ಸುಂಕ ಸಮರದಲ್ಲಿ ಟ್ರಂಪ್‌ಗೆ ಭಾರಿ ಮುಖಭಂಗ: ಆಮದು ಕಂಪನಿಗಳ ಪಾಲಾದ 6.7 ಲಕ್ಷ ಕೋಟಿ ರೂ.!

Date:

ಅಮೆರಿಕದ ಆರ್ಥಿಕತೆಯನ್ನು ಸರಿದಾರಿಗೆ ತರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿದ್ದ ‘ಹೆಚ್ಚುವರಿ ಆಮದು ಸುಂಕ’ ನೀತಿಗೆ ಸುಪ್ರೀಂ ಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ಟ್ರಂಪ್ ವಿಧಿಸಿದ್ದ ಸುಂಕಗಳು ಅಕ್ರಮ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಆಮದುದಾರ ಕಂಪನಿಗಳಿಗೆ ಅಮೆರಿಕ ಸರ್ಕಾರವು ಬರೋಬ್ಬರಿ 81 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂಪಾಯಿ – ಈ ಹಣವು ಕರ್ನಾಟಕ ವಾರ್ಷಿಕ ಬಜೆಟ್‌ನ ಒಂದೂವರೆ ಪಟ್ಟು) ಮರುಪಾವತಿಸಿದೆ. ಇದು ಟ್ರಂಪ್ ಅವರ ಪ್ರತಿಷ್ಠೆಗೆ ಬಿದ್ದ ಭಾರಿ ಹೊಡೆತ ಎಂದೇ ಹೇಳಲಾಗುತ್ತಿದೆ.

- Advertisement -

ಕಳೆದ ವರ್ಷ ಮರಳಿ ಅಧಿಕಾರಕ್ಕೆ ಬಂದ ಟ್ರಂಪ್ ಅವರ ಆರ್ಥಿಕ ಯೋಜನೆಯ ಪ್ರಮುಖ ಭಾಗವೇ ಈ ಆಮದು ಸುಂಕಗಳಾಗಿದ್ದವು. ಆದರೆ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಈ ಹೆಚ್ಚುವರಿ ಸುಂಕಗಳ ಬಹುಪಾಲು ಭಾಗವನ್ನು ಅಕ್ರಮ ಎಂದು ತಳ್ಳಿಹಾಕಿತ್ತು. ಇದರಿಂದಾಗಿ ಸರ್ಕಾರವು ಅನಿವಾರ್ಯವಾಗಿ ಕಂಪನಿಗಳಿಗೆ ಹಣವನ್ನು ಹಿಂದಿರುಗಿಸಬೇಕಾಗಿದೆ. ಸೋಮವಾರ ಬಿಡುಗಡೆಯಾದ ಬಜೆಟ್ ಅಂಕಿ-ಅಂಶಗಳ ಪ್ರಕಾರ, 2025ರ ಅಕ್ಟೋಬರ್‌ನಿಂದ ಆರಂಭವಾದ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 81 ಬಿಲಿಯನ್ ಡಾಲರ್ ಸುಂಕವನ್ನು ಮರುಪಾವತಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 5 ಬಿಲಿಯನ್ ಡಾಲರ್(4,81 ಸಾವಿರ ಕೋಟಿ) ಮರುಪಾವತಿ ಮಾಡಲಾಗಿತ್ತು. ಬಹುಪಾಲು ಮರುಪಾವತಿಯು ಮೇ ಮತ್ತು ಜೂನ್ ತಿಂಗಳಲ್ಲಿ ನಡೆದಿದೆ ಎಂದು ಖಜಾನೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ಬಜೆಟ್ ಕೊರತೆಯನ್ನು ನೀಗಿಸಲು ಈ ಸುಂಕ ನೀತಿ ರಾಮಬಾಣ ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಆದರೆ, ಸುಂಕದ ಆದಾಯದಿಂದಾಗಿ ಕಳೆದ ವರ್ಷ ಕೊಂಚ ಕಡಿಮೆಯಾಗಿದ್ದ ಬಜೆಟ್ ಕೊರತೆ, ಈಗ ಮತ್ತೆ ಏರಿಕೆಯಾಗತೊಡಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ವಿತ್ತೀಯ ಕೊರತೆ 1.367 ಟ್ರಿಲಿಯನ್ ಡಾಲರ್(1,31,50,540 ಕೋಟಿ) ತಲುಪಿದ್ದು, ಶೇ. 2ರಷ್ಟು ಹೆಚ್ಚಳ ಕಂಡಿದೆ. ಇದರ ಜೊತೆಗೆ ಅಮೆರಿಕವು ತನ್ನ ಸಾಲದ ಮೇಲಿನ ಬಡ್ಡಿ ಪಾವತಿಗಾಗಿಯೇ 1 ಟ್ರಿಲಿಯನ್ ಡಾಲರ್‌ಗೂ(96,20,000 ಕೋಟಿ) ಅಧಿಕ ಹಣ ವ್ಯಯಿಸಿದ್ದು, ಇದರಲ್ಲಿ ಶೇ. 14ರಷ್ಟು ಏರಿಕೆಯಾಗಿದೆ. ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಸೇನಾ ವೆಚ್ಚವೂ ಶೇ. 5ರಷ್ಟು ಹೆಚ್ಚಾಗಿದೆ.

ಈ ಬೆಳವಣಿಗೆಗಳ ನಡುವೆಯೂ, ಭಾರತ, ಬ್ರಿಟನ್ ಸೇರಿ ಇತರ ದೇಶಗಳ ಮೇಲೆ ಹೊಸ ಸುಂಕದ ತೂಗುಗತ್ತಿ ನೇತಾಡುತ್ತಿದೆ. ಪ್ರಸ್ತುತ ಜಾರಿಯಲ್ಲಿರುವ ಶೇ. 10ರಷ್ಟು ‘ತಾತ್ಕಾಲಿಕ ಜಾಗತಿಕ ಸುಂಕ’ದ ಅವಧಿ ಜುಲೈ 24ರಂದು ಮುಕ್ತಾಯಗೊಳ್ಳಲಿದೆ. ಆದರೆ, ಕಾರ್ಮಿಕರ ಬಲವಂತದ ದುಡಿಮೆ ಮತ್ತು ಕೈಗಾರಿಕಾ ಸಾಮರ್ಥ್ಯದ ಮಿತಿ ಮೀರಿರುವ ನೆಪವೊಡ್ಡಿ ಬ್ರಿಟನ್, ಜಪಾನ್, ಭಾರತ, ತೈವಾನ್ ಹಾಗೂ ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಹೊಸ ಸುಂಕ ವಿಧಿಸಲು ಶ್ವೇತಭವನ ಸಿದ್ಧತೆ ನಡೆಸುತ್ತಿದೆ. ಈ ಹೊಸ ಸುಂಕವು ಶೇ. 10 ರಿಂದ 12.5ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಬ್ರೆಜಿಲ್ ಮೇಲೂ ಶೇ. 25ರಷ್ಟು ಹೊಸ ಸುಂಕ ವಿಧಿಸುವ ಬೆದರಿಕೆಯನ್ನು ಅಮೆರಿಕ ಹಾಕಿದೆ. ಈ ಮೂಲಕ ನ್ಯಾಯಾಲಯದ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಟ್ರಂಪ್ ಹೊಸ ಮಾರ್ಗ ಹುಡುಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...