ಈ ದಿನ ಸಂಪಾದಕೀಯ | ಮೋದಿ ದೋಣಿ ವಿಹಾರ ಮತ್ತು ಹೊತ್ತಿ ಉರಿಯುತ್ತಿರುವ ಮಣಿಪುರ

Date:

ರೋಮ್ ಹತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲ್ ಬಾರಿಸುತ್ತಿದ್ದನಂತೆ. ಅದೇ ರೀತಿ ಮೋದಿ, ಮಣಿಪುರ ಹತ್ತಿ ಉರಿಯುತ್ತಿದ್ದರೂ, ಹೂಗ್ಲಿ ನದಿಯಲ್ಲಿ ದೋಣಿ ವಿಹಾರದಲ್ಲಿ ಮೈಮರೆತು, ಫೋಟೋ ಶೂಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಏಪ್ರಿಲ್ 7ರಂದು ಬಿಷ್ಣುಪುರ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಅಮಾಯಕ ಮಕ್ಕಳು ಮೃತಪಟ್ಟರು. ಈ ದಾಳಿಗೆ ಕಾರಣ ಯಾರು ಎಂಬುದು ಇವತ್ತಿನವರೆಗೂ ತಿಳಿದುಬಂದಿಲ್ಲ. ಆದರೆ, ಈ ಬಾಂಬ್ ಸ್ಫೋಟದ ಹಿಂದೆ ಕುಕಿ ಉಗ್ರ ಸಂಘಟನೆ ಭಾಗಿಯಾಗಿದೆ ಎಂದು ಮೈತೇಯಿ ಸಮುದಾಯ ಆರೋಪಿಸಿದೆ.

- Advertisement -

ಮಕ್ಕಳ ಹತ್ಯೆಯನ್ನು ಖಂಡಿಸಿ, ಪ್ರತಿಭಟನೆಗಿಳಿದ ಮೈತೇಯಿ ಸಮುದಾಯ ಆಕ್ರೋಶಗೊಂಡು ಭದ್ರತಾ ಸಿಬ್ಬಂದಿ ಶಿಬಿರಗಳ ಮುತ್ತಿಗೆಗೆ ಯತ್ನಿಸಿದೆ. ಆ ಮುತ್ತಿಗೆಯನ್ನು ತಡೆಯುವ ವೇಳೆ ಭದ್ರತಾ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ಹೀಗಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರ, ಮತ್ತೆ ಹೊತ್ತಿ ಉರಿಯಲಾರಂಭಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

ಅಮಾಯಕರ ಸಾವಿಗೆ ನ್ಯಾಯ ಕೇಳುವ ಸಲುವಾಗಿ ನಡೆಯುತ್ತಿರುವ ಪ್ರತಿಭಟನೆಗಳಿಗೆ, ಮೇಣದ ದೀಪದ ಮೆರವಣಿಗೆಗಳಿಗೆ ಮಾನವೀಯವಾಗಿ ಸ್ಪಂದಿಸಬೇಕಾದ ಸರ್ಕಾರ, ಸೇನೆ ಬಳಸಿ ಹತ್ತಿಕ್ಕಲು ನೋಡುತ್ತಿದೆ. ಸರ್ಕಾರದ ಪ್ರತಿಕ್ರಿಯೆ ಮತ್ತು ಭದ್ರತಾ ಪಡೆಗಳ ನಿಯೋಜನೆ, ಕೇವಲ ತಾತ್ಕಾಲಿಕ ನಿಯಂತ್ರಣಕ್ಕಷ್ಟೇ ಸೀಮಿತವಾಗಿದೆ. ಇನ್ನು ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸರ್ಕಾರ ಎನ್ಐಎಗೆ ವಹಿಸಿದೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ, ವಿಚಾರಣೆಗೂ ಒಳಪಡಿಸಿಲ್ಲ. ಹಾಗಾಗಿ ಸರ್ಕಾರದ ಈ ನಡೆ ಕಣ್ಣೊರೆಸುವ ತಂತ್ರದಂತೆ ಕಾಣತೊಡಗಿದೆ.

ಇದರಿಂದ ಸಮುದಾಯಗಳ ನಡುವೆ ಭಯ, ಅನುಮಾನ ಮತ್ತು ವೈಮನಸ್ಯ ಗಾಢವಾಗುತ್ತಿದೆ. ಒಂದು ಸಮುದಾಯದ ವ್ಯಕ್ತಿ ಇನ್ನೊಂದು ಸಮುದಾಯದ ಪ್ರದೇಶಕ್ಕೆ ಕಾಲಿಡುವುದೇ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಿದೆ. ನಿನ್ನೆ, ಏ. 24ರಂದು ಹಿಂಸಾಚಾರ ಭುಗಿಲೆದ್ದಿದ್ದು, ಕುಕಿ-ನಾಗಾ ಗುಂಪುಗಳಿಗೆ ಸೇರಿದ ಮೂವರನ್ನು ಹತ್ಯೆ ಮಾಡಲಾಗಿದೆ. ಮಣಿಪುರ ಸಾಮಾನ್ಯ ಜೀವನದತ್ತ ಮರಳುವುದು, ಶಾಂತಿ ಸ್ಥಾಪಿಸುವುದು ದೂರದ ಮಾತಾಗಿದೆ.

