IND vs PAK | ಪಾಕ್ ಬೌಲರ್‌ ‘ಉಸ್ಮಾನ್ ತಾರಿಕ್’ಗೆ ಎಂ.ಎಸ್‌ ಧೋನಿಯ ಜೀವನಗಾಥೆಯೇ ಪ್ರೇರಣೆ!

Date:

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿರುವ ಮಿಸ್ಟರಿ ಸ್ಪಿನ್ನರ್ ‘ಉಸ್ಮಾನ್ ತಾರಿಕ್’ ಅವರ ಬದುಕಿನ ಕತೆಯು ಸಿನಿಮಾದಷ್ಟೇ ರೋಮಾಂಚಕವಾಗಿದೆ. ದುಬೈನಲ್ಲಿ ‘ಸೇಲ್ಸ್‌ಮನ್’ ಆಗಿದ್ದ ತಾಕಿಕ್ ಇಂದು ಪಾಕ್‌ ತಂಡದ ಬಹುಬೇಡಿಕೆಯ ಬೌಲರ್ ಆಗಿದ್ದಾರೆ. ಅವರು ತಮ್ಮ ಕ್ರಿಕೆಟ್‌ ಜೀವನಕ್ಕೆ ಭಾರತೀಯ ಕ್ರಿಕೆಟ್‌ ದಿಗ್ಗಜರಲ್ಲಿ ಒಬ್ಬರಾದ ಎಂ.ಎಸ್‌ ಧೋನಿಯವರ ಬಯೋಪಿಕ್ ಸಿನಿಮಾವೇ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ.

- Advertisement -

30ರ ಹರೆಯದ ತಾರಿಕ್ ಅವರು 1995ರ ಜೂನ್ 7ರಂದು ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಪ್ರಾಂತ್ಯದ ನೌಶೆರಾ ಜಿಲ್ಲೆಯಲ್ಲಿ ಜನಿಸಿದವರು. ಅವರ ತಮ್ಮ ಬಾಲ್ಯದ ಕನಸು ಕ್ರಿಕೆಟ್ ಆಗಿತ್ತು. ಆದರೆ, ಆರಂಭಿಕ ಹಂತದಲ್ಲಿ ಅವಕಾಶಗಳು ಸಿಗದೆ, ಕ್ರಿಕೆಟ್ ಬಿಟ್ಟು ಉದ್ಯೋಗ ಹರಸಿ ದುಬೈಗೆ ತೆರಳಿದ್ದರು. ಪರ್ಚೇಸಿಂಗ್ ಕಂಪನಿಯಲ್ಲಿ ‘ಸೇಲ್ಸ್‌ಮನ್’ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಅವರ ಜೀವನವು ದುಡಿಯುವುದು, ಜೀವಿಸುವುದಕ್ಕಷ್ಟೇ ಸೀಮಿತವೂ ಆಗಿತ್ತು. ಕ್ರಿಕೆಟ್‌ ಕನಸು ಬತ್ತಿಹೋಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಆದರೆ, ಅವರ ಕ್ರಿಕೆಟ್‌ ಕನಸಿಗೆ ಮತ್ತೆ ಜೀವ ತುಂಬಿದ್ದು, 2016ರಲ್ಲಿ ಬಿಡುಗಡೆಯಾದ ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಎಂಬ ಬಾಲಿವುಡ್ ಬಯೋಪಿಕ್ ಸಿನಿಮಾ. ಈ ಸಿನಿಮಾ ಟೀಮ್‌ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಾ, ನಿರಾಶೆಯ ಜೀವನವನ್ನು ಎದುರಿಸಿ, ಕೊನೆಗೆ ವಿಶ್ವಕಪ್ ಗೆದ್ದ ನಾಯಕನಾಗಿ ಬೆಳೆದ ಕಥೆಯನ್ನು ವಿವರಿಸುತ್ತದೆ. ಈ ಸಿನಿಮಾ ನೋಡಿದ ತಾರಿಕ್ ಪ್ರಭಾವಿತರಾಗಿ, ಮತ್ತೆ ಕ್ರಿಕೆಟ್‌ ಕ್ಷೇತ್ರಕ್ಕೆ ಧಾವಿಸಿದರು.

