 ಶಾಲಾ ಮಕ್ಕಳು

Date:

ಮಾರ್ಚ್‌ 7ರಂದು ವಾಯವ್ಯ ನೈಜೀರಿಯಾದಲ್ಲಿ ಬಂದೂಕುಧಾರಿಗಳು ಅಪಹರಿಸಿದ್ದ 250ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾದ ಕಡುನಾ ರಾಜ್ಯದ ಕುರಿಗಾದಲ್ಲಿ ಶಾಲಾ ಮಕ್ಕಳನ್ನು ಅಪಹರಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಅಪಹರಣ ಇದಾಗಿತ್ತು. ರಾಷ್ಟ್ರೀಯ ಅಭದ್ರತೆಯ ಬಗ್ಗೆ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ, ಆ ಎಲ್ಲ ಮಕ್ಕಳು ತಮ್ಮ ಮನೆಗಳಿಗೆ ಮರಳಿದ್ದಾರೆ.

“ಅಪಹರಣಕ್ಕೊಳಗಾದ ಕುರಿಗಾದಲ್ಲಿನ ಶಾಲಾ ಮಕ್ಕಳನ್ನು ಬಿಡುಗಡೆಗೊಂಡಿದ್ದಾರೆ. ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ” ಎಂದು ಕಡುನಾ ರಾಜ್ಯದ ಗವರ್ನರ್ ಉಬಾ ಸಾನಿ ತಿಳಿಸಿದ್ದಾರೆ. ಆದರೆ, ಮಕ್ಕಳು ಹೇಗೆ ಬಿಡುಗಡೆಯಾದರು ಎಂಬುದನ್ನು ಗವರ್ನರ್ ವಿವರಿಸಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ನಿಜಕ್ಕೂ ಸಂತೋಷದ ದಿನ ಎಂದು ಹೇಳಿರುವ ಅವರು, ಸೈನ್ಯಕ್ಕೆ, ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಶಾಲಾ ಮಕ್ಕಳ ಮರಳುವಿಕೆಗಾಗಿ ಪ್ರಾರ್ಥಿಸಿದ ಎಲ್ಲ ನೈಜೀರಿಯನ್ನರಿಗೆ ಧನ್ಯವಾದ ತಿಳಿಸಿದ್ದಾರೆ.

ಸ್ಥಳೀಯವಾಗಿ ಡಕಾಯಿತರು ಎಂದು ಕರೆಯಲ್ಪಡುವ ಕೆಲ ಗುಂಪುಗಳು ಮಕ್ಕಳನ್ನು ಅಪಹರಿಸಿದ್ದವು. ಈ ಗುಂಪುಗಳು ಆಗಾಗ್ಗೆ ಹಳ್ಳಿಗಳಿಗೆ ನುಗ್ಗಿ ಲೂಟಿ ಮಾಡುತ್ತವೆ. ವಾಯುವ್ಯ ಮತ್ತು ಉತ್ತರ-ಮಧ್ಯ ನೈಜೀರಿಯಾದಲ್ಲಿ ಸುಲಿಗೆಗಾಗಿ ಸಾಮೂಹಿಕ ಅಪಹರಣ ನಡೆಸುತ್ತವೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲು ಅಪಹಾರಣಕಾರರು ಬೃಹತ್ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅಧ್ಯಕ್ಷ ಟಿನುಬು ಅವರು ಯಾವುದೇ ಹಣವನ್ನು ನೀಡದಂತೆ ಭದ್ರತಾ ಪಡೆಗಳಿಗೆ ಅದೇಶಿಸಿದ್ದರು ಎಂದು ಗವರ್ನರ್‌ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ: ಪರಿಸ್ಥಿತಿ ಚಿಂತಾಜನಕ

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಭೀಕರ ಗುಂಡಿನ ದಾಳಿ ನಡೆದಿದ್ದು,...

ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯ ಹತ್ಯೆ

ಲಂಡನ್‌ನ ಬರ್ಂಟ್ ಓಕ್‌ನಲ್ಲಿ 66 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯನ್ನು 22...

ಭಾರತ ಮತ್ತು ಇರಾನ್ ನಡುವೆ ಬಂದರು ಒಪ್ಪಂದ; ಭಾರತದ ಪಾಲಿಗೆ ದೊಡ್ಡ ವ್ಯವಹಾರ

ಭಾರತದ ತೈಲ ವ್ಯಾಪಾರದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ತೈಲದ ಖರೀದಿ...