ಶರಣಾಗುವ ಪ್ರಶ್ನೆಯೇ ಇಲ್ಲ; ಟ್ರಂಪ್‌ನ ‘ಸರ್ವನಾಶ’ದ ಬೆದರಿಕೆಗೆ ಜಗ್ಗದೆ ಎದೆ ಸೆಟೆಸಿದ ಇರಾನ್

Date:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಇರಾನ್ ಅನ್ನು ಸಂಪೂರ್ಣವಾಗಿ ಸರ್ವನಾಶ ಮಾಡುತ್ತೇವೆ” ಎಂದು ನೀಡಿದ್ದ ಬಹಿರಂಗ ಬೆದರಿಕೆಗೆ ಇರಾನ್ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಮಾತನಾಡಿದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, “ನಾವು ಎಂದಿಗೂ ಅಮೆರಿಕದ ಮುಂದೆ ಮಂಡಿಯೂರುವುದಿಲ್ಲ ಅಥವಾ ಶರಣಾಗುವುದಿಲ್ಲ. ಬೆದರಿಕೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ಸಾರಿದ್ದಾರೆ.

- Advertisement -

ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಈ ಯುದ್ಧ ಮತ್ತು ಸಂಘರ್ಷದಲ್ಲಿ ಇರಾನ್‌ಗಿಂತಲೂ ಅಮೆರಿಕವೇ ಆರ್ಥಿಕ ಹಾಗೂ ಕಾರ್ಯತಂತ್ರದ ದೃಷ್ಟಿಯಿಂದ ಹೆಚ್ಚಿನ ನಷ್ಟ ಅನುಭವಿಸಿದೆ. ಜಾಗತಿಕ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ, ಹಾರ್ಮುಜ್ ಜಲಸಂಧಿಯ ಸಂಘರ್ಷ ಮತ್ತು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ವೆಚ್ಚ ವಿಪರೀತವಾಗಿ ಹೆಚ್ಚಿರುವುದು ಅಮೆರಿಕಕ್ಕೆ ಹಿನ್ನಡೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಇದನ್ನೂ ಓದಿ: 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಆರ್ಥಿಕ ಮತ್ತು ಮಿಲಿಟರಿ ವಿಷಯದಲ್ಲಿ ತಾನೇ ಅನುಭವಿಸುತ್ತಿರುವ ಹಿನ್ನಡೆಯನ್ನು ಮುಚ್ಚಿಹಾಕಲು, ಯುದ್ಧದಿಂದ ಗೌರವಯುತವಾಗಿ ಹೊರಬರಲು ಅಮೆರಿಕ ಈಗ ಇರಾನ್ ಮೇಲೆ ಸತತ ಮಾನಸಿಕ ಒತ್ತಡ ಹೇರುವ ಯತ್ನ ನಡೆಸುತ್ತಿದೆ. ಈ ನಷ್ಟದ ಸುಳಿಯಿಂದ ತಪ್ಪಿಸಿಕೊಳ್ಳಲೆಂದೇ ಟ್ರಂಪ್ “ಒಪ್ಪಂದಕ್ಕೆ ಬನ್ನಿ, ಇಲ್ಲವೇ ಸರ್ವನಾಶಕ್ಕೆ ಸಿದ್ಧರಾಗಿ” ಎಂಬ ಆಕ್ರಮಣಕಾರಿ ಹೇಳಿಕೆ ನೀಡಿ ಇರಾನ್ ಅನ್ನು ಶರಣಾಗುವಂತೆ ಮಾಡಲು ಯತ್ನಿಸುತ್ತಿದ್ದಾರೆ ಎಂಬ ವಾದ ದೃಢವಾಗಿದೆ.

ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ಸೇನೆಯ ಸಶಸ್ತ್ರ ಪಡೆಗಳು ಮತ್ತು ವಿದೇಶಾಂಗ ಸಚಿವಾಲಯ, “ಟ್ರಂಪ್ ಅವರ ಸರ್ವನಾಶದ ಮಾತುಗಳು ಅವರ ಶಕ್ತಿಯನ್ನಲ್ಲ, ಬದಲಿಗೆ ಅಮೆರಿಕ ತಲುಪಿರುವ ಆಯಕಟ್ಟಿನ ಹತಾಶೆಯನ್ನು ತೋರಿಸುತ್ತವೆ” ಎಂದು ಟೀಕಿಸಿವೆ.