ಇದನ್ನು ಓದಿದ್ದೀರಾ?: ಎಸ್ಸೆಸ್ಸೆಲ್ಸಿ-ಪಿಯುಸಿ ಫಲಿತಾಂಶದಲ್ಲಿ ಭಾರೀ ಸುಧಾರಣೆ; ಕಳಂಕ ತಪ್ಪಿಸಿಕೊಂಡ ಸರ್ಕಾರಿ ಶಾಲೆಗಳು

ಏಕೆಂದರೆ, ಕುಕಿ ಮತ್ತು ಮೈತೇಯಿ ಸಮುದಾಯಗಳು ಈಗ ಯಾವುದೋ ಒಂದು ಗುಂಪಿನ ಅಥವಾ ಒಬ್ಬ ನಾಯಕನ ಹಿಡಿತದಲ್ಲಿಲ್ಲ. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಸಂಘಟಿತ ಗುಂಪುಗಳಾಗಿ ವಿಭಜನೆಗೊಂಡಿವೆ. ಈ ಸಮುದಾಯಗಳ ಸಂಘರ್ಷದ ಮೂಲದಲ್ಲಿ ಜಾತಿ, ಭೂಮಿ, ರಾಜಕೀಯ ಪ್ರತಿನಿಧಿತ್ವದ ಪ್ರಶ್ನೆಗಳಿವೆ. ಗುರುತಿನ ಸಮಸ್ಯೆಗಳಿವೆ. ಇವುಗಳ ಆಳ-ಅಗಲ ಅರಿಯುವುದು ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ. ಕೇವಲ ಕಾನೂನು-ಸುವ್ಯವಸ್ಥೆ ಕ್ರಮಗಳಿಂದ ಶಾಂತಿ ತರುವುದು ಸಾಧ್ಯವಿಲ್ಲದ ಮಾತಾಗಿದೆ. ಹಾಗಾಗಿ ಸರ್ಕಾರವು ಕೇವಲ ಭದ್ರತಾ ಕ್ರಮಗಳ ಮೇಲೆ ಅವಲಂಬಿಸದೆ, ಸಂವಾದ ಮತ್ತು ವಿಶ್ವಾಸ ನಿರ್ಮಾಣದ ಕಡೆಗೆ ಹೆಚ್ಚು ಒತ್ತು ನೀಡಬೇಕಿದೆ. ಅದಕ್ಕೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ.  

ಬಾಂಬ್ ಸ್ಫೋಟದಲ್ಲಿ ಇಬ್ಬರು ಅಮಾಯಕ ಮಕ್ಕಳ ಸಾವು ಮತ್ತು ತದನಂತರದ ಹಿಂಸಾಚಾರದಲ್ಲಾದ ಆರು ಮಂದಿಯ ಹತ್ಯೆ, ಕೇವಲ ಒಂದು ದುರಂತ ಘಟನೆಯಲ್ಲ- ಅದು ರಾಜ್ಯದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ. ಈ ಸ್ಫೋಟ ಮತ್ತು ಹತ್ಯೆಗೆ ನೇರ ಕಾರಣ ಯಾರು ಎಂಬುದು ತನಿಖೆಯ ವಿಷಯವಾಗಬಹುದು. ಆದರೆ ನೈತಿಕ ಹೊಣೆಗಾರಿಕೆಯಿಂದ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ವರ್ಷಗಳ ಕಾಲ ಮುಂದುವರಿದಿರುವ ಜಾತಿ ಸಂಘರ್ಷ, ಅಕ್ರಮ ಶಸ್ತ್ರಾಸ್ತ್ರಗಳ ಸಂಗ್ರಹಣೆ ಮತ್ತು ಕಾನೂನು ಸುವ್ಯವಸ್ಥೆಯ ಕುಸಿತ- ಎಲ್ಲವೂ ದುರಂತಕ್ಕೆ ದಾರಿ ಮಾಡಿಕೊಟ್ಟಿವೆ. ಇಷ್ಟು ಕಾಲ ಈ ಅಕ್ರಮ ಶಸ್ತ್ರಾಸ್ತ್ರಗಳು ಜನರ ನಡುವೆ ಹೇಗೆ ಹಂಚಿಕೆಯಾದವು? ಸ್ಫೋಟಕ ವಸ್ತುಗಳು ಸಾರ್ವಜನಿಕ ಸ್ಥಳಗಳಿಗೆ ಹೇಗೆ ತಲುಪಿದವು? ಇದಕ್ಕೆ ಕೆಲವು ಉಗ್ರ ಗುಂಪುಗಳನ್ನು ಹೊಣೆಗಾರರನ್ನಾಗಿ ಮಾಡಬಹುದು. ಆದರೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿರುವುದಂತೂ ಸತ್ಯ.

