ಶಾರ್ಜಾ | ವಿಸಿಟ್ ವೀಸಾದಲ್ಲಿರುವವರಿಗೆ 1 ದಿರ್‌ಹಂನಲ್ಲಿ ಆರೋಗ್ಯ ಸೇವೆಗೆ ಆದ್ಯತೆ; ರೊಲ್ಲಾದಲ್ಲಿ ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್ ಹೊಸ ಶಾಖೆ ಆರಂಭ

Date:

ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್, ಶಾರ್ಜಾ – ರೊಲ್ಲಾ ಪ್ರದೇಶದಲ್ಲಿ, ರೊಲ್ಲಾ ಮಾಲ್ ಎದುರುಭಾಗದಲ್ಲಿ, ತನ್ನ ಹೊಸ ಶಾಖೆಯನ್ನು ಗಣ್ಯ ಅತಿಥಿಗಳು, ಸಮುದಾಯ ನಾಯಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್ ಅವರು, ‘ಶಾರ್ಜಾ ಶಾಖೆಯನ್ನು ಸ್ಥಳೀಯ ಸಮುದಾಯದ ಹೆಚ್ಚುತ್ತಿರುವ ಬೇಡಿಕೆಯ ಆಧಾರದ ಮೇಲೆ ಆರಂಭಿಸಲಾಗಿದೆ. ಸಾರ್ವಜನಿಕರ ಬಲವಾದ ಬೇಡಿಕೆಯಿಂದಲೇ ನಾವು ಶಾರ್ಜಾದಲ್ಲಿ ಈ ಕ್ಲಿನಿಕ್ ಆರಂಭಿಸಿದ್ದೇವೆ. ಎಲ್ಲ ವರ್ಗದ ಜನರಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಆರೋಗ್ಯ ಸೇವೆ ನೀಡುವುದು ಮ್ಯಾಕ್ಸ್‌ಕೇರ್‌ನ ಬದ್ಧತೆ. ಇಲ್ಲಿ ವೈದ್ಯರ ಕನ್ಸಲ್ಟೇಶನ್ ಶುಲ್ಕ AED 25ರಿಂದ ಆರಂಭವಾಗುತ್ತದೆ’ ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಉದ್ಘಾಟನೆಯ ವಿಶೇಷ ಘೋಷಣೆಯಾಗಿ, ವಿಸಿಟ್ ವೀಸಾದ ಮೇಲೆ ಯುಎಇಗೆ ಬರುವವರಿಗೆ ಯಾವುದೇ ವೈದ್ಯರನ್ನು ಕೇವಲ AED 1ಕ್ಕೆ ಭೇಟಿ ಮಾಡುವ ವಿಶೇಷ ಯೋಜನೆ ಪ್ರಕಟಿಸಲಾಯಿತು. ಇದರಿಂದ ಅಲ್ಪಕಾಲಿಕ ಭೇಟಿ ನೀಡುವವರಿಗೆ ಅಗತ್ಯ ವೈದ್ಯಕೀಯ ಸೇವೆ ಸುಲಭವಾಗಿ ಲಭ್ಯವಾಗಲಿದೆ ಎಂದು ಬಶೀರ್ ತಿಳಿಸಿದರು.

max care 3

ಉದ್ಘಾಟನಾ ಸಮಾರಂಭದಲ್ಲಿ ಶೇಖ್ ಅಹ್ಮದ್ ಸಾಕರ್ ಅಲ್ ಕಾಸಿಮಿ,ಸಯ್ಯದ್ ನಿಸಾರ್, ಯುಎಇ ಬಿಸಿಸಿಐ ಅಧ್ಯಕ್ಷರಾದ ಹಿದಾಯತ್ ಅಡ್ಡೂರು, ನಿಶ್ಕಾ ಜ್ಯುವೆಲ್ಲರಿಯ ನಿರ್ದೇಶಕರಾದ ಸಯ್ಯದ್ ಹೈದ್ರೋಸ್ ತಂಙಳ್, ಯಾಸ್‌ಮೆಡ್‌ನ ನಿರ್ದೇಶಕ ನಿಜಾರ್ ಹಂಝ, ಬೈತಾನ್ ಗ್ರೂಪ್ ಎಂ ಡಿ ಜಮಾಲ್ ಬೈತಾನ್, ಇಲಾಜ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹುಸೈನ್, ಬರಾಕಾ ಕ್ಲಿನಿಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಲ್ಮಾನ್, ಮಿರಾಕ್ಯೂರ್ ಕ್ಲಿನಿಕ್ ಎಂಡಿ ಮೊಹಮ್ಮದ್ ಶಫೀಕ್, ಮ್ಯಾಕ್ಸ್‌ಕೇರ್‌ನ ನಿರ್ದೇಶಕಿ ಬದ್ರುನ್ನಿಸಾ ಮೊಹಮ್ಮದ್, ಮ್ಯಾಕ್ಸ್‌ಕೇರ್ ಮ್ಯಾನೇಜರ್ ಫಜಲ್ ವಿ.ಕೆ ಸೇರಿದಂತೆ ಇತರ ಆಹ್ವಾನಿತ ಅತಿಥಿಗಳು ಮತ್ತು ಸಮುದಾಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವ ಮ್ಯಾಕ್ಸ್‌ಕೇರ್ ಧ್ಯೇಯದ ಮತ್ತೊಂದು ಪ್ರಮುಖ ಹಂತ ಇದಾಗಿದ್ದು, ನಾಲ್ಕು ವರ್ಷಗಳ ಹಿಂದೆ ಆರೋಗ್ಯ ಕ್ಷೇತ್ರದ ಸ್ಟಾರ್ಟ್‌ಅಪ್ ಆಗಿ ಆರಂಭವಾದ ಮ್ಯಾಕ್ಸ್‌ಕೇರ್, ಇಂದು ಯುಎಇಯಾದ್ಯಂತ ವಿವಿಧ ಸಮುದಾಯಗಳಿಗೆ ವಿಶ್ವಾಸಾರ್ಹ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಸಂಸ್ಥೆಯಾಗಿ ಬೆಳೆದಿದೆ. ಕಡಿಮೆ ವೆಚ್ಚದ ಚಿಕಿತ್ಸಾ ಮಾದರಿಯಿಂದ “ಬಜೆಟ್ ಕ್ಲಿನಿಕ್” ಎಂದು ಜನಪ್ರಿಯವಾಗಿರುವ ಮ್ಯಾಕ್ಸ್‌ಕೇರ್, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.