ಇದನ್ನೂ ಓದಿ: ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ರದ್ದು: ಡೊನಾಲ್ಡ್ ಟ್ರಂಪ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮಾತನಾಡಿ, “ಅಮೆರಿಕ ಮತ್ತು ಇಸ್ರೇಲ್ ನಮ್ಮ ಮೇಲೆ ದಾಳಿ ನಡೆಸಿವೆ, ಆದರೆ ನಾವು ತಲೆಬಾಗಲಿಲ್ಲ. ಇರಾನ್ ಶಾಂತಿಯುತ ಮಾತುಕತೆಗೆ ಮತ್ತು ರಾಜತಾಂತ್ರಿಕತೆಗೆ ಸಿದ್ಧವಿದೆ. ಆದರೆ ಯಾವುದೇ ಕಾರಣಕ್ಕೂ ಬೆದರಿಕೆ ಹಾಗೂ ಬಲಪ್ರಯೋಗದ ಭಾಷೆಯನ್ನು ನಾವು ಸಹಿಸುವುದಿಲ್ಲ. ಅಮೆರಿಕ ಬೆದರಿಕೆ ಹಾಕಿದಷ್ಟೂ ಇರಾನ್ ಜನತೆ ಮತ್ತಷ್ಟು ಒಗ್ಗೂಡುತ್ತಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ದೇಶದ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಹೇರಿ, ಸೈನಿಕ ಬೆದರಿಕೆ ಒಡ್ಡುತ್ತಿದ್ದರೂ ಇರಾನ್ ತನ್ನ ಆತ್ಮರಕ್ಷಣೆಯ ಹಕ್ಕನ್ನು ಸಮರ್ಥಿಸಿಕೊಂಡಿದೆ. ಅಮೆರಿಕನ್ನರು ಯುದ್ಧದಲ್ಲಿ ಅನುಭವಿಸುತ್ತಿರುವ ಸಾವು-ನೋವು ಹಾಗೂ ಆರ್ಥಿಕ ನಷ್ಟದಿಂದಾಗಿ ಎಚ್ಚೆತ್ತುಕೊಂಡು, ಈಗ ಹೆದರಿಸಿ ಒಪ್ಪಂದಕ್ಕೆ ತರಲು ನೋಡುತ್ತಿದ್ದಾರೆ. ಆದರೆ ಇರಾನ್ ಯಾವುದೇ ರೀತಿಯ ಅನ್ಯಾಯದ ಷರತ್ತುಗಳಿಗೆ ಶರಣಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಧ್ಯಪ್ರಾಚ್ಯದಲ್ಲಿ ತೃಪ್ತಿಕರ ಶಾಂತಿ ಸ್ಥಾಪನೆಯಾಗಬೇಕಾದರೆ ಅಮೆರಿಕ ತನ್ನ ಆಕ್ರಮಣಕಾರಿ ಧೋರಣೆಯನ್ನು ಬಿಟ್ಟು, ಸಮಾನ ಗೌರವದೊಂದಿಗೆ ಮಾತುಕತೆಗೆ ಬರಬೇಕೇ ಹೊರತು ಶರಣಾಗತಿಯ ಮಾತುಗಳು ನಡೆಯುವುದಿಲ್ಲ ಎಂದು ಇರಾನ್ ನಾಯಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ ತಾಲೂಕು ʼಬರʼ ಘೋಷಿಸಿ : ಸಿಎಂಗೆ ಶಾಸಕ ಪ್ರಭು ಚವ್ಹಾಣ ಮನವಿ

ಔರಾದ(ಬಿ) ತಾಲ್ಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ...

ಕೆವಡಿಯಾದ ರಸ್ತೆಗಳಲ್ಲಿ ಮಹಿಳೆಯರ ಕೈಗೆ ಸ್ಟೀರಿಂಗ್; ಪ್ರವಾಸೋದ್ಯಮದಿಂದ ಬದಲಾಯಿತು ಜೀವನದ ಲೆಕ್ಕಾಚಾರ

ಸ್ಟ್ಯಾಚ್ಯೂ ಆಫ್ ಯೂನಿಟಿ (ಏಕತೆಯ ಮೂರ್ತಿ) ಆವರಣದಲ್ಲಿ ಸಂಚರಿಸುವಾಗ ಗಮನ ಸೆಳೆಯುವ...

ಬಡವರು, ಉಳ್ಳವರು ಎಂದು ಹೇಗೆ ವಿಂಗಡಣೆ ಮಾಡುತ್ತೀರಿ: ಬಿಜೆಪಿ ನಾಯಕರಿಗೆ ಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ

"ಗ್ಯಾರಂಟಿ ಯೋಜನೆಗಳನ್ನು ಉಳ್ಳವರಿಗೆ ಕೊಡಬೇಡಿ ಎಂದು ಹೇಳುತ್ತಿದ್ದೀರ. ಹಾಗಾದರೆ ನಿಮ್ಮ ಪ್ರಕಾರ,...