ತಾರಿಕ್ ಅವರೇ ಹೇಳುವಂತೆ; “ನಾನು ಕ್ರಿಕೆಟ್‌ನಲ್ಲಿ ಹೆಸರು ಮಾಡುವ ಆಲೋಚನೆಯನ್ನು ಬಿಟ್ಟು ದುಬೈಯಲ್ಲಿ ಸೇಲ್ಸ್‌ಮನ್ ಆಗಿದ್ದೆ. ಆದರೆ, ಒಂದು ದಿನ ಎಂ.ಎಸ್. ಧೋನಿ ಅವರ ಬಯೋಪಿಕ್ ನೋಡಿದೆ. ಅದು ನನ್ನನ್ನು ತುಂಬಾ ಸ್ಪೂರ್ತಿಗೊಳಿಸಿತು. ಧೋನಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಾ, ತಮ್ಮ ಕನಸನ್ನು ಬಿಡದೇ ಹೋರಾಡಿದ್ದನ್ನು ನೋಡಿ, ನನಗೆ ಇನ್ನೂ ಅವಕಾಶವಿದೆ ಎಂಬ ಭಾವನೆ ಬೆಳೆಯಿತು. ಆ ಸಿನಿಮಾ ನನ್ನನ್ನು ಮರಳಿ ಪಾಕಿಸ್ತಾನಕ್ಕೆ ಕರೆತಂದಿತು, ಕ್ರಿಕೆಟ್ ಮುಂದುವರಿಸಲು ಪ್ರೇರೇಪಿಸಿತು.”

ಈ ಲೇಖನ ಓದಿದ್ದೀರಾ?: ಮಾನನಷ್ಟ ಪ್ರಕರಣ: 10 ಲಕ್ಷ ರೂ. ಠೇವಣಿಯಿಡಲು ಕ್ರಿಕೆಟಿಗ ಧೋನಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಧೋನಿ ಅವರ ಬಯೋಪಿಕ್‌ನಿಂದ ಸ್ಪೂರ್ತಿ ಪಡೆದ ಉಸ್ಮಾನ್ ತಾರಿಕ್ ಅವರು ದುಬೈನಲ್ಲಿನ ತಮ್ಮ ಕೆಲಸವನ್ನು ತ್ಯಜಿಸಿ, ಪಾಕಿಸ್ತಾನಕ್ಕೆ ಮರಳಿದರು. ಮತ್ತೆ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ಅವರ ಬೌಲಿಂಗ್ ಆಕ್ಷನ್ (ಸ್ಲಿಂಗ್ ಆಕ್ಷನ್‌ನೊಂದಿಗೆ ಪಾಜ್ ಮತ್ತು ಸೈಡ್-ಆರ್ಮ್ ರಿಲೀಸ್) ವಿಶೇಷವಾಗಿ ‘ಮಿಸ್ಟರಿ ಸ್ಪಿನ್’ ಆಗಿ ಗಮನ ಸೆಳೆಯಿತು. ಕೆಲವು ಆರಂಭಿಕ ಟೂರ್ನಮೆಂಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಅವರು 2025ರಲ್ಲಿ ‘ಕ್ಯಾರಿಬಿಯನ್ ಪ್ರೀಮಿಯರ್ ಲೀಗ್‌’ನಲ್ಲಿ (CPL) 20 ವಿಕೆಟ್‌ಗಳನ್ನು ಪಡೆದು ಎರಡನೇ ಸ್ಥಾನಕ್ಕೇರಿದರು. ಇದರಿಂದ ಅವರು ಪಾಕಿಸ್ತಾನದ ರಾಷ್ಟ್ರೀಯ ತಂಡದ ಗಮನ ಸೆಳೆದರು.

2025-26ರಲ್ಲಿ ಅವರು ಪಾಕಿಸ್ತಾನದ ಏಕದಿನ T20 ತಂಡಕ್ಕೆ ಆಯ್ಕೆಯಾದರು. ಐಸಿಸಿ T20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ‘X-ಫ್ಯಾಕ್ಟರ್’ ಆಗಿ ಹೊರಹೊಮ್ಮಿದರು. ಆದಾಗ್ಯೂ, ಅವರ ಬೌಲಿಂಗ್ ಆಕ್ಷನ್‌ಗೆ ಸಂಬಂಧಿಸಿದಂತೆ ವಿವಾದಗಳೂ ಮುನ್ನೆಲೆಯಲ್ಲಿವೆ. ಆದರೂ, ಸ್ಟಾರ್‌ ಬೌಲರ್ ಆಗಿ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದ್ದಾರೆ.

ಇಂದು (ಭಾನುವಾರ), ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಭಾರತ-ಪಾಕ್ ತಂಡಗಳ ನಡುವಿನ ಪಂದ್ಯದಲ್ಲಿ ಅವರು ಪಾಕ್‌ ತಂಡದಲ್ಲಿ ಬೌಲಿಂಗ್ ಮಾಡಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...

ಇಂದೋರ್‌ನಲ್ಲಿ 1.36 ಲಕ್ಷ ಮತದಾರರ ಹೆಸರು ಡಿಲೀಟ್‌: ‘ದಾಖಲೆಗಳೇ ಇಲ್ಲ’ ಎಂದ ಅಧಿಕಾರಿಗಳು, ‘ಆರ್‌ಟಿಐ’ ಉತ್ತರದಲ್ಲಿ ಬಹಿರಂಗ

ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯಲ್ಲಿ ಒಟ್ಟು 1.36 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು...