ಐಪಿಎಲ್ | ಮೈದಾನದಲ್ಲಿ ಅನುಚಿತ ವರ್ತನೆ: ಕೆಕೆಆರ್‌ನ ಗೆಲುವಿನ ರೂವಾರಿ ಹರ್ಷಿತ್ ರಾಣಾಗೆ ದಂಡ

Date:

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಕೊನೆಯವರೆಗೂ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ಕೆಕೆಆರ್‌ನ ವೇಗಿ ಹರ್ಷಿತ್ ರಾಣಾ ನಡೆದುಕೊಂಡಿದ್ದ ಅನುಚಿತ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಣಾಗೆ ದಂಡ ವಿಧಿಸಲಾಗಿದೆ.

ಐಪಿಎಲ್​ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತ್ತು. ಈ ರೋಚಕ ಗೆಲುವಿನ ರೂವಾರಿ, ಯುವ ವೇಗಿ ಹರ್ಷಿತ್ ರಾಣಾ​ಗೆ ಪಂದ್ಯದ ಶುಲ್ಕದ ಶೇ.60 ರಷ್ಟು ದಂಡ ವಿಧಿಸಲಾಗಿದೆ.

ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಹರ್ಷಿತ್ ರಾಣಾ, ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದರು. ಎಸ್​ಆರ್​ಹೆಚ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದು ಫ್ಲೈಯಿಂಗ್ ಕಿಸ್ ನೀಡಿ ಬೀಳ್ಕೊಟ್ಟಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಾಗೆಯೇ ಕೊನೆಯ ಓವರ್​ನಲ್ಲಿ ಹೆನ್ರಿ ಕ್ಲಾಸೆನ್ ವಿಕೆಟ್ ಕಬಳಿಸಿದ ಬಳಿಕ ಪೆವಿಲಿಯನ್​ಗೆ ದಾಟುವಂತೆ ಕೈ ಸನ್ನೆ ಮಾಡಿದ್ದರು. ಹೀಗೆ ಎರಡು ಬಾರಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಮೇಲೆ ಶೇಕಡಾ 60ರಷ್ಟು ದಂಡ ವಿಧಿಸಲಾಗಿದೆ.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಓವರ್​ನಲ್ಲಿ ಅದ್ಭುತ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.

ಕೊನೆಯ ಓವರ್​ನಲ್ಲಿ ಎಸ್​ಆರ್​ಹೆಚ್ ತಂಡಕ್ಕೆ 13 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಹರ್ಷಿತ್ ರಾಣಾ ಅವರ ಮೊದಲ ಎಸೆತಕ್ಕೆ ಹೆನ್ರಿಕ್ ಕ್ಲಾಸೆನ್ ಸಿಕ್ಸ್​ ಸಿಡಿಸಿದರು. ಇದಾದ ಬಳಿಕ 5 ಎಸೆತಗಳಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಕೇವಲ 2 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಈ ಮೂಲಕ ಕೆಕೆಆರ್​ ತಂಡಕ್ಕೆ 4 ರನ್​ಗಳ ರೋಚಕ ಜಯ ತಂದುಕೊಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾಗಿದ್ದರು. ಇದೀಗ ಈ ಯಶಸ್ಸಿನ ಬೆನ್ನಲ್ಲೇ ಯುವ ವೇಗಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.

ಹರ್ಷಿತ್ ರಾಣಾ ನಡೆದುಕೊಂಡ ರೀತಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಆಕ್ರೋಶ ಹೊರಹಾಕಿದ್ದರು. “ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದ ಬಳಿಕ ಹರ್ಷಿತ್ ರಾಣಾ ನಡೆದುಕೊಂಡ ರೀತಿ ಒಳ್ಳೆಯ ಬೆಳವಣಿಗೆಯಲ್ಲ. ಇದು ಮುಂಬರುವ ಯುವ ಆಟಗಾರರಿಗೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ” ಎಂದು ತಿಳಿಸಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ವಾಲಿಫೈಯರ್ 2: ಸಂಘಟಿತ ಬೌಲಿಂಗ್ ಮೂಲಕ ಹೈದರಾಬಾದ್‌ ಅನ್ನು ಕಟ್ಟಿ ಹಾಕಿದ ರಾಜಸ್ಥಾನ್ ರಾಯಲ್ಸ್‌

ಐಪಿಎಲ್‌ 2024ರಲ್ಲಿ ಮೇ 24ರ ಶುಕ್ರವಾರ ಎರಡನೇ ಕ್ವಾಲಿಫೈಯರ್‌ ಪಂದ್ಯ ನಡೆಯುತ್ತಿದೆ....

2025ರ ಐಪಿಎಲ್‌ನಲ್ಲೂ ಎಂಎಸ್ ಧೋನಿ ಆಡುವುದು ಅವರಿಗೆ ಬಿಟ್ಟ ವಿಚಾರ: ಚೆನ್ನೈ ಸಿಇಓ ಕಾಸಿ ವಿಶ್ವನಾಥನ್

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ...

ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಐಪಿಎಲ್ ಮುಗಿಯುತ್ತಾ ಬಂತು, ಇನ್ನೇನಿದ್ದರೂ ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ವಿಶ್ವಕಪ್ ಹುಚ್ಚು...