ಪರಮ ಆಶ್ಚರ್ಯದ ಸಂಗತಿ ಎಂದರೆ, ಮಣಿಪುರದಲ್ಲಿರುವುದು ಬಿಜೆಪಿ ಸರ್ಕಾರ. ಕೇಂದ್ರದಲ್ಲಿರುವುದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ. ಡಬಲ್ ಎಂಜಿನ್ ಸರ್ಕಾರವಿದ್ದರೆ ಸ್ವರ್ಗವನ್ನೇ ಧರೆಗಿಳಿಸುತ್ತೇವೆಂದು ಬೊಬ್ಬೆ ಹೊಡೆಯುವ ಮೋದಿಯವರು, ಮಣಿಪುರದ ವಿಷಯದಲ್ಲಿ ತಳೆದಿರುವ ಮೌನ- ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಇದನ್ನು ಓದಿದ್ದೀರಾ?: ದೇವೇಗೌಡ ದಕ್ಷಿಣ ಭಾರತದ ದನಿಯಾಗಬೇಕಿತ್ತಲ್ಲವೇ?

ಇದಕ್ಕಿಂತಲೂ ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ಪ್ರಧಾನಿ ಮೋದಿಯವರು ಚುನಾವಣಾ ಭಾಷಣಗಳಿಗಾಗಿ ಸಾವಿರಾರು ಮೈಲಿಗಳ ದೂರದ ತಮಿಳುನಾಡಿಗೆ ಹೋಗುತ್ತಾರೆ. ಕೇವಲ ಮತಯಾಚನೆಗಾಗಿ ಪಶ್ಚಿಮ ಬಂಗಾಲದ ಬೀದಿಗಿಳಿದು ಝಲ್ಮುರಿ ತಿಂದು, ಹಾಸ್ಯ ಚಟಾಕಿ ಹಾರಿಸುತ್ತಾರೆ. ರೋಮ್ ಹತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲ್ ಬಾರಿಸುತ್ತಿದ್ದನಂತೆ. ಅದೇ ರೀತಿ ಮೋದಿ, ಮಣಿಪುರ ಹತ್ತಿ ಉರಿಯುತ್ತಿದ್ದರೂ, ಹೂಗ್ಲಿ ನದಿಯಲ್ಲಿ ದೋಣಿ ವಿಹಾರದಲ್ಲಿ ಮೈಮರೆತು, ಫೋಟೋ ಶೂಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ದೇಶದೊಳಗೇ ಇರುವ ಮಣಿಪುರ ಮುಖ್ಯವಾಗುವುದಿಲ್ಲ; ಮತಕ್ಕಿಂತ ಮನುಷ್ಯರು ಮುಖ್ಯ ಅನಿಸುವುದಿಲ್ಲ. ಮಹಿಳಾ ಮೀಸಲಾತಿ ಪರ ಎದೆಯುಬ್ಬಿಸಿ ಮಾತನಾಡುವ ಮೋದಿ; ಮಣಿಪುರದಲ್ಲಿ ಮಹಿಳೆಯರು ಬೆತ್ತಲೆ ಓಡಿದರೂ, ಕರುಳು ಚುರುಕ್ಕೆನ್ನುವುದಿಲ್ಲ, ಅದು ನನ್ನ ದೇಶಕ್ಕಾದ ಅವಮಾನ ಎನಿಸುವುದಿಲ್ಲ. ಅಂಬಾನಿ-ಅದಾನಿಗಳಿಗೆ ಅಭಯ ಹಸ್ತ ಚಾಚುವ ಮೋದಿ; ಮಣಿಪುರದ ಜನರಿಗೆ ‘ದೇಶ ನಿಮ್ಮೊಂದಿಗಿದೆ’ ಎಂದು ಧೈರ್ಯ ತುಂಬುವುದಿಲ್ಲ.

ಮಣಿಪುರ ಹೊತ್ತಿ ಉರಿಯುತ್ತಿರುವುದಕ್ಕೆ ಮೋದಿಯವರ ಮೌನವೇ ಕಾರಣ. ಈ ಮೌನ ಮುರಿಯದಿದ್ದರೆ, ಶಾಂತಿ ಮರೀಚಿಕೆಯಾಗಿಯೇ ಉಳಿಯಲಿದೆ. ಅದು ಮೋದಿಯವರನ್ನು ಮನುಷ್ಯವಿರೋಧಿ ಪಟ್ಟಕ್ಕೇರಿಸಲಿದೆ; ಗೋಧ್ರಾ ಹತ್ಯಾಕಾಂಡದ ಪಟ್ಟಿಗೆ ಸೇರ್ಪಡೆಯಾಗಲಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದ ಮೂಲಕ ಆಕ್ರೋಶ ಹೊರಹಾಕಿ: ಕಾಂಗ್ರೆಸ್ ಕರೆ

ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ, ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಸಾಮಾನ್ಯ...

ಮೋದಿ ಸರ್ಕಾರದಿಂದ ‘ಮತ ಕಳ್ಳತನ’ದ ನಂತರ ‘ಹಕ್ಕುಗಳ ಕಳ್ಳತನ’ ಶುರು: ರಾಹುಲ್ ಗಾಂಧಿ ಆಕ್ರೋಶ

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು; ರೂ.264.61 ಲಕ್ಷ ಪರಿಹಾರ ಬಾಕಿ!

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ...