ಸ್ಪೇನ್ ಗಡಿಗೆ ದಿಢೀರ್ ನುಗ್ಗಿದ ಸಾವಿರಾರು ಮೊರಾಕ್ಕೊ ವಲಸಿಗರು: 9 ಸಾವು

Date:

ಮೊರಾಕ್ಕೊ ಗಡಿಯಲ್ಲಿರುವ ಸ್ಪೇನ್‌ನ ಸಣ್ಣ ಪ್ರಾಂತ್ಯವಾದ ಸೆಯುಟಾಗೆ (Ceuta) ಸಾವಿರಾರು ವಲಸಿಗರು ದಿಢೀರನೆ ನುಸುಳಿದ್ದು, ಈ ಯತ್ನದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಗಡಿಯಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟು ಹಾಗೂ ಗೊಂದಲವನ್ನು ಶಮನಗೊಳಿಸಿ, ಶಾಂತಿ ಸುವ್ಯವಸ್ಥೆ ಮರುಸ್ಥಾಪಿಸಲು ಸ್ಪೇನ್ ತನ್ನ ಸೇನೆಯನ್ನು ನಿಯೋಜಿಸಲು ಮುಂದಾಗಿದೆ.

- Advertisement -

ಗಡಿ ಬೇಲಿಯನ್ನು ಮುರಿದು ಭಾರಿ ಸಂಖ್ಯೆಯ ವಲಸಿಗರು ಒಳನುಗ್ಗಿದ ಪರಿಣಾಮ ಗುರುವಾರ ತೀವ್ರ ಬಿಕ್ಕಟ್ಟು ಸೃಷ್ಟಿಯಾಯಿತು. ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಭದ್ರತಾ ಪಡೆಗಳನ್ನು ಕಳುಹಿಸುವಂತೆ ಸೆಯುಟಾ ಸ್ಥಳೀಯ ಆಡಳಿತವು, ಮ್ಯಾಡ್ರಿಡ್‌ನಲ್ಲಿರುವ ಕೇಂದ್ರ ಸರ್ಕಾರವನ್ನು ಕೋರಿತ್ತು. ಇದರ ಬೆನ್ನಲ್ಲೇ ಸ್ಪೇನ್ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಸೆಯುಟಾ ನಗರದಲ್ಲಿ ಭದ್ರತೆ ಕಾಯ್ದುಕೊಳ್ಳಲು ಸಿವಿಲ್ ಗಾರ್ಡ್‌ಗಳಿಗೆ ನೆರವಾಗಲು ಸಶಸ್ತ್ರ ಪಡೆಗಳನ್ನು ಕಳುಹಿಸುವುದಾಗಿ ಸರ್ಕಾರ ತಿಳಿಸಿದೆ. ಅಲ್ಲದೆ, ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಮತ್ತು ಗೃಹ ಸಚಿವ ಫರ್ನಾಂಡೋ ಗ್ರಾಂಡೆ-ಮಾರ್ಲಾಸ್ಕಾ ಅವರು ಶುಕ್ರವಾರ ಸೆಯುಟಾಗೆ ಖುದ್ದು ಭೇಟಿ ನೀಡಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

“ಇಲ್ಲಿನ ಪರಿಸ್ಥಿತಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಗಡಿಯು ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಸಾವಿರಾರು ವಲಸಿಗರು ಗಡಿ ದಾಟುತ್ತಿದ್ದಾರೆ. ನಿಖರವಾದ ಸಂಖ್ಯೆಯನ್ನು ಹೇಳುವುದು ಅಸಾಧ್ಯ” ಎಂದು ಸಿವಿಲ್ ಗಾರ್ಡ್ ಅಧಿಕಾರಿಗಳ ಸಂಘದ ಮುಖ್ಯಸ್ಥ ರಶೀದ್ ಸ್ಬಿಹಿ ಆತಂಕ ವ್ಯಕ್ತಪಡಿಸಿದ್ದಾರೆ. ಗುರುವಾರ ಉಂಟಾದ ಈ ಗೊಂದಲದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಸೆಯುಟಾದಲ್ಲಿರುವ ಸ್ಪೇನ್ ಸರ್ಕಾರದ ನಿಯೋಗ ಖಚಿತಪಡಿಸಿದೆ. ಸಾವಿನ ನಿಖರ ಕಾರಣಗಳು ತಿಳಿದುಬಂದಿಲ್ಲವಾದರೂ, ಸಮುದ್ರದಲ್ಲಿ ಶವಗಳು ತೇಲುತ್ತಿರುವುದು ಕಂಡುಬಂದಿದೆ. ವಲಸಿಗರಲ್ಲಿ ಬಹುಪಾಲು ಯುವಕರೇ ಆಗಿದ್ದರೂ, ಮಹಿಳೆಯರು ಮತ್ತು ಸಣ್ಣ ಮಕ್ಕಳಿರುವ ಕುಟುಂಬಗಳು ಕೂಡ ಸೇರಿವೆ.