ಇದನ್ನು ಓದಿದ್ದೀರಾ? ನಂದಿನಿ ಉತ್ಪನ್ನಗಳ ಸೇವನೆ-ಸುರಕ್ಷತೆ ಕುರಿತು ವದಂತಿ; ಸುಳ್ಳುಗಳಿಗೆ ಕಿವಿಗೊಡಬೇಡಿ ಎಂದ ಕೆಎಂಎಫ್

ಹೊಸ ಶಾರ್ಜಾ ರೊಲ್ಲಾ ಶಾಖೆ ಸಂಪೂರ್ಣ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಜನರಲ್ ಮೆಡಿಸಿನ್, ಗೈನಕಾಲಜಿ, ಡೆಂಟಲ್ ಕೇರ್ ಹಾಗೂ ಲ್ಯಾಬೊರೇಟರಿ ಸೇವೆಗಳು ಸೇರಿದಂತೆ ಹಲವಾರು ಚಿಕಿತ್ಸಾ ಸೇವೆಗಳು ಲಭ್ಯವಿವೆ. ಕ್ಲಿನಿಕ್ ಜೊತೆಗೆ ಮ್ಯಾಕ್ಸ್‌ಕೇರ್ ಪಾಯಿಂಟ್ ಫಾರ್ಮಸಿ ಕೂಡ ಆರಂಭಿಸಲಾಗಿದೆ, ಇದರಿಂದ ರೋಗಿಗಳಿಗೆ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳು ಒಂದೇ ಸ್ಥಳದಲ್ಲಿ ಸಿಗುತ್ತವೆ. ಅನುಭವ ಹೊಂದಿದ ಕ್ಲಿನಿಕಲ್ ಮತ್ತು ನಾನ್-ಕ್ಲಿನಿಕಲ್ ಸಿಬ್ಬಂದಿ ತಂಡವು ಅತಿ ಕಡಿಮೆ ನಿರೀಕ್ಷಾ ಸಮಯದಲ್ಲಿ ಸುಗಮ ಸೇವೆ ಒದಗಿಸುತ್ತದೆ.

max care 4
max care 1
max care 2
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ ಅವರಿಗೆ ಮಾತೃ ವಿಯೋಗ

ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ...

ಸೌದಿ ಅರೇಬಿಯಾ | ನ.27ರಂದು ಜುಬೈಲ್‌ನಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಮೆಂಟ್

ಸಮಾಜ ಸೇವೆಯ ಉದ್ದೇಶಕ್ಕಾಗಿ ನಝಾಫಾ ಸಂಸ್ಥೆಯ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್...

‘ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು: ಅತಿ ಉದ್ದನೆಯ ಯುಎಇ ಧ್ವಜದ ದೃಶ್ಯ ಹಂಚಿಕೊಂಡ ರಾಜಕುಮಾರ ಶೇಖ್ ಹಮ್ದಾನ್

ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾನುವಾರ ದುಬೈನ...

ಸೌದಿ ಅರೇಬಿಯಾ | ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಪೂರ್ಣಗೊಳಿಸಲು ಆರೋಗ್ಯ ಸಚಿವಾಲಯ ಸೂಚನೆ

ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲ ವಯಸ್ಸಿನ ನಿವಾಸಿಗಳು ಮತ್ತು ವಲಸಿಗರು...