ಪರಿಸ್ಥಿತಿ ನಿಭಾಯಿಸಲು ಮೊರಾಕ್ಕೊ ಸರ್ಕಾರದೊಂದಿಗೆ ನಿಕಟವಾಗಿ ಸಹಕರಿಸುತ್ತಿರುವುದಾಗಿ ಸ್ಪೇನ್‌ನ ಗೃಹ ಸಚಿವಾಲಯ ತಿಳಿಸಿದೆ. ಗಡಿ ದಾಟಲು ಯತ್ನಿಸುತ್ತಿರುವ ಅನೇಕರನ್ನು ಮೊರಾಕ್ಕೊ ಪೊಲೀಸರು ತಡೆಯುತ್ತಿದ್ದಾರೆ. ಅಕ್ರಮವಾಗಿ ಸೆಯುಟಾ ಪ್ರವೇಶಿಸಿದವರನ್ನು ಆದಷ್ಟು ಬೇಗ ವಾಪಸ್ ಕಳುಹಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಈ ಬಿಕ್ಕಟ್ಟಿನ ಬಿಸಿ ಇಟಲಿಗೂ ತಟ್ಟಿದ್ದು, ತಮ್ಮ ಗಡಿ ರಕ್ಷಣೆ ಮತ್ತು ನಾಗರಿಕರ ಸುರಕ್ಷತೆಗಾಗಿ ಸ್ಪೇನ್‌ನೊಂದಿಗಿನ ಮುಕ್ತ-ಗಡಿ ‘ಶೆಂಗೆನ್’ (Schengen) ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಎಚ್ಚರಿಸಿದ್ದಾರೆ. ಸೆಯುಟಾ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥ ಜುವಾನ್ ಜೀಸಸ್ ವಿವಾಸ್ ಅವರು, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ತುರ್ತು ಪರಿಸ್ಥಿತಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆರ್ಥಿಕ ಸಂಕಷ್ಟ ಹಾಗೂ ತಾಯ್ನಾಡಿನ ಹಿಂಸಾಚಾರದಿಂದ ಪಾರಾಗಲು ಉತ್ತಮ ಬದುಕರಸಿ ಯುರೋಪ್‌ಗೆ ವಲಸೆ ಹೋಗುವವರಿಗೆ ಸ್ಪೇನ್ ಪ್ರಮುಖ ಪ್ರವೇಶ ದ್ವಾರವಾಗಿದೆ. ಉತ್ತರ ಆಫ್ರಿಕಾದ ಕರಾವಳಿಯಲ್ಲಿರುವ ಸೆಯುಟಾ ತಲುಪಲು, ವಲಸಿಗರು ಸಾಮಾನ್ಯವಾಗಿ ಮೊರಾಕ್ಕೊದ ಫ್ನಿಡೆಕ್ (Fnideq) ಪಟ್ಟಣದಿಂದ ಸುಮಾರು 5 ಕಿ.ಮೀ. ಸಮುದ್ರದಲ್ಲಿ ಈಜಿ ಸ್ಪೇನ್ ಗಡಿ ಪ್ರವೇಶಿಸುತ್ತಾರೆ. ಇದಕ್ಕೂ ಮುನ್ನ, 2021ರ ಮೇ ತಿಂಗಳಲ್ಲೂ ಕೇವಲ ಎರಡೇ ದಿನಗಳಲ್ಲಿ 8,000ಕ್ಕೂ ಹೆಚ್ಚು ವಲಸಿಗರು ಸೆಯುಟಾಗೆ ನುಗ್ಗಿದ್ದಾಗ ಇದೇ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಿತ್ತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆ ಮುಚ್ಚುವುದು, ಖಾಸಗೀಕರಣ ಎರಡೂ ಅಪಾಯದ ಸೂಚನೆ; ಅವುಗಳನ್ನು ಉಳಿಸಿ, ಉನ್ನತೀಕರಿಸಬೇಕು! ಏಕೆಂದರೆ…

ಒಂದು ಸರ್ಕಾರಿ ಶಾಲೆ ಮುಚ್ಚಿದಾಗ ಆ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲೇ ದೊರೆಯುತ್ತಿದ್ದ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ...

ಬಡತನದ ಸವಾಲಿನಿಂದ ಗವರ್ನರ್ ಪೀಠದವರೆಗೆ: ಅಮೆರಿಕದಲ್ಲಿ ಮೂರು ಬಾರಿ ಇತಿಹಾಸ ಸೃಷ್ಟಿಸಿದ ಡೆಬ್ ಹಾಲಂಡ್

ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ವಂಚಿತ ಜನಾಂಗದ ಮಹಿಳೆಯೊಬ್ಬರು ಅತ್ಯುನ್ನತ ಸ್ಥಾನಕ್ಕೇರುವುದು ಸಾಮಾನ್ಯ...